logo
ಕನ್ನಡ ಸುದ್ದಿ  /  ಕ್ರೀಡೆ  /  Explained: ಇಎಸ್‌ಎಲ್ ಕುರಿತ ಕೋರ್ಟ್ ತೀರ್ಪಿನಿಂದ ಫುಟ್‌ಬಾಲ್ ಮೇಲಾಗುವ ಪರಿಣಾಮಗಳೇನು?

Explained: ಇಎಸ್‌ಎಲ್ ಕುರಿತ ಕೋರ್ಟ್ ತೀರ್ಪಿನಿಂದ ಫುಟ್‌ಬಾಲ್ ಮೇಲಾಗುವ ಪರಿಣಾಮಗಳೇನು?

Jayaraj HT Kannada

Dec 25, 2023 02:36 PM IST

google News

ಇಎಸ್‌ಎಲ್ ಕುರಿತ ಕೋರ್ಟ್ ತೀರ್ಪಿನಿಂದ ಫುಟ್‌ಬಾಲ್ ಮೇಲಾಗುವ ಪರಿಣಾಮವೇನು (ಸಂಗ್ರಹ ಚಿತ್ರ)

    • European Super League:‌ ಸೂಪರ್ ಲೀಗ್‌ ಕುರಿತು ಯುರೋಪ್ ನ್ಯಾಯಾಲಯದ ತೀರ್ಪು ಬಂದ ಬಳಿಕ ಫುಟ್‌ಬಾಲ್‌ ಕ್ಷೇತ್ರದಲ್ಲಿ ಪ್ರಕ್ಷುಬ್ಧತೆ ಸೃಷ್ಟಿಯಾಗಿದೆ. ಸೂಪರ್ ಲೀಗ್‌ಗೆ UEFA ಮತ್ತು FIFA ವ್ಯಕ್ತಪಡಿಸಿದ ವಿರೋಧವು ಯುರೋಪಿಯನ್‌ ಒಕ್ಕೂಟದ ಕಾನೂನುಗಳನ್ನು ಉಲ್ಲಂಘಿಸಿ ಹೊಸ ಲೀಗ್‌ಗೆ ದಾರಿ ಮಾಡಿಕೊಟ್ಟಿದೆ ಎಂದು ಕೋರ್ಟ್ ಹೇಳಿದೆ.
ಇಎಸ್‌ಎಲ್ ಕುರಿತ ಕೋರ್ಟ್ ತೀರ್ಪಿನಿಂದ ಫುಟ್‌ಬಾಲ್ ಮೇಲಾಗುವ ಪರಿಣಾಮವೇನು (ಸಂಗ್ರಹ ಚಿತ್ರ)
ಇಎಸ್‌ಎಲ್ ಕುರಿತ ಕೋರ್ಟ್ ತೀರ್ಪಿನಿಂದ ಫುಟ್‌ಬಾಲ್ ಮೇಲಾಗುವ ಪರಿಣಾಮವೇನು (ಸಂಗ್ರಹ ಚಿತ್ರ)

ಫುಟ್ಬಾಲ್‌ನ ಅಂತಾರಾಷ್ಟ್ರೀಯ ಮಟ್ಟದ ಆಡಳಿತ ಮಂಡಳಿಯಾದ ಫಿಫಾ (FIFA) ಮತ್ತು ಯುರೋಫ್‌ ಫುಟ್‌ಬಾಲ್‌ನ ಆಡಳಿತ ಮಂಡಳಿ ಯುಇಎಫ್‌ಎ (UEFA) 12 ಕ್ಲಬ್‌ಗಳನ್ನು ಯುರೋಪಿಯನ್ ಸೂಪರ್ ಲೀಗ್ (European Super League -ESL) ರಚನೆಯಿಂದ ತಡೆಯೊಡ್ಡುವುದರ ಮೂಲಕ ಯುರೋಪಿಯನ್‌ ಒಕ್ಕೂಟದ (EU) ಕಾನೂನನ್ನು ಉಲ್ಲಂಘಿಸಿದೆ ಎಂದು ಯುರೋಪಿಯನ್ ಕೋರ್ಟ್ ಆಫ್ ಜಸ್ಟಿಸ್ ತೀರ್ಪು ನೀಡಿದೆ.

ಡಿಸೆಂಬರ್ 21ರ ಗುರುವಾರದಂದು ಸೂಪರ್ ಲೀಗ್‌ ಕುರಿತು ಯುರೋಪ್ ಕೋರ್ಟ್ ತೀರ್ಪು ನೀಡಿದ ಬಳಿಕ ಯುರೋಪ್‌ ಫುಟ್‌ಬಾಲ್‌ ಕ್ಷೇತ್ರದಲ್ಲಿ ಪ್ರಕ್ಷುಬ್ಧತೆ ಸೃಷ್ಟಿಯಾಗಿದೆ. ಸೂಪರ್ ಲೀಗ್‌ಗೆ UEFA ಮತ್ತು FIFA ವ್ಯಕ್ತಪಡಿಸಿದ ವಿರೋಧವು ಯುರೋಪಿಯನ್‌ ಒಕ್ಕೂಟದ ಕಾನೂನುಗಳನ್ನು ಉಲ್ಲಂಘಿಸಿ ಹೊಸ ಲೀಗ್‌ಗೆ ದಾರಿ ಮಾಡಿಕೊಟ್ಟಿದೆ ಎಂದು ಉನ್ನತ ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ | ಅಸ್ತಿತ್ವದಲ್ಲಿದ್ದ ನಿಯಮ ನಿರ್ಲಕ್ಷ್ಯ, ಭಾರತೀಯ ಕುಸ್ತಿ ಫೆಡರೇಷನ್​ ಅಮಾನತು; ಕ್ರೀಡಾ ಸಚಿವಾಲಯ ಆದೇಶ

ರಿಯಲ್ ಮ್ಯಾಡ್ರಿಡ್, ಬಾರ್ಸಿಲೋನಾ ಮತ್ತು ಜುವೆಂಟಸ್ ಸೇರಿದಂತೆ ಯುರೋಪಿನ ಇತರ ಒಂಬತ್ತು ಪ್ರಮುಖ ಕ್ಲಬ್‌ಗಳು ಏಪ್ರಿಲ್ 2021ರಲ್ಲಿ ಇಎಸ್‌ಎಲ್‌ ಅನ್ನು ಘೋಷಿಸಿದವು. ಇದನ್ನು ಕ್ಲೋಸ್‌ಡ್‌ ಫಾರ್ಮ್ಯಾಟ್‌ನಲ್ಲಿ ನಡೆಸುವ ನಿರ್ಧಾರವು ವ್ಯಾಪಕ ಟೀಕೆಗೊಳಗಾಯ್ತು. ಸದ್ಯ ಚರ್ಚೆಯ ವಿಷಯವಾಗಿರುವುದು ಇದೇ ವಿಚಾರ.

ಏನಿದು ಇಎಸ್‌ಎಲ್‌ ಪ್ರಕರಣವೇನು?

ಯುರೋಪಿಯನ್ ಸೂಪರ್ ಲೀಗ್ ಅನ್ನು ರಚಿಸಲು ಸಹಾಯ ಮಾಡುವ ಸಲುವಾಗಿ ರಚಿಸಲಾಗಿದ ಕ್ರೀಡಾ ಅಭಿವೃದ್ಧಿ ಕಂಪನಿಯಾದ A22 ಸಿಇಒ ಆಗಿರುವ ಬರ್ಂಡ್ ರೀಚಾರ್ಟ್ ಅವರು, UEFA ನಡೆಸುತ್ತಿರುವ ಸ್ಪರ್ಧೆಗಳ ಏಕಸ್ವಾಮ್ಯತೆಯನ್ನು ಮುರಿಯಲು ಇಎಸ್‌ಎಲ್‌ ಬಯಸಿದೆ ಎಂದು ಹೇಳಿದರು. ಸುಮಾರು 70 ವರ್ಷಗಳಿಂದ ಯುರೋಪಿಯನ್ ಸ್ಪರ್ಧೆಗಳನ್ನು ಆಯೋಜಿಸಿ, ಇಎಸ್‌ಎಲ್‌ ಅನ್ನು ಗಮನಾರ್ಹ ಬೆದರಿಕೆಯಾಗಿ ಪರಿಗಣಿಸಿದ UEFAನ ಏಕಸ್ವಾಮ್ಯತೆಯನ್ನು ಅವರು ವಿರೋಧಿಸಿದ್ದಾರೆ.

ಯುಇಎಫ್‌ಎ ಮತ್ತು ಫಿಫಾ ಏಕಸ್ವಾಮ್ಯತೆ ಹೊಂದಿದ್ದು, ಅದು ಯುರೋಪಿಯನ್ ಒಕ್ಕೂಟದ ಸ್ಪರ್ಧೆ ಮತ್ತು ಮುಕ್ತ ಚಲನೆಯ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಇಎಸ್‌ಎಲ್‌ ಯುರೋಪಿಯನ್‌ ಸೂಪರ್‌ ಕೋರ್ಟ್‌ ಮೊರೆ ಹೋಗಿದೆ. ಇದರಿಂದ ಒಂಬತ್ತು ಕ್ಲಬ್‌ಗಳು ಹಿಂದೆ ಸರಿಯಿತು. ಆದರೆ, ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ಹಿಂದೆ ಸರಿಯಲಿಲ್ಲ. ಇವೆರಡೂ ಸೇರಿ ಪ್ರಕರಣವನ್ನು ಸ್ಪ್ಯಾನಿಷ್ ನ್ಯಾಯಾಲಯಕ್ಕೆ ಕೊಂಡೊಯ್ದಿತು.

ಯುರೋಪಿಯನ್ ಕೋರ್ಟ್ ಆಫ್ ಜಸ್ಟಿಸ್ ತೀರ್ಪು ಏನು?

ಸೂಪರ್ ಲೀಗ್‌ನ ರಚನೆಯನ್ನು ತಡೆಯುವ ಮೂಲಕ UEFA ಮತ್ತು FIFA ಐರೋಪ್ಯ ಒಕ್ಕೂಟದ ಕಾನೂನನ್ನು ಉಲ್ಲಂಘಿಸಿವೆ. ESLನಲ್ಲಿ ಸ್ಪರ್ಧಿಸಲು ಕ್ಲಬ್‌ಗಳನ್ನು ನಿಷೇಧಿಸುವ ಮೂಲಕ ತಮ್ಮ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿವೆ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ | ಚೊಚ್ಚಲ ಫಿಫಾ ಕ್ಲಬ್ ವಿಶ್ವಕಪ್​ಗೆ ಮುತ್ತಿಕ್ಕಿದ ಮ್ಯಾಂಚೆಸ್ಟರ್ ಸಿಟಿ; 2023ರ 5ನೇ ಟ್ರೋಫಿ ಗೆದ್ದ ಕ್ಲಬ್

ಕ್ರೀಡಾ ಒಕ್ಕೂಟಗಳು ಮಾರುಕಟ್ಟೆಗೆ ಮೂರನೇ ವ್ಯಕ್ತಿಗಳ ಮಧ್ಯಪ್ರವೇಶವನ್ನು ಮಾತ್ರ ನಿರಾಕರಿಸಬಹುದು. ಆದರೆ ನೈಜ ಉದ್ದೇಶಗಳನ್ನು ಸಮರ್ಥಿಸಿಕೊಂಡರೆ ಮಾತ್ರ ಇಂಥಾ ಕ್ರಮ ಕೈಗೊಳ್ಳಬಹುದದು ಎಂದು ನ್ಯಾಯಾಲಯ ಖಡಕ್‌ ಎಚ್ಚರಿಕೆ ನೀಡಿದೆ. “FIFA ಮತ್ತು UEFA ನಿಯಮಗಳಿಗೆ ಯಾವುದೇ ನಿರ್ಧಿಷ್ಢ ಚೌಕಟ್ಟು ಇಲ್ಲ. ಅವುಗಳು ಪಾರದರ್ಶಕ, ವಸ್ತುನಿಷ್ಠ, ತಾರತಮ್ಯರಹಿತ ಮತ್ತು ಪ್ರಮಾಣಿಕವಾಗಿರಬೇಕು ಅಷ್ಟೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಐರೋಪ್ಯ ಒಕ್ಕೂಟದ ಕಾನೂನು ಅಥವಾ ಒಕ್ಕೂಟದ ಕಾಯಿದೆಯ ಸಿಂಧುತ್ವವನ್ನು ಮಾತ್ರ ಕೋರ್ಟ್ ಆಫ್ ಜಸ್ಟಿಸ್ ವಿವರಿಸಿದೆ. ಆದರೆ, ವಿವಾದಕ್ಕೆ ಸುಖಾಂತ್ಯದ ತೀರ್ಪು ಕೊಟ್ಟಿಲ್ಲ.

ತೀರ್ಪಿನಿಂದ ಫುಟ್ಬಾಲ್‌ ರಂಗದಲ್ಲಾಗುವ ಬದಲಾವಣೆಗಳೇನು?

ಕೋರ್ಟ್‌ ತೀರ್ಪಿನ ಪ್ರಕಾರ, ಯುರೋಪಿನ ಫುಟ್ಬಾಲ್‌ ಕ್ಲಬ್‌ಗಳು ಮುಂದೆ ಯಾವುದೇ ಖಂಡಗಳಲ್ಲಿ ನಡೆಯುವ ಕಾಂಟಿನೆಂಟಲ್ ಲೀಗ್‌ನಲ್ಲಿ ಆಡಬಹುದು. ಯುಇಎಫ್‌ಎ ನಡೆಸುವ ಸ್ಪರ್ಧೆಗಳಲ್ಲಿ ಮಾತ್ರವೇ ಭಾಗವಹಿಸಬೇಕು ಎಂಬ ನಿಬಂಧನೆಗಳ ಎಲ್ಲೆ ಇಲ್ಲದೆ ಸ್ಪರ್ಧಿಸಬಹುದು. ಅಥವಾ ಯುಇಎಫ್‌ಎ ಹೇರುವ ನಿರ್ಬಂಧಗಳ ಭೀತಿಗೆ ಒಳಗಾಗಬೇಕಿಲ್ಲ.

ಕೋರ್ಟ್‌ ತೀರ್ಪಿನ ನಂತರ, A22 ಹೊಸ ಲೀಗ್‌ ಅನ್ನು ಪ್ರಸ್ತಾಪಿಸಿದೆ. ಯುರೋಪ್‌ನಾದ್ಯಂತ ನಡೆಸುವ ಲೀಗ್ ವ್ಯವಸ್ಥೆಯಲ್ಲಿ 64 ಪುರುಷರ ಮತ್ತು 32 ಮಹಿಳಾ ತಂಡಗಳೊಂದಿಗೆ ಆಡುವ ಪ್ರಸ್ತಾಪ ಬಿಡುಗಡೆ ಮಾಡಿದೆ.

ಈ ಹಿಂದೆ ಇದ್ದ ಸೂಪರ್ ಲೀಗ್ ಪಂದ್ಯಾವಳಿ ಯೋಜನೆಯು ಮುಚ್ಚಿದ ಸ್ವರೂಪದ (Clossed Format) ಸ್ಪರ್ಧೆಯಾಗಿತ್ತು. ಹೊಸ ಲೀಗ್‌ ವ್ಯವಸ್ಥೆಯಲ್ಲಿ ಕ್ರೀಡಾ ಅರ್ಹತೆಯ ಆಧಾರದ ಮೇಲೆ ಕ್ಲಬ್‌ಗಳು ಭಾಗವಹಿಸಬಹುದು. ಅಂದರೆ, ಇಲ್ಲಿ ಯಾವುದೇ ಕ್ಲಬ್‌ಗಳಿಗೆ ಶಾಶ್ವತ ಸದಸ್ಯತ್ವ ಇರುವುದಿಲ್ಲ. ಅಲ್ಲದೆ ಕ್ಲಬ್‌ಗಳು ತಮ್ಮ ದೇಶೀಯ ಲೀಗ್‌ಗಳಲ್ಲಿಯೂ ಆಡುತ್ತವೆ. ಅತ್ತ ಕೆಲವೊಂದು ಪ್ರೀಮಿಯರ್ ಲೀಗ್ ಕ್ಲಬ್‌ಗಳು ಹೊಸ ಸ್ಪರ್ಧೆಯಲ್ಲಿ ಆಡುವ ಉತ್ಸಾಹ ತೋರುವ ಕುರಿತು ಸ್ಪಷ್ಟತೆ ಇಲ್ಲ.

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ