logo
ಕನ್ನಡ ಸುದ್ದಿ  /  ಕ್ರೀಡೆ  /  Eden Gardens: ಈಡನ್ ಗಾರ್ಡನ್ಸ್ ಡ್ರೆಸ್ಸಿಂಗ್ ರೂಂನಲ್ಲಿ ಬೆಂಕಿ; ವಿಶ್ವಕಪ್ ಸೆಮಿ ಫೈನಲ್ ನಡೆಯಬೇಕಿದ್ದ ಸ್ಟೇಡಿಯಂನಲ್ಲಿ ಅಗ್ನಿ ಅವಘಡ

Eden Gardens: ಈಡನ್ ಗಾರ್ಡನ್ಸ್ ಡ್ರೆಸ್ಸಿಂಗ್ ರೂಂನಲ್ಲಿ ಬೆಂಕಿ; ವಿಶ್ವಕಪ್ ಸೆಮಿ ಫೈನಲ್ ನಡೆಯಬೇಕಿದ್ದ ಸ್ಟೇಡಿಯಂನಲ್ಲಿ ಅಗ್ನಿ ಅವಘಡ

HT Kannada Desk HT Kannada

Aug 10, 2023 12:47 PM IST

google News

ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನ (PTI)

  • ಕೋಲ್ಕತದ ಈಡನ್ ಗಾರ್ಡರ್ನ್ಸ್ ಕ್ರಿಕೆಟ್ ಸ್ಟೇಡಿಯಂನ ಡ್ರೆಸ್ಸಿಂಗ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ. ನವೆಂಬರ್ 16 ರಂದು ಐಸಿಸಿ ಏಕದಿನ ವಿಶ್ವಕಪ್‌ನ ಸೆಮಿ ಫೈನಲ್ ಪಂದ್ಯ ಇಲ್ಲೇ ನಡೆಯುತ್ತೆ.

ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನ (PTI)
ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನ (PTI)

ಕೋಲ್ಕತ್ತ (ಪಶ್ಚಿಮ ಬಂಗಾಳ): ಕೆಲವೇ ದಿನಗಳಲ್ಲಿ ಐಸಿಸಿ ಏಕದಿನ ವಿಶ್ವಕಪ್ (ICC ODI World Cup) ಸೆಮಿ ಫೈನಲ್ ಪಂದ್ಯ ನಡೆಯಬೇಕಿರುವ ಕೋಲ್ಕತ್ತದ ಈಡನ್ ಗಾರ್ಡರ್ನ್ಸ್ ಸ್ಟೇಡಿಯಂನಲ್ಲಿ (Eden Gardens Stadium) ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ವಿಶ್ವಕಪ್‌ಗಾಗಿ ನವೀಕರಣ ಮಾಡಲಾಗುತ್ತಿರುವ ಈಡನ್ ಗಾರ್ಡರ್ನ್ಸ್ ಕ್ರಿಕೆಟ್ ಸ್ಟೇಡಿಯಂನ ಡ್ರೆಸ್ಸಿಂಗ್ ರೂಂನಲ್ಲಿ ಬುಧವಾರ (ಆಗಸ್ಟ್ 9) ರಾತ್ರಿ ಬೆಂಕಿ ಅವಘಡ ಸಂಭವಿಸಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಸ್ಥಳದಲ್ಲಿ ಸಿಬ್ಬಂದಿ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ಮುಟ್ಟಿಸಿದ್ದಾರೆ. ಕೂಡಲೇ ದೌಡಾಯಿಸಿದ ಎರಡು ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಡ್ರೆಸ್ಸಿಂಗ್ ರೂಂಗೆ ಹೆಚ್ಚಿನ ಹಾನಿಯಾಗಿದ್ದು, ಅದರಲ್ಲಿದ್ದ ವಸ್ತುಗಳು ಸುಟ್ಟು ಹೋಗಿವೆ ಎಂದು ಹೇಳಲಾಗುತ್ತಿದೆ.

ದುರಂತಕ್ಕೆ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ. ಕೆಲವು ವರ್ಷಗಳಿಂದ ಕ್ರೀಡಾಂಗಣದ ನವೀಕರಣ ಕಾಮಗಾರಿ ನಡೆಯುತ್ತಿದ್ದು, ವಿಶ್ವಕಪ್ ಸಮೀಪಿಸುತ್ತಿರುವುದರಿಂದ ಕಾಮಗಾರಿಗೆ ವೇಗವನ್ನು ನೀಡಲಾಗಿದೆ.

ಸೆಪ್ಟೆಂಬರ್ 15ರೊಳಗೆ ಸಂಪೂರ್ಣವಾಗಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಕೋಲ್ಕತ್ತದ ಈಡನ್ ಗಾರ್ಡನ್ಸ್‌ಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿಗಳ ಬಗ್ಗೆ ಐಸಿಸಿ ಹಾಗೂ ಬಿಸಿಸಿಐ ಅಧಿಕಾರಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ. ಐಸಿಸಿ ಮತ್ತೊಮ್ಮೆ ಈ ಕ್ರೀಡಾಂಗಣವನ್ನು ಪರಿಶೀಲನೆೆ ನಡೆಸಲಿದೆ.

ಸ್ಟೇಡಿಯಂನ ನವೀಕರಣ ಕಾಮಗಾರಿಯ ಭಾಗವಾಗಿ ಹೊಸ ಡ್ರೆಸ್ಸಿಂಗ್ ರೂಂಅನ್ನು ಕೂಡ ನಿರ್ಮಿಸಲಾಗುತ್ತಿದೆ. ಕೆಲಸದ ವೇಳೆ ಹೆಚ್ಚಿನ ವಿದ್ಯುತ್ ಉಪಕರಣಗಳನ್ನು ಬಳಸಲಾಗುತ್ತಿದೆ. ಇದು ದುರಂತ ಕಾರಣವಾಗಿರಬಹುದೇ ಎಂದು ಶಂಕಿ ವ್ಯಕ್ತವಾಗಿದೆ.

ಅಕ್ಟೋಬರ್ 28 ರಂದು ನೆದರ್‌ಲ್ಯಾಂಡ್ಸ್-ಬಾಂಗ್ಲಾದೇಶ, ಅಕ್ಟೋಬರ್ 31 ರಂದು ಪಾಕಿಸ್ತಾನ-ಬಾಂಗ್ಲಾ, ನವೆಂಬರ್ 5 ರಂದು ಭಾರತ-ಬಾಂಗ್ಲಾ ಹಾಗೂ ನವೆಂಬರ್ 11 ರಂದು ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಲೀಗ್ ಹಂತದ ಪಂದ್ಯಗಳು ಇದೇ ಮೈದಾನದಲ್ಲಿ ನಡೆಯಲಿದೆ. ಬಳಿಕ ನವೆಂಬರ್ 16 ರಂದು ವಿಶ್ವಕಪ್ ಎರಡನೇ ಸೆಮಿ ಫೈನಲ್ ನಡೆಯಲಿದೆ.

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ