logo
ಕನ್ನಡ ಸುದ್ದಿ  /  ಕ್ರೀಡೆ  /  West Indies Vs India: ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬ್ಯಾಟಿಂಗ್‌ ಆಯ್ಕೆ; ಭಾರತ ಟೆಸ್ಟ್ ತಂಡಕ್ಕೆ ಜೈಸ್ವಾಲ್, ಇಶಾನ್ ಪದಾರ್ಪಣೆ

West Indies vs India: ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬ್ಯಾಟಿಂಗ್‌ ಆಯ್ಕೆ; ಭಾರತ ಟೆಸ್ಟ್ ತಂಡಕ್ಕೆ ಜೈಸ್ವಾಲ್, ಇಶಾನ್ ಪದಾರ್ಪಣೆ

Jayaraj HT Kannada

Jul 12, 2023 07:17 PM IST

google News

ಭಾರತ ಮತ್ತು ವೆಸ್ಟ್‌ ಇಂಡೀಸ್‌ ಪಂದ್ಯ

    • India vs West Indies Toss Update: ಯಶಸ್ವಿ ಜೈಸ್ವಾಲ್‌ ಹಾಗೂ ಇಶಾನ್‌ ಕಿಶನ್ ಭಾರತ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಜೈಸ್ವಾಲ್‌ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ವಿಕೆಟ್‌ ಕೀಪರ್‌ ಆಗಿ ಇಶಾನ್‌ ಕಿಶನ್‌ ಆಡಲಿದ್ದಾರೆ. 
ಭಾರತ ಮತ್ತು ವೆಸ್ಟ್‌ ಇಂಡೀಸ್‌ ಪಂದ್ಯ
ಭಾರತ ಮತ್ತು ವೆಸ್ಟ್‌ ಇಂಡೀಸ್‌ ಪಂದ್ಯ (BCCI)

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ಸರಣಿಯ ಮೊದಲ ಟೆಸ್ಟ್‌ ಪಂದ್ಯಕ್ಕೆ ಡೊಮಿನಿಕಾ ಸಜ್ಜಾಗಿದೆ. 12 ವರ್ಷಗಳ ಬಳಿಕ ಇಂಡೋ ವಿಂಡೀಸ್‌ ಟೆಸ್ಟ್‌ ಪಂದ್ಯಕ್ಕೆ ವಿಂಡ್ಸರ್ ಪಾರ್ಕ್‌ ಆತಿಥ್ಯ ವಹಿಸುತ್ತಿದೆ. ಸರಣಿಯ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದ ವೆಸ್ಟ್‌ ಇಂಡೀಸ್‌ ತಂಡ ಮೊದಲಿಗೆ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ.

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ಸರಣಿಯ ಮೊದಲ ಟೆಸ್ಟ್‌ ಪಂದ್ಯಕ್ಕೆ ಡೊಮಿನಿಕಾ ಸಜ್ಜಾಗಿದೆ. 12 ವರ್ಷಗಳ ಬಳಿಕ ಇಂಡೋ ವಿಂಡೀಸ್‌ ಟೆಸ್ಟ್‌ ಪಂದ್ಯಕ್ಕೆ ವಿಂಡ್ಸರ್ ಪಾರ್ಕ್‌ ಆತಿಥ್ಯ ವಹಿಸುತ್ತಿದೆ. ಸರಣಿಯ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದ ವೆಸ್ಟ್‌ ಇಂಡೀಸ್‌ ತಂಡ ಮೊದಲಿಗೆ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ.

|#+|

ಇಂದಿನ ಪಂದ್ಯದ ಮೂಲಕ ಯಶಸ್ವಿ ಜೈಸ್ವಾಲ್‌ ಹಾಗೂ ಇಶಾನ್‌ ಕಿಶನ್ ಭಾರತ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಜೈಸ್ವಾಲ್‌ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ವಿಕೆಟ್‌ ಕೀಪರ್‌ ಆಗಿ ಇಶಾನ್‌ ಕಿಶನ್‌ ಆಡಲಿದ್ದಾರೆ. ಹೀಗಾಗಿ ಕೆಎಸ್‌ ಭರತ್‌ ಪಂದ್ಯದಿಂದ ಹೊರಗುಳಿಯಲಿದ್ದಾರೆ.‌

ವೆಸ್ಟ್ ಇಂಡೀಸ್ ಆಡುವ ಬಳಗ

ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟಗೆನರೈನ್ ಚಂದ್ರಪಾಲ್, ರೇಮನ್ ರೈಫರ್, ಜೆರ್ಮೈನ್ ಬ್ಲಾಕ್‌ವುಡ್, ಅಲಿಕ್ ಅಥಾನಾಜೆ, ಜೋಶುವಾ ಡಾ ಸಿಲ್ವಾ (ವಿಕೆಟ್‌ ಕೀಪರ್), ಜೇಸನ್ ಹೋಲ್ಡರ್, ರಹಕೀಮ್ ಕಾರ್ನ್‌ವಾಲ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಜೋಮೆಲ್ ವಾರಿಕನ್‌.

ಭಾರತ ಆಡುವ ಬಳಗ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಇಶಾನ್ ಕಿಶನ್‌ (ವಿಕೆಟ್‌ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್, ಮೊಹಮ್ಮದ್ ಸಿರಾಜ್.

ಮುಖಾಮುಖಿ ದಾಖಲೆ

ವೆಸ್ಟ್​ ಇಂಡೀಸ್ ಮತ್ತು ಭಾರತ ತಂಡಗಳು ಒಟ್ಟು 98 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 22 ಪಂದ್ಯಗಳಲ್ಲಿ ಗೆದ್ದಿದೆ. ವೆಸ್ಟ್ ಇಂಡೀಸ್ 30 ಪಂದ್ಯಗಳಲ್ಲಿ ಜಯಿಸಿದೆ. 46 ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿವೆ. ಈ ಪಂದ್ಯದಲ್ಲಿ ಗಿಲ್ 79 ರನ್​ ಸಿಡಿಸಿದರೆ, ಟೆಸ್ಟ್​​ನಲ್ಲಿ ಸಾವಿರ ರನ್ ಕಲೆ ಹಾಕಲಿದ್ದಾರೆ. ಕೊಹ್ಲಿ 21 ರನ್​ ಗಳಿಸಿದರೆ, ಟೆಸ್ಟ್​​​ನಲ್ಲಿ 8500 ರನ್​ ಪೂರೈಸಲಿದ್ದಾರೆ.

ಮಳೆ ಸಾಧ್ಯತೆ

ಪಂದ್ಯವು ಡೊಮಿನಿಕಾದ ರೊಸೊದಲ್ಲಿ ನಡೆಯುತ್ತಿದ್ದು, ಮಳೆಯ ಸಾಧ್ಯತೆ ಕೂಡಾ ಇದೆ. ಪಂದ್ಯದ ಸಮಯದಲ್ಲಿ ನಗರದಾದ್ಯಂತ ಮೋಡ ತುಂಬಿದ ವಾತಾವರಣ ಇರಲಿದ್ದು, ಉಭಯ ತಂಡಗಳ ಆಟಗಾರರು ಸಂಪೂರ್ಣ ಪಂದ್ಯ ನಡೆಯಲಿ ಎಂದು ಆಶಿಸುತ್ತಿದ್ದಾರೆ.

ಅಕ್ಯುವೆದರ್ ಪ್ರಕಾರ, ಜುಲೈ 12ರ ಬೆಳಗ್ಗೆ, ಅಂದರೆ ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ನಡೆಯುವ ಸಮಯದಲ್ಲಿ ರೋಸೋದಲ್ಲಿ 55 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ವಿಂಡ್ಸರ್ ಪಾರ್ಕ್‌ನಲ್ಲಿ ನಡೆಯಲಿರುವ ದಿನದ ಆಟದ ಬಹುಪಾಲು ಭಾಗಕ್ಕೆ ವರುಣ ಅಡ್ಡಿಪಡಿಸಬಹುದು. ನಗರದಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಸಂಪೂರ್ಣ ದಿನದಾಟ ಮಳೆಗೆ ಆಹುತಿಯಾಗುವ ಸಾಧ್ಯತೆ ಇಲ್ಲ. ಹೀಗಾಗಿ ಮಳೆ ಬಂದರೆ ದಿನದಾಟದಲ್ಲಿ ಆಡಬೇಕಾದ ಸೀಮಿತ ಓವರ್‌ಗಳಲ್ಲಿ ಕೆಲವೊಂದು ಓವರ್‌ಗಳನ್ನು ಕಡಿತಗೊಳಿಸಬಹುದು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ