logo
ಕನ್ನಡ ಸುದ್ದಿ  /  ಕ್ರೀಡೆ  /  Robin Uthappa: ನಿವೃತ್ತಿ ಆದ್ಮೇಲೂ ಬೇರೆ ಲೀಗ್​ಆಡಬೇಡಿ ಎಂದರೆ ಹೇಗೆ, ಇದು ಅನ್ಯಾಯ; ಬಿಸಿಸಿಐ ವಿರುದ್ಧವೇ ಗುಡುಗಿದ ರಾಬಿನ್ ಉತ್ತಪ್ಪ

Robin Uthappa: ನಿವೃತ್ತಿ ಆದ್ಮೇಲೂ ಬೇರೆ ಲೀಗ್​ಆಡಬೇಡಿ ಎಂದರೆ ಹೇಗೆ, ಇದು ಅನ್ಯಾಯ; ಬಿಸಿಸಿಐ ವಿರುದ್ಧವೇ ಗುಡುಗಿದ ರಾಬಿನ್ ಉತ್ತಪ್ಪ

Prasanna Kumar P N HT Kannada

Aug 10, 2023 03:23 PM IST

google News

ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ.

    • Cooling off period: ನಿವೃತ್ತಿಯ ನಂತರವೂ ಭಾರತೀಯ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡದಂತೆ ಕೂಲಿಂಗ್​ ಆಫ್​ ಪಿರಿಯಡ್​ (Cooling-off Period) ಕಾನೂನು ತರಲು ಬಿಸಿಸಿಐ ಚಿಂತನೆ ನಡೆಸಿರುವುದಕ್ಕೆ ಭಾರತದ ಮಾಜಿ ಕ್ರಿಕೆಟಿಗ, ಕರ್ನಾಟಕದ ಆಟಗಾರ ರಾಬಿನ್ ಉತ್ತಪ್ಪ (Robin Uthappa) ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ.
ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ.

ಭಾರತದ ದೇಶೀ ಕ್ರಿಕೆಟ್​ ಟೂರ್ನಿಗಳನ್ನು ರಕ್ಷಿಸುವ ಸಲುವಾಗಿ ಮತ್ತು ಐಪಿಎಲ್ (IPL 2023) ಕ್ರೇಜ್​ ಕುಸಿಯದಂತೆ ನೋಡಿಕೊಳ್ಳಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತದ ಮಾಜಿ ಆಟಗಾರರು (Indian Cricketers) ವಿದೇಶಿ ಲೀಗ್​​ಗಳಲ್ಲಿ ಕಾಣಿಸಿಕೊಳ್ಳಬಾರದು ಎಂಬ ಹೊಸ ನೀತಿ ಜಾರಿಗೆ ತರಲು ಮುಂದಾಗಿದೆ. ಈ ಹಿಂದೆ ನಿವೃತ್ತ ಭಾರತದ ಕ್ರಿಕೆಟಿಗರು ವಿದೇಶಿ ಲೀಗ್​ಗಳಲ್ಲಿ ಪಾಲ್ಗೊಳ್ಳುವ ಅವಕಾಶ ಇತ್ತು.

ನಿವೃತ್ತಿಯ ನಂತರ ವಿದೇಶಿ ಲೀಗ್​ಗಳಲ್ಲಿ ಪಾಲ್ಗೊಳ್ಳದಿರಲು ನಿಯಮ ರೂಪಿಸಲು ಬಿಸಿಸಿಐ (BCCI) ಮುಂದಾಗಿರುವುದು ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ನಿವೃತ್ತಿ ನೀಡದೆ ಭಾರತ ಅಥವಾ ದೇಶೀಯ ಟೂರ್ನಿಗಳಲ್ಲಿ ಆಡುತ್ತಿದ್ದವರು ಬೇರೆ ಫ್ರಾಂಚೈಸಿ ಲೀಗ್​​ಗಳಲ್ಲಿ ಕಾಣಿಸಿಕೊಳ್ಳುವುದು ತಪ್ಪು. ಆದರೆ, ನಿವೃತ್ತಿ ನಂತರವೂ ಈ ನೀತಿ ಜಾರಿಗೆ ಬಯಸಿರುವುದು ಅನ್ಯಾಯ ಎನ್ನುತ್ತಿದ್ದಾರೆ ಮಾಜಿ ಕ್ರಿಕೆಟಿಗರು.

ಬಿಸಿಸಿಐ ವಿರುದ್ಧ ಸಿಡಿದೆದ್ದ ಉತ್ತಪ್ಪ

ನಿವೃತ್ತಿಯ ನಂತರ ಭಾರತೀಯ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡದಂತೆ ಕೂಲಿಂಗ್​ ಆಫ್​ ಪಿರಿಯಡ್​ (Cooling-off Period) ಕಾನೂನು ತರಲು ಬಿಸಿಸಿಐ ಚಿಂತನೆ ನಡೆಸಿರುವುದಕ್ಕೆ ಭಾರತದ ಮಾಜಿ ಕ್ರಿಕೆಟಿಗ, ಕರ್ನಾಟಕದ ಆಟಗಾರ ರಾಬಿನ್ ಉತ್ತಪ್ಪ (Robin Uthappa) ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ವಿದಾಯ ಹೇಳಿದ ಮೇಲೂ ಭಾಗವಹಿಸಲು ಅವಕಾಶ ನೀಡದೇ ಇದ್ದರೆ ಹೇಗೆ? ಇದೊಂದು ಅಹಿತಕರ ಮತ್ತು ಅನ್ಯಾಯ ಎಂದು ಉತ್ತಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತಪ್ಪ ಅಲ್ಲದೆ, ಭಾರತದ ಸಾಕಷ್ಟು ಕ್ರಿಕೆಟಿಗರು ನಿವೃತ್ತಿಯ ನಂತರ ವಿದೇಶಿ ಲೀಗ್​ಗಳಲ್ಲ ಕಾಣಿಸಿಕೊಳ್ಳುತ್ತಿದ್ದಾರೆ.

‘ನೆಮ್ಮದಿ ಹಾಳು ಮಾಡುತ್ತಿವೆ’

ಈ ಬಗ್ಗೆ ಮಾತನಾಡಿರುವ ರಾಬಿ, ನಿವೃತ್ತಿಯಾದ ನಂತರ ಕೂಡ ಅದು ಮಾಡಬಾರದು. ಇದು ಮಾಡಬಾರದು. ಈ ಲೀಗ್​​​ನಲ್ಲಿ ಆಡಬೇಡಿ ಎನ್ನುವುದು ಸರಿಯಲ್ಲ. ಈ ನಿರ್ಧಾರಗಳು ನಮಗೆ ತುಂಬಾ ತೊಂದರೆ ಕೊಡುತ್ತಿವೆ. ಬಿಸಿಸಿಐನಿಂದ ಯಾವುದೇ ಒಪ್ಪಂದ ಇಲ್ಲದಿರುವಾಗ, ಭಾರತೀಯ ಕ್ರಿಕೆಟ್​ ಆಡದಿರುವುದಾಗ ನಾವು ಎಲ್ಲಿ ಆಡಿದರೆ ನಿಮಗೇಕೆ? ಹೊಸ ನಿಯಮ, ನೀತಿಗಳಿಂದ ನಮ್ಮ ನೆಮ್ಮದಿ, ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತೆ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಚಿಕ್ಕ ವಯಸ್ಸಲ್ಲೇ ನಿವೃತ್ತಿಯಾಗುವುದನ್ನು ತಡೆಗಟ್ಟಿ’

ಇಂತಹ ನೀತಿಯನ್ನು ಜಾರಿಗೆ ತರಲು ಮುಂದಾಗಿರುವ ಬಿಸಿಸಿಐ, ಈ ಎಲ್ಲಾ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ನನಗೆ ತಿಳಿದಂತೆ ಬಿಸಿಸಿಐ ತೆಗೆದುಕೊಂಡ ನಿರ್ಧಾರವು ಐಪಿಎಲ್‌ನಲ್ಲಿ ಆಡಲು ಬಯಸುವ ಆಟಗಾರರಿಗೆ ಮಾತ್ರ ಅನ್ವಯಿಸುತ್ತದೆ ಎಂದ ಅವರು, ಒಂದು ವೇಳೆ ಇಂತಹ ನೀತಿಯನ್ನು ತಂದಿದ್ದೇ ಆದರೆ, ಚಿಕ್ಕ ವಯಸ್ಸಿನಲ್ಲೇ ನಿವೃತ್ತಿಯಾಗುವ ಆಟಗಾರರ ಸಂಖ್ಯೆ ಹೆಚ್ಚಾಗದಂತೆ, ಅವರಿಗೆ ಅವಕಾಶಗಳನ್ನು ನೀಡುವತ್ತ ಗಮನ ಕೊಡಿ ಎಂದು ಬಿಸಿಸಿಐಗೆ ಸಲಹೆ ನೀಡಿದ್ದಾರೆ.

ಆಡಿದರೆ ತಪ್ಪೇನು?

ಐಪಿಎಲ್​​ನಲ್ಲಿ ಎಷ್ಟು ಭಾರತೀಯ ಕ್ರಿಕೆಟರ್​ಗಳಿಗೆ ಅವಕಾಶ ಸಿಗುತ್ತಿದೆ? ದೇಶೀಯ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವುದರ ಹೊರತಾಗಿಯೂ ಅನೇಕ ಆಟಗಾರರು ಐಪಿಎಲ್​​ ಹರಾಜಿನಲ್ಲಿ ಖರೀದಿಯಾಗುತ್ತಿಲ್ಲ. ಹಾಗಾಗಿ ಅವಕಾಶಗಳನ್ನು ಹುಡುಕಿಕೊಂಡು ಹೋಗುವುದರಲ್ಲಿ ತಪ್ಪೇನಿದೆ? ಎಂದು ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಬಲಗೈ ಬ್ಯಾಟ್ಸ್​​ಮನ್​​ ರಾಬಿನ್ ಉತ್ತಮ ಪ್ರಶ್ನಿಸಿದ್ದಾರೆ.

ರಾಬಿನ್ ಉತಪ್ಪ ಸೇರಿದಂತೆ ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಮುರಳಿ ವಿಜಯ್ ಮುಂತಾದ ಆಟಗಾರರು ಪ್ರಸ್ತುತ ಭಾರತೀಯ ಕ್ರಿಕೆಟ್ ಮಂಡಳಿಯಿಂದ ನಿವೃತ್ತರಾದ ನಂತರ ಜಿಂಬಾಬ್ವೆ ಟಿ10 ಲೀಗ್‌ನಲ್ಲಿ ಆಡಿದರು. ರಾಬಿನ್ ಉತ್ತಪ್ಪ ಯುಎಇಯಲ್ಲಿ ನಡೆದ ಅಂತಾರಾಷ್ಟ್ರೀಯ ಲೀಗ್ ಟಿ20ಯಲ್ಲೂ ಆಡಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ