logo
ಕನ್ನಡ ಸುದ್ದಿ  /  ಕ್ರೀಡೆ  /  Yuzvendra Chahal: ಚೆಸ್​​ನಲ್ಲಿ ನಾನೇ ಕಿಂಗ್, ನನ್ನನ್ನು ಸೋಲಿಸುವವರು ಭಾರತ ತಂಡದಲ್ಲಿ ಯಾರೂ ಇಲ್ಲ; ಸಹ ಆಟಗಾರರ ಕಾಲೆಳೆದ ಯುಜುವೇಂದ್ರ ಚಹಲ್

Yuzvendra Chahal: ಚೆಸ್​​ನಲ್ಲಿ ನಾನೇ ಕಿಂಗ್, ನನ್ನನ್ನು ಸೋಲಿಸುವವರು ಭಾರತ ತಂಡದಲ್ಲಿ ಯಾರೂ ಇಲ್ಲ; ಸಹ ಆಟಗಾರರ ಕಾಲೆಳೆದ ಯುಜುವೇಂದ್ರ ಚಹಲ್

Prasanna Kumar P N HT Kannada

Jun 28, 2023 12:30 PM IST

google News

ಲೆಗ್​ ಸ್ಪಿನ್ನರ್ ಯುಜುವೇಂದ್ರ ಚಹಲ್

    • Yuzvendra Chahal: ಚೆಸ್​ನಲ್ಲಿ ನನ್ನನ್ನು ಸೋಲಿಸಲು ಟೀಮ್​ ಇಂಡಿಯಾದ ಆಟಗಾರರು ಯಾರು ಇಲ್ಲ. ನನಗೆ ಚೆಸ್​ ಆಟವು ಭಾರಿ ತಾಳ್ಮೆ ಕಲಿಸಿತು ಎಂದು ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ (Yuzvendra Chahal) ಅಭಿಪ್ರಾಯಪಟ್ಟಿದ್ದಾರೆ.
ಲೆಗ್​ ಸ್ಪಿನ್ನರ್ ಯುಜುವೇಂದ್ರ ಚಹಲ್
ಲೆಗ್​ ಸ್ಪಿನ್ನರ್ ಯುಜುವೇಂದ್ರ ಚಹಲ್

ಯುಜುವೇಂದ್ರ ಚಹಲ್ (Yuzvendra Chahal), ಟೀಮ್ ಇಂಡಿಯಾದ ಒನ್​ ಆಫ್ ದ ಫೈನೆಸ್ಟ್​ ಸ್ಪಿನ್ನರ್. ದೇಹ ಚಿಕ್ಕದಾದರೂ, ಘಟಾನುಘಟಿ ಆಟಗಾರರನ್ನೇ ಭಯ ಹುಟ್ಟಿಸುತ್ತಾರೆ. ವಿಕೆಟ್​​ ಇಲ್ಲದೆ ಪಂದ್ಯದ ಮುಗಿಸದ ಲೆಗ್​ ಸ್ಪಿನ್ನರ್​​ಗೆ ಈಗ ತಂಡದಲ್ಲಿ ಜಾಗದ ಕೊರತೆಯಾಗಿದೆ. ಮೊದಲು ಚಹಲ್​ ಇಲ್ಲದೆ ಪಂದ್ಯವೇ ಇರುತ್ತಿರಲಿಲ್ಲ. ಇದೀಗ, ಅಲ್ಲೊಂದು ಇಲ್ಲೊಂದು ಪಂದ್ಯ ಆಡುವ ಪರಿಸ್ಥಿತಿ ಬಂದೊಂದಗಿದೆ.

ಅಗತ್ಯ ಸಂದರ್ಭದಲ್ಲಿ ಪಂದ್ಯಕ್ಕೆ ತಿರುವು ನೀಡುತ್ತಿದ್ದ ಚಹಲ್​, ಏಕದಿನ ವಿಶ್ವಕಪ್​ (ODI World Cup 2023) ಆಡುವ ಮತ್ತು ಗೆಲ್ಲುವ ದೊಡ್ಡ ಕನಸು ಹೊಂದಿದ್ದಾರೆ. ಆದರೆ ಅವಕಾಶದ ನಿರೀಕ್ಷೆಯಲ್ಲಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇನ್ನು ಚಹಲ್​, ಚೆಸ್​​ ಕ್ರೀಡೆಯಲ್ಲಿ (Chess Game) ಮಹಾಜ್ಞಾನಿ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಸಾಕಷ್ಟು ಸಲ ಅದು ಸಾಬೀತು ಕೂಡ ಆಗಿದೆ.

ಸದ್ಯ ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಲೆಗ್ ಸ್ಪಿನ್ನರ್ ಚಹಲ್, ಚೆಸ್​ನಲ್ಲಿ ನನ್ನನ್ನು ಸೋಲಿಸಲು ಟೀಮ್​ ಇಂಡಿಯಾದ ಆಟಗಾರರು ಯಾರು ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಚೆಸ್​​ ಆಡಲು ಅಪಾರ ತಾಳ್ಮೆ ಇರಬೇಕು. ಮಿದುಳಿಗೆ ಹೆಚ್ಚು ಕೆಲಸ ಕೊಡಬೇಕು. ಈ ಆಟ ಆಡುವುದು ಅಷ್ಟು ಸುಲಭವಲ್ಲ.

ಸದ್ಯ ಚೆಸ್​ ಬಗ್ಗೆ ಮಾತನಾಡಿರುವ ಚಹಲ್, ಚೆಸ್ ಮತ್ತು ಕ್ರಿಕೆಟ್ ನಡುವಿನ ಪರಸ್ಪರ ಸಂಬಂಧದ ಬಗ್ಗೆ ವಿಶಿಷ್ಟ ದೃಷ್ಟಿಕೋನ ಹೊಂದಿದ್ದೇನೆ. ನನಗೆ ಎರಡೂ ಆಟಗಳಲ್ಲಿ ಗಮನಾರ್ಹ ಮಟ್ಟದ ತಾಳ್ಮೆ ಮತ್ತು ಸ್ಥಿತಿಸ್ಥಾಪಕತ್ವ ಅಭಿವೃದ್ಧಿಪಡಿಸಲು ಅನುವು ಮಾಡಿಕೊಟ್ಟಿದೆ. ಕ್ರಿಕೆಟ್ ಪ್ರಯಾಣದುದ್ದಕ್ಕೂ ಅಡೆತಡೆಗಳನ್ನು ನಿವಾರಿಸುವಲ್ಲಿ ಸಾಧನವಾಗಿದ್ದು, ಚೆಸ್​ನಿಂದ ಎಂದು ಹೇಳಿದ್ದಾರೆ.

ನಾನು ಮೊದಲು ಕಾಣಿಸಿಕೊಂಡಿದ್ದು ಚೆಸ್ ಆಟದಿಂದ. ನನಗೆ ಭಾರಿ ತಾಳ್ಮೆಯನ್ನು ಕಲಿಸಿತು. ಇದು ಕ್ರಿಕೆಟ್‌ನಲ್ಲೂ ಸಹಾಯ ಮಾಡಿತು. ಕೆಲವೊಮ್ಮೆ ನೀವು ಚೆನ್ನಾಗಿ ಬೌಲ್ ಮಾಡಬಹುದು. ಆದರೆ ವಿಕೆಟ್ ಸಿಗಲು ಸಾಧ್ಯವಾಗುವುದಿಲ್ಲ. ಅದಕ್ಕೆ ತಾಳ್ಮೆ ನಿಜವಾಗಿಯೂ ಅಗತ್ಯವಿದೆ. ಇದನ್ನು ಚೆಸ್​​ ಆಡುವಾಗ ಕ್ರೂಢಿಕರಿಸಿಕೊಂಡಿದ್ದೇನೆ ಎಂದು ಹೇಳಿದರು.

ಚೆಸ್ ಮತ್ತು ಕ್ರಿಕೆಟ್ ಒಂದೇ. ಕ್ರಿಕೆಟ್‌ನಲ್ಲಿ ನೀವು ನಿಮ್ಮ ಆಕ್ರಮಣಶೀಲತೆ ತೋರಿಸಬಹುದು. ಚೆಸ್‌ನಲ್ಲಿ ಸಾಧ್ಯವಿಲ್ಲ. ಚೆಸ್‌ ನೀವು ಎಷ್ಟು ಶಾಂತವಾಗಿರುತ್ತೀರಿ ಎಂಬುದರ ಬಗ್ಗೆ ಪಾಠ ಕಲಿಸುತ್ತದೆ. ಉದಾಹರಣೆಗೆ, ಮೊದಲು ಬೌಲಿಂಗ್​ ವೇಳೆ ನಾನು ಏನನ್ನಾದರೂ ಹೇಳಬಲ್ಲೆ. ಆದರೆ ಚೇಸಿಂಗ್​​ ವೇಳೆ ಶಾಂತವಾಗಿರಬೇಕು. ಇದು ಅಂತಿಮವಾಗಿ ನಿಮ್ಮ ಜೀವನದಲ್ಲಿಯೂ ನಿಮಗೆ ಸಹಾಯ ಮಾಡುತ್ತದೆ ಎಂದು ಭಾರತೀಯ ಕ್ರಿಕೆಟಿಗ ಗ್ಲೋಬಲ್ ಚೆಸ್ ಲೀಗ್‌ನಲ್ಲಿ ಹೇಳಿದ್ದಾರೆ.

ಮಾತು ಮುಂದುವರೆಸಿದ ಚಹಲ್, ಭಾರತ ತಂಡದಲ್ಲಿ ಚೆಸ್​​ನಲ್ಲಿ ನನ್ನನ್ನು ಸೋಲಿಸುವವರು ಯಾರೂ ಇಲ್ಲ (ನಗು). ಕೆಲವೊಮ್ಮೆ ನಾನು ಆರ್ ಅಶ್ವಿನ್ ಅವರೊಂದಿಗೆ ಆಡುತ್ತೇನೆ. ನಮ್ಮ ತರಬೇತುದಾರ ಶಂಕರ್ ಬಸು ಇದ್ದಾರೆ. ನಾವು ಈ ಅವಧಿಯಲ್ಲಿ ಸ್ವಲ್ಪಮಟ್ಟಿಗೆ ಆಡುತ್ತಿದ್ದೆವು. ವಿಮಾನಗಳು ಮತ್ತು ನಾವು ಪ್ರಯಾಣಿಸುತ್ತಿದ್ದಾಗಲೂ ಆಡುತ್ತಿದ್ದೆವು ಎಂದು ಹೇಳಿದ್ದಾರೆ.

ಆಗೊಮ್ಮೆ ಈಗೊಮ್ಮೆ ಇಂಟರ್​ನೆಟ್​ನಲ್ಲಿ ಚೆಸ್‌ನಲ್ಲಿ ಪಾಲ್ಗೊಳ್ಳುತ್ತೇನೆ. ಸರಣಿಗಾಗಿ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ ಅಥವಾ ಆಟಕ್ಕೂ ಮುನ್ನ ಕೆಲವೊಮ್ಮೆ ಚೆಸ್ ಆಡುತ್ತೇನೆ. ಏಕೆಂದರೆ ಅದು ನನ್ನನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ವಿಮಾನಗಳ ಸಮಯದಲ್ಲಿ ನಾನು ಚೆಸ್ ಆಡುತ್ತೇನೆ ಎಂದು ಹೇಳಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ