logo
ಕನ್ನಡ ಸುದ್ದಿ  /  ಕ್ರೀಡೆ  /  ಒಲಿಂಪಿಕ್ಸ್‌ನಲ್ಲಿ ಭಾರತ ಧರಿಸುವ ಔಪಚಾರಿಕ ಉಡುಗೆ ಮಂಗೋಲಿಯಾ ಸಮವಸ್ತ್ರಕ್ಕೆ ಹೋಲಿಕೆ; ಚೆನ್ನಾಗಿಲ್ಲ ಎಂದ ವ್ಯಕ್ತಿ

ಒಲಿಂಪಿಕ್ಸ್‌ನಲ್ಲಿ ಭಾರತ ಧರಿಸುವ ಔಪಚಾರಿಕ ಉಡುಗೆ ಮಂಗೋಲಿಯಾ ಸಮವಸ್ತ್ರಕ್ಕೆ ಹೋಲಿಕೆ; ಚೆನ್ನಾಗಿಲ್ಲ ಎಂದ ವ್ಯಕ್ತಿ

Jayaraj HT Kannada

Jul 16, 2024 05:48 PM IST

google News

ಒಲಿಂಪಿಕ್ಸ್‌ನಲ್ಲಿ ಭಾರತ ಧರಿಸುವ ಔಪಚಾರಿಕ ಉಡುಗೆ ಮಂಗೋಲಿಯಾ ಸಮವಸ್ತ್ರಕ್ಕೆ ಹೋಲಿಕೆ

    • 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಕರೀಡಾಪಟುಗಳು ತೊಡುವ ಸಾಂಪ್ರದಾಯಿಕ ಉಡುಗೆ ಕುರಿತು ವ್ಯಕ್ತಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವುಗಳನ್ನು ಮಂಗೋಲಿಯದ ಸಮವಸ್ತ್ರಕ್ಕೆ ಹೋಲಿಸಿದ ಅವರು, ವಿನ್ಯಾಸ ಮಾಡಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಭಾರತ ಧರಿಸುವ ಔಪಚಾರಿಕ ಉಡುಗೆ ಮಂಗೋಲಿಯಾ ಸಮವಸ್ತ್ರಕ್ಕೆ ಹೋಲಿಕೆ
ಒಲಿಂಪಿಕ್ಸ್‌ನಲ್ಲಿ ಭಾರತ ಧರಿಸುವ ಔಪಚಾರಿಕ ಉಡುಗೆ ಮಂಗೋಲಿಯಾ ಸಮವಸ್ತ್ರಕ್ಕೆ ಹೋಲಿಕೆ (Screengrab)

ಪ್ಯಾರಿಸ್‌ ಒಲಿಂಪಿಕ್ಸ್‌ 2024ರಲ್ಲಿ ಭಾಗವಹಿಸಲು ಭಾರತದ ಕ್ರೀಡಾಪಟುಗಳು ಸಜ್ಜಾಗಿದ್ದಾರೆ. ಜಾಗತಿಕ ಕ್ರೀಡಾಹಬ್ಬದ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ವಾರಗಳ ಹಿಂದಷ್ಟೇ ನವದೆಹಲಿಯಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಕ್ರೀಡಾಪಟುಗಳಿಗೆ ಆಯೋಜಿಸಿದ್ದ ಔಪಚಾರಿಕ ಬೀಳ್ಕೊಡುಗೆ ಸಮಾರಂಭದಲ್ಲಿ, 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತೀಯ ತಂಡದ ಹೊಸ ಕಿಟ್‌ ಅನಾವರಣಗೊಳಿಸಲಾಯ್ತು. ಆಟಗಾರರ ಔಪಚಾರಿಕ ಉಡುಗೆ, ಆಟದ ಕಿಟ್, ಶೂ ಹಾಗೂ ಪ್ರಯಾಣದ ವೇಳೆ ಬಳಸುವ ಇತರ ಸಾಧನಗಳನ್ನು ಅನಾವರಣಗೊಳಿಸಲಾಯಿತು. ಈ ಉಡುಗೆ ಕೆಲವೊಬ್ಬರಿಗೆ ಇಷ್ಟವಾದರೆ, ಇನ್ನೂ ಕೆಲವೊಬ್ಬರು ಚೆನ್ನಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ, ವ್ಯಕ್ತಿಯೊಬ್ಬರು ಭಾರತೀಯ ಉಡುಪುಗಳ ಬಗ್ಗೆ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ಒಲಿಂಪಿಕ್ಸ್‌ ಉದ್ಘಾಟನಾ ದಿನ ಭಾರತೀಯ ಕ್ರೀಡಾಳುಗಳು ತೊಡುವ ಉಡುಪುಗಳು ಮಂಗೋಲಿಯಾ ದೇಶದ ಅಧಿಕೃತ ಸಮವಸ್ತ್ರದಂತಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಅವರು ಟೀಮ್ ಇಂಡಿಯಾದ ಸಮವಸ್ತ್ರವು ಸ್ವಲ್ಪವೂ ಚೆನ್ನಾಗಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

“ಭಾರತದ ಒಲಿಂಪಿಕ್ ಸಮವಸ್ತ್ರವನ್ನು ನೋಡಿದರೆ ಮಂಗೋಲಿಯಾದ ಸಮಸವಸ್ತ್ರದಂತಿದೆ. ನಾವು ಮಾಡುವ ಪ್ರತಿಯೊಂದು ಕೆಲಸವೂ ಚೆನ್ನಾಗಿರಬಾರದು ಎಂಬಂತೆ ಮಾಡುತ್ತೇವೆ,” ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ಎರಡು ಚಿತ್ರಗಳನ್ನು ಹಂಚಿಕೊಂಡಿರುವ ಅವರು ಭಾರತದ ಉಡುಪು ಹಾಗೂ ಮಂಗೋಲಿಯಾದ ಉಡುಪನ್ನು ತೋರಿಸಿದ್ದಾರೆ.

ವ್ಯಕ್ತಿ ಹಂಚಿಕೊಂಡಿರುವ ಪೋಸ್ಟ್

ಈ ಬಗ್ಗೆ ಇನ್ನಷ್ಟು ಹೇಳಿದ ವ್ಯಕ್ತಿ, “ಇದನ್ನು 'ಡಿಸೈನ್‌ ಹೌಸ್'‌ ವಿನ್ಯಾಸ ಮಾಡಿದೆ. ಇದೇ ಸಂಸ್ಥೆ ಅಂಬಾನಿ ಮದುವೆಗೆ ಬಟ್ಟೆ ವಿನ್ಯಾಸಗೊಳಿಸಿದೆ. ಅವರು ರಾಷ್ಟ್ರವನ್ನು ಪ್ರತಿನಿಧಿಸುವ ಉಡುಪು ಅಥವಾ ದೇಶಕ್ಕಾಗಿ ಉತ್ತಮ ವಿನ್ಯಾಸ ರಚಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ ಎಂಬುದನ್ನು ಇದು ತೋರಿಸುತ್ತದೆ. ದೇಶಕ್ಕಾಗಿ ಕಡಿಮೆ ಪ್ರಯತ್ನ ನೀಡಿ ಸೆಲೆಬ್ರಿಟಿಗಳತ್ತ ಸಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.

ಈ ಪೋಸ್ಟ್ ಬಗ್ಗೆ ಎಕ್ಸ್‌ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ. ಪೋಸ್ಟರ್ ವೀಕ್ಷಿಸಿದ ವ್ಯಕ್ತಿಯೊಬ್ಬರು ‘ಇದು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಉಡುಗೆಯಂತಿದೆ’ ಎಂದು ಬರೆದಿದ್ದಾರೆ. ಇನ್ನೊಬ್ಬರು ಕಾಮೆಂಟ್‌ ಮಾಡಿ, ‘ಭಾರತದಲ್ಲಿ ಅನೇಕ ಸಾಂಪ್ರದಾಯಿಕ ಉಡುಗೆಗಳಿವೆ. ಒಲಿಂಪಿಕ್ ಸಮವಸ್ತ್ರವನ್ನು ರಚಿಸಲು ಇವುಗಳಲ್ಲಿ ಯಾವುದನ್ನಾದರೂ ಅಳವಡಿಸಿಕೊಳ್ಳಿ. ವೃತ್ತಿಪರ ವಿನ್ಯಾಸಕರ ಬದಲು ಇದನ್ನು ಎನ್ಐಎಫ್ಟಿಯಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧೆಯಾಗಿ ನೀಡಿ’ ಎಂದು ಸಲಹೆ ನೀಡಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ