logo
ಕನ್ನಡ ಸುದ್ದಿ  /  ಕ್ರೀಡೆ  /  Cristiano Ronaldo: ಇನ್ಸ್​​ಟಾಗ್ರಾಂ ಆದಾಯದಲ್ಲಿ ಸತತ 3ನೇ ವರ್ಷವೂ ರೊನಾಲ್ಡೊ ದರ್ಬಾರ್​; ಏಷ್ಯಾ ಖಂಡಕ್ಕೆ ವಿರಾಟ್ ಕೊಹ್ಲಿಯೇ ಕಿಂಗ್!

Cristiano Ronaldo: ಇನ್ಸ್​​ಟಾಗ್ರಾಂ ಆದಾಯದಲ್ಲಿ ಸತತ 3ನೇ ವರ್ಷವೂ ರೊನಾಲ್ಡೊ ದರ್ಬಾರ್​; ಏಷ್ಯಾ ಖಂಡಕ್ಕೆ ವಿರಾಟ್ ಕೊಹ್ಲಿಯೇ ಕಿಂಗ್!

Prasanna Kumar P N HT Kannada

Aug 11, 2023 10:54 PM IST

google News

ಕ್ರಿಸ್ಟಿಯಾನೊ ರೊನಾಲ್ಡೊ, ವಿರಾಟ್ ಕೊಹ್ಲಿ, ಲಿಯೊನೆಲ್ ಮೆಸ್ಸಿ.

    • Cristiano Ronaldo: ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಗುರುವಾರ ಇನ್​ಸ್ಟಾಗ್ರಾಂನಲ್ಲಿ 600 ಮಿಲಿಯನ್ ಫಾಲೋವರ್ಸ್​ ದಾಟಿದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ, ವಿರಾಟ್ ಕೊಹ್ಲಿ, ಲಿಯೊನೆಲ್ ಮೆಸ್ಸಿ.
ಕ್ರಿಸ್ಟಿಯಾನೊ ರೊನಾಲ್ಡೊ, ವಿರಾಟ್ ಕೊಹ್ಲಿ, ಲಿಯೊನೆಲ್ ಮೆಸ್ಸಿ.

ಫುಟ್ಬಾಲ್​ ಲೋಕದ ದಿಗ್ಗಜ, ಕಾಲ್ಚೆಂಡಿನ ಚತುರ, ಪೋರ್ಚ್​ಗೀಸ್ ಸೂಪರ್ ಸ್ಟಾರ್​ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo), ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಆದರೆ, ಈ ಬಾರಿ ಮೈದಾನದಲ್ಲಿ ಅಲ್ಲ. ಕಳೆದ ತಿಂಗಳು ಫೋರ್ಬ್ಸ್‌ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್ ಎನಿಸಿದ ನಂತರ, ಪೋರ್ಚುಗೀಸ್ ಸೂಪರ್‌ಸ್ಟಾರ್ ಈಗ ಸತತ 3ನೇ ವರ್ಷವೂ ಇನ್​ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಆದಾಯ ಪಡೆಯುವ ಆಟಗಾರನಾಗಿ ಹೊರ ಹೊಮ್ಮಿದ್ದಾರೆ.

ಒಂದು ಪೋಸ್ಟ್​ಗೆ ಎಷ್ಟು?

ಹಾಪರ್ ಹೆಚ್‌ಕ್ಯು ಅಪ್‌ಡೇಟ್ ಮಾಡಿರುವ ಪಟ್ಟಿಯಲ್ಲಿ ವಿಶ್ವದ ಇನ್‌ಸ್ಟಾಗ್ರಾಮ್‌ನಿಂದ ಅತಿ ಹೆಚ್ಚು ಆದಾಯ ಗಳಿಸುವ ಟಾಪ್ 100 ವ್ಯಕ್ತಿಗಳ ಪಟ್ಟಿಯಲ್ಲಿ ಕೇವಲ ಒಬ್ಬ ಕ್ರಿಕೆಟಿಗ ಮಾತ್ರ ಇದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿ ಪೋಸ್ಟ್‌ಗೆ 3.23 ಮಿಲಿಯನ್ ಅಂದರೆ, 26.76 ಕೋಟಿ ರೂಪಾಯಿ ಪಡೆಯುವ ಮೂಲಕ ರೊನಾಲ್ಡೊ ಮೊದಲ ಅಗ್ರಸ್ಥಾನದಲ್ಲಿದ್ದಾರೆ. ಅರ್ಜೆಂಟೀನಾ ನಾಯಕ ಲಿಯೊನೆಲ್ ಮೆಸ್ಸಿ, ಪ್ರತಿ ಪೋಸ್ಟ್‌ಗೆ ಸುಮಾರು 22 ಕೋಟಿ (2.6​​ ಮಿಲಿಯನ್) ಪಡೆಯುತ್ತಾರೆ.

ಕೊಹ್ಲಿಗೆ ಒಂದು ಪೋಸ್ಟ್​ಗೆಷ್ಟು?

ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಗುರುವಾರ ಇನ್​ಸ್ಟಾಗ್ರಾಂನಲ್ಲಿ 600 ಮಿಲಿಯನ್ ಫಾಲೋವರ್ಸ್​ ದಾಟಿದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್​ಸ್ಟಾ ಪೋಸ್ಟ್​ ಮೂಲಕ ಅತಿ ಹೆಚ್ಚು ಸಂಪಾದಿಸುವವರ ಪಟ್ಟಿಯಲ್ಲಿ ಏಷ್ಯಾದ ಮತ್ತು ಭಾರತದ ಏಕೈಕ ಕ್ರೀಡಾಪಟು, ಏಕೈಕ ಕ್ರಿಕೆಟಿಗ ಎಂಬ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ವಿರಾಟ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರತಿ ಪೋಸ್ಟ್‌ಗೆ 11.45 ಕೋಟಿ ಪಡೆಯುತ್ತಾರೆ ಎಂದು ತಿಳಿದು ಬಂದಿದೆ.

ಅತಿ ಹೆಚ್ಚು ಫಾಲೋವರ್ಸ್

ಆ ಮೂಲಕ ಆಟದಲ್ಲಿ ಮಾತ್ರದಲ್ಲದೆ ಆದಾಯದಲ್ಲೂ ಹೆಚ್ಚು ಸಂಪಾದಿಸುವ ದಾಖಲೆ ಬರೆದಿದ್ದಾರೆ. ಇನ್​ಸ್ಟಾಗ್ರಾಂನಿಂದ ಹೆಚ್ಚು ಸಂಪಾದಿಸುವ ಟಾಪ್-100 ಪಟ್ಟಿಯಲ್ಲಿ ಕೊಹ್ಲಿಗೆ 14ನೇ ಸ್ಥಾನ. ಗಳಿಸುವ ಆದಾಯದಲ್ಲೂ ಮುಂದಿರುವ ಕೊಹ್ಲಿ, ಇನ್​ಸ್ಟಾ ಪೋಸ್ಟ್​ನಿಂದ ಅತಿ ಹೆಚ್ಚು ಸಂಪಾದಿಸುವ ಕ್ರೀಡಾಪಟುಗಳಲ್ಲಿ ರೊನಾಲ್ಡೊ, ಮೆಸ್ಸಿ ನಂತರ ವಿರಾಟ್ ಕೊಹ್ಲಿಗೆ ಮೂರನೇ ಸ್ಥಾನ. ಸದ್ಯ 599 ಮಿಲಿಯನ್ ಫಾಲೋವರ್ಸ್​ ಹೊಂದಿದ್ದರೆ, ಮೆಸ್ಸಿ 482 ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಆದರೆ, ವಿರಾಟ್​ ಕೊಹ್ಲಿಯನ್ನು ಹೊರತುಪಡಿಸಿ ಏಷ್ಯಾದಲ್ಲೇ ಸಿನಿಮಾ, ರಾಜಕೀಯ ಸೇರಿ ಯಾವ ವಿಭಾಗದಲ್ಲೂ 100 ಮಿಲಿಯನ್​​ಗೂ ಅಧಿಕ ಫಾಲೋವರ್ಸ್ ಹೊಂದಿಲ್ಲ. ನಟಿ ಪ್ರಿಯಾಂಕ ಚೋಪ್ರಾ (Priyanka Chopra) 87 ಮಿಲಿಯನ್​ ಫಾಲೋವರ್ಸ್ ಹೊಂದಿದ್ದು, ಭಾರತದಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಕಳೆದ ವರ್ಷ ಇನ್​ಸ್ಟಾಗ್ರಾಂ ಪೋಸ್ಟ್​​ಗಳಿಂದಲೇ ಬರೋಬ್ಬರಿ 302 ಕೋಟಿ ಸಂಪಾದಿಸಿದ್ದಾರೆ. ಕೊಹ್ಲಿ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫಾಲೋವರ್ಸ್​ ಸಂಖ್ಯೆ 256 ಮಿಲಿಯನ್​.

ರೋಹಿತ್​​-ಧೋನಿಗೆಷ್ಟು?

ಭಾರತೀಯ ನಾಯಕ ರೋಹಿತ್ ಶರ್ಮಾ ಅವರು ಇನ್​ಸ್ಟಾಗ್ರಾಂನಲ್ಲಿ ಕೇವಲ 29.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಪ್ರತಿ ಪೋಸ್ಟ್‌ಗೆ ಸುಮಾರು 75 ಲಕ್ಷ ರೂಪಾಯಿ ಪಡೆಯುತ್ತಿದ್ದಾರೆ. ಭಾರತದ ಮಾಜಿ ನಾಯಕ ಮತ್ತು ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ಎಂಎಸ್ ಧೋನಿ ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಸುಮಾರು ರೂ 1 ಕೋಟಿ ಗಳಿಸುತ್ತಿದ್ದಾರೆ.

ಇನ್​​ಸ್ಟಾಗ್ರಾಂನಿಂದ ಅತ್ಯಧಿಕ ಗಳಿಕೆಯ ಕ್ರೀಡಾಪಟುಗಳು

  • ಕ್ರಿಸ್ಟಿಯಾನೊ ರೊನಾಲ್ಡೊ-ಪ್ರತಿ ಪೋಸ್ಟ್‌ಗೆ 26.7 ಕೋಟಿ
  • ಲಿಯೊನೆಲ್ ಮೆಸ್ಸಿ-ಪ್ರತಿ ಪೋಸ್ಟ್‌ಗೆ 22 ಕೋಟಿ
  • ವಿರಾಟ್ ಕೊಹ್ಲಿ-ಪ್ರತಿ ಪೋಸ್ಟ್‌ಗೆ 11.45 ಕೋಟಿ
  • ನೇಮರ್ ಜೂನಿಯರ್-ಪ್ರತಿ ಹುದ್ದೆಗೆ 9.44 ಕೋಟಿ
  • ಲೆಬ್ರಾನ್ ಜೇಮ್ಸ್-ಪ್ರತಿ ಪೋಸ್ಟ್‌ಗೆ 7 ಕೋಟಿ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ