logo
ಕನ್ನಡ ಸುದ್ದಿ  /  ಕ್ರೀಡೆ  /  Chess World Cup: ಚೆಸ್‌ ವಿಶ್ವಕಪ್; ಪ್ರಜ್ಞಾನಂದ ಫೈನಲ್ ಪ್ರವೇಶ; ಹೊಸ ಇತಿಹಾಸ ಸೃಷ್ಟಿ

Chess World Cup: ಚೆಸ್‌ ವಿಶ್ವಕಪ್; ಪ್ರಜ್ಞಾನಂದ ಫೈನಲ್ ಪ್ರವೇಶ; ಹೊಸ ಇತಿಹಾಸ ಸೃಷ್ಟಿ

Raghavendra M Y HT Kannada

Aug 22, 2023 12:39 PM IST

google News

ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿರುವ ಪ್ರಜ್ಞಾನಂದ

  • ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಭಾರತದ ಪ್ರಜ್ಞಾನಂದ ಇತಿಹಾಸ ಸೃಷ್ಟಿಸಿದ್ದಾರೆ. ಸೆಮಿ ಫೈನಲ್‌ನಲ್ಲಿ ವಿಶ್ವದ ಮೂರನೇ ಶ್ರೇಯಾಕಂದ ಫ್ಯಾಬಿಯಾನೊ ಕರುವಾನ ಅವರನ್ನು ಸೋಲಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿರುವ ಪ್ರಜ್ಞಾನಂದ
ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿರುವ ಪ್ರಜ್ಞಾನಂದ

ಬಾಕು (ಅಜರ್‌ಬೈಜಾನ್): ಬಾಕುನಲ್ಲಿ ನಡೆದ ಫಿಡೆ ಚೆಸ್ ವಿಶ್ವಕಪ್ (Chess World Cup 2023) ಸೆಮಿ ಫೈನಲ್‌ನಲ್ಲಿ ಭಾರತದ ರಮೇಶ್‌ಬಾಬು ಪ್ರಜ್ಞಾನಂದ) (Ramesh babu Praggnanandhaa ಅವರು ವಿಶ್ವದ ಮೂರನೇ ಶ್ರೇಯಾಂಕದ ಫ್ಯಾಬಿಯಾನೊ ಕರುವಾನ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ.

ಈ ಮೂಲಕ ಯುವ ಪ್ರತಿಭೆ ಆರ್ ಪ್ರಜ್ಞಾನಂದ ಚೆಸ್‌ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ವಿಶ್ವ ಚಾಂಪಿಯನ್‌ ವಿಶ್ವನಾಥನ್ ಆನಂದ್ (Viswanathan Anand) ಈ ಸಾಧನೆ ಮಾಡಿದ್ದರು.

ಭಾನುವಾರ (ಆಗಸ್ಟ್ 20), ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್‌ ಸೆಮಿ ಫೈನಲ್‌ನಲ್ಲಿ ಪ್ರಜ್ಞಾನಂದ ಅವರು ಅಮೆರಿಕದ ಫ್ಯಾಬಿಯಾನೊ ಕರುವಾನ ಅವರ ವಿರುದ್ಧ 3.5-2.5 ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿದ್ದಾರೆ. ಮೊದಲ ಗೇಮ್‌ನಲ್ಲಿ ಡ್ರಾ ಸಾಧಿಸಿದ್ದರು, ಎರಡನೇ ಗೇಮ್‌ನಲ್ಲೂ ಡ್ರಾ ಮಾಡಿಕೂಳ್ಳುವಲ್ಲಿ ಯಶಸ್ವಿಯಾಗಿದ್ದರು. ಫಲಿತಾಂಶವನ್ನು ನಿರ್ಧರಿಸಲು ಟೈಬ್ರೇಕರ್ ಅನುಸರಿಸಬೇಕಾಯಿತು.

ವಿಶ್ವದ ನಂಬರ್ 1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಫೈನಲ್‌

ಸೋಮವಾರ (ಆಗಸ್ಟ್ 21) ನಡೆದ ಟೈಬ್ರೇಕರ್‌ನಲ್ಲಿ ವಿಶ್ವದ ಮೂರನೇ ಶ್ರೇಯಾಂಕದ ಫ್ಯಾಬಿಯಾನೊ ಕರುವಾನ ಅವರನ್ನು 3.5-2.5 ಅಂತರದಲ್ಲಿ ಮಣಿಸಿದ 18 ವರ್ಷದ ಪ್ರಜ್ಞಾನಂದ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವದ ನಂಬರ್ 1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಫೈನಲ್‌ನಲ್ಲಿ ಪೈಪೋಟಿ ನಡೆಸಲಿದ್ದಾರೆ.

ಯುವ ಪ್ರತಿಭೆ ಪ್ರಜ್ಞಾನಂದ ಐದು ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ನಂತರ ಕ್ಯಾಂಡಿಡೇಟ್ಸ್ ಟೂರ್ಮೆಂಟ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಚೆಸ್ ಆಟಗಾರ ಎನಿಸಿದ್ದಾರೆ.

ಒಂದು ವೇಳೆ ಫೈನಲ್‌ನಲ್ಲಿ ಕಾರ್ಲ್‌ಸೆನ್ ಅವರನ್ನು ಮಣಿಸಿ ಚಾಂಪಿಯನ್ ಆದರೆ, ತಮಿಳುನಾಡಿನ ಪ್ರಜ್ಞಾನಂದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥ್ ಆನಂದ್ ಅವರ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯನೆಂಬ ದಾಖಲೆ ಬರೆಯಲಿದ್ದಾರೆ.

ಫೈನಲ್‌ಗೆ ಹೋಗುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ

ಸೆಮಿಫೈನಲ್ ಬಳಿಕ ಮಾತನಾಡಿರುವ ಪ್ರಜ್ಞಾನಂದ, ಈ ಟೂರ್ನಿಯಲ್ಲಿ ಮ್ಯಾಗ್ನಸ್ ಅವರನ್ನು ಎದುರಿಸುತ್ತೇನೆಂದು ಅಂದುಕೊಂಡಿರಲಿಲ್ಲ. ಏಕೆಂದರೆ ನಾನು ಫೈನಲ್‌ಗೆ ಹೋಗುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ ಎಂದಿದ್ದಾರೆ.

ರಕ್ಷಣಾತ್ಮಕ ಆಟದಿಂದ ನಾನು ಸೆಮಿಫೈನಲ್ ಗೆದ್ದಿದ್ದೇನೆ ಎಂದು ನಾನು ಭಾವಿಸಿದ್ದೇನೆ. ಕೆಲವು ಆಟಗಳು ತುಂಬಾ ಕಷ್ಟ. ಆದರೆ ಒಂದು ಹಂತದಲ್ಲಿ ಫ್ಯಾಬಿಯಾನೊ ಎಡವಿದರು. ಅಂತಿಮವಾಗಿ ನಾನು ಯಶಸ್ವಿಯಾದೆ. ಈಗ ಫೈನಲ್ ತಲುಪಿದ್ದೇನೆ ಎಂದು ಪ್ರಜ್ಞಾನಂದ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಪ್ರಜ್ಞಾನಂದ ಫೈನಲ್‌ಗೆ ಪ್ರವೇಶಿಸಿರುವುದು ಅವರ ಕಾರ್ಯಕ್ಷಮತೆಗೆ ಸಾಕ್ಷಿ

ಭಾರತದ ಯುವ ಪ್ರತಿಭೆ ಪ್ರಜ್ಞಾನಂದ ಫಿಡೆ ಚೆಕ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ದಿಗ್ಗಜ ಆಟಗಾರ ವಿಶ್ವನಾಥನ್ ಆನಂದ್, ಫ್ಯಾಬಿಯಾನೊ ಅವರನ್ನು ಮಣಿಸಿರುವ ಪ್ರಜ್ಞಾನಂದ ಅವರು ಫೈನಲ್‌ಗೆ ಪ್ರವೇಶಿಸಿರುವುದು ಅವರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ