logo
ಕನ್ನಡ ಸುದ್ದಿ  /  ಕ್ರೀಡೆ  /  Ajinkya Rahane: ರಹಾನೆ ವೈಫಲ್ಯ ಮೆಟ್ಟಿ ನಿಂತರೆ, ಅವರೇ ಮುಂದಿನ ಭಾರತ ಟೆಸ್ಟ್​ ತಂಡದ ಕ್ಯಾಪ್ಟನ್; ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಅಭಿಪ್ರಾಯ

Ajinkya Rahane: ರಹಾನೆ ವೈಫಲ್ಯ ಮೆಟ್ಟಿ ನಿಂತರೆ, ಅವರೇ ಮುಂದಿನ ಭಾರತ ಟೆಸ್ಟ್​ ತಂಡದ ಕ್ಯಾಪ್ಟನ್; ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಅಭಿಪ್ರಾಯ

Prasanna Kumar P N HT Kannada

Jul 23, 2023 06:20 PM IST

google News

ಅಜಿಂಕ್ಯ ರಹಾನೆ ಮತ್ತು ವಾಸೀಂ ಜಾಫರ್​.

    • Ajinkya Rahane: 35 ವರ್ಷ ವಯಸ್ಸಿನ ಅಜಿಂಕ್ಯ ರಹಾನೆ ವೈಫಲ್ಯ ಮೆಟ್ಟಿನಿಂತು ಸ್ಥಿರ ಪ್ರದರ್ಶನ ನೀಡಿದ್ದೇ ಆದರೆ, ತಂಡದಲ್ಲಿ ತಮ್ಮ ಸ್ಥಾನವನ್ನು ಹೆಚ್ಚು ಕಾಲ ಉಳಿಯಲಿದ್ದಾರೆ. ರೋಹಿತ್ ನಂತರ ನಾಯಕತ್ವದ ಆಯ್ಕೆಯಾಗಲಿದ್ದಾರೆ ಎಂದು ವಾಸೀಂ ಜಾಫರ್ ಹೇಳಿದ್ದಾರೆ.
ಅಜಿಂಕ್ಯ ರಹಾನೆ ಮತ್ತು ವಾಸೀಂ ಜಾಫರ್​.
ಅಜಿಂಕ್ಯ ರಹಾನೆ ಮತ್ತು ವಾಸೀಂ ಜಾಫರ್​.

ಪ್ರಸಕ್ತ ಸಾಲಿನ ಐಪಿಎಲ್​ನಲ್ಲಿ ಆರ್ಭಟಿಸಿ 18 ತಿಂಗಳ ನಂತರ ಟೆಸ್ಟ್​ ತಂಡದಲ್ಲಿ ಅವಕಾಶ ಪಡೆದ ಅಜಿಂಕ್ಯ ರಹಾನೆ (Ajinkya Rahane), ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನಲ್ಲಿ (WTC Final 2023) ಮಿಂಚಿನ ಪ್ರದರ್ಶನ ನೀಡಿದರು. ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 89 ಮತ್ತು 46 ಸ್ಕೋರ್​ಗಳಿಸಿ ರಹಾನೆ, ಆಯ್ಕೆದಾರರ ಮನ ಗೆದ್ದರು. ಅದೇ ಕಾರಣಕ್ಕಾಗಿ ವೆಸ್ಟ್ ಇಂಡೀಸ್ ಸರಣಿಗೂ ಅವರನ್ನು ಆಯ್ಕೆ ಮಾಡಲಾಯಿತು.

ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ (India vs West Indies) ಅದ್ಭುತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಪರಿಣಾಮಕಾರಿ ಪ್ರದರ್ಶನ ನೀಡಲು ಎಡವುತ್ತಿರುವ ರಹಾನೆಯನ್ನು ಕೈಬಿಡಬೇಕೆಂಬ ಚರ್ಚೆಗಳು ಆಗಲೇ ಹುಟ್ಟಿಕೊಂಡಿವೆ. ಇದರ ನಡುವೆ ಭಾರತದ ಮಾಜಿ ಆಟಗಾರ ವಾಸೀಂ ಜಾಫರ್​​ (Wasim Jaffer) ಪ್ರತಿಕ್ರಿಯಿಸಿದ್ದು, ರಹಾನೆ ಭಾರತ ತಂಡದಲ್ಲಿ ಉಳಿಯಲು ಹೆಚ್ಚು ಸ್ಥಿರವಾಗಿ ರನ್ ಗಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ವೆಸ್ಟ್ ಇಂಡೀಸ್ ಸರಣಿಯಲ್ಲಿ ಎರಡು ಬಾರಿ ಬ್ಯಾಟ್ ಮಾಡಿರುವ ರಹಾನೆ ಕೇವಲ 3 ಮತ್ತು 8 ರನ್ ಗಳಿಸಿದ್ದಾರೆ. ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ತಂಡದ ಮುಂದಿನ ಪ್ರವಾಸಕ್ಕಾಗಿ ಅನುಭವಿ ಬ್ಯಾಟರ್‌ಗೆ ಬೆಂಬಲ ನೀಡಿದ್ದಾರೆ. 2023ರ ಕೊನೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟೆಸ್ಟ್​ ಸರಣಿಗೆ ರಹಾನೆ ಅವಕಾಶ ನೀಡುವ ಸಾಧ್ಯತೆ ಇದೆ.

’ಸ್ಥಿರ ಪ್ರದರ್ಶನ ನೀಡಲೇಬೇಕು’

ಜಿಯೋ ಸಿನಿಮಾದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಜಾಫರ್, ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರಹಾನೆ ಪ್ರದರ್ಶನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. 35 ವರ್ಷ ವಯಸ್ಸಿನ ರಹಾನೆ ವೈಫಲ್ಯ ಮೆಟ್ಟಿ ನಿಂತು ಸ್ಥಿರ ಪ್ರದರ್ಶನ ನೀಡಿದ್ದೇ ಆದರೆ, ತಂಡದಲ್ಲಿ ತಮ್ಮ ಸ್ಥಾನವನ್ನು ಹೆಚ್ಚು ಕಾಲ ಉಳಿಯಲಿದ್ದಾರೆ. ರೋಹಿತ್ ನಂತರ ನಾಯಕತ್ವದ ಆಯ್ಕೆಯಾಗಲಿದ್ದಾರೆ ಎಂದು ಹೇಳಿದ್ದಾರೆ.

‘ವೈಫಲ್ಯ ಮೆಟ್ಟಿ ನಿಲ್ಲಬೇಕು’

ರಹಾನೆ ಅವರು 80-90 ಟೆಸ್ಟ್‌ಗಳನ್ನು (84) ಆಡಿದ್ದರೂ ಸಹ ಅವರ ಆಟದಲ್ಲಿ ಸ್ಥಿರತೆ ತೋರಿಸಬೇಕಿದೆ. ಸ್ಥಿರತೆಯೇ ಸಮಸ್ಯೆಯಾಗಿದೆ. ಏಕೆಂದರೆ, ರೋಹಿತ್ ಶರ್ಮಾ ನಂತರ ಭಾರತಕ್ಕೆ ಉತ್ತಮ ನಾಯಕತ್ವದ ಆಯ್ಕೆಯಾಗಿರುವುದರಿಂದ ವೈಫಲ್ಯವನ್ನು ಮೆಟ್ಟಿ ನಿಲ್ಲಬೇಕಿದೆ. ರಹಾನೆ ಸರಾಗವಾಗಿ ರನ್ ಗಳಿಸುವುದು ಅಗತ್ಯ. ನಂತರ ಎಲ್ಲವೂ ಅನು ಅನುಸರಿಸಿಕೊಂಡು ಹೋಗುತ್ತದೆ ಎಂದು ಹೇಳಿದ್ದಾರೆ.

ವಿಷಾದ ವ್ಯಕ್ತಪಡಿಸಿದ ಜಾಫರ್

ರಹಾನೆ ಅವರಿಗೆ ಇನ್ನೂ ವಯಸ್ಸಿದೆ. ಅವರ ಕಳಪೆ ಫಾರ್ಮ್‌ನಿಂದ ಭಾರತ ತಂಡದ ನಾಯಕನಾಗುವ ಅವಕಾಶವನ್ನು ಕಳೆದುಕೊಂಡ ಕಾರಣಕ್ಕೆ ಜಾಫರ್​ ವಿಷಾದ ವ್ಯಕ್ತಪಡಿಸಿದರು. ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತ 36 ರನ್​ಗಳಿಗೆ ಆಲೌಟ್​ ಆದ ನಂತರ ಮುಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ರಹಾನೆ, ಅದೇ ಫಾರ್ಮ್​ ಅನ್ನು ಮುಂದುವರೆಸಿದ್ದರೆ ಇಷ್ಟೊತ್ತಿಗೆ ಮುಂದಿನ ಟೆಸ್ಟ್​ ನಾಯಕನಾಗಿ ಇರುತ್ತಿದ್ದರು. ಆದರೆ ಫಾರ್ಮ್​ ಕಳೆದುಕೊಂಡು, ತಂಡದಲ್ಲೂ ಸ್ಥಾನ ಕಳೆದುಕೊಂಡರು ಎಂದು ಹೇಳಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ