logo
ಕನ್ನಡ ಸುದ್ದಿ  /  ಕ್ರೀಡೆ  /  Neymar: ಅಲ್ ಹಿಲಾಲ್ ಕ್ಲಬ್​ ಜೊತೆ ನೇಮರ್ ಒಪ್ಪಂದ; ವರ್ಷಕ್ಕೆ 1455 ಕೋಟಿ ಜೊತೆಗೆ ರಾಜ ವೈಭೋಗ

Neymar: ಅಲ್ ಹಿಲಾಲ್ ಕ್ಲಬ್​ ಜೊತೆ ನೇಮರ್ ಒಪ್ಪಂದ; ವರ್ಷಕ್ಕೆ 1455 ಕೋಟಿ ಜೊತೆಗೆ ರಾಜ ವೈಭೋಗ

HT Kannada Desk HT Kannada

Aug 18, 2023 07:13 AM IST

google News

ಅಲ್​ ಹಿಲಾಲ್ ಜೊತೆ ಒಪ್ಪಂದ ಮಾಡಿಕೊಂಡ ನೇಮರ್​.

    • Neymar Saudi contract: ಬ್ರೆಜಿಲ್​ ಫುಟ್ಬಾಲ್ ತಾರೆ ನೇಮರ್​ಗೆ ಸೌದಿ ಅರೇಬಿಯಾದ ಕ್ಲಬ್‌ ಅಲ್​​ ಹಿಲಾಲ್ ಕೋಟಿಗಳ ಸುರಿಮಳೆಗೈದಿದೆ. ಅವರಿಗೆ 800 ಕೋಟಿ ಭಾರಿ ಮೊತ್ತದೊಂದಿಗೆ ರಾಜವೈಭೋಗದ ಸೌಕರ್ಯ ನೀಡಲು ಮುಂದಾಗಿದೆ.
ಅಲ್​ ಹಿಲಾಲ್ ಜೊತೆ ಒಪ್ಪಂದ ಮಾಡಿಕೊಂಡ ನೇಮರ್​.
ಅಲ್​ ಹಿಲಾಲ್ ಜೊತೆ ಒಪ್ಪಂದ ಮಾಡಿಕೊಂಡ ನೇಮರ್​. (AFP)

ಸೌದಿ ಅರೇಬಿಯಾದ ಕ್ಲಬ್‌ಗಳು ವಿಶ್ವದ ಟಾಪ್ ಫುಟ್‌ಬಾಲ್ ತಾರೆಗಳ ಮೇಲೆ ಕೋಟಿಗಳ ಸುರಿಮಳೆಗೈಯುತ್ತಿದೆ. ಇತ್ತೀಚೆಗೆ ಪೋರ್ಚುಗೀಸ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಅವರನ್ನು ಅಲ್ ನಾಸರ್ ಕ್ಲಬ್ ಭಾರಿ ಬೆಲೆಗೆ ಪಡೆದುಕೊಂಡಿತ್ತು. ಇದೀಗ ಬ್ರೆಜಿಲ್ ಸ್ಟಾರ್ ನೇಮರ್ (Neymar) ಅವರನ್ನು ಅಲ್ ಹಿಲಾಲ್ ಕ್ಲಬ್ ದಾಖಲೆಯ ಮೊತ್ತಕ್ಕೆ ಖರೀದಿಸಿದೆ.

ನೇಮರ್​ ಇದಕ್ಕೂ ಮುನ್ನ ಪ್ಯಾರಿಸ್ ಸೇಂಟ್-ಜರ್ಮೈನ್ (PSG) ಕ್ಲಬ್​​ ಪರ ಕಣಕ್ಕಿಳಿದಿದ್ದರು. ಇದೀಗ ಅವರಿಗೆ 100 ಮಿಲಿಯನ್ ಯುರೋ (ಸುಮಾರು 1455ಕೋಟಿ ರೂಪಾಯಿ) ಮೊತ್ತ ನೀಡಿ ಬುಟ್ಟಿಗೆ ಹಾಕಿಕೊಂಡಿದೆ. ಎರಡು ವರ್ಷಗಳ ಕಾಲ ನೇಮರ್​ ಈ ಸೌದಿ ಕ್ಲಬ್ ಅಲ್ ಹಿಲಾಲ್ ತಂಡದ ಪರ ಕಾಲ್ಚೆಂಡಿನ ಕಾಲ್ಚಳಕ ತೋರಿಸಲು ಒಪ್ಪಂದ ಹಾಕಿಕೊಂಡಿದ್ದಾರೆ.

ಈ ಬಿಗ್​ ಡೀಲ್​ ಜೊತೆಗೆ ಇತರ ಸೌಲಭ್ಯಗಳನ್ನೂ ನೀಡಲು ಮುಂದಾಗಿದೆ. ಪ್ರತಿ ವಾರವೂ 25 ಲಕ್ಷ ಪೌಂಡ್ ಅಂದರೆ, 25 ಕೋಟಿ ಒಪ್ಪಂದಕ್ಕೂ ಸಹಿ ಹಾಕಿದ್ದಾರೆ. ಆತನಿಗೆ ಮೂರು ಐಷರಾಮಿ ಕಾರು, ನಾಲ್ಕು ಮರ್ಸಿಡೀಸ್ ಜಿ ವ್ಯಾಗನ್ ಮತ್ತು ಮೆರ್ಸಿಡೀಸ್ ವ್ಯಾನ್ ನೀಡುವಂತೆ ಆಲ್​ ಹಿಲಾಲ್ ಕ್ಲಬ್​ಗೆ ನೇಮರ್​ ಕೇಳಿರುವುದು ವಿಶೇಷ.

ಐಷರಾಮಿ ಜೀವನದ ಬೇಡಿಕೆ

ಈ ಐಷರಾಮಿ ಕಾರುಗಳಲ್ಲಿ ಬೆಂಟ್ಲಿ ಕಾಂಟಿನೆಂಟಲ್ ಜಿಪಿ, ಆಸ್ಟನ್ ಮಾರ್ಟಿನ್ ಡಿಬಿಎಕ್ಸ್, ಲ್ಯಾಂಬೋರ್ಗಿನಿ ಹುರಾಕನ್ ಕೂಡ ಸೇರಿವೆ. ಅಲ್ಲದೆ, ತನ್ನ ಪ್ರಯಾಣ, ವಸತಿ, ರೆಸ್ಟೋರೆಂಟ್​​ಗಳ ವೆಚ್ಚವನ್ನೂ ಭರಿಸಬೇಕು ಎಂದು ನೇಮರ್​ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ನೇಮರ್​ಗಾಗಿ ದೊಡ್ಡ ಭವನ ನೀಡಿದೆ ಎಂಬುದು ಗಮನಾರ್ಹ. ಅದು 25 ಕೊಠಡಿಗಳನ್ನು ಹೊಂದಿರುವ ಐಷರಾಮಿ ಬಂಗಲೆಯಾಗಿದೆ ಎಂದು ಮಿರರ್ ಈ ಕುರಿತು ವರದಿ ಮಾಡಿದೆ.

ನೇಮರ್ ಅಲ್ ಹಿಲಾಲ್ ಕ್ಲಬ್‌ನೊಂದಿಗೆ ಪ್ರತಿ ವರ್ಷ 17.31 ಕೋಟಿ ಪೌಂಡ್‌ಗಳನ್ನು (ಸುಮಾರು 1,830 ಕೋಟಿ ರೂಪಾಯಿ) ಗಳಿಸಲಿದ್ದಾರೆ. ರೊನಾಲ್ಡೊ ಮತ್ತು ಕರೀಮ್ ಬೆಂಜೆಮಾ ನಂತರ ಸೌದಿ ಪ್ರೊ ಲೀಗ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರ ನೇಮರ್ ಎಂಬ ದಾಖಲೆ ಹೊಂದಿದ್ದಾರೆ. ಕಳೆದ ವರ್ಷ ಡಿಸೆಂಬರ್​​ನಲ್ಲಿ ರೊನಾಲ್ಡೊ ಅವರೊಂದಿಗೆ ಅಲ್​ ನಸರ್ ಕ್ಲಬ್​​ ಒಪ್ಪಂದ ಮಾಡಿಕೊಂಡಿತ್ತು.

ಪಿಎಸ್​ಜಿ ಪರ ನೇಮರ್​

ಮತ್ತೊಬ್ಬ ಆಟಟಗಾರ ಬೆಂಜಿಮಾ ಸೌದಿ ಅರೆಬಿಯಾ ಚಾಂಪಿಯನ್ಸ್​ ಅಲ್​ ಇತ್ತಿಹಾದ್ ಪರ ಪರ ಕೈ ಜೋಡಿಸಿದ್ದರು. 2017ರಲ್ಲಿ ಬಾರ್ಸಿಲೋನಾ ಕ್ಲಬ್ ತೊರೆದು ಪಿಎಸ್​ಜಿ ಕ್ಲಬ್​​​​ ಪರ ಕಣಕ್ಕಿಳಿದಿದ್ದ ನೇಮರ್​​, ಅಂದು ವಿಶ್ವದ ಅತ್ಯಂತ ದುಬಾರಿ ಫುಟ್ಬಾಲ್ ಆಟಗಾರ ಎಂಬ ಎನಿಸಿದ್ದರು. ಅವರು ಪಿಎಸ್​ಜಿ ಪರ 173 ಪಂದ್ಯಗಳಲ್ಲಿ 118 ರನ್ ಗಳಿಸಿದ್ದರು.

ಬಾರ್ಸಿಲೋನಾ ಪರ ನೇಮರ್

ಬಾರ್ಸಿಲೋನಾ ಪರ 186 ಪಂದ್ಯಗಳಲ್ಲಿ 105 ಗೋಲು ಗಳಿಸಿದ್ದ ನೇಮರ್​, ಹಾಗೆಯೇ 76 ಬಾರಿ ಅಸಿಸ್ಟ್ ಮಾಡಿದ್ದರು. ತಮ್ಮ 31ನೇ ವಯಸ್ಸಿನಲ್ಲಿ ಸೌದಿ ಅರೇಬಿಯಾ ಕ್ಲಬ್​ನತ್ತ ಮುಖ ಮಾಡಿರುವ ನೇಮರ್, ಅರಬ್ಬರ ನಾಡಿನಲ್ಲಿ ಆರ್ಭಟಿಸಲು ಮುಂದಾಗಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ