logo
ಕನ್ನಡ ಸುದ್ದಿ  /  ಕ್ರೀಡೆ  /  ಸೌದಿಯ ರಿಯಾದ್ ಮ್ಯೂಸಿಯಂನಲ್ಲಿ ರೊನಾಲ್ಡೊ ಪ್ರತಿಮೆ; ಹೇರ್‌ಸ್ಟೈಲ್‌ ಸರಿ ಇಲ್ಲ ಎಂದ ಫ್ಯಾನ್ಸ್

ಸೌದಿಯ ರಿಯಾದ್ ಮ್ಯೂಸಿಯಂನಲ್ಲಿ ರೊನಾಲ್ಡೊ ಪ್ರತಿಮೆ; ಹೇರ್‌ಸ್ಟೈಲ್‌ ಸರಿ ಇಲ್ಲ ಎಂದ ಫ್ಯಾನ್ಸ್

HT Kannada Desk HT Kannada

Nov 29, 2023 12:02 PM IST

google News

ಪ್ರತಿಮೆ ಪಕ್ಕದಲ್ಲಿ ನಿಂತಿರುವ ಕ್ರಿಸ್ಟಿಯಾನೊ ರೊನಾಲ್ಡೊ

    • Cristiano Ronaldo statue: ಸೌದಿಯ ರಾಜಧಾನಿ ರಿಯಾದ್‌ನಲ್ಲಿ ಫುಟ್ಬಾಲ್‌ ದಿಗ್ಗಜ ರೊನಾಲ್ಡೊ ಪ್ರತಿಮೆ ಅನಾವರಣಗೊಳಿಸಲಾಗಿದೆ. ಆದರೆ ಈ ಪ್ರತಿಮೆಯಲ್ಲಿ ರೊನಾಲ್ಡೊ ಕೇಶವಿನ್ಯಾಸ ಸರಿಯಾಗಿಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಪ್ರತಿಮೆ ಪಕ್ಕದಲ್ಲಿ ನಿಂತಿರುವ ಕ್ರಿಸ್ಟಿಯಾನೊ ರೊನಾಲ್ಡೊ
ಪ್ರತಿಮೆ ಪಕ್ಕದಲ್ಲಿ ನಿಂತಿರುವ ಕ್ರಿಸ್ಟಿಯಾನೊ ರೊನಾಲ್ಡೊ (X)

ಪೋರ್ಚುಗಲ್‌ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo), ಸೌದಿ ಅರೇಬಿಯಾದ ಫುಟ್ಬಾಲ್‌ ಲೀಗ್‌ನಲ್ಲಿ ಅಲ್ ನಾಸರ್ (Al Nassr) ಕ್ಲಬ್‌ ಪರ ಆಡುತ್ತಾರೆ. ಫುಟ್ಬಾಲ್‌ ಕ್ಷೇತ್ರದ ಜನಪ್ರಿಯ ಆಟಗಾರ ರೊನಾಲ್ಡೊ, ಇತ್ತೀಚೆಗಷ್ಟೇ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಅವರದೇ ವೈಯಕ್ತಿಕ ವಸ್ತುಸಂಗ್ರಹಾಲಯವನ್ನು ಅನಾವರಣಗೊಳಿಸಿದರು.

ಮ್ಯೂಸಿಯಂನಲ್ಲಿ ರೊನಾಲ್ಡೊ ವೃತ್ತಿಜೀವನದ ಪ್ರಮುಖ ಕ್ಷಣಗಳನ್ನು ಸೆರೆಹಿಡಿಯಲಾಗಿದೆ. ದಿಗ್ಗಜ ಆಟಗಾರ ಫುಟ್ಬಾಲ್‌ ಬದುಕಿನ ಉದ್ದಕ್ಕೂ ಸಂಪಾದಿಸಿದ ಅಭಿಮಾನ, ಪ್ರಶಸ್ತಿ ಪುರಸ್ಕಾರಗಳನ್ನು ಇಲ್ಲಿ ಮೆಲುಕು ಹಾಕಬಹುದು.

ರೊನಾಲ್ಡೊ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಗಳಿಸಿದ ವೈಯಕ್ತಿಕ ಪ್ರಶಸ್ತಿಗಳನ್ನು ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ. ಪೋರ್ಚುಗಲ್ ರಾಷ್ಟ್ರೀಯ ತಂಡ ಮತ್ತು ಈ ಹಿಂದಿನ ಕ್ಲಬ್‌ಗಳ ಪರ ಆಡುವಾಗ ಗಳಿಸಿದ ಪ್ರಮುಖ ಪ್ರಶಸ್ತಿಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.

ಇದನ್ನೂ ಓದಿ | ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಗೆ ಹೊಸ ನಾಯಕನ ಘೋಷಿಸಿದ ತಮಿಳ್ ತಲೈವಾಸ್; ಸಾಗರ್ ರಥೀ ಕ್ಯಾಪ್ಟನ್

ಮ್ಯೂಸಿಯಂ ಲೋಕಾರ್ಪಣೆ ವೇಳೆ ರೊನಾಲ್ಡೊ ಅವರು ತನ್ನ ಪ್ರತಿಮೆಯ ಪಕ್ಕದಲ್ಲಿ ನಿಂತುಕೊಂಡು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಒಂದೆಡೆ ಈ ಕ್ಷಣವು ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾದರೆ, ಮತ್ತೊಂದೆಡೆ ವಿವಾದವನ್ನು ಹುಟ್ಟುಹಾಕಿದೆ. ರೊನಾಲ್ಡೊ ಪ್ರತಿಮೆಯಲ್ಲಿ‌ ನ್ಯೂನ್ಯತೆ ಇದೆ ಎಂಬ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ.

“ಇದು ನನ್ನ ಕಥೆ. ಮಡೈರಾದಿಂದ (ಪೋರ್ಚುಗಲ್‌ನ ಒಂದು ಪ್ರದೇಶ) ಸೌದಿ ಅರೇಬಿಯಾದಲ್ಲಿ ನನ್ನ ಮ್ಯೂಸಿಯಂ ಈಗ ರಿಯಾದ್‌ನಲ್ಲಿ ತೆರೆಯಲಾಗಿದೆ” ಎಂದು ಮ್ಯೂಸಿಯಂನ ಅಧಿಕೃತ ಖಾತೆ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ಬರೆದುಕೊಳ್ಳಲಾಗಿದೆ.

ಸದ್ಯ ಮ್ಯೂಸಿಯಂ ಕುರಿತು ಸೋಷಿಯಲ್‌ ಮೀಡಿಯಾದಲ್ಲೂ ಚರ್ಚೆಯಾಗುತ್ತಿದೆ. ಸಾಮಾಜಿಕ ಮಾಧ್ಯಮ ವಿಮರ್ಶಕರು ರೊನಾಲ್ಡೊ ಅವರ ಕೇಶವಿನ್ಯಾಸದಲ್ಲಿನ ಬದಲಾವಣೆ ಸೇರಿದಂತೆ ಅವರ ಪ್ರತಿಮೆಯಲ್ಲಿ ಆಗಿರುವ ತಪ್ಪುಗಳನ್ನು ಎತ್ತಿತೋರಿಸಿದ್ದಾರೆ.

ಇದನ್ನೂ ಓದಿ | ಪ್ರೊ ಕಬಡ್ಡಿ ಲೀಗ್-10; ಇಲ್ಲಿದೆ 12 ತಂಡಗಳು, ದುಬಾರಿ ಆಟಗಾರ, ರೈಡರ್ಸ್, ಡಿಫೆಂಡರ್ಸ್ ಪಟ್ಟಿ

ಸೌದಿ ದೇಶದ ಮನರಂಜನಾ ಪ್ರಾಧಿಕಾರದ ಮುಖ್ಯಸ್ಥ ತುರ್ಕಿ ಅಲ್ ಶೇಖ್ ಅವರು, ಈ ಹಿಂದೆ ರಿಯಾದ್ ಸೀಸನ್ ಉತ್ಸವದಲ್ಲಿ ಮಾತನಾಡುತ್ತಾ ಮ್ಯೂಸಿಯಂ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಸದ್ಯ ವಸ್ತುಸಂಗ್ರಹಾಲಯವು ರೊನಾಲ್ಡೊ ಅವರ ವೃತ್ತಿಜೀವನದ ಆರಂಭದಿಂದ ಹಿಡಿದು ಫುಟ್‌ಬಾಲ್ ಕ್ಷೇತ್ರದ ದಿಗ್ಗಜ ಆಟಗಾರನಾಗುವವರೆಗೆ ಕಂಡುಕೊಂಡ ವಿಕಾಸದ ಸಮಗ್ರ ಚಿತ್ರಣವನ್ನು ಜನರಿಗೆ ನೀಡುತ್ತದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ