logo
ಕನ್ನಡ ಸುದ್ದಿ  /  ಕ್ರೀಡೆ  /  ಫಿಫಾ ವಿಶ್ವಕಪ್​ನಲ್ಲಿ ಮೆಸ್ಸಿ ಧರಿಸಿದ್ದ 6 ಜೆರ್ಸಿಗಳು ಹರಾಜಿಗೆ; ಅವುಗಳ ಮೌಲ್ಯವೇ ಅದೆಷ್ಟೋ ಕೋಟಿ!

ಫಿಫಾ ವಿಶ್ವಕಪ್​ನಲ್ಲಿ ಮೆಸ್ಸಿ ಧರಿಸಿದ್ದ 6 ಜೆರ್ಸಿಗಳು ಹರಾಜಿಗೆ; ಅವುಗಳ ಮೌಲ್ಯವೇ ಅದೆಷ್ಟೋ ಕೋಟಿ!

HT Kannada Desk HT Kannada

Nov 22, 2023 06:00 AM IST

google News

ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ.

    • Lionel Messi: 2022ರಲ್ಲಿ ಕತಾರ್​​ನಲ್ಲಿ ನಡೆದ ಫಿಫಾ ಫುಟ್ಬಾಲ್ ವಿಶ್ವಕಪ್​ನಲ್ಲಿ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಧರಿಸಿದ್ದ 6 ಜೆರ್ಸಿಗಳ ಸೆಟ್​ ಡಿಸೆಂಬರ್​ನಲ್ಲಿ ಹರಾಜು ನಡೆಯಲಿದೆ.
ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ.
ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ.

ವಿಶ್ವಶ್ರೇಷ್ಠ ಫುಟ್ಬಾಲ್‌ ಆಟಗಾರ, ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ (Lionel Messi) ಅವರು 2022ರ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಧರಿಸಿದ್ದ ಆರು ಜರ್ಸಿಗಳು ಹರಾಜಿಗೆ ಸಿದ್ಧವಾಗಿವೆ. ಆ ಜೆರ್ಸಿಗಳ ಹರಾಜು ಪ್ರಕ್ರಿಯೆ ಡಿಸೆಂಬರ್​​ನಲ್ಲಿ ನಡೆಸುವುದಾಗಿ ಹರಾಜು ಸಂಸ್ಥೆ ಸೊದೆಬಿ ಮಾಹಿತಿ ನೀಡಿದೆ. ಈ 6 ಜೆರ್ಸಿಗಳ ಮೌಲ್ಯ ಬರೋಬ್ಬರಿ 83.36 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಮೆಸ್ಸಿ ಧರಿಸಿದ್ದ 6 ಜೆರ್ಸಿಗಳ ಪೈಕಿ ಗುಂಪು ಹಂತದಲ್ಲಿ ಎರಡು (ಸೌದಿ ಅರೇಬಿಯಾ ಮತ್ತು ಮೆಕ್ಸಿಕೋ) ಪಂದ್ಯಗಳಲ್ಲಿ ಮತ್ತು ನಾಕೌಟ್​ ಹಂತದಲ್ಲಿ ವೇಳೆ ಧರಿಸಿದ್ದವು. ಕಳೆದ ವರ್ಷ ಕತಾರ್​​ನಲ್ಲಿ ಜರುಗಿದ್ದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ಎದುರು ಅರ್ಜೆಂಟೀನಾ ಸೋತಿತ್ತು. ಈ ವೇಳೆ ಮೆಸ್ಸಿ ಪಡೆಯನ್ನು ಟೀಕಿಸಿದ್ದರು.

ತದ ನಂತರ ಉಳಿದೆಲ್ಲಾ ಪಂದ್ಯಗಳನ್ನೂ ಗೆದ್ದು ಟ್ರೋಫಿಗೆ ಮುತ್ತಿಕ್ಕಿತ್ತು. ಲಿಯೊನೆಲ್ ಮೆಸ್ಸಿ ಜೆರ್ಸಿಗಳ ಆಕ್ಷನ್ ನವೆಂಬರ್ 30 ರಿಂದ ಡಿಸೆಂಬರ್​ 14ರವರೆಗೂ ಜರುಗಲಿದೆ. ವಿಶ್ವದ ಫುಟ್ಬಾಲ್ ಪ್ರೇಮಿಗಳು ತಮ್ಮ ಫೇವರಿಟ್ ಆಟಗಾರ ಜೆರ್ಸಿ ಹರಾಜಿನಲ್ಲಿ ಪಡೆಯಲು ಜಿದ್ದಾಜಿದ್ದಿನ ಪೈಪೋಟಿಗೆ ಬಿದ್ದಿದ್ದಾರೆ ಎಂದು ಹರಾಜಿಗೆ ಹರಾಜು ತಿಳಿಸಿದೆ. ಮೆಸ್ಸಿ ಅಭಿಮಾನಿಗಳು ಕೂಡ ಹರಾಜನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

ಬ್ಯಾಲನ್ ಡಿ ಓರ್​ ಪ್ರಶಸ್ತಿ ಗೆದ್ದಿದ್ದ ಮೆಸ್ಸಿ

ಕಳೆದ ತಿಂಗಳು ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು (Ballon d’Or 2023) ಲಿಯೋನೆಲ್​ ಮೆಸ್ಸಿ ಗೆದ್ದಿದ್ದರು. ಇದು ಅವರಿಗೆ ಸಿಕ್ಕ ದಾಖಲೆಯ 8ನೇ ಪ್ರಶಸ್ತಿ. ಈ ಹಿಂದೆ 2009, 2010, 2011, 2012, 2015, 2019 ಮತ್ತು 2021ರಲ್ಲಿ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ಪಡೆದಿದ್ದರು. ಫಿಫಾ ವಿಶ್ವಕಪ್​ನಲ್ಲಿ ತೋರಿದ್ದ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

ವಿಶ್ವಕಪ್ ಬಳಿಕ ಫ್ರಾನ್ಸ್‌ನ ಪ್ಯಾರಿಸ್‌ ಸೈಂಟ್ ಜರ್ಮೈನ್‌ (PSG) ಫುಟ್ಬಾಲ್​ ಕ್ಲಬ್ ತೊರೆದರು. ಆ ಬಳಿಕ ಮೆಸ್ಸಿ, ಅಮೆರಿಕದ ಮಿಯಾಮಿ ತಂಡದ ಪರ ಕಣಕ್ಕಿಳಿದರು. ಅಲ್ಲದೆ, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ಮೆಸ್ಸಿ ಬರುವುದಕ್ಕೂ ಮುನ್ನ ಮಿಯಾಮಿ ಹಲವು ಲೀಗ್​​ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಆದರೆ ಮೆಸ್ಸಿ ತಂಡ ಸೇರಿದ ನಂತರ ತಂಡವು ಅದ್ಭುತ ಪ್ರದರ್ಶನ ನೀಡಿತು.

ಭಾರತಕ್ಕೆ ಮೆಸ್ಸಿ?

ಅರ್ಜೆಂಟೀನಾ ತಂಡವು ಭಾರತ ತಂಡದ ಎದುರು ಸೌಹಾರ್ದ ಪಂದ್ಯವನ್ನಾಡುವ ಸಾಧ್ಯತೆ ಇದೆ. ಮೆಸ್ಸಿ ಪಡೆ ಕೇರಳಕ್ಕೆ ಬರುವ ನಿರೀಕ್ಷೆ ಇದೆ. ಈ ಬಗ್ಗೆ ಕೇರಳ ಸರ್ಕಾರ ಇತ್ತೀಚೆಗಷ್ಟೇ ಮಾಹಿತಿ ಕೊಟ್ಟಿತ್ತು. ಭಾರತದಲ್ಲಿ ಸ್ನೇಹ ಸೌಹಾರ್ದ ಪಂದ್ಯವನ್ನಾಡಲು ಅರ್ಜೆಂಟೀನಾ ತಂಡ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್​ಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಪಂದ್ಯ ಆಯೋಜಿಸಲು ದೊಡ್ಡ ಹಣದ ಅಗತ್ಯ ಇರುವ ಕಾರಣ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಈ ಮನವಿ ತಿರಸ್ಕರಿಸಿತ್ತು.

ಆದರೆ ತದನಂತರ ಕೇರಳ ಸರ್ಕಾರ ತಮ್ಮ ರಾಜ್ಯದಲ್ಲಿ ಈ ಪಂದ್ಯ ಆಯೋಜನೆಗೆ ಮುಂದೆ ಬಂದಿತ್ತು. ಅರ್ಜೆಂಟೀನಾ ಎದುರು ಭಾರತ ಆಡುವ ಪಂದ್ಯಕ್ಕೆ ಆತಿಥ್ಯ ಕೇರಳ ವಹಿಸಿಕೊಳ್ಳುವುದಾಗಿ ರಾಜ್ಯದ ಸರ್ಕಾರ ತಿಳಿಸಿತ್ತು. ಈ ಬಗ್ಗೆ ಅಧಿಕೃತವಾಗಿಯೂ ಮಾಹಿತಿ ಕೊಟ್ಟಿತ್ತು.

ಈ ಬಗ್ಗೆ ಅರ್ಜೆಂಟೀನಾ ಪುಟ್ಬಾಲ್ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಲಾಗಿದೆ. ಬಹುತೇಕ ಅರ್ಜೆಂಟೀನಾ ಭಾರತಕ್ಕೆ ಬರುವುದು ಖಚಿತ. ಪಂದ್ಯಕ್ಕಾಗುವ ಖರ್ಚನ್ನು ನಮ್ಮ ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಕೇರಳದ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್ ಎಂದು ಹೇಳಿದ್ದರು. ಆದರೆ ದಿನಾಂಕ ಯಾವಾಗ ಎಂಬುದು ಅಧಿಕೃತಗೊಂಡಿಲ್ಲ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ