Messi Net Worth : ಕೊಡುಗೈ ದಾನಿ ಮೆಸ್ಸಿ ಒಂದು ಗಂಟೆಯ ಸಂಪಾದನೆ ಎಷ್ಟು ಗೊತ್ತೇ? ತಿಳಿದರೆ ಶಾಕ್ ಆಗ್ತೀರಾ..
Dec 20, 2022 06:45 AM IST
ಫಿಫಾ ವಿಶ್ವಕಪ್ ಫೈನಲ್ ಗೆದ್ದ ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ ಟ್ರೋಫಿಯೊಂದಿಗೆ ಕಂಡಿದ್ದು ಹೀಗೆ. (ಫೋಟೋ-AFP)
Lionel Messi Net Worth: ಲಿಯೊನೆಲ್ ಮೆಸ್ಸಿ ಫುಟ್ಬಾಲ್ ಇತಿಹಾಸದಲ್ಲಿ ಸ್ಮರಣೀಯ ಹೆಸರು. ಮೈದಾನಕ್ಕೆ ಇಳಿದರೆ ಎಲ್ಲರ ಕಣ್ಣು ಈತನ ಮೇಲೆಯೇ ಇರುತ್ತದೆ. ಆಟದಲ್ಲಿ ಉತ್ತಮ ಗೋಲು ಬೇಟೆಗಾರ ಮಾತ್ರವಲ್ಲ. ದೊಡ್ಡ ಉದ್ಯಮಿ ಕೂಡ. ಮೆಸ್ಸಿ ವಾರಕ್ಕೆ, ದಿನಕ್ಕೆ, ಗಂಟೆಗೆ ಎಷ್ಟು ಸಂಪಾದಿಸುತ್ತಾರೆ ಗೊತ್ತಾ?
ದೋಹಾ(ಕತಾರ್): ಇಡೀ ವಿಶ್ವವೇ ಫಿಫಾ ವಿಶ್ವಕಪ್ ಅನ್ನು ಅತ್ಯಂತ ಸಂಭ್ರಮದಿಂದ ವೀಕ್ಷಿಸಿತು. ಕಪ್ ಗೆದ್ದ ನಂತರ ಅರ್ಜೆಂಟೀನಾ ಸಂತಸ ವ್ಯಕ್ತಪಡಿಸಿದೆ. ಜಗತ್ತು ಮೆಸ್ಸಿಯನ್ನು ಹಾಡಿ ಹೊಗಳುತ್ತಿದೆ.
ಮೆಸ್ಸಿಯ ಸಂತೋಷ ನೋಡಿ ಎಲ್ಲರೂ ಬೆಚ್ಚಿಬಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಅವರು ಫುಟ್ಬಾಲ್ ಪ್ರೇಮಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಆದರೆ ಮೆಸ್ಸಿ ಆಟದಲ್ಲಿ ಮಾತ್ರವಲ್ಲ, ಗಳಿಕೆಯಲ್ಲೂ ಭಾರೀ ಮುಂದೆ ಇದ್ದಾರೆ. ಅವರ ಆಸ್ತಿಯ ಮೌಲ್ಯ ತಿಳಿದರೆ ಒಮ್ಮೆ ಶಾಕ್ ಆಗೋದು ಗ್ಯಾರಂಟಿ.
ಮೆಸ್ಸಿಯ ಆಸ್ತಿ ಮತ್ತು ಜೀವನಶೈಲಿ ವಿಭಿನ್ನವಾಗಿದೆ. ನವೆಂಬರ್ 2022 ರ ಹೊತ್ತಿಗೆ, ಲಿಯೊನೆಲ್ ಮೆಸ್ಸಿ ಅವರ ನಿವ್ವಳ ಮೌಲ್ಯವು 600 ಮಿಲಿಯನ್ ಡಾಲರ್‌ಗಳು ಅಂದರೆ 4 ಸಾವಿರದ 952 ಕೋಟಿಗಳು. ಅವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳಲ್ಲಿ ಒಬ್ಬರು. ಹಲವು ಬ್ರಾಂಡ್‌ಗಳನ್ನು ಪ್ರಚಾರ ಮಾಡಿ ಕೋಟಿಗಟ್ಟಲೆ ಸಂಪಾದಿಸುತ್ತಾರೆ. ಅನೇಕ ಕಂಪನಿಗಳು ಮೆಸ್ಸಿಗಾಗಿ ಕಾಯುತ್ತವೆ.
ಮೆಸ್ಸಿಯ ದಿನದ ಸಂಪಾದನೆ ಎಷ್ಟು ಗೊತ್ತಾ? 1,05,000 ಡಾಲರ್ ಅಂದರೆ ನಮ್ಮ ಭಾರತೀಯ ಕರೆನ್ಸಿಯಲ್ಲಿ 87 ಲಕ್ಷ ರೂಪಾಯಿಗೂ ಹೆಚ್ಚು. ದಿನದ ಸಂಪಾದನೆಯಲ್ಲೂ ಮೆಸ್ಸಿ ಟಾಪ್ ನಲ್ಲಿ ಇದ್ದಾರೆ. ಕಳೆದ ವರ್ಷ 75 ಮಿಲಿಯನ್ ಗಳಿಸಿದ್ದಾರೆ. ಫುಟ್ಬಾಲ್ ತಂಡ ಪ್ಯಾರಿಸ್ ಸೇಂಟ್-ಜರ್ಮೈನ್ ಮೆಸ್ಸಿ ನೀಡುವ ಸಂಬಳವೇ ವರ್ಷಕ್ಕೆ 35 ಮಿಲಿಯನ್.
ಮೆಸ್ಸಿ ವಾರಕ್ಕೆ 7,38,000 ಡಾಲರ್, ದಿನಕ್ಕೆ 1,05,000 ಡಾಲರ್ ಹಾಗೂ ಗಂಟೆಗೆ 8,790 ಡಾಲರ್ ಗಳಿಸುತ್ತಾರೆ ಎಂದು ಹೇಳಲಾಗುತ್ತದೆ. ವಿವಿಧ ವಸ್ತುಗಳ ಬ್ರಾಂಡ್ ಅಂಬಾಸಿಡರ್ ಆಗಿ ಗಳಿಕೆಯನ್ನು ಮುಂದುವರಿಸುತ್ತಾರೆ.
ಮೆಸ್ಸಿಗೆ ಕಾರುಗಳೆಂದರೆ ತುಂಬಾ ಇಷ್ಟ. ಅರ್ಜೆಂಟೀನಾದಲ್ಲಿ ಐಷಾರಾಮಿ ಬಂಗಲೆ ಇದೆ. ನೋ ಫ್ಲೈ ಝೋನ್ ಇದೆ. ಅನೇಕ ಐಷಾರಾಮಿ ಮನೆಗಳಿವೆ. 100 ಕೋಟಿ ಮೌಲ್ಯದ ಖಾಸಗಿ ಜೆಟ್ ಕೂಡ ಇದೆ. ಇದರಲ್ಲಿ 16 ಜನರು ಕುಳಿತುಕೊಳ್ಳಬಹುದು. ಇತರ ವ್ಯವಹಾರಗಳೂ ಇವೆ. ಅವರ ಬಳಿ ಹೋಟೆಲ್ ಕೂಡ ಇದೆ.
ಮೆಸ್ಸಿ ವಿಶ್ವದಲ್ಲಿ ಅತಿ ಹೆಚ್ಚು ಸಂಪಾದನೆ ಮಾಡುವ ಆಟಗಾರ. ಮೆಸ್ಸಿ ಪ್ರತಿ ವರ್ಷ ಸರಾಸರಿ 130 ಮಿಲಿಯನ್ ಡಾಲರ್ ಗಳಿಸುತ್ತಾರೆ. ಅಂದರೆ ಸುಮಾರು 1,075 ಕೋಟಿ ರೂ. ಇದರಲ್ಲಿ 55 ಮಿಲಿಯನ್ ಡಾಲರ್ ಆಟಕ್ಕೆ ಸಂಬಂಧಿಸಿದ್ದು. ಉಳಿದ 75 ಮಿಲಿಯನ್ ಅನ್ನು ಮೈದಾನದ ಹೊರಗೆ ಗಳಿಸಲಾಗುತ್ತದೆ. ಕ್ರಿಪ್ಟೋಕರೆನ್ಸಿ ಫ್ಯಾನ್ ಟೋಕನ್ ಪ್ಲಾಟ್‌ಫಾರ್ಮ್ Socios ಜೊತೆಗೆ ವರ್ಷಕ್ಕೆ 20 ಮಿಲಿಯನ್ ಪಾಲುದಾರಿಕೆ. 35 ವರ್ಷಗಳ ಎಂಡಾರ್ಸ್ ಮೆಂಟ್, ಪೋರ್ಟ್‌ಫೋಲಿಯೊ ಅಡಿಡಾಸ್, ಬಡ್‌ವೈಸರ್, ಪೆಪ್ಸಿಕೋ ಜೊತೆಗಿನ ವ್ಯವಹಾರಗಳನ್ನು ಸಹ ಒಳಗೊಂಡಿದೆ.
ಕೊಡುಗೈ ದಾನಿ ಮೆಸ್ಸಿ
ಮೆಸ್ಸಿ ಕೇವಲ ಗಳಿಯಲ್ಲಿ ಅಷ್ಟೇ ಹೆಸರು ಮಾಡಿಲ್ಲ. ಕೊಡುಗೈ ದಾನಿಯೂ ಹೌದು. 2007 ರಲ್ಲಿ ಲಿಯೊನೆಲ್ ಮೆಸ್ಸಿ ಫೌಂಡೇಶನ್ (Messi Foundation) ಯುನಿಸೆಫ್ ಸಹಭಾಗಿತ್ವದಲ್ಲಿ ಪ್ರಾರಂಭವಾಯಿತು. ಪ್ರಪಂಚದಾದ್ಯಂತ ಅಪೌಷ್ಟಿಕತೆ ಮತ್ತು ದುರ್ಬಲ ಮಕ್ಕಳಿಗೆ ಸಹಾಯ ಮಾಡುವುದು. 2017 ರಲ್ಲಿ ಮೆಸ್ಸಿ ಫೌಂಡೇಶನ್ ಸಿರಿಯಾದಲ್ಲಿ 1,600 ಅನಾಥ ಮಕ್ಕಳಿಗೆ ತರಗತಿ ಕೊಠಡಿಗಳನ್ನು ನಿರ್ಮಿಸಿತ್ತು. ಇದಕ್ಕಾಗಿ ಮೆಸ್ಸಿ ಸ್ವಂತ ಹಣವನ್ನು ನೀಡಿದ್ದರು. 2019 ರಲ್ಲಿ ಇವರ ಪ್ರತಿಷ್ಠಾನವು ಕೀನ್ಯಾದ ನಾಗರಿಕರಿಗೆ ಆಹಾರ ಮತ್ತು ನೀರನ್ನು ಒದಗಿಸಲು ಕೋಟ್ಯಂತರ ರೂಪಾಯಿಗಳನ್ನು ದೇಣಿಗೆ ನೀಡಿತು.
ಇದೇ ಡಿಸೆಂಬರ್ 18, ಭಾನುವಾರ ನಡೆದಿದ್ದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ 3-3 ಸಮಬಲ ಸಾಧಿಸಿತ್ತು. ಪೆನಾಲ್ಟಿಯಲ್ಲಿ 4-2 ಗೋಲುಗಳ ಅಂತರದಲ್ಲಿ ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತ್ತು.