logo
ಕನ್ನಡ ಸುದ್ದಿ  /  ಕ್ರೀಡೆ  /  ದಿಗ್ಗಜರಿಗೇ ನಡುಕ ಹುಟ್ಟಿಸಿದ ಪ್ರಜ್ಞಾನಂದ ಚೆಸ್ ಕಲಿತದ್ದು ಯಾರಿಂದ; ನೆಚ್ಚಿನ ಕ್ರೀಡೆ ಯಾವುದು?

ದಿಗ್ಗಜರಿಗೇ ನಡುಕ ಹುಟ್ಟಿಸಿದ ಪ್ರಜ್ಞಾನಂದ ಚೆಸ್ ಕಲಿತದ್ದು ಯಾರಿಂದ; ನೆಚ್ಚಿನ ಕ್ರೀಡೆ ಯಾವುದು?

Prasanna Kumar P N HT Kannada

Aug 24, 2023 02:06 PM IST

google News

ಆರ್​​ ಪ್ರಜ್ಞಾನಂದ

  • R Praggnanandhaa: ಭಾರತದ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ, ಹಾರಿಸಿದ ಭಾರತದ ಈ ಲಿಟಲ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ​ ಚೆಸ್​ ಕಲಿತದ್ದು ಯಾರಿಂದ ಎಂಬ ಕುತೂಹಲವಿದೆ. ಅದಕ್ಕೆ ಉತ್ತರ ಇಲ್ಲಿದೆ.

ಆರ್​​ ಪ್ರಜ್ಞಾನಂದ
ಆರ್​​ ಪ್ರಜ್ಞಾನಂದ

ಸಾಧನೆಗೆ ವಯಸ್ಸಿನ ಅಡ್ಡಿಯಾಗಲ್ಲ. ಉತ್ಸಾಹ ಕಠಿಣ ಪರಿಶಮ್ರ ಇದ್ದರೆ, ವಯಸ್ಸು ಎಷ್ಟೇ ಆಗಿದ್ದರೂ ಯಶಸ್ಸು ನಮ್ಮದಾಗುತ್ತದೆ ಎಂಬುದನ್ನು ಕೇಳಿದ್ದೇವೆ. ಚೆಸ್​​ನಲ್ಲಿ ಇತಿಹಾಸ ಸೃಷ್ಟಿಸಿರುವ ಭಾರತದ ಧ್ರುವತಾರೆ, ಗ್ರ್ಯಾಂಡ್​ ಮಾಸ್ಟರ್​ ಪ್ರಜ್ಞಾನಂದ (R Praggnanandhaa) ವಿಚಾರದಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ. 18 ವರ್ಷದ ಈ ಪೋರ ಫಿಡೆ ವಿಶ್ವಕಪ್‌ ಚೆಸ್ ಟೂರ್ನಿಯ ಫೈನಲ್‌ನ 2ನೇ ಕ್ಲಾಸಿಕಲ್ ಪಂದ್ಯದಲ್ಲಿ ವಿಶ್ವದ ನಂಬರ್​​ 1 ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಡ್ರಾ ಮಾಡಿಕೊಂಡಿದ್ದಾರೆ. ಸದ್ಯ ಇಂದು ಗೆಲುವು ಎಂಬುದನ್ನು ಟೈ ಬ್ರೇಕರ್​​​ನಲ್ಲಿ ಗೊತ್ತಾಗಲಿದೆ.

ಚೆಸ್ ವಿಶ್ವಕಪ್‌ ಇತಿಹಾಸದಲ್ಲಿ ಚರಿತ್ರೆ ಬರೆದಿರುವ ರಮೇಶ್​ ಬಾಬು ಪ್ರಜ್ಞಾನಂದ, ಈ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ. ಅತಿ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಈತ, ದಿಗ್ಗಜ ಚೆಸ್ ಚಾಂಪಿಯನ್​​ಗಳಿಗೇ ನಡುಕ ಹುಟ್ಟಿಸುತ್ತಿದ್ದಾನೆ. ಭಾರತದ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ, ಹಾರಿಸಿದ ಭಾರತದ ಈ ಲಿಟಲ್ ಗ್ರ್ಯಾಂಡ್ ಮಾಸ್ಟರ್​ ಚೆಸ್​ ಕಲಿತದ್ದು ಯಾರಿಂದ ಎಂಬ ಕುತೂಹಲವಿದೆ. ಅದಕ್ಕೆ ಉತ್ತರ ಇಲ್ಲಿದೆ.

ತನ್ನ ತಾಯಿಯ ಜೊತೆಗೆ ದೇಶ ವಿದೇಶ ಸುತ್ತುತ್ತಿರುವ 18 ವರ್ಷದ ಆಟಗಾರ, ಬಾಲ್ಯದಲ್ಲೇ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದ್ದಾನೆ. 2005ರ ಆಗಸ್ಟ್​​ 5ರಂದು ಜನಿಸಿದ ಈ ಚತರು ಅತ್ಯಂತ ಬುದ್ದಿವಂತಿಕೆಯ ಹುಡುಗ. ಚಿಕ್ಕ ವಯಸ್ಸಿನಲ್ಲೇ ಚೆಸ್​ ದಿಗ್ಗಜನನ್ನೇ ಶೇಕ್​ ಮಾಡುತ್ತಿರುವ ಈತ 2022ರಲ್ಲಿ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಗೆದ್ದರು. 2013ರಲ್ಲಿ ಅಂಡರ್​​​-8 ವರ್ಲ್ಡ್​ ಯೂತ್ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿ.. ಹೀಗೆ ಚಿಕ್ಕ ವಯಸ್ಸಿನಲ್ಲೇ ಹಲವು ದಾಖಲೆಗಳನ್ನು ಮಾಡಿದ್ದಾರೆ.

ಚೆಸ್ ಕಲಿತಿದ್ದು ಯಾರಿಂದ?

ಚಿಕ್ಕ ವಯಸ್ಸಿನಲ್ಲೇ ಪ್ರಪಂಚವನ್ನು ಆಳುತ್ತಿರುವ, ದಿಗ್ಗಜ ವಿಶ್ವನಾಥನ್ ಆನಂದ್ ಅವರ ಉತ್ತರಾಧಿಕಾರಿ ಎಂದೇ ಕರೆಸಿಕೊಳ್ಳುತ್ತಿರುವ ಆರ್​​ ಪ್ರಜ್ಞಾನಂದ ಚೆಸ್ ಆರಂಭಿಸಿದ್ದೇ ಕೇವಲ 3.5 ವರ್ಷದಲ್ಲಿ. ಅದು ಅವರ ಸಹೋದರಿ ಅವರಿಂದ ಕಲಿತದ್ದು. ಸಹೋದರಿ ವೈಶಾಲಿ ಅವರು ತನ್ನ ತಮ್ಮ ಪ್ರಜ್ಞಾನಂದನಿಗೆ ಚೆಸ್​ ಹೇಳಿಕೊಟ್ಟರು ಎಂಬುದು ವಿಶೇಷ. ವೈಶಾಲಿಯೇ ಪ್ರಜ್ಞಾನಂದನಿಗೆ ಚೆಸ್​ ತರಗತಿ ತೆಗೆದುಕೊಳ್ಳುತ್ತಿದ್ದರು.

ತಂದೆ ತೆಗೆದುಕೊಟ್ಟ ಚೆಸ್​ ಬೋರ್ಡ್​ ಅನ್ನು ಒಲ್ಲದ ಮನಸ್ಸಿನಿಂದಲೇ ಸ್ವೀಕರಿಸಿದ್ದರು. ಆದರೆ ಚೆಸ್​​ಗೂ ಮುನ್ನ ಅಕ್ಕ-ತಮ್ಮನಿಗೆ ಕಾರ್ಟೂನ್ ವ್ಯಾಮೋಹ ತುಂಬಾನೆ ಇತ್ತು. ಹಂತ ಹಂತವಾಗಿ ಚೆಸ್​ ಆಟದ ಕಡೆ ಗಮನ ನೀಡಿದರು. ಬಳಿಕ ಇಬ್ಬರ ಜೀವನವೇ ಬದಲಾಯಿತು. ಈ ಇಬ್ಬರಿಗೆ ಕೋಚ್​ ಆಗಿದ್ದದ್ದು ರಮೇಶ್​.

ಇನ್ನು ಚೆಸ್ ಆಟವನ್ನ ಮಕ್ಕಳಾಟದಂತೆ ಆಡುತ್ತಿದ್ದ ಪ್ರಜ್ಞಾನಂದ ಹಾಗೂ ವೈಶಾಲಿಗೆ ಆಟದ ನಿಯಮಗಳನ್ನು ಹೇಳಿಕೊಟ್ಟವರು ಕೋಚ್ ರಮೇಶ್. 2002ರಲ್ಲಿ ಬ್ರಿಟಿಷ್ ಚಾಂಪಿಯನ್‌ಶಿಪ್, 2007ರಲ್ಲಿ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್​​ನಲ್ಲಿ ಆರ್​​ ರಮೇಶ್ ಗೆದ್ದಿದ್ದರು. ಅಕ್ಕ ನೀಡಿದ್ದ ತರಬೇತಿಯಿಂದ ಚೆಸ್​​​​ನಲ್ಲಿ ಅದ್ಭುತ ಕಾಯಿ ನಡೆಸುತ್ತಿದ್ದ ಪ್ರಜ್ಞಾನಂದ ಈಗ ಅಕ್ಕನನ್ನೇ ಮೀರಿಸುವಷ್ಟರ ಮಟ್ಟಿಗೆ ಬೆಳೆದಿದ್ದಾರೆ.

ರಮೇಶ್ ಅವರು ಅಕ್ಕ-ತಮ್ಮನಲ್ಲಿ ಚೆಸ್​​​ ಆಟಕ್ಕೆ ಬೆರಗಾಗಿ, ಪ್ರತಿಭೆ ಗುರುತಿಸಿದ್ದರು. ಗುರುಕುಲ ಎಂಬ ಸಂಸ್ಥೆಯ ಮೂಲಕ ಸಾವಿರಾರು ಮಕ್ಕಳಿಗೆ ಚೆಸ್ ತರಬೇತಿ ಕೊಡುತ್ತಿರುವ ರಮೇಶ್ ಗರಡಿಯಲ್ಲಿ ಪಳಗಿದ ಪ್ರಜ್ಞಾನಂದ ಹಾಗೂ ವೈಶಾಲಿ ಇಬ್ಬರು ಸಹ ವಿಶ್ವ ಮಟ್ಟದಲ್ಲಿ ಗಮನ ಸೆಳದರು. ಅದರಲ್ಲೂ ಪ್ರಜ್ಞಾನಂದ ದಿಗ್ಗಜರನ್ನೇ ನಡುಗಿಸುತ್ತಿದ್ದಾರೆ. ಅದಕ್ಕೆ ಕಾರಣ ಅಕ್ಕ ವೈಶಾಲಿ ಎನ್ನುವುದನ್ನು ಮರೆಯುವಂತಿಲ್ಲ.

ಕ್ರಿಕೆಟ್ ಅಂದರೆ ಇಷ್ಟ!

64 ಮನೆಗಳನ್ನು ಹೊಂದಿರುವ ಚದುರಂಗವೇ ಪ್ರಜ್ಞಾನಂದನ ಸರ್ವಸ್ವ. ಸೋಷಿಯಲ್ ಮೀಡಿಯಾ ಎಂದರೆ ಅವರಿಗೆ ಅಲರ್ಜಿ. ಅಷ್ಟರಮಟ್ಟಿಗೆ ಅವರು ಚದುರಂಗಕ್ಕೆ ಅಡಿಕ್ಟ್​ ಆಗಿದ್ದಾರೆ. ಆದರೆ ಪ್ರಜ್ಞಾನಂದನಿಗೆ ಚೆಸ್​ ಹೊರತಾಗಿ ಕ್ರಿಕೆಟ್​ ಅಂದರೆ ಬಲು ಇಷ್ಟವಂತೆ. ಆದರೆ ವೀಕ್ಷಿಸುವುದು ಕಡಿಮೆಯಂತೆ. ಪ್ರಮುಖ ಪಂದ್ಯಗಳು ಇದ್ದಾಗ ಆ ಪಂದ್ಯವನ್ನು ಕಣ್ತುಂಬಿಕೊಳ್ಳುತ್ತಾರಂತೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ