logo
ಕನ್ನಡ ಸುದ್ದಿ  /  ಕ್ರೀಡೆ  /  Video: ಲಿಂಬೊ ಸ್ಕೇಟಿಂಗ್‌ನಲ್ಲಿ ನೂತನ ವಿಶ್ವ ದಾಖಲೆ ನಿರ್ಮಿಸಿದ ಅಹಮದಾಬಾದ್‌ನ ಪೋರಿ; ತಕ್ಷವಿ ವಘಾನಿ ಗಿನ್ನೆಸ್ ರೆಕಾರ್ಡ್

Video: ಲಿಂಬೊ ಸ್ಕೇಟಿಂಗ್‌ನಲ್ಲಿ ನೂತನ ವಿಶ್ವ ದಾಖಲೆ ನಿರ್ಮಿಸಿದ ಅಹಮದಾಬಾದ್‌ನ ಪೋರಿ; ತಕ್ಷವಿ ವಘಾನಿ ಗಿನ್ನೆಸ್ ರೆಕಾರ್ಡ್

Jayaraj HT Kannada

Apr 19, 2024 01:55 PM IST

google News

ಲಿಂಬೊ ಸ್ಕೇಟಿಂಗ್‌ನಲ್ಲಿ ನೂತನ ವಿಶ್ವ ದಾಖಲೆ ನಿರ್ಮಿಸಿದ ತಕ್ಷವಿ ವಘಾನಿ

    • ಅಹಮದಾಬಾದ್‌ ನಗರದ 6 ವರ್ಷದ ಬಾಲಕಿ ತಕ್ಷವಿ ವಘಾನಿ, ಲಿಂಬೋ ಸ್ಕೇಟಿಂಗ್‌ನಲ್ಲಿ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ್ದಾಳೆ. ತನ್ನ ದೇಹವನ್ನು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ನೆಲದ ಮಟ್ಟಕ್ಕೆ ಬಾಗಿಸಿ ಈ ಸ್ಕೇಟಿಂಗ್‌‌ ಮಾಡಿ ರೆಕಾರ್ಡ್‌ ಮಾಡಿದ್ದಾಳೆ.
ಲಿಂಬೊ ಸ್ಕೇಟಿಂಗ್‌ನಲ್ಲಿ ನೂತನ ವಿಶ್ವ ದಾಖಲೆ ನಿರ್ಮಿಸಿದ ತಕ್ಷವಿ ವಘಾನಿ
ಲಿಂಬೊ ಸ್ಕೇಟಿಂಗ್‌ನಲ್ಲಿ ನೂತನ ವಿಶ್ವ ದಾಖಲೆ ನಿರ್ಮಿಸಿದ ತಕ್ಷವಿ ವಘಾನಿ

ಕೆಲವು ಮಕ್ಕಳಿಗೆ ಸ್ಕೇಟಿಂಗ್‌ನಲ್ಲಿ ಅಪಾರ ಆಸಕ್ತಿ ಇರುತ್ತದೆ. ಬಾಲ್ಯದಲ್ಲೇ ಸೂಕ್ತ ತರಬೇತಿಯೊಂದಿಗೆ ಸ್ಕೇಟಿಂಗ್‌ನಲ್ಲಿ ಹಲವು ಮಕ್ಕಳು ಆಗಾಗ ದಾಖಲೆ ನಿರ್ಮಿಸುತ್ತಾರೆ. ಇದೀಗ ಗುಜರಾತ್‌ನ 6 ವರ್ಷದ ಪುಟ್ಟ ಬಾಲಕಿಯೊಬ್ಬಳು, ಲೋವೆಸ್ಟ್‌ ಲಿಂಬೋ ಸ್ಕೇಟಿಂಗ್‌ನಲ್ಲಿ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾಳೆ. ಈ ಕುರಿತು ಗಿನ್ನೆಸ್‌ ವರ್ಡ್‌ ರೆಕಾರ್ಡ್‌ ಅಧಿಕೃತವಾಗಿ ಟ್ವೀಟ್‌ ಮಾಡಿದೆ.

ಗುಜರಾತ್‌ನ ಅಹಮದಾಬಾದ್‌ ನಗರದ 6 ವರ್ಷದ ಪೋರಿ, ಈ ದಾಖಲೆ ನಿರ್ಮಿಸಿದ್ದಾಳೆ. ಈಕೆಯ ಹೆಸರು ತಕ್ಷವಿ ವಘಾನಿ. ತೀರಾ ಕಡಿಮೆ ಎತ್ತರದ ಲಿಂಬೋ ಸ್ಕೇಟಿಂಗ್‌ನಲ್ಲಿ 25 ಮೀಟರ್ ದೂರ ಕ್ರಮಿಸಿ ಈಕೆ ವಿಶ್ವದಾಖಲೆ ನಿರ್ಮಿಸಿದ್ದಾಳೆ. ತನ್ನ ದೇಹವನ್ನು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ನೆಲದ ಮಟ್ಟಕ್ಕೆ ಬಾಗಿಸಿ ಈ ಸ್ಕೇಟಿಂಗ್‌ ಮಾಡಲಾಗುತ್ತದೆ. ದೇಹವು ಫಿಟ್‌ ಆಗಿ ನಿರಂತರ ಅಭ್ಯಾಸವಿದ್ದರಷ್ಟೇ ಇಂಥಾ ಸಾಧನೆ ಮಾಡಲು ಸಾಧ್ಯ.

ಈ ಬಾಲಕಿಯು ತನ್ನ ಅಸಾಧಾರಣ ಸಾಮರ್ಥ್ಯ ಹಾಗೂ ದೇಹದಲ್ಲಿ ಸಮತೋಲನ ಕಾಪಾಡಿಕೊಂಡು, ನೆಲದಿಂದ ಕೇವಲ 16 ಸೆಂಟಿಮೀಟರ್ ಎತ್ತರವನ್ನು ಕಾಯ್ದುಕೊಳ್ಳುವ ಮೂಲಕ ಈ ಗಮನಾರ್ಹ ಸಾಧನೆ ಮಾಡಿದ್ದಾಳೆ. ಈ ಹಿಂದೆ 16.5 ಸೆಂಟಿಮೀಟರ್‌ ಎತ್ತರದೊಂದಿಗೆ ಪುಣೆಯ ಮನಸ್ವಿ ವಿಶಾಲ್‌ ಎಂಬ ಬಾಲಕಿ 25 ಮೀಟರ್‌ ದೂರ ಸ್ಕೇಟ್‌ ಮಾಡಿ ದಾಖಲೆ ಬರೆದಿದ್ದಳು. ಇದೀಗ ಆಕೆಯ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ತಕ್ಷವಿ ಅಳಿಸಿ ಹಾಕಿದ್ದಾಳೆ.

ಇನ್‌ಸ್ಟಾಗ್ರಾಮಮ್‌ನಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಹಂಚಿಕೊಂಡ ತಕ್ಷವಿಯ ದಾಖಲೆಯ ವಿಡಿಯೋ ವೈರಲ್‌ ಆಗಿದೆ. ಪುಟ್ಟ ಪೋರಿಯ ಸಾಧನೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಸಾಕಷ್ಟು ಹೊಗಳಿಕೆಯ ಕಾಮೆಂಟ್‌ಗಳು ಹರಿದು ಬಂದಿವೆ. ಈ ವಿಡಿಯೋವನ್ನು ಇಂಡಿಯನ್‌ ಟೆಕ್‌ ಆಂಡ್‌ ಇನ್ಫ್ರಾ ಕೂಡಾ ಹಂಚಿಕೊಂಡಿದೆ. ದಾಖಲೆ ಬಳಿಕ ತಕ್ಷವಿ ವಘಾನಿ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಗಿನ್ನೆಸ್‌ ವರ್ಡ್ ರೆಕಾರ್ಡ್ ಪ್ರಕಾರ, ತಕ್ಷವಿ ತಮ್ಮ ವೈಯಕ್ತಿಕ ಸಾಧನೆಗಾಗಿ ಈ ಪ್ರಯತ್ನ ಮಾಡಿದ್ದಾರೆ.

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ