Lionel Messi: ಫಿಫಾ ವಿಶ್ವಕಪ್ ಅರ್ಹತಾ ಸುತ್ತು; ಈಕ್ವೆಡಾರ್ ವಿರುದ್ಧ ಗೋಲು ಗಳಿಸಿ ಅರ್ಜೆಂಟೀನಾಗೆ ರೋಚಕ ಗೆಲುವು ತಂದುಕೊಟ್ಟ ಮೆಸ್ಸಿ
Sep 08, 2023 10:34 AM IST
ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ.
- FIFA World Cup qualifiers 2023: ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಈಕ್ವೆಡಾರ್ ವಿರುದ್ಧ ಅರ್ಜೆಂಟೀನಾ 1-0 ಅಂತರದ ಗೆಲುವು ಸಾಧಿಸಿತು. ಬ್ಯೂನಸ್ ಐರಿಸ್ನಲ್ಲಿರುವ ಮೋನುಮೆಂಟಲ್ ಕ್ರೀಡಾಂಗಣದಲ್ಲಿ 83 ಸಾವಿರ ಅಭಿಮಾನಿಗಳು ಸಾಕ್ಷಿಯಾಗಿದರು.
ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ (FIFA World Cup qualifiers) ಈಕ್ವೆಡಾರ್ (Argentina vs Ecuador) ವಿರುದ್ಧ ನಡೆದ ಪಂದ್ಯದಲ್ಲಿ ದ್ವಿತೀಯಾರ್ಧದಲ್ಲಿ ಲಿಯೊನೆಲ್ ಮೆಸ್ಸಿ ಸಿಡಿಸಿದ ಭರ್ಜರಿ ಗೋಲಿನ ನೆರವಿನಿಂದ ಅರ್ಜೆಂಟೀನಾ ಅದ್ಭುತ ಗೆಲುವು ದಾಖಲಿಸಿದೆ. ಈಕ್ವೆಡಾರ್ ವಿರುದ್ಧ ಅರ್ಜೆಂಟೀನಾ 1-0 ಅಂತರದ ಗೆಲುವು ಸಾಧಿಸಿತು. ಬ್ಯೂನಸ್ ಐರಿಸ್ನಲ್ಲಿರುವ ಮೋನುಮೆಂಟಲ್ ಕ್ರೀಡಾಂಗಣದಲ್ಲಿ 83 ಸಾವಿರ ಅಭಿಮಾನಿಗಳು ಸಾಕ್ಷಿಯಾಗಿದರು.
ವಿಶ್ವ ಚಾಂಪಿಯನ್ ಅರ್ಜೆಂಟೀನಾ ಆರಂಭದಿಂದಲೂ ಪ್ರಬಲ ದಾಳಿ ನಡೆಸುತ್ತಿತ್ತು. ಇದಕ್ಕೆ ತಕ್ಕದಾದು ಪೈಪೋಟಿಯನ್ನೂ ಈಕ್ವೆಡಾರ್ ನೀಡಿದ್ದು ವಿಶೇಷ. ಉಭಯ ತಂಡಗಳು ಗೋಲು ಗಳಿಸಲು ಸಾಕಷ್ಟು ಹೋರಾಟ ನಡೆಸಿದವು. ಮೊದಲಾರ್ಧ ಗೋಲು ಕಾಣದೆ ಅಂತ್ಯಗೊಂಡಿತು. ದ್ವಿತೀಯಾರ್ಧವು ಮತ್ತಷ್ಟು ರೋಚಕತೆ ಪಂದ್ಯ ತಿರುಗಿತು. ಗೋಲು ಉಭಯ ತಂಡಗಳಿಂದ ಪೈಪೋಟಿ ಏರ್ಪಟ್ಟಿತ್ತು.
ನಾಯಕ ಮೆಸ್ಸಿ 77ನೇ ನಿಮಿಷದಲ್ಲಿ ಫ್ರೀ ಕಿಕ್‌ನಿಂದ ಗೋಲು ಗಳಿಸುವ ಮೂಲಕ ಅರ್ಜೆಂಟೀನಾಗೆ ಮುನ್ನಡೆ ತಂದುಕೊಟ್ಟರು. ಮೇಜರ್ ಸಾಕರ್ ಲೀಗ್ನ ಕ್ಲಬ್ ಇಂಟರ್ ಮಿಯಾಮಿ ತಂಡಕ್ಕೆ ನೀಡಿದ ಪ್ರದರ್ಶನವನ್ನೇ ಮುಂದುವರೆಸಿದ ಮೆಸ್ಸಿ, ಅರ್ಹತಾ ಪಂದ್ಯದಲ್ಲೂ ಭರ್ಜರಿ ಪರ್ಫಾಮೆನ್ಸ್ ನೀಡುವಲ್ಲಿ ಯಶಸ್ಸು ಕಂಡರು. ಅಂಕಪಟ್ಟಿಯಲ್ಲಿ ಅರ್ಜೆಂಟೀನಾ ಮೊದಲ ಸ್ಥಾನದಲ್ಲಿದೆ.
ಉತ್ತಮ ಆಟಗಾರರು ಮತ್ತು ದೈಹಿಕವಾಗಿ ಬಲಿಷ್ಠರಾಗಿರುವ ಶ್ರೇಷ್ಠ ತಂಡದ ವಿರುದ್ಧ ಆಡಿದ್ದೇವೆ. ಪ್ರತಿಯೊಬ್ಬರೂ ಯಾವಾಗಲೂ ಅರ್ಜೆಂಟೀನಾ ತಂಡವನ್ನು ಸೋಲಿಸಲು ಬಯಸುತ್ತಾರೆ. ಈಗ ನಾವು ವಿಶ್ವ ಚಾಂಪಿಯನ್ ಆಗಿದ್ದೇವೆ. ನಾವು ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ, ನಾವು ಏನು ಮಾಡುತ್ತಿದ್ದೇವೆ ಎಂಬುದರ ಮೇಲೆ ಸುಧಾರಿಸಬೇಕಾಗಿದೆ ಎಂದು ಮೆಸ್ಸಿ ಹೇಳಿದ್ದಾರೆ.
ಮೇಜರ್ ಸಾಕರ್ ಲೀಗ್ನ ಇಂಟರ್ ಮಿಯಾಮಿ ತಂಡಕ್ಕೆ ಸೇರಿದಾಗಿನಿಂದ ಮೆಸ್ಸಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಪ್ಯಾರಿಸ್ ಸೇಂಟ್-ಜರ್ಮೈನ್ ಬಳಿಕ ಮೇಜರ್ ಸಾಕರ್ ಲೀಗ್ ಉದ್ಘಾಟನಾ ಲೀಗ್ ಕಪ್‌ನಲ್ಲಿ ಕೇವಲ ಏಳು ಪಂದ್ಯಗಳಲ್ಲಿ 10 ಬಾರಿ ಸ್ಕೋರ್ ಮಾಡುವ ಮೂಲಕ ಮೆಸ್ಸಿ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಗೆದ್ದರು. 2022ರಲ್ಲಿ ಫಿಫಾ ವಿಶ್ವಕಪ್ ಟೂರ್ನಿಯಲ್ಲೂ ಗೋಲ್ಡನ್ ಬೂಟ್ ಗೆದ್ದಿದ್ದರು.
ವಿಶ್ವದಾಖಲೆ ಬರೆದ ಕನ್ನಡಿಗ
ಭಾರತದ ರೋಹನ್ ಬೋಪಣ್ಣ (Rohan Bopanna) 2023ರ ಯುಎಸ್ ಓಪನ್‌ನಲ್ಲಿ (US Open 2023) ಪುರುಷರ ಡಬಲ್ಸ್ ಪ್ರಶಸ್ತಿ ಸುತ್ತಿಗೇರುವ ಮೂಲಕ ಗ್ರ್ಯಾಂಡ್ ಸ್ಲಾಮ್‌ನ ಫೈನಲ್ ತಲುಪಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ವಿಶ್ವದಾಖಲೆ ಬರೆದಿದ್ದಾರೆ. ಲೂಯಿಸ್ ಆರ್ಮ್‌ಸ್ಟ್ರಾಂಗ್ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್ ಜೊತೆಗಾರ ಮ್ಯಾಥ್ಯೂ ಎಬ್ಡೆನ್ (Matthew Ebden) 7-6 (7-3), 6-2 ಸೆಟ್ಗಳ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ.
ಪಿಯರೆ-ಹ್ಯೂಗ್ಸ್ ಹರ್ಬರ್ಟ್ ಮತ್ತು ನಿಕೋಲಸ್ ಮಹುತ್ (Pierre-Hugues Herbert and Nicolas Mahut) ಅವರನ್ನು ಸೋಲಿಸಿದರು. 43 ವರ್ಷದ ಬೋಪಣ್ಣ ಗ್ರ್ಯಾಂಡ್ ಸ್ಲಾಮ್ ಇತಿಹಾಸದಲ್ಲಿ ಪುರುಷರ ಡಬಲ್ಸ್ ಫೈನಲ್ ತಲುಪಿದ್ದು 2ನೇ ಬಾರಿಗೆ ಎಂಬುದು ವಿಶೇಷ. ಕೊನೆಯದಾಗಿ 2010 ಯುಎಸ್ ಓಪನ್‌ನಲ್ಲಿ ಅವರು ಪಾಕಿಸ್ತಾನದ ಐಸಾಮ್-ಉಲ್-ಹಕ್ ಖುರೇಷಿ ಅವರೊಂದಿಗೆ ಪ್ರಶಸ್ತಿ ಹಣಾಹಣಿ ತಲುಪಿದ್ದರು. ಗ್ರ್ಯಾಂಡ್ ಸ್ಲಾಮ್ ಇತಿಹಾಸದಲ್ಲಿ ಫೈನಲ್ಗೇರಿದ ಮೊದಲ ಹಿರಿಯ ಆಟಗಾರ ಎನಿಸಿದ್ದಾರೆ.