logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚೊಚ್ಚಲ ಫಿಫಾ ಕ್ಲಬ್ ವಿಶ್ವಕಪ್​ಗೆ ಮುತ್ತಿಕ್ಕಿದ ಮ್ಯಾಂಚೆಸ್ಟರ್ ಸಿಟಿ; 2023ರ 5ನೇ ಟ್ರೋಫಿ ಗೆದ್ದ ಕ್ಲಬ್

ಚೊಚ್ಚಲ ಫಿಫಾ ಕ್ಲಬ್ ವಿಶ್ವಕಪ್​ಗೆ ಮುತ್ತಿಕ್ಕಿದ ಮ್ಯಾಂಚೆಸ್ಟರ್ ಸಿಟಿ; 2023ರ 5ನೇ ಟ್ರೋಫಿ ಗೆದ್ದ ಕ್ಲಬ್

Dec 23, 2023 12:04 PM IST

FIFA Club World Cup Final 2023: ಫಿಫಾ ಕ್ಲಬ್ ವಿಶ್ವಕಪ್​ ಫೈನಲ್​ನಲ್ಲಿ ಫ್ಲುಮಿನೆನ್ಸ್ ವಿರುದ್ಧ 4-0 ಗೋಲುಗಳ ಅಂತರದಿಂದ ಮ್ಯಾಂಚೆಸ್ಟರ್ ಸಿಟಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಡಿಸೆಂಬರ್ 22ರಂದು ಶುಕ್ರವಾರ ನಡೆದ ಫಿಫಾ ಕ್ಲಬ್ ವರ್ಲ್ಡ್ ಕಪ್ ಫೈನಲ್‌ನಲ್ಲಿ ಫ್ಲುಮಿನೆನ್ಸ್ ತಂಡವನ್ನು 4-0 ಗೋಲುಗಳ ಅಂತರದಿಂದ ಮ್ಯಾಂಚೆಸ್ಟರ್ ಸಿಟಿ ಚಾಂಪಿಯನ್ ಪಟ್ಟಕ್ಕೇರಿದೆ. ಫಿಫಾ ಕ್ಲಬ್ ವರ್ಲ್ಡ್ ಕಪ್ ಇದೇ ಮೊದಲ ಬಾರಿಗೆ ಮ್ಯಾಂಚೆಸ್ಟರ್ ಪ್ರಶಸ್ತಿ ಗೆದ್ದಿದೆ.
(1 / 10)

ಶುಕ್ರವಾರ ರಾತ್ರಿ ಸೌದಿ ಅರೇಬಿಯಾದಲ್ಲಿ ನಡೆದ ಪಂದ್ಯದಲ್ಲಿ ಮ್ಯಾಂಚೆಸ್ಟರ್​ ಪರ ಜೂಲಿಯನ್ ಅಲ್ವಾರೆಜ್ 2 ಗೋಲು ಗಳಿಸಿದರು. ಫಿಲ್ ಫೋಡೆನ್ ಒಂದು ಗೋಲು ಗಳಿಸಿದರು. ಒಂದು ಸ್ವಂತ ಗೋಲು.
(2 / 10)

ಮ್ಯಾಂಚೆಸ್ಟರ್ ಸಿಟಿ ತಂಡದ ಜೊತೆಗೆ ಮೊದಲ ಬಾರಿಗೆ ಟೂರ್ನಿ ಗೆದ್ದ ಪೆಪ್ ಗಾರ್ಡಿಯೋಲಾ ಕೋಚ್ ಆಗಿ ಮೂರು ಬಾರಿ ಕ್ಲಬ್ ವರ್ಲ್ಡ್ ಕಪ್​ಗೆ ಮುತ್ತಿಕ್ಕಿದ್ದಾರೆ. ಅಲ್ಲದೆ, ಮ್ಯಾಂಚೆಸ್ಟರ್ ಸಿಟಿ 2023ರಲ್ಲಿ (ಈ ವರ್ಷ) ಐದನೇ ಪ್ರಶಸ್ತಿಗೆ ಮುತ್ತಿಕ್ಕಿದೆ.
(3 / 10)

ಮ್ಯಾಂಚೆಸ್ಟರ್ ಸಿಟಿ ಕ್ಲಬ್ ವಿಶ್ವಕಪ್ ಗೆದ್ದ ನಾಲ್ಕನೇ ಇಂಗ್ಲಿಷ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮುನ್ನ ಈ ಟ್ರೋಫಿಯನ್ನು ಮ್ಯಾಂಚೆಸ್ಟರ್ ಯುನೈಟೆಡ್, ಚೆಲ್ಸಿಯಾ ಮತ್ತು ಲಿವರ್‌ಪೂಲ್ ತಂಡಗಳು ಪ್ರಶಸ್ತಿ ಗೆದ್ದಿದ್ದವು.
(4 / 10)

ಈ ಪಂದ್ಯದ ಮೊದಲ ನಿಮಿಷದಲ್ಲಿ ಗೋಲು ಸಿಡಿಸಿ ಮ್ಯಾಂಚೆಸ್ಟರ್​ಗೆ ಮುನ್ನಡೆ ತಂದುಕೊಟ್ಟ ಅಲ್ವಾರೆಜ್, 72ನೇ ನಿಮಿಷದಲ್ಲಿ ತನ್ನ 2ನೇ ಗೋಲು ಗಳಿಸಿದರು. 27ನೇ ನಿಮಿಷದಲ್ಲಿ ಸ್ವಂತ ಗೋಲು ಸಿಕ್ಕಿತು. ಫಿಲ್ ಫೋಡೆನ್ 88ನೇ ನಿಮಿಷದಲ್ಲಿ ತಂಡದ 4ನೇ ಗೋಲು ಗಳಿಸಿದರು.
(5 / 10)

ಪಂದ್ಯದ ನಂತರ ಮ್ಯಾಂಚೆಸ್ಟರ್​ ಸಿಟಿ ಮತ್ತು ಫ್ಲುಮಿನೆನ್ಸ್‌ ಕ್ಲಬ್ ಫುಟ್ಬಾಲ್ ಆಟಗಾರರು ಜಗಳ ಮಾಡಿಕೊಂಡರು. ಮ್ಯಾಂಚೆಸ್ಟರ್​ ಪರ ಕೈಲ್ ವಾಕರ್ ಮತ್ತು ಫ್ಲುಮಿನೆನ್ಸ್‌ನ ಫೆಲಿಪ್ ಮೋಲಾ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದರು.
(6 / 10)

ಫ್ಲುಮಿನೆನ್ಸ್ ತನ್ನ 121 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ಲಬ್ ವಿಶ್ವಕಪ್ ಫೈನಲ್ ತಲುಪಿತು. ಆದರೆ, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
(7 / 10)

2008ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್, 2009ರಲ್ಲಿ ಲಿವರ್‌ಪೂಲ್ ಮತ್ತು 2021ರಲ್ಲಿ ಚೆಲ್ಸಿಯಾ ಕ್ಲಬ್ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದವು. ಈ ಬಾರಿ, ಮ್ಯಾಂಚೆಸ್ಟರ್ ಸಿಟಿ 4ನೇ ಇಂಗ್ಲಿಷ್ ಕ್ಲಬ್ ಆಗಿ ಈ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿತು.
(8 / 10)

ಕಪ್ ಗೆದ್ದ ಬಳಿಕ ಸಂಭ್ರಮಿಸಿದ ಆಟಗಾರರು
(9 / 10)
ಕಪ್ ಗೆದ್ದ ಬಳಿಕ ಸಂಭ್ರಮಿಸಿದ ಆಟಗಾರರು
ಅಭಿಮಾನಿಗಳ ಸಂಭ್ರಮ.
(10 / 10)
ಅಭಿಮಾನಿಗಳ ಸಂಭ್ರಮ.

    ಹಂಚಿಕೊಳ್ಳಲು ಲೇಖನಗಳು