logo
ಕನ್ನಡ ಸುದ್ದಿ  /  ಕ್ರೀಡೆ  /  Chetan Sharma: ಸ್ಟಿಂಗ್ ಆಪರೇಷನ್​ನಲ್ಲಿ ವಿವಾದ ಸೃಷ್ಟಿಸಿದ್ದ ಚೇತನ್ ಶರ್ಮಾ ಬಿಸಿಸಿಐಗೆ ಮರು ಪ್ರವೇಶ; ಮತ್ತೆ ಚೀಪ್ ಸೆಲೆಕ್ಟರ್ ಆಗಿ ಆಯ್ಕೆ

Chetan Sharma: ಸ್ಟಿಂಗ್ ಆಪರೇಷನ್​ನಲ್ಲಿ ವಿವಾದ ಸೃಷ್ಟಿಸಿದ್ದ ಚೇತನ್ ಶರ್ಮಾ ಬಿಸಿಸಿಐಗೆ ಮರು ಪ್ರವೇಶ; ಮತ್ತೆ ಚೀಪ್ ಸೆಲೆಕ್ಟರ್ ಆಗಿ ಆಯ್ಕೆ

Prasanna Kumar P N HT Kannada

Jun 16, 2023 03:23 PM IST

google News

ಚೇತನ್​ ಶರ್ಮಾ

    • Chetan Sharma: ಸ್ಟಿಂಗ್ ಆಪರೇಷನ್​ನಲ್ಲಿ ಭಾರತೀಯ ಕ್ರಿಕೆಟ್​​ ಕುರಿತು ಸಂಚಲನ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸಿ ಬಿಸಿಸಿಐ ಚೀಫ್​ ಸೆಲೆಕ್ಟರ್​ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ಚೇತನ್ ಶರ್ಮಾ, ಬಿಸಿಸಿಐಗೆ ಮತ್ತೆ ಪ್ರವೇಶ ಮಾಡಿದ್ದಾರೆ.
ಚೇತನ್​ ಶರ್ಮಾ
ಚೇತನ್​ ಶರ್ಮಾ

ಖಾಸಗಿ ವಾಹಿನಿಯೊಂದರ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತೀಯ ಕ್ರಿಕೆಟ್​ನ (Indian Cricket) ಆಂತರಿಕ ವಿಚಾರಗಳನ್ನು ಬಹಿರಂಗಪಡಿಸಿ ವಿವಾದಕ್ಕೆ ಗುರಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್​ ಶರ್ಮಾ (Chetan Sharma), ಅವರು ಈಗ ಮತ್ತೆ ಬಿಸಿಸಿಐ (BCCI) ವಲಯದಲ್ಲಿ ಕಾಣಿಸಿಕೊಂಡಿದ್ದಾರೆ. ನಾಲ್ಕು ತಿಂಗಳ ಬಳಿಕ ಕಣ್ಣಿಗೆ ಬಿದ್ದಿದ್ದು, ಮತ್ತೆ ಸೆಲೆಕ್ಷನ್​ ಕಮಿಟಿ ಅಧ್ಯಕ್ಷರಾಗಿ (Chief Selector) ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದ ವರ್ಷ ನಡೆದ ಐಸಿಸಿ T20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ (T20 World Cup) ಟೀಮ್ ಇಂಡಿಯಾ (Team India), ಸೆಮಿಫೈನಲ್​​​ನಲ್ಲಿ ಇಂಗ್ಲೆಂಡ್​ ವಿರುದ್ಧ ಸೋತು ಹೊರ ಬಿದ್ದ ಬಳಿಕ ಚೇತನ್‌ ಶರ್ಮಾರನ್ನು ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನದಿಂದ ಕಿತ್ತೊಗೆಯಲಾಗಿತ್ತು. ಆದರೆ, ಮುಂದಿನ ಸೆಲೆಕ್ಟರ್​​ಗಳ ನೇಮಕ ಪ್ರಕ್ರಿಯೆ ತಡವಾದ ಕಾರಣ ಅವರನ್ನೇ ಸೆಲೆಕ್ಷನ್‌ ಸಮಿತಿ ಮುಖ್ಯಸ್ಥರನ್ನಾಗಿ ತಾತ್ಕಾಲಿಕವಾಗಿ ಮರು ನೇಮಕ ಮಾಡಲಾಗಿತ್ತು.

ಉತ್ತರ ವಲಯದ ಆಯ್ಕೆ ಸಮಿತಿ ಮುಖ್ಯಸ್ಥ

ಆದರೆ, ಈ ಬಾರಿ ಆಯ್ಕೆ ಸಮಿತಿ ಮುಖಸ್ಥರಾಗಿರುವುದು ಬಿಸಿಸಿಐಗಲ್ಲ. ರಹಸ್ಯ ಕಾರ್ಯಾಚರಣೆಯ ನಂತರ ನಾಲ್ಕು ತಿಂಗಳಾದರೂ ಯಾರ ಕಣ್ಣಿಗೂ ಬೀಳದೆ, ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಕಿರು ಸಂದರ್ಶನಕ್ಕೆ ಪ್ರತಿಕ್ರಿಯಿಸದ ಚೇತನ್ ಈಗ ಮತ್ತೆ ಬಿಸಿಸಿಐ ಸೇರಿದ್ದಾರೆ. ಉತ್ತರ ವಲಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚೇತನ್ ಶರ್ಮಾ ದುಲೀಪ್ ಟ್ರೋಫಿಗಾಗಿ ಉತ್ತರ ವಲಯ ತಂಡದ ಆಯ್ಕೆ ಸಮಿತಿಯ ಭಾಗವಾಗಿದ್ದಾರೆ.

ಮಂದೀಪ್​ ಸಿಂಗ್​ ಕ್ಯಾಪ್ಟನ್​

ದುಲೀಪ್ ಟ್ರೋಫಿಯ ಭಾಗವಾಗಿ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಉತ್ತರ ವಲಯದ ತಂಡಕ್ಕೆ ಮಂದೀಪ್ ಸಿಂಗ್ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಸೆನ್ಸೇಷನ್ ನೆಹಾಲ್ ವಧೇರಾ ಜೊತೆಗೆ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಆರಂಭಿಕ ಆಟಗಾರ ಪ್ರಭಾಸಿಮ್ರಾನ್ ಸಿಂಗ್ ಕೂಡ ಉತ್ತರ ವಲಯದ ತಂಡದಲ್ಲಿದ್ದಾರೆ.

ಈ ತಂಡದಲ್ಲಿ ಜಯಂತ್ ಯಾದವ್ ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಕ್ಯಾಪ್ ಪಡೆದ ಆಟಗಾರ. ಜಯಂತ್, 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡಿದ್ದರು. ಅವರು ಶ್ರೀಲಂಕಾ ವಿರುದ್ಧದ ಮೊಹಾಲಿ ಟೆಸ್ಟ್ ಪಂದ್ಯದ ಭಾಗವಾಗಿದ್ದರು. ಇನ್ನು ದುಲೀಪ್ ಟ್ರೋಫಿಯಲ್ಲಿ ಉತ್ತರ ವಲಯಕ್ಕೆ ಅಜಯ್ ರಾತ್ರಾ ಮುಖ್ಯ ಕೋಚ್ ಆಗಿ ಆಯ್ಕೆಯಾದರು.

ಉತ್ತರ ವಲಯ ತಂಡ

ಮನ್​ದೀಪ್​ ಸಿಂಗ್ (ನಾಯಕ), ಪ್ರಭ್‌ಸಿಮ್ರಾನ್ ಸಿಂಗ್, ಪ್ರಶಾಂತ್ ಚೋಪ್ರಾ, ಧ್ರುವ ಶೋರೆ, ಅಂಕಿತ್ ಕಲ್ಸಿ, ಅಂಕಿತ್ ಕುಮಾರ್, ಪುಲ್ಕಿತ್ ನಾರಂಗ್, ನಿಶಾಂತ್ ಸಿಂಧು, ಮನನ್ ವೋಹ್ರಾ, ಜಯಂತ್ ಯಾದವ್, ಬಲ್ಜೀತ್ ಸಿಂಗ್, ವೈಭವ್ ಅರೋರಾ, ಹರ್ಷಿತ್ ರಾಣಾ, ಸಿದ್ಧಾರ್ಥ್ ಕೌಲ್, ಅಬಿದಾರ್ಥ್ ಕೌಲ್ ಮುಷ್ತಾಕ್, ನೆಹಾಲ್ ವಧೇರಾ.

ರಹಸ್ಯ ಕಾರ್ಯಾಚರಣೆಯಲ್ಲಿ ಚೇತನ್​ ಶರ್ಮಾ ಹೇಳಿದ್ದೇನು?

ಟೀಮ್​ ಇಂಡಿಯಾದ ಕೆಲ ಆಟಗಾರರು ಫಿಟ್​​​ನೆಸ್​ ಪ್ರೂವ್​ ಮಾಡಲು ಇಂಜೆಕ್ಷನ್‌ ಪಡೆಯುತ್ತಾರೆ ಎಂದಿದ್ದ ಚೇತನ್‌ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ವಿರುದ್ಧವೂ ಗಂಭೀರ ಆರೋಪ ಮಾಡಿದ್ದರು. ಟೀಮ್​ ಇಂಡಿಯಾದೊಳಗಿನ ಹಿಂದೆಂದೂ ಕಂಡು ಕೇಳರಿಯದ ಕೆಲ ವಿಚಾರಗಳನ್ನು ರಹಸ್ಯ ಕಾರ್ಯಚರಣೆ ಸಂದರ್ಭದಲ್ಲಿ ಚೇತನ್ ಶರ್ಮಾ ಬಹಿರಂಗಪಡಿಸಿದ್ರು.

ಚುಚ್ಚುಮದ್ದು ಬಳಸುತ್ತಾರೆ

ಈ ವರ್ಷದ ಫೆಬ್ರವರಿಯಲ್ಲಿ ಜೀ ನ್ಯೂಸ್ ಮತ್ತು ವಿಯಾನ್ ಜಂಟಿಯಾಗಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಚೇತನ್ ಅವರ ಹೇಳಿಕೆಗಳು ಹೊಸ ಸಂಚಲನವನ್ನು ಉಂಟು ಮಾಡಿದ್ದವು. ಇದು ಬಿಸಿಸಿಐ ಅನ್ನು ತಲೆ ತಗ್ಗಿಸುವಂತೆ ಮಾಡಿತ್ತು. ಪಂದ್ಯಕ್ಕೂ ಮುನ್ನ ಚುಚ್ಚುಮದ್ದುಗಳನ್ನು ಬಳಸುತ್ತಾರೆ. ಅದರಲ್ಲಿ ಡ್ರಗ್ಸ್​ ಕೂಡ ಇರುತ್ತದೆ. ಆದರೆ ಡೋಪಿಂಗ್ ಪರೀಕ್ಷೆಯಲ್ಲೂ ಪತ್ತೆಯಾಗುವುದಿಲ್ಲ. ಶೇಕಡಾ 80 - 85ರಷ್ಟು ಫಿಟ್ನೆಸ್‌ ಇದ್ದರೂ, ಇಂಜೆಕ್ಷನ್‌ ನೆರವಿನಿಂದ ಆಟವಾಡುತ್ತಿದ್ದಾರೆ ಎಂಬ ಬಾಂಬ್‌ ಸ್ಪೋಟಿಸಿದ್ದರು.

ಗಂಗೂಲಿಗೆ ಕೊಹ್ಲಿ ಇಷ್ಟ ಇರಲಿಲ್ಲ

ಸೌರವ್ ಗಂಗೂಲಿ ಅವರು ರೋಹಿತ್‌ ಶರ್ಮಾ ಪರವಾಗಿ ಯಾವುದೇ ರೀತಿ ನಡೆದುಕೊಂಡಿಲ್ಲ. ಆದರೆ, ವಿರಾಟ್‌ ಕೊಹ್ಲಿಯನ್ನು ಕಂಡರೆ ಗಂಗೂಲಿಗೆ ಇಷ್ಟವಿಲ್ಲ ಎಂಬುದು ಸ್ಪಷ್ಟ. ಕೊಹ್ಲಿ ಮತ್ತು ರೋಹಿತ್‌ ನಡುವೆ ಒಳ ಮುನಿಸು ಏನೂ ಇಲ್ಲ. ಆಸ್ಟ್ರೇಲಿಯಾ ವಿರುದ್ಧದ ಚುಟುಕು ಸರಣಿಗೂ ಮುನ್ನ ವೇಗಿ ಜಸ್‌ಪ್ರೀತ್‌ ಬುಮ್ರಾ ಚೇತರಿಕೆ ಕಂಡಿರಲಿಲ್ಲ. ಆದರೂ ತರಾತುರಿಯಲ್ಲಿ ಬುಮ್ರಾರನ್ನು ಕಣಕ್ಕಿಳಿಸಲಾಯಿತು. ಇನ್ನೂ ಒಂದಿಬ್ಬರು ಆಟಗಾರರು ಖಾಸಗಿಯಾಗಿ ಇಂಜೆಕ್ಷನ್‌ ತೆಗೆದುಕೊಂಡು ಆಡಲು ಫಿಟ್‌ ಎಂದು ಹೇಳಿದ್ದರು ಅಂತ ಚೇತನ್​ ಶರ್ಮಾ ಬಹಿರಂಗಪಡಿಸಿದ್ದರು.

ವಿರಾಟ್‌ ಸುಳ್ಳು ಹೇಳಿದ್ರು

ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್​ ಗಂಗೂಲಿ ಅವರಿಂದ ತಾವು ಏಕದಿನ ಕ್ಯಾಪ್ಟನ್ಸಿ ಕಳೆದುಕೊಂಡೆ ಎಂಬುದು ಕೊಹ್ಲಿ ಕಲ್ಪನೆ. ಆದರೆ ಕ್ಯಾಪ್ಟನ್ಸಿ ತ್ಯಜಿಸುವ ಮುನ್ನ ಮರು ಆಲೋಚನೆ ಮಾಡುವಂತೆ ಗಂಗೂಲಿ, ಕೊಹ್ಲಿಗೆ ಹೇಳಿದ್ದರು. ಆದರೆ, ಕೊಹ್ಲಿ ಅದನ್ನು ಕೇಳಿರಲಿಲ್ಲ. ಆದರೆ ಗಂಗೂಲಿ ನನಗೆ ಏನೂ ಹೇಳಲಿಲ್ಲ ಎಂದು ಕೊಹ್ಲಿ ಸುಳ್ಳು ಹೇಳಿದರು. ವಿರಾಟ್‌ ಸುಳ್ಳು ಹೇಳಿದ್ದು ಯಾಕೆ ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಚೇತನ್​ ಶರ್ಮಾ ಹೇಳಿದ್ದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ