logo
ಕನ್ನಡ ಸುದ್ದಿ  /  ಕ್ರೀಡೆ  /  ಏಷ್ಯನ್​ ಗೇಮ್ಸ್​ನಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋತು ಹೊರಬಿದ್ದ ಭಾರತ ಫುಟ್ಬಾಲ್ ತಂಡ

ಏಷ್ಯನ್​ ಗೇಮ್ಸ್​ನಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋತು ಹೊರಬಿದ್ದ ಭಾರತ ಫುಟ್ಬಾಲ್ ತಂಡ

HT Kannada Desk HT Kannada

Sep 28, 2023 11:00 PM IST

google News

ಏಷ್ಯನ್​ ಗೇಮ್ಸ್​ನಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋತು ಭಾರತ ಫುಟ್ಬಾಲ್ ತಂಡ.

    • Asian Games 2023: ಏಷ್ಯನ್ ಗೇಮ್ಸ್​​ನಲ್ಲಿ ಭಾರತ ಫುಟ್ಬಾಲ್ ತಂಡವು ಸೋತು ತನ್ನ ಅಭಿಯಾನ ಮುಗಿಸಿದೆ. 16ನೇ ಸುತ್ತಿನಲ್ಲಿ ಸೌದಿ ಅರೇಬಿಯಾ ವಿರುದ್ಧ 2-0 ಅಂತರದಲ್ಲಿ ಸೋಲು ಕಂಡಿದೆ.
ಏಷ್ಯನ್​ ಗೇಮ್ಸ್​ನಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋತು ಭಾರತ ಫುಟ್ಬಾಲ್ ತಂಡ.
ಏಷ್ಯನ್​ ಗೇಮ್ಸ್​ನಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋತು ಭಾರತ ಫುಟ್ಬಾಲ್ ತಂಡ.

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​​ನಲ್ಲಿ ಭಾರತ ಫುಟ್ಬಾಲ್ ತಂಡದ ಅದ್ಭುತ ಅಭಿಯಾನ ಕೊನೆಗೊಂಡಿದೆ. ಸುನಿಲ್ ಛೆಟ್ರಿ ನಾಯಕತ್ವದ ಭಾರತೀಯ ಪುರುಷರ ಫುಟ್ಬಾಲ್ ತಂಡವು ಸ್ಪರ್ಧೆಯಿಂದ ಹೊರಬಿದ್ದಿದೆ. 16ನೇ ಸುತ್ತಿನಲ್ಲಿ ನಡೆದ ಪಂದ್ಯದಲ್ಲಿ ಬಲಿಷ್ಠ ಸೌದಿ ಅರೇಬಿಯಾದ ವಿರುದ್ಧ 2-0 ಅಂತರದಲ್ಲಿ ಸೋಲನುಭವಿಸಿತು. 2ನೇ ಅವಧಿಯಲ್ಲಿ ಅರೇಬಿಯಾದ ಖಲೀಲ್ ಮರ್ರಾನ್​ 2 ಗೋಲು ಗಳಿಸಿ ಭಾರತದ ಸೋಲಿಗೆ ಕಾರಣರಾದರು.

ಹುವಾಂಗ್‌ಲಾಂಗ್ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂನಲ್ಲಿ ನಡೆದ 16ನೇ ಸುತ್ತಿನ ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದ ಸೌದಿ ಅರೇಬಿಯಾ ಕ್ವಾರ್ಟರ್​ ಫೈನಲ್​ ಪ್ರವೇಶಿಸಿತು. ಮೊದಲ ಅವಧಿಯಲ್ಲಿ ಉಭಯ ತಂಡಗಳಿಂದಲೂ ಸಮಬಲದ ಹೋರಾಟ ನಡೆಯಿತು. ಹಾಗಾಗಿ, ಮೊದಲಾರ್ಧ ಯಾವುದೇ ಗೋಲು ಇಲ್ಲದೆ ಅಂತ್ಯಗೊಂಡಿತು. ಗುಂಪು ಹಂತದಲ್ಲಿ ಮ್ಯಾನ್ಮಾರ್‌ ತಂಡದೊಂಡಿಗೆ 1-1 ಡ್ರಾ ಸಾಧಿಸಿದ್ದ ಭಾರತ, ಪ್ರೀ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿತ್ತು.

ದ್ವಿತೀಯಾರ್ಧದಲ್ಲಿ 2 ಗೋಲು

ಪಂದ್ಯದ ಆರಂಭದಿಂದಲೂ ಉಭಯ ತಂಡಗಳಿಂದಲೂ ಜಿದ್ದಾಜಿದ್ದಿನ ಹೋರಾಟ ನಡೆದ ಕಾರಣ ಮೊದಲಾರ್ಧ ಯಾವುದೇ ಗೋಲು ಇಲ್ಲದೆ ಅಂತ್ಯ ಕಂಡಿತು. ಆದರೆ ಎರಡನೇ ಅವಧಿ ಆರಂಭಗೊಂಡ 10 ನಿಮಿಷಗಳ ಅವಧಿಯಲ್ಲೇ ಸೌದಿ ಅರೇಬಿಯಾ ಎರಡು ಗೋಲು ಗಳಿಸಿ, ಭಾರತದ ಸೋಲನ್ನು ಖಚಿತಪಡಿಸಿತು. ಆ ಬಳಿಕ ಗೋಲು ಗಳಿಸಲು ಸುನಿಲ್ ಛೆಟ್ರಿ ಬಳಗ ಎಷ್ಟೇ ಪ್ರಯತ್ನಿಸಿದರೂ ಚೆಂಡನ್ನು ಗೋಲು ಅಂಕಣದೊಳಗೆ ಸೇರಿಸಲು ಸಾಧ್ಯವಾಗಲಿಲ್ಲ. ಕಾರಣ ಸೋಲೊಪ್ಪಿಕೊಳ್ಳಬೇಕಾಯಿತು.

ವಿಶ್ವಕಪ್ ಆಸ್ಟ್ರೇಲಿಯಾ ತಂಡದಲ್ಲಿ ಬದಲಾವಣೆ

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ (ODI World Cup 2023) ಕೆಲವೇ ದಿನಗಳು ಬಾಕಿ ಇರುವಾಗ ಆಸ್ಟ್ರೇಲಿಯಾ ತಂಡದಲ್ಲಿ ಮಹತ್ವದ ಬದಲಾವಣೆ ಕಂಡಿದೆ. ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ತನ್ನ 15 ಸದಸ್ಯರ ಅಂತಿಮ ತಂಡವನ್ನು ಘೋಷಿಸಿದೆ. ತಂಡದಲ್ಲಿ ಒಂದು ಪ್ರಮುಖ ಬದಲಾವಣೆಯಾಗಿದೆ. ತಂಡದ ಅನುಭವಿ ಸ್ಪಿನ್ನರ್ ಆಶ್ಟನ್ ಅಗರ್ (Ashton Agar) ಇಂಜುರಿಯಿಂದ ಹೊರಗುಳಿದಿದ್ದು, ಅನುಭವಿ ಬ್ಯಾಟರ್ ಮಾರ್ನಸ್ ಲಬುಶೇನ್​ರನ್ನು (Marnus Labuschagne) ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಅನುಭವಿ ಅಶ್ವಿನ್​ಗೆ ಅದೃಷ್ಟ, ಗಾಯಾಳು ಅಕ್ಷರ್​ಗೆ ದುರಾದೃಷ್ಟ

ಏಕದಿನ ವಿಶ್ವಕಪ್​ ಟೂರ್ನಿಗೂ (ODI World Cup 2023) ಮುನ್ನವೇ ಭಾರತ ತಂಡಕ್ಕೆ (Team India) ಆಘಾತವಾಗಿದೆ. ತಂಡಕ್ಕೆ ಆಯ್ಕೆಯಾಗಿದ್ದ ಪ್ರಮುಖ ಆಲ್​ರೌಂಡರ್ ಇಂಜುರಿ ಕಾರಣ ಹೊರಬಿದ್ದಿದ್ದಾರೆ. ಗಾಯದ ಸಮಸ್ಯೆಗೆ ತುತ್ತಾಗಿ ಫಿಟ್​ನೆಸ್​ ಸಾಬೀತುಪಡಿಸಲು ವಿಫಲರಾದ ಭಾರತ ತಂಡದ ಸ್ಪಿನ್​ ಆಲ್​ರೌಂಡರ್​​ ಅಕ್ಷರ್​ ಪಟೇಲ್ (Axar Patel)​ ಏಕದಿನ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಏಕದಿನ ವಿಶ್ವಕಪ್​ಗೆ ಅಂತಿಮ ತಂಡ ಪ್ರಕಟವಾಗಿದ್ದು, ಅನುಭವಿ ಆಟಗಾರ, ಆಫ್​ ​ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್​​ಗೆ (Ravichandran Ashwin) ಅಂತಿಮ 15ರ ತಂಡದಲ್ಲಿ ಅವಕಾಶ ನೀಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ