logo
ಕನ್ನಡ ಸುದ್ದಿ  /  ಕ್ರೀಡೆ  /  Shane Warne: ದಿಗ್ಗಜ ಶೇನ್​ ವಾರ್ನ್​ ಜೀವ ತೆಗೆದಿದ್ದು ಕೋವಿಡ್​ ಲಸಿಕೆ; ಭಾರತ ಮೂಲದ ಆಸ್ಟ್ರೇಲಿಯಾ ಹೃದ್ರೋಗ ವೈದ್ಯರಿಂದ ಅಚ್ಚರಿಯ ಮಾಹಿತಿ

Shane Warne: ದಿಗ್ಗಜ ಶೇನ್​ ವಾರ್ನ್​ ಜೀವ ತೆಗೆದಿದ್ದು ಕೋವಿಡ್​ ಲಸಿಕೆ; ಭಾರತ ಮೂಲದ ಆಸ್ಟ್ರೇಲಿಯಾ ಹೃದ್ರೋಗ ವೈದ್ಯರಿಂದ ಅಚ್ಚರಿಯ ಮಾಹಿತಿ

Prasanna Kumar P N HT Kannada

Jun 23, 2023 03:20 PM IST

google News

ಆಸ್ಟ್ರೇಲಿಯಾದ ದಂತಕಥೆ ಶೇನ್ ವಾರ್ನ್

    • ಶೇನ್​ ವಾರ್ನ್​ಗೆ ಸಾವಿಗೆ ಸಂಬಂಧಿಸಿ ಅಚ್ಚರಿ ಸುದ್ದಿಯೊಂದು ಹೊರ ಬಿದ್ದಿದ್ದು, ಕಾರಣ ಏನೆಂಬುದನ್ನು  ಬಹಿರಂಗಪಡಿಸಿದೆ. ಭಾರತೀಯ ಮೂಲದ ಸಲಹೆಗಾರ ಹೃದ್ರೋಗ ತಜ್ಞ ಮತ್ತು ಆಸ್ಟ್ರೇಲಿಯಾದ ವೈದ್ಯರೊಬ್ಬರು, ಇಂಗ್ಲೆಂಡ್​​ ಪ್ರಸಿದ್ಧ ಹೃದ್ರೋಗ ತಜ್ಞರೊಬ್ಬರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.  
ಆಸ್ಟ್ರೇಲಿಯಾದ ದಂತಕಥೆ ಶೇನ್ ವಾರ್ನ್
ಆಸ್ಟ್ರೇಲಿಯಾದ ದಂತಕಥೆ ಶೇನ್ ವಾರ್ನ್

ಸ್ಪಿನ್ ಮಾಂತ್ರಿಕತೆಯಿಂದ ಕ್ರಿಕೆಟ್​ (Cricket) ಲೋಕದ ರಾಜನಾಗಿ ಮೆರೆದಾಡಿದ್ದ ಆಸ್ಟ್ರೇಲಿಯಾದ ದಂತಕಥೆ ಶೇನ್ ವಾರ್ನ್ (Shane Warne) ಅವರು ಕಳೆದ ವರ್ಷದ ಮಾರ್ಚ್​ನಲ್ಲಿ ಆಕಸ್ಮಿಕ ಹೃದಯಘಾತದಿಂದ ನಿಧನರಾಗಿದ್ದರು.​ ಅವರ ಅಕಾಲಿಕ ಮರಣದಿಂದ ಇಡೀ ಕ್ರಿಕೆಟ್ ಜಗತ್ತೇ ಆಘಾತಕ್ಕೊಳಗಾಗಿತ್ತು. ಹಲವು ಊಹಾಪೋಹಾ ಸುದ್ದಿಗಳು ಹರಿದಾಡಿದ್ದವು. ಇದೀಗ ಶೇನ್​ ವಾರ್ನ್​ಗೆ ಸಾವಿಗೆ ಸಂಬಂಧಿಸಿ ಅಚ್ಚರಿ ಸುದ್ದಿಯೊಂದು ಹೊರ ಬಿದ್ದಿದ್ದು, ಕಾರಣ ಏನೆಂಬುದನ್ನು ಬಹಿರಂಗಪಡಿಸಿದೆ.

ಶೇನ್​ ವಾರ್ನ್‌ ದಿಢೀರ್ ಸಾವಿನ ಹಿಂದೆ ಕೋವಿಡ್​ ಲಸಿಕೆಯ ಪಾತ್ರ ಇದೆ ಎಂದು ಭಾರತೀಯ ಮೂಲದ ಸಲಹೆಗಾರ ಹೃದ್ರೋಗ ತಜ್ಞ ಮತ್ತು ಆಸ್ಟ್ರೇಲಿಯಾದ ವೈದ್ಯರೊಬ್ಬರು, ಇಂಗ್ಲೆಂಡ್​​ ಪ್ರಸಿದ್ಧ ಹೃದ್ರೋಗ ತಜ್ಞರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯನ್ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಅವರ ಸಾವಿಗೂ 9 ತಿಂಗಳ ಹಿಂದೆ ಪಡೆದಿದ್ದ ಕೋವಿಡ್​ mRNA ಲಸಿಕೆ ಮತ್ತೊಂದು Pfizer mRNA ಲಸಿಕೆಯಿಂದ ಹೀಗೆ ಆಗಿದ್ದರೂ ಅಚ್ಚರಿ ಇಲ್ಲ ಎಂದು ಎಂದಿದ್ದಾರೆ.

ಪರಿಧಮನಿ, ಅಪಧಮನಿಗೆ ಸಮಸ್ಯೆ

ಹೃದ್ರೋಗ ತಜ್ಞ ಡಾ ಅಸೀಮ್ ಮಲ್ಹೋತ್ರಾ ಮತ್ತು ಆಸ್ಟ್ರೇಲಿಯನ್ ಮೆಡಿಕಲ್ ಪ್ರೊಫೆಷನಲ್ಸ್ ಸೊಸೈಟಿ (AMPS) ಅಧ್ಯಕ್ಷರೂ ಆಗಿರುವ ಡಾ ಕ್ರಿಸ್ ನೀಲ್ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇವರು ನೀಡಿದ ವಾರ್ನ್ ಅವರ ಮರಣೋತ್ತರ ಪರೀಕ್ಷೆಯ ಫಲಿತಾಂಶದ ಪ್ರಕಾರ, ಲಸಿಕೆಯು ಪರಿಧಮನಿ, ಅಪಧಮನಿಗೆ ಹಾನಿಕಾರಕ ಉಂಟು ಮಾಡಿದ ಕಾರಣದಿಂದ ಹೃದ್ರೋಗಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

52ನೇ ವರ್ಷಕ್ಕೆ ಸಾವನ್ನಪ್ಪಿದ್ದು ಬೇಸರ

ಕೋವಿಡ್ ಎಂಆರ್‌ಎನ್‌ಎ ಲಸಿಕೆಯಿಂದ ಪರಿಧಮನಿಗೆ ಸೋಂಕು ಹೆಚ್ಚಾಗಿ, ಅದು ತ್ವರಿತ ವೇಗವರ್ಧನೆಗೆ ಕಾರಣವಾಗಬಹುದು ಎಂದು ವೈದ್ಯರು ತಮ್ಮ ಸಂಶೋಧನೆಯಲ್ಲಿ ತೋರಿಸಿದ್ದಾರೆ. ವಿಶೇಷ ಅಂದರೆ ಹೃದಯ ಸಂಬಂಧಿ ಕಾಯಿಲೆ ಇದ್ದವರನ್ನು ಮತ್ತಷ್ಟು ಬಾಧಿಸುವ ಸಾಧ್ಯತೆ ಹೆಚ್ಚಿದೆ ಎಂಬುದು ತಜ್ಞರ ವರದಿ. 52 ವರ್ಷ ವಾರ್ನ್​ ಅವರು ಓರ್ವ ಕ್ರೀಡಾಪಟುವಾಗಿ ಕೇವಲ 52 ವರ್ಷಕ್ಕೆ ಸಾವನ್ನಪ್ಪಿಸಿದ್ದು, ಅಚ್ಚರಿಯೇ ಸರಿ ಎನ್ನುತ್ತಾರೆ ತಜ್ಞರು. ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕುಡಿತವೂ ಒಂದು ಕಾರಣ

ಮಲ್ಹೋತ್ರಾ ಅವರು ಈ ಕುರಿತು ವಿಷಯಗಳನ್ನು ಬಹಿರಂಗಪಡಿಸಿದ್ದು, ಇದು ಲಸಿಕೆ ಪಡೆದ ನಂತರ ತಿಂಗಳವರೆಗೆ ಪರಿಧಮನಿಯಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತದೆ. ಮತ್ತೊಂದು ಆತಂಕಾರಿ ಸಂಗತಿ ಅಂದರೆ ಉತ್ತಮವಾದ ಆರೋಗ್ಯ ಶೈಲಿಯನ್ನು ಹೊಂದಿರಲಿಲ್ಲ. ಕುಡಿತ, ಧೂಮಪಾನ ಹೆಚ್ಚಾಗಿತ್ತು. ಲಸಿಕೆಯ ಜೊತೆಗೆ ಹೃದಯದ ಮೇಲೆ ಮತ್ತಷ್ಟು ಪರಿಣಾಮ ಬೀರಿರುವ ಸಾಧ್ಯತೆ ಇದೆ. ಎರಡೇ ಎರಡು ಡೋಸ್ Pfizer mRNA ಲಸಿಕೆ ಪಡೆದು 9 ತಿಂಗಳು ಆಗುವಷ್ಟರಲ್ಲಿ ಸಾವನ್ನಪ್ಪಿದರು ಎಂದು ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ.

ಮಾರ್ಚ್​ 4ರಂದು ನಿಧನ

1969ರಲ್ಲಿ ಜನಿಸಿದ ಆಸ್ಟ್ರೇಲಿಯಾದ ದಂತಕಥೆ ಲೆಗ್-ಸ್ಪಿನ್ನರ್ 2022ರ ಮಾರ್ಚ್​​​ನಲ್ಲಿ ಥಾಯ್ಲೆಂಡ್‌ನ ಕೋಹ್‌ ಸಾಮಯಿ ದ್ವೀಪದಲ್ಲಿರುವ ಐಷಾರಾಮಿ ವಿಲ್ಲಾದಲ್ಲಿ ಮಾರ್ಚ್ 4, 2022ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಅವರು 145 ಟೆಸ್ಟ್​ ಪಂದ್ಯಗಳನ್ನಾಡಿದ್ದು, 708 ವಿಕೆಟ್​, 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಪಡೆದಿದ್ದಾರೆ. ಇನ್ನು ಐಪಿಎಲ್​ನಲ್ಲಿ ಆಡಿದ 55 ಪಂದ್ಯಗಳಲ್ಲಿ 57 ವಿಕೆಟ್​ ಪಡೆದಿದ್ದಾರೆ.

ಸಿನಿಮಾ ರೂಪದಲ್ಲಿ ತೆರೆಗೆ

ಸದ್ಯ ಶೇನ್​ ವಾರ್ನ್​ ಅವರ ಜೀವನ ಚಿತ್ರಣ ಸಿನಿಮಾ ರೂಪದಲ್ಲಿ ತಯಾರಾಗುತ್ತಿದೆ. ಜೀವನದ ಕುರಿತ ಕಿರು ಸರಣಿಗೆ ‘ವಾರ್ನೆ’ ಎಂಬ ಹೆಸರನ್ನು ಇಡಲಾಗಿದೆ. ಬಯೋಪಿಕ್​ನಲ್ಲಿ​ ವಾರ್ನ್​ ಪಾತ್ರದಲ್ಲಿ ಆಸ್ಟ್ರೇಲಿಯಾದ ನಟ ಅಲೆಕ್ಸ್​ ವಿಲಿಯಮ್ಸ್​ (Alex Williams), ವಾರ್ನ್​ ಪತ್ನಿಯ ಸಿಮೊನ್​ ಕ್ಯಾಲಹಾನ್ (Simone Callahan) ಪಾತ್ರದಲ್ಲಿ ಮಾರ್ನಿ ಕೆನಡಿ (Marnie Keneddy)​ ನಟಿಸುತ್ತಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ