logo
ಕನ್ನಡ ಸುದ್ದಿ  /  ಕ್ರೀಡೆ  /  Lionel Messi: 2026ರ ಫಿಫಾ ಫುಟ್​ಬಾಲ್​ ವಿಶ್ವಕಪ್​​ ಆಡಲ್ಲ; ಕೋಟ್ಯಂತರ ಫ್ಯಾನ್ಸ್​ಗೆ ಆಘಾತ ನೀಡಿದ ಕಾಲ್ಚೆಂಡಿನ ಚತುರ ಲಿಯೊನೆಲ್​ ಮೆಸ್ಸಿ

Lionel Messi: 2026ರ ಫಿಫಾ ಫುಟ್​ಬಾಲ್​ ವಿಶ್ವಕಪ್​​ ಆಡಲ್ಲ; ಕೋಟ್ಯಂತರ ಫ್ಯಾನ್ಸ್​ಗೆ ಆಘಾತ ನೀಡಿದ ಕಾಲ್ಚೆಂಡಿನ ಚತುರ ಲಿಯೊನೆಲ್​ ಮೆಸ್ಸಿ

Prasanna Kumar P N HT Kannada

Jun 16, 2023 08:20 AM IST

google News

ಕಾಲ್ಚೆಂಡಿನ ಚತುರ ಲಿಯೊನೆಲ್​ ಮೆಸ್ಸಿ

    • 2026ರ ವಿಶ್ವಕಪ್​ ಆಡುವ ಕುರಿತು ಚೀನಾದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮೆಸ್ಸಿ, ಕಳೆದ ವರ್ಷ ಕತಾರ್‌ನಲ್ಲಿ ಆಡಿದ ವಿಶ್ವಕಪ್ ನನ್ನ ವೃತ್ತಿಜೀವನದ ಕೊನೆಯ ವಿಶ್ವಕಪ್‌ ಎಂದು ಲಿಯೊನೆಲ್​ ಮೆಸ್ಸಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಕಾಲ್ಚೆಂಡಿನ ಚತುರ ಲಿಯೊನೆಲ್​ ಮೆಸ್ಸಿ
ಕಾಲ್ಚೆಂಡಿನ ಚತುರ ಲಿಯೊನೆಲ್​ ಮೆಸ್ಸಿ

2022ರಲ್ಲಿ ಕತಾರ್​ನಲ್ಲಿ ನಡೆದ ಫಿಫಾ ವಿಶ್ವಕಪ್ (FIFA Football World Cup)​ ಸಂದರ್ಭದಲ್ಲಿ ಈ ಟೂರ್ನಿ ವೃತ್ತಿ ಜೀವನದ ಕೊನೆಯ ಪಂದ್ಯ ಹೇಳಿದ್ದ ಅರ್ಜೆಂಟೀನಾ ನಾಯಕ ಲಿಯೊನೆಲ್‌ ಮೆಸ್ಸಿ (Argentina Captain Lionel Messi), ಕಾಲ್ಚೆಂಡಿನ ಸಮರದಲ್ಲಿ ಅರ್ಜೆಂಟೀನಾ ಗೆದ್ದು ಬೀಗುತ್ತಿದ್ದಂತೆ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿದಿದ್ದರು. ಈಗ ಮತ್ತೊಮ್ಮೆ ಕೋಟ್ಯಂತರ ಫುಟ್​ಬಾಲ್​ ಪ್ರೇಮಿಗಳಿಗೆ ಆಘಾತಕಾರಿ ಸುದ್ದಿ ನೀಡಿದ್ದಾರೆ. ಆ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

2026ರ ಫಿಫಾ ವಿಶ್ವಕಪ್​ ಆಡಲ್ಲ ಎಂದ ಮೆಸ್ಸಿ

ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್​ ಆಟಗಾರರಲ್ಲಿ ಒಬ್ಬರಾದ ಅರ್ಜೆಂಟೀನಾದ ಕ್ಯಾಪ್ಟನ್ ಲಿಯೋನೆಲ್ ಮೆಸ್ಸಿ, ಮುಂಬರುವ ಅಂದರೆ 2026ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಮೆಂಟ್​ನಲ್ಲಿ (2026 FIFA Football World Cup) ತಾನು ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕೋಟ್ಯಂತರ ಅವರ ಅಭಿಮಾನಿಗಳಿಗೆ ಕಾಲ್ಚೆಂಡಿನ ಮಾಂತ್ರಿಕ ಮೆಸ್ಸಿ ಆಘಾತ ನೀಡಿದ್ದಾರೆ. ಇದು ಯಾವುದೋ ಮೂಲಗಳಿಂದ ಬಂದ ಸುದ್ದಿಯಲ್ಲ. ಸ್ವತಃ ಲಿಯೋನೆಲ್ ಮೆಸ್ಸಿಯೇ ಕೊಟ್ಟ ಉತ್ತರ ಇದಾಗಿದೆ.

ಇತ್ತೀಚೆಗಷ್ಟೇ ಫ್ರಾನ್ಸ್‌ನ ಪ್ಯಾರಿಸ್‌ ಸೈಂಟ್ ಜರ್ಮೈನ್‌ (PSG) ಫುಟ್​ಬಾಲ್​ ಕ್ಲಬ್​ನಿಂದ ಹೊರ ಬಂದಿರುವ ಮೆಸ್ಸಿ, ಇನ್ನು ಮುಂದೆ ಅಮೆರಿಕದ ಮಿಯಾಮಿ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಸದ್ಯ 2026ರ ವಿಶ್ವಕಪ್​ ಆಡುವ ಕುರಿತು ಚೀನಾದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮೆಸ್ಸಿ, ಕಳೆದ ವರ್ಷ ಕತಾರ್‌ನಲ್ಲಿ ಆಡಿದ ವಿಶ್ವಕಪ್ ನನ್ನ ವೃತ್ತಿಜೀವನದ ಕೊನೆಯ ವಿಶ್ವಕಪ್‌. ಅಮೆರಿಕಾ, ಮೆಕ್ಸಿಕೋ, ಕೆನಡಾದಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್​​ನಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಹೀಗಂತ ಕ್ರೀಡಾ ಸುದ್ದಿ ಸಂಸ್ಥೆ ಇಎಸ್​ಪಿಎನ್​ ವರದಿ ಮಾಡಿದೆ.

35 ವರ್ಷದ ಲಿಯೊನೆಲ್ ಮೆಸ್ಸಿ, ಕಳೆದ ವರ್ಷ ಕತಾರ್​ನಲ್ಲಿ ನಡೆದ ವಿಶ್ವಕಪ್​ನಲ್ಲಿ ತಮ್ಮ ಚೊಚ್ಚಲ ಟ್ರೋಫಿ ಗೆದ್ದಿದ್ದರು. ಆದರೆ ಈ ಟೂರ್ನಿಯಲ್ಲಿ ನಿವೃತ್ತಿ ನೀಡುವುದಾಗಿ ಹೇಳಿ, ಪ್ರಶಸ್ತಿ ಗೆದ್ದ ಬಳಿಕ ಅರ್ಜೆಂಟೀನಾ ತಂಡದ ಪರ ಇನ್ನಷ್ಟು ವರ್ಷಗಳ ಕಾಲ ಆಡುವೆ ಎಂದು ಅಭಿಮಾನಿಗಳಿಗೆ ಸಿಹಿ ಸುದ್ದಿಕೊಟ್ಟಿದ್ದರು. ಆದರೆ, ಅವರು ಮುಂದಿನ ವಿಶ್ವಕಪ್‌ ಆಡುವ ಕುರಿತು ಯಾವುದೇ ಸ್ಪಷ್ಟ ನಿರ್ಧಾರ ಹೇಳದಿದ್ದರೂ, ತಮ್ಮ ತಂಡದ ಕೋಚ್ ಸಿಬ್ಬಂದಿ, ಸಹ ಆಟಗಾರರು 2026ರ ಫಿಫಾ ವಿಶ್ವಕಪ್‌ ಆಡುತ್ತಾರೆಂಬ ವಿಶ್ವಾಸ ಹೊಂದಿದ್ದರು.

2022ರಲ್ಲಿ ಮೆಸ್ಸಿ ಮಾತು

ಇದು 2022ರ ಫಿಫಾ ವಿಶ್ವಕಪ್​ನಲ್ಲಿ ಕ್ರೋವೆಷ್ಯಾ ತಂಡದ ವಿರುದ್ಧ ನಡೆದ ಸೆಮಿಫೈನಲ್​ ಪಂದ್ಯ. ಆ ಮೂಲಕ ಅರ್ಜೆಂಟೀನಾನಾ ಫೈನಲ್​​ ಪ್ರವೇಶಿಸಿತ್ತು. ಈ ಪಂದ್ಯದಲ್ಲಿ ಗೆದ್ದ ನಂತರ ಮೆಸ್ಸಿ, ಫೈನಲ್​ ಪಂದ್ಯವೇ ಅಂತಾರಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನದ ಕೊನೆಯದ್ದಯ ಎಂದು ಹೇಳಿದ್ದರು. ಇದು ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಆದರೆ ಫೈನಲ್​​​​ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿ ಅರ್ಜೆಂಟೀನಾ ತಂಡವು ಚಾಂಪಿಯನ್​ ಆಯಿತು. ಈ ಸ್ಮರಣೀಯ ಗೆಲುವಿನ ಬಳಿಕ ಮಾತನಾಡಿದ್ದ ಮೆಸ್ಸಿ, ಅರ್ಜೆಂಟೀನಾ ಪರ ಇನ್ನಷ್ಟು ವರ್ಷ ಆಡಲು ಬಯಸುತ್ತಿದ್ದೇನೆ ಎಂದು ಹೇಳುವ ಮೂಲಕ ತಮ್ಮ ನಿವೃತ್ತಿಯನ್ನು ಮುಂದಕ್ಕೆ ಹಾಕಿದ್ದರು.

ಫಿಫಾ ವಿಶ್ವಕಪ್​ನಲ್ಲಿ ಪ್ರಶಸ್ತಿ ಗೆಲ್ಲುವುದು ಹಲವು ವರ್ಷಗಳ ಕನಸಾಗಿತ್ತು. ಆ ಕನಸು ಕೂಡ ಈಡೇರಿದೆ. ಈ ಕನಸಿಗಾಗಿ ಸಾಕಷ್ಟು ಕಠಿಣ ಪರಿಶ್ರಮ ಹಾಕಿದ್ದೇನೆ. ವಿಶ್ವ ಚಾಂಪಿಯನ್‌ ಆಗಿ ಕೆಲ ಪಂದ್ಯಗಳಲ್ಲಿ ಮುಂದುವರಿಯುವ ಆಸೆ ಹೊಂದಿದ್ದೇನೆ ಎಂದು ಮೆಸ್ಸಿ ಹೇಳಿದ್ದರು. ಕತಾರ್‌ ವಿಶ್ವಕಪ್​​ನಲ್ಲಿ ಲಿಯೊನೆಲ್‌ ಮೆಸ್ಸಿ ಅದ್ಭುತ ಪ್ರದರ್ಶನ ತೋರಿದ್ದರು. ಒಟ್ಟು 7 ಗೋಲು ಗಳಿಸಿದ್ದರು. 1986ರ ಬಳಿಕ ಅರ್ಜೆಂಟೀನಾ ಪ್ರಶಸ್ತಿ ಗೆಲುವಿನಲ್ಲಿ ಲಿಯೊನೆಲ್​ ಮುಖ್ಯ ಪಾತ್ರವಹಿಸಿದ್ದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ