PKL 11: ಬೆಂಗಳೂರು ಬುಲ್ಸ್ ಪೂರ್ಣ ತಂಡ, ನಾಯಕ, ಕೋಚ್, ಮಾಲೀಕ, ಖರೀದಿಸಿದ ಆಟಗಾರರ, ರಿಟೈನ್ ಪ್ಲೇಯರ್ಸ್ ವಿವರ ಇಲ್ಲಿದೆ
Oct 08, 2024 02:57 PM IST
ಬೆಂಗಳೂರು ಬುಲ್ಸ್ ಪೂರ್ಣ ತಂಡ
- Pro Kabaddi League 11: 11ನೇ ಆವೃತ್ತಿಗೂ ಮುನ್ನ ಬುಲ್ಸ್ ಹರಾಜಿನಲ್ಲಿ ಯಾರನ್ನೆಲ್ಲಾ ಖರೀದಿಸಿತು, ಯಾರನ್ನೆಲ್ಲಾ ಉಳಿಸಿಕೊಂಡಿತು, ಸಂಪೂರ್ಣ ತಂಡ, ಟೀಮ್ ಮಾಲೀಕರು, ನಾಯಕ ಯಾರು ಎಂದು ತಿಳಿಯೋಣ.
ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್‌ನ 12 ತಂಡಗಳಲ್ಲಿ ಒಂದು. 2018-19ರ ಸೀಸನ್ನಲ್ಲಿ ಪ್ರಶಸ್ತಿ ಗೆದ್ದಿರುವ ಬುಲ್ಸ್, ಪಿಕೆಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನೂ ಸೇರಿಸಿದೆ. 2014ರಲ್ಲಿ ಪ್ಲೇ ಆಫ್ ತಲುಪಿದ್ದ ಬೆಂಗಳೂರು, 2015ರಲ್ಲಿ ರನ್ನರ್ಅಪ್ ಆಗಿತ್ತು. ರಣಧೀರ್ ಸಿಂಗ್ ಅವರಿಂದ ತರಬೇತಿ ಪಡೆದ ಬುಲ್ಸ್, ಈ ಋತುವಿನಲ್ಲಿ ಎರಡನೇ ಬಾರಿಗೆ ಪ್ರಶಸ್ತಿಯನ್ನು ಗೆಲ್ಲಲು ಎದುರು ನೋಡುತ್ತಿದೆ. 11ನೇ ಆವೃತ್ತಿಗೂ ಮುನ್ನ ಬುಲ್ಸ್ ಹರಾಜಿನಲ್ಲಿ ಯಾರನ್ನೆಲ್ಲಾ ಖರೀದಿಸಿತು, ಯಾರನ್ನೆಲ್ಲಾ ಉಳಿಸಿಕೊಂಡಿತು, ಸಂಪೂರ್ಣ ತಂಡ, ಟೀಮ್ ಮಾಲೀಕರು, ನಾಯಕ ಯಾರು ಎಂದು ತಿಳಿಯೋಣ.
ಈ ಬಾರಿ ಹರಾಜಿನಲ್ಲಿ ಬೆಂಗಳೂರು ಬುಲ್ಸ್ ಸೇರಿದ ಆಟಗಾರರು
ಅಜಿಂಕ್ಯ ಅಶೋಕ್ ಪವಾರ್ - ರೈಡರ್ | 1.107 ಕೋಟಿ ರೂಪಾಯಿ
ಪರ್ದೀಪ್ ನರ್ವಾಲ್ - ರೈಡರ್ | 70 ಲಕ್ಷ ರೂಪಾಯಿ
ಹಸುನ್ ಥಾಂಗ್ಕ್ರೂಯಾ - ಡಿಫೆಂಡರ್ ರೈಟ್ ಕಾರ್ನರ್ | 13 ಲಕ್ಷ ರೂಪಾಯಿ
ಪ್ರಮೋತ್ ಸೈಸಿಂಗ್ - ರೈಡರ್ | 13 ಲಕ್ಷ ರೂಪಾಯಿ
ನಿತಿನ್ ರಾವಲ್ - ಆಲ್ರೌಂಡರ್ | 13 ಲಕ್ಷ ರೂಪಾಯಿ
ಜೈ ಭಗವಾನ್ - ರೈಡರ್ | 63 ಲಕ್ಷ ರೂಪಾಯಿ
ಜತಿನ್ - ರೈಡರ್ | 13 ಲಕ್ಷ ರೂಪಾಯಿ
ಬೆಂಗಳೂರು ಬುಲ್ಸ್ ರಿಟೈನ್ ಮಾಡಿಕೊಂಡಿದ್ದ ಆಟಗಾರರು
ಸೌರಭ್ ನಂದಲ್ - ಡಿಫೆಂಡರ್ ರೈಟ್ ಕಾರ್ನರ್
ಪೊನ್‌ಪರ್ತಿಬನ್ ಸುಬ್ರಮಣಿಯನ್ - ಡಿಫೆಂಡರ್ ರೈಟ್ ಕವರ್
ಸುಶೀಲ್ - ರೈಡರ್
ರೋಹಿತ್ ಕುಮಾರ್ - ಡಿಫೆಂಡರ್ ಲೆಫ್ಟ್ ಕವರ್
ಆದಿತ್ಯ ಶಂಕರ್ ಪೊವಾರ್ - ಡಿಫೆಂಡರ್ ಲೆಫ್ಟ್ ಕಾರ್ನರ್
ಅಕ್ಷಿತ್ - ಲೆಫ್ಟ್ ರೈಡರ್
ಅರುಳ್ನಂತಬಾಬು - ಡಿಫೆಂಡರ್ ರೈಟ್ ಕಾರ್ನರ್
ಪಾರ್ಟೀಕ್ - ಡಿಫೆಂಡರ್ ಲೆಫ್ಟ್ ಕವರ್
ತಂಡದ ನಾಯಕ: ಪರ್ದೀಪ್ ನರ್ವಾಲ್
ತಂಡದ ಕೋಚ್: ರಣಧೀರ್ ಸಿಂಗ್ ಸೆಹ್ರಾವತ್
ತಂಡದ ಮಾಲೀಕರು: ಕಾಸ್ಮಿಕ್ ಗ್ಲೋಬಲ್ ಮೀಡಿಯಾ
ತಂಡದ ಸಿಇಒ: ಕೀರ್ತಿ ಮುರಳಿಕೃಷ್ಣನ್
ತವರಿನ ಮೈದಾನ: ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣ
ಬೆಂಗಳೂರು ಬುಲ್ಸ್ ಸಂಪೂರ್ಣ ತಂಡ
ರೈಡರ್ಸ್: ಅಜಿಂಕ್ಯ ಅಶೋಕ್ ಪವಾರ್, ಪರ್ದೀಪ್ ನರ್ವಾಲ್, ಪ್ರಮೋತ್ ಸೈಸಿಂಗ್, ಜೈ ಭಗವಾನ್, ಜತಿನ್, ಸುಶೀಲ್, ಅಕ್ಷಿತ್
ಡಿಫೆಂಡರ್ಸ್: ಹಸುನ್ ಥೋಂಗ್ಕ್ರೂಯಾ, ಸೌರಭ್ ನಂದಲ್, ಪೊನ್‌ಪರ್ತಿಬನ್ ಸುಬ್ರಮಣಿಯನ್, ರೋಹಿತ್ ಕುಮಾರ್, ಆದಿತ್ಯ ಶಂಕರ್ ಪೊವಾರ್, ಅರುಳ್ನಂತಬಾಬು, ಪರ್ತೀಕ್.
ಆಲ್ರೌಂಡರ್ಸ್: ನಿತಿನ್ ರಾವಲ್
ಸೀಸನ್ 10ರಲ್ಲಿ ಬುಲ್ಸ್ ಪ್ರದರ್ಶನ
10ನೇ ಸೀಸನ್ನಲ್ಲಿ ಪ್ಲೇಆಫ್‌ಗೆ ಪ್ರವೇಶಿಸಲು ವಿಫಲವಾದ ಬುಲ್ಸ್, 22 ಪಂದ್ಯಗಳಲ್ಲಿ 8ರಲ್ಲಿ ಗೆದ್ದು, 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಕಳೆದ 5 ಆವೃತ್ತಿಗಳಲ್ಲಿ 3 ಬಾರಿ ಪ್ಲೇಆಫ್‌ಗಳಿಗೆ ಪ್ರವೇಶಿಸಿತ್ತು. ಒಟ್ಟಾರೆ ಪಿಕೆಎಲ್ ಇತಿಹಾಸದಲ್ಲಿ ಐದು ಬಾರಿ ಪ್ಲೇಆಫ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಗ್ರ್ಯಾಂಡ್ ಫಿನಾಲೆಯಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು 38-33 ಅಂಕಗಳಿಂದ ಸೋಲಿಸಿ, ಪಿಕೆಎಲ್ 2018ರಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತ್ತು. ಫ್ರಾಂಚೈಸ್ ಯು ಮುಂಬಾ ವಿರುದ್ಧ 30-36 ರಿಂದ ಸೋತು ಪಿಕೆಎಲ್ 2015ರಲ್ಲಿ ರನ್ನರ್-ಅಪ್ ಆಗಿತ್ತು. ಮೊದಲ ಪಿಕೆಎಲ್ ಋತುವಿನಲ್ಲಿ ಸೆಮಿಫೈನಲ್ ತಲುಪಿತ್ತು.