logo
ಕನ್ನಡ ಸುದ್ದಿ  /  ಕ್ರೀಡೆ  /  42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

Raghavendra M Y HT Kannada

May 18, 2024 07:00 AM IST

google News

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು? ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ ಎಂಬುದರ ಮಾಹಿತಿ ಇಲ್ಲಿದೆ.

    • ಕೀಪಿಂಗ್, ಬ್ಯಾಟಿಂಗ್, ಫೀಲ್ಡಿಂಗ್‌ಗೆ ಸಂಬಂಧಿಸಿದಂತೆ ಕೆಲವು ವರ್ಕೌಟ್‌ಗಳನ್ನು ಮಾಡಬೇಕಾಗುತ್ತದೆ. ಹೀಗಾಗಿ ಧೋನಿ ಅವರು ಜಿಮ್‌ನಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ನಿರ್ದಿಷ್ಟ ವ್ಯಾಯಾಮಗಳನ್ನು ಮಾಡುತ್ತಾರೆ. ಫಿಟ್‌ ಆಗಿರಲು ಪ್ರಮುಖವಾಗಿ 5 ವ್ಯಾಯಾಮಗಳನ್ನು ಮಾಡುತ್ತಾರೆ. ಅವರ ಪ್ರತಿದಿನ ಊಟದ ಕ್ರಮದ ವಿವರ ಇಲ್ಲಿದೆ.
42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು? ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ ಎಂಬುದರ ಮಾಹಿತಿ ಇಲ್ಲಿದೆ.
42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು? ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ ಎಂಬುದರ ಮಾಹಿತಿ ಇಲ್ಲಿದೆ.

ಬೆಂಗಳೂರು: ಟೀಂ ಇಂಡಿಯಾದ (Team India) ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ತಂಡದ (Chennai Super Kings) ಹಿರಿಯ ಆಟಗಾರ, ಕೂಲ್ ಕಾಪ್ಟನ್ (Cool Captain) ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ (MS Dhoni) ಅವರಿಗೆ ವಯಸ್ಸು 42 ಆಗಿದ್ರೂ ಅವರ ಫಿಟ್ನೆಸ್‌ಗೆ ಮನಸೋಲದವರೇ ಇಲ್ಲ. ವಿಕೆಟ್‌ಗಳ ಹಿಂದೆ ಎಂಎಸ್‌ಡಿ (MSD) ಅವರ ಚುರುಕುತನದ ಕೀಪಿಂಗ್ ಮೂಲಕ ಹಲವು ದಾಖಲೆಯನ್ನೇ ಬರೆದಿದ್ದಾರೆ. ಸಿಎಸ್‌ಕೆ (CSK) ಐಪಿಎಲ್‌ನಲ್ಲಿ 5 ಬಾರಿ ಚಾಂಪಿಯನ್ ಆಗಲು ಪ್ರಮುಖ ಕಾರಣಕರ್ತರಾಗಿರುವ ಮಾಹಿ ಅವರಿಗೆ ಇದು ಕೊನೆಯ ಐಪಿಎಲ್ ಟೂರ್ನಿ (IPL 2024) ಎಂದು ಹೇಳಲಾಗುತ್ತಿದೆ. ಅದರಲ್ಲೂ ಧೋನಿ ಅವರು ಇಂದಿನ (ಮೇ 18, ಶನಿವಾರ) ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡವನ್ನು ಗೆಲ್ಲಿಸಿ ಪ್ಲೇ-ಆಫ್‌ಗೆ (IPL 2024 Play Offs) ಹೋಗುವ ಹುಮ್ಮಸ್ಸಿನಲ್ಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ನ ಅಭಿಮಾನಿಗಳ ನೆಚ್ಚಿನ ದೇವರು,'ತಲಾ' ಧೋನಿ ಅವರ ವಯಸ್ಸು 42 ಆಗಿದ್ದರೂ ಅವರ ಫಿಟ್ನೆಸ್‌ ಸೀಕ್ರೆಟ್ ಏನು, ಅವರು ಡಯಟ್, ವರ್ಕೌಟ್ ಪ್ಲಾನ್ ಹೇಗಿರುತ್ತದೆ ಅನ್ನೋದನ್ನು ಇಲ್ಲಿ ತಿಳಿಯೋಣ.

ಎಂಎಸ್ ಧೋನಿ ಅವರು ಹೆಚ್ಚಿನ ಕೊಬ್ಬವನ್ನು ತಪ್ಪಿಸುವ ಸಲುವಾಗಿ ಆರೋಗ್ಯಕರ ಆಹಾರಕ್ಕೆ ಮೊದಲ ಆದ್ಯತೆಯನ್ನು ನೀಡುತ್ತಿದ್ದಾರೆ. ಇದು ಅವರ ಮೊದಲ ಫಿಟ್ನೆಸ್ ಸೀಕ್ರೆಟ್. ಇದಷ್ಟೇ ಅಲ್ಲ, ಎಂಎಸ್‌ಡಿ ಬ್ಯಾಡ್ಮಿಂಟನ್ ಹಾಗೂ ಫುಟ್‌ಬಾಲ್‌ನಂತಹ ಕ್ರೀಡೆಗಳನ್ನು ಸಹ ಆಡುತ್ತಾರೆ. ಈ ಆಟಗಾರು ಧೋನಿ ಅವರಿಗೆ ವೇಗವಾಗಿ ಓಡಲು ಹಾಗೂ ಆಟದಲ್ಲಿ ಹೆಚ್ಚಿನ ಗಮನ ಹರಿಸಲು ಸಹಾಯ ಮಾಡುತ್ತದೆ. ಸಮಯ ಸಿಕ್ಕಾಗ ಫುಟ್‌ಬಾಲ್ ಮತ್ತು ಬ್ಯಾಡ್ಮಿಂಟನ್ ಹೆಚ್ಚಾಗಿ ಆಡುತ್ತಾರೆ. ಆಗಾಗ ಜಿಮ್‌ಗೆ ಹೋಗಿ ಬೇವರು ಹರಿಸುತ್ತಾರೆ.

ಎಂಎಸ್‌ ಧೋನಿಯವರ ವರ್ಕೌಟ್ ಹೇಗಿರುತ್ತದೆ?

ಕ್ರಿಕೆಟ್‌ನಲ್ಲಿ ಕೀಪಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ಗೆ ಸಂಬಂಧಿಸಿದಂತೆ ಕೆಲವು ವರ್ಕೌಟ್‌ಗಳನ್ನು ಮಾಡಬೇಕಾಗುತ್ತದೆ. ಹೀಗಾಗಿ ಅವರು ಜಿಮ್‌ನಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ನಿರ್ದಿಷ್ಟ ವ್ಯಾಯಾಮಗಳನ್ನು ಮಾಡುತ್ತಾರೆ. ಇದಕ್ಕಾಗಿಯೇ ಸ್ವಲ್ಪ ಸಮಯವನ್ನು ಮೀಸಲಿಡುತ್ತಾರೆ. ಫಿಟ್‌ ಆಗಿರಲು ಪ್ರಮುಖವಾಗಿ 5 ವ್ಯಾಯಾಮಗಳನ್ನು ಮಾಡುತ್ತಾರೆ. 1. ಸ್ಟ್ರೇಚ್, 2.ಸ್ಕ್ವಾಟ್‌ಗಳು, 3. ಡೆಡ್‌ಲಿಫ್ಟ್‌, 4. ಬೆಂಚ್‌ಪ್ರೆಸ್‌ ಹಾಗೂ ಓವರ್ ಹೆಡ್‌ಪ್ರೆಸ್‌ಗಳನ್ನು ಮಾಡುತ್ತಾರೆ.

ಉತ್ತಮ ವ್ಯಾಯಾಮ ಮತ್ತು ಆಹಾರದ ಕ್ರಮವನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯ ಎಂಬುದನ್ನು ಎಂಎಸ್ ಧೋನಿ ಮನಗಂಡಿದ್ದಾರೆ. ಹೀಗಾಗಿ ಅವರು ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಎಣ್ಣೆಯುಕ್ತ ಆಹಾರವನ್ನು ತಪ್ಪಿಸುತ್ತಾರೆ. ಲಘು ಮತ್ತು ಆರೋಗ್ಯಕರ ಆಹಾರಕ್ಕೆ ಮೊದಲ ಆದ್ಯತೆ ನೀಡುತ್ತಾರೆ.

ಪ್ರತಿದಿನ ಧೋನಿ ಅವರ ಆಹಾರದ ಕ್ರಮ ಹೀಗಿರುತ್ತೆ

ಸಾಮಾನ್ಯವಾಗಿ ಧೋನಿ ಅವರು ಬೆಳಗಿನ ಉಪಹಾರಕ್ಕೆ ಗಂಜಿ, ಬೀಜಗಳು, ತಾಜಾ ಹಣ್ಣುಗಳು ಹಾಗೂ ಒಂದು ಲೋಟ ಹಾಲನ್ನು ಕುಡಿಯಲು ಆದ್ಯತೆ ನೀಡುತ್ತಾರೆ. ಮಧ್ಯಾಹ್ನದ ಊಟಕ್ಕೆ ದಾಲ್ ಅಥವಾ ಚಿಕನ್, ತರಕಾರಿಗಳು, ಅನ್ನ ಹಾಗೂ ಒಂದು ಬೌಲ್ ಮೊಸರಿನೊಂದಿಗೆ ರೊಟ್ಟಿಯನ್ನು ತಿನ್ನುತ್ತಾರೆ. ರಾತ್ರಿಯ ಊಟಕಕ್ಕೆ ಸಲಾಡ್‌ನೊಂದಿಗೆ ರೋಟಿ, ಚಿಕನ್ ಅಥವಾ ತರಕಾರಿಗಳನ್ನು ಸೇವಿಸುತ್ತಾರೆ.

ಇನ್ನ ಧೋನಿಯವರ ನೆಚ್ಚಿನ ಪಾನೀಯಗಳನ್ನು ನೋಡುವುದಾದರೆ ಅವರು ಪ್ರೋಟಿನ್ ಶೇಕ್ಸ್ ಮತ್ತು ತಾಜಾ ಹಣ್ಣಿನ ರಸವನ್ನು ಕುಡಿಯುತ್ತಾರೆ. ದಿನವೀಡಿ ಶಕ್ತಿಯುತವಾಗಿರರುವ ಪ್ರೋಟಿನ್ ಶೇಕ್ಸ್ ಅಥವಾ 1 ಗ್ಲಾಸ್ ತಾಜಾ ಜ್ಯೂಸ್ ಕುಡಿಯುತ್ತಾರೆ.

2004ರಲ್ಲಿ ಬಾಂಗ್ಲಾದೇಶದ ವಿರುದ್ಧ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಎಂಎಸ್‌ ಧೋನಿ ಅವರು 2020ರ ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ತಮ್ಮ ಆಟವನ್ನು ಮುಂದುವರಿಸಿದ್ದಾರೆ. ನಾಯಕತ್ವವನ್ನು ತೊರೆದು ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಆಗಿ ಆಡುತ್ತಿದ್ದಾರೆ. ಆದರೆ 2024ರ ಐಪಿಎಲ್ ಅವರ ಕೊನೆಯ ಟೂರ್ನಿ ಎಂದು ಹೇಳಲಾಗುತ್ತಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ