AB de Villiers: ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು: ಎಬಿ ಡಿವಿಲಿಯರ್ಸ್ ಬಾಯಲ್ಲಿ ರಾಜ್ಕುಮಾರ್ ಹಾಡು, ವಿಡಿಯೋ ನೋಡಿ
Apr 19, 2023 09:02 PM IST
ಎಬಿ ಡಿವಿಲಿಯರ್ಸ್ ಮತ್ತು ಡಾ ರಾಜ್ಕುಮಾರ್
- ಡ್ಯಾನಿಷ್ ಸೇಠ್ (Danish Sait) ನಡೆಸಿಕೊಡುವ ಆರ್ಸಿಬಿ ಇನ್ಸೈಡರ್ ಶೋನಲ್ಲಿ (RCB Insider Show) ಎಬಿ ಡಿವಿಲಿಯರ್ಸ್ (AB de Villiers) ಕಾಣಿಸಿಕೊಂಡಿದ್ದಾರೆ. ಈ ಶೋನಲ್ಲಿ ಡಾ.ರಾಜ್ಕುಮಾರ್ (Dr RajKumar) ಅಭಿನಯದ ಆಕಸ್ಮಿಕ ಸಿನಿಮಾದ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು.. ಹಾಡು ಹಾಡುವ ಮೂಲಕ ಎಬಿಡಿ ಫ್ಯಾನ್ಸ್ಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ದೇಶ-ವಿದೇಶಿ ಆಟಗಾರರು ಕರ್ನಾಟಕದಲ್ಲಿ ಎಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೋ ಗೊತ್ತಿಲ್ಲ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಜಿ ಆಟಗಾರರಾದ ಕ್ರಿಸ್ ಗೇಲ್ (Chris Gayle), ಎಬಿ ಡಿವಿಲಿಯರ್ಸ್ (AB de Villiers) ಹಾಗೂ ಪ್ರಸ್ತುತ ತಂಡದಲ್ಲಿರುವ ವಿರಾಟ್ ಕೊಹ್ಲಿ (Virat Kohli) ಅವರಿಗೆ ಇರುವ ಅಭಿಮಾನಿಗಳ ಸಂಖ್ಯೆ ಲೆಕ್ಕಕ್ಕೇ ಇಲ್ಲ. ಹಸಿರು ಅಖಾಡದಲ್ಲಿ ಇವರ ಬ್ಯಾಟಿಂಗ್ ವೈಭವಕ್ಕೆ ಮನಸೋಲದವರೇ ಇಲ್ಲ.
ಅದರಲ್ಲೂ ಆರ್ಸಿಬಿಯ 360 ಡಿ ಬ್ಯಾಟರ್ ಬಗ್ಗೆ ಹೇಳುವುದೇ ಬೇಡ. ಆರ್ಸಿಬಿ (RCB) ಅಭಿಮಾನಿಗಳು ಪ್ರೀತಿಯಿಂದ ಕರೆಯೋದು, ಆಪತ್ಬಾಂಧವ ಅಂತ. ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡುತ್ತಿದ್ದ ಸೌತ್ ಆಫ್ರಿಕಾದ ಮಾಜಿ ಆಟಗಾರ, ಕಳೆದ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು. ಇತ್ತೀಚೆಗೆ ಅವರ ಜೆರ್ಸಿ ನಂಬರ್ 17 ಅನ್ನು ನಿವೃತ್ತಿ ಮಾಡಲಾಯಿತು. ಇವರನ್ನು ಕರ್ನಾಟಕದ ದತ್ತು ಪುತ್ರ ಎಂದೇ ಕರೆಯುತ್ತಾರೆ. ಅವರಿಗೂ ಕರ್ನಾಟಕದ ಮೇಲೆ ವಿಶೇಷ ಅಭಿಮಾನ ಇದೆ.
ಎಬಿ ಡಿವಿಲಿಯರ್ಸ್ ಒಂದಲ್ಲ ಒಂದು ವಿಷಯದಲ್ಲಿ ಕನ್ನಡಿಗರ ಹೃದಯ ಗೆಲ್ಲುತ್ತಲೇ ಇರುತ್ತಾರೆ. ಈಗ ಮತ್ತೆ ಕನ್ನಡಿಗರ ಮನ ಗೆದ್ದಿದ್ದಾರೆ. ಡ್ಯಾನಿಷ್ ಸೇಠ್ (Danish Sait) ನಡೆಸಿಕೊಡುವ ಆರ್ಸಿಬಿ ಇನ್ಸೈಡರ್ ಶೋನಲ್ಲಿ (RCB Insider Show) ಎಬಿ ಡಿವಿಲಿಯರ್ಸ್ (AB de Villiers) ಕಾಣಿಸಿಕೊಂಡಿದ್ದಾರೆ. ಈ ಶೋನಲ್ಲಿ ಡಾ.ರಾಜ್ಕುಮಾರ್ (Dr Rajkumar) ಅಭಿನಯದ ಆಕಸ್ಮಿಕ ಸಿನಿಮಾದ (Aakasmika Movie) ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು.. ಹಾಡು ಹಾಡುವ ಮೂಲಕ ಎಬಿಡಿ ಫ್ಯಾನ್ಸ್ಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಕರ್ನಾಟಕ (Karnataka) ಮತ್ತು ಬೆಂಗಳೂರು (Bangalore) ಹಾಗೂ ಚಿನ್ನಸ್ವಾಮಿ ಮೈದಾನದ (Chinnaswamy Stadium) ಕುರಿತು ತಮ್ಮ ವಿಶೇಷ ಅಭಿಮಾನವನ್ನೂ ತೋರಿಸಿದ್ದಾರೆ. ಇನ್ಸೈಡರ್ ಶೋ ವಿಡಿಯೋವನ್ನು ಆರ್ಸಿಬಿ ತನ್ನ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ವಿ ಮಿಸ್ ಯೂ ಎಬಿಡಿ ಎಂದು ಭಾವನಾತ್ಮಕ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ಕರ್ನಾಟಕದಲ್ಲೇ ಇದ್ದು ಕನ್ನಡ ಮಾತನಾಡದವರು, ಇವರನ್ನು ನೋಡಿ ಕಲಿಯಿರಿ ಎಂದು ಟಾಂಗ್ ನೀಡಿದ್ದಾರೆ.
ಈ ಚಿಟ್ಚಾಟ್ನಲ್ಲಿ ಡ್ಯಾನಿಷ್ ಸೇಠ್ ಪ್ರಶ್ನೆಯೊಂದನ್ನು ಕೇಳುತ್ತಾರೆ. ಈ ಬಾರಿ ಎಬಿಡಿ ನಮಗೆ ಯಾವ ಹಾಡು ಹಾಡುತ್ತಾರೆ ಎಂದು ಕೇಳಿದ್ದಾರೆ. 'ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು. ಬದುಕಿದು ಜಟಕಾ ಬಂಡಿ, ಇದು ವಿಧಿಯೋಡಿಸುವಾ ಬಂಡಿ' ಎಂದು ನಾಗ್ಸ್ ಜೊತೆಗೂಡಿ ಅಣ್ಣಾವ್ರ ಹಾಡು ಹಾಡಿದ್ದಾರೆ. ಹಾಡು ಹಾಡಿದ ಬೆನ್ನಲ್ಲೇ ಈ ಹಾಡು ಯಾವ ಸಿನಿಮಾದ್ದು ಎಂಬ ಪ್ರಶ್ನೆಗೆ ಉತ್ತರಿಸಿದ ಎಬಿಡಿ, ಯಾರಿಗೆ ಗೊತ್ತಿಲ್ಲ ಹೇಳಿ. ಅಮೇಜಿಂಗ್ ಮೂವಿ ಆಕಸ್ಮಿಕ. ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರದ್ದು. ನನಗೆ ಬಹಳ ಇಷ್ಟ ಎಂದಿದ್ದಾರೆ ಎಬಿಡಿ.
ಪ್ರಸ್ತುತ ಕ್ರಿಕೆಟ್ಗೆ ದೂರ ಉಳಿದಿರುವ ಎಬಿ ಡಿಲಿಯರ್ಸ್, 16ನೇ ಆವೃತ್ತಿಯ ಐಪಿಎಲ್ನಲ್ಲಿ ಜಿಯೋ ಸಿನಿಮಾ ಮೂಲಕ ಕಾಮೆಂಟೇಟರ್ ಸೇವೆ ಸಲ್ಲಿಸುತ್ತಿದ್ದಾರೆ. ಆರ್ಸಿಬಿ ತಂಡದ 11 ವರ್ಷಗಳ ಕಾಲ ಕಣಕ್ಕಿಳಿದಿದ್ದಾರೆ.
ಕ್ರಿಕೆಟ್ಗೆ ಸಂಬಂಧಿಸಿದ ಪ್ರಮುಖ ಸುದ್ದಿ ಓದಿ
Virat Kohli Daughter Vamika: ವಿರಾಟ್ ಅಂಕಲ್.. ವಮಿಕಾ ಜೊತೆ ನಾನು ಡೇಟಿಂಗ್ ಹೋಗ್ಬೋದಾ? ಪುಟ್ಟ ಬಾಲಕನ ಪ್ಲಕಾರ್ಡ್ಗೆ ಫ್ಯಾನ್ಸ್ ಗರಂ
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಬಿರುಸಿನಿಂದ ಸಾಗುತ್ತಿದೆ. ಅಭಿಮಾನಿಗಳ ದಂಡು ಮೈದಾನದತ್ತ ಹರಿದು ಬರುತ್ತಿದೆ. ಮೈದಾನಗಳು ಕಿಕ್ಕಿರಿದು ತುಂಬುತ್ತಿವೆ. ತಮ್ಮ ನೆಚ್ಚಿನ ಆಟಗಾರರಿಗೆ ಪ್ಲೇ ಕಾರ್ಡ್ಗಳನ್ನು ತೋರಿಸಿ ಬೆಂಬಲ ನೀಡುತ್ತಿದ್ದಾರೆ. ಭಿನ್ನ ಭಿನ್ನ ಪ್ಲ ಕಾರ್ಡ್ಗಳ ಮೂಲಕ ಗಮನ ಸೆಳೆಯುತ್ತಾರೆ. ಈಗ ಅಂತಹದ್ದೇ ಪ್ಲ ಕಾರ್ಡೊಂದು ಸಖತ್ ವೈರಲ್ ಆಗುತ್ತಿದೆ. ಅದು ಕೂಡ ವಿರಾಟ್ ಕೊಹ್ಲಿ (Virat Kohli) ಮತ್ತು ಅನುಷ್ಕಾ ಶರ್ಮಾ (Anushka Sharma) ಅವರ ಮುದ್ದಿನ ಮಗಳು ವಮಿಕಾ ಕುರಿತಂತೆ. ಇದರ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.