logo
ಕನ್ನಡ ಸುದ್ದಿ  /  ಕ್ರೀಡೆ  /  Sakshi Malik: ರಾಜಿ ಮಾಡಿಕೊಳ್ಳಲು ಒತ್ತಡ ಹೆಚ್ಚಾಗ್ತಿದೆ; ಅಪ್ರಾಪ್ತೆ ಕುಸ್ತಿಪಟು ತಂದೆ ಹೇಳಿಕೆ ಬದಲಿಸಿದ್ದಕ್ಕೆ ಸಾಕ್ಷಿ ಮಲಿಕ್ ಸ್ಪಷ್ಟನೆ

Sakshi Malik: ರಾಜಿ ಮಾಡಿಕೊಳ್ಳಲು ಒತ್ತಡ ಹೆಚ್ಚಾಗ್ತಿದೆ; ಅಪ್ರಾಪ್ತೆ ಕುಸ್ತಿಪಟು ತಂದೆ ಹೇಳಿಕೆ ಬದಲಿಸಿದ್ದಕ್ಕೆ ಸಾಕ್ಷಿ ಮಲಿಕ್ ಸ್ಪಷ್ಟನೆ

Prasanna Kumar P N HT Kannada

Jun 10, 2023 06:32 PM IST

google News

ನಮ್ಮ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದ ಸಾಕ್ಷಿ ಮಲಿಕ್​

    • ರಾಜಿ ಮಾಡಿಕೊಳ್ಳಲು ನಮ್ಮ ಮೇಲೆ ಹೆಚ್ಚು ಬರುತ್ತಿದೆ. ಬ್ರಿಜ್​ಭೂಷಣ್​ ಸಿಂಗ್ ((Brij Bhushan Sharan Singh))​ ಅವರು ನಮ್ಮವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಾಕ್ಷಿ ಮಲಿಕ್ (Sakshi Malik) ಆರೋಪಿಸಿದ್ದಾರೆ.
ನಮ್ಮ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದ ಸಾಕ್ಷಿ ಮಲಿಕ್​
ನಮ್ಮ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದ ಸಾಕ್ಷಿ ಮಲಿಕ್​

ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳದ (Sexual Harassment) ಆರೋಪ ಹೊರಿಸಿದ ಏಳು ಮಹಿಳಾ ಕುಸ್ತಿಪಟುಗಳ ಪೈಕಿ ಅಪ್ರಾಪ್ತ ವಯಸ್ಕ ಕುಸ್ತಿಪಟು ಅವರ ತಂದೆ ಒತ್ತಡದಲ್ಲಿ ತನ್ನ ಹೇಳಿಕೆ ಬದಲಾಯಿಸಿದ್ದಾರೆ ಎಂದು ಒಲಿಂಪಿಯನ್ ಸಾಕ್ಷಿ ಮಲಿಕ್ (Sakshi Malik) ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ರಾಜಿ ಮಾಡಿಕೊಳ್ಳಲು ನಮ್ಮ ಮೇಲೆ ಹೆಚ್ಚು ಬರುತ್ತಿದೆ. ಬ್ರಿಜ್​ಭೂಷಣ್​ ಸಿಂಗ್​ ಅವರು ನಮ್ಮವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಾಕ್ಷಿ ಮಲಿಕ್ ಆರೋಪಿಸಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧದ ಪ್ರತಿಭಟನೆಗೆ ದೇಶದ ಅಗ್ರ ಕುಸ್ತಿಪಟುಗಳಾದ ಬಜರಂಗ್ ಪುನಿಯಾ (Bajrang Punia), ಸಾಕ್ಷಿ ಮಲಿಕ್, ವಿನೇಶ್ ಪೋಗಾಟ್ (Vinesh Phogat) ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದಾರೆ.

ಬ್ರಿಜ್​​ ಭೂಷಣ್​ ತುಂಬಾ ಪ್ರಭಾವಿ ಆಗಿದ್ದಾರೆ. ಹಾಗಾಗಿ ದೂರನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಿದ್ದರಿಂದ ಅಪ್ರಾಪ್ತ ವಯಸ್ಕನ ತಂದೆ ಖಿನ್ನತೆಗೆ ಒಳಗಾಗಿದ್ದಾರೆ. ತನಿಖೆಯನ್ನು ಹಳಿ ತಪ್ಪಿಸಲು, ದೂರುದಾರರು ಮತ್ತು ಸಾಕ್ಷಿಗಳನ್ನು ಬೆದರಿಸುತ್ತಿದ್ದಾರೆ. ಇದಕ್ಕೆ ಜಗ್ಗದೆ ನಾವು ಮೊದಲ ದಿನದಿಂದ ಬಂಧಿಸಿ ಕಸ್ಟಡಿಗೆ ವಿಚಾರಣೆಗೆ ಒತ್ತಾಯಿಸುತ್ತಿದ್ದೇವೆ ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.

ಪೊಲೀಸರ ತನಿಖೆ ಮೇಲೆ ನಂಬಿಕೆ ಇಲ್ಲ

ಬ್ರಿಜ್ ಭೂಷಣ್ ಸಿಂಗ್ ಅವರ ಬಂಧನವಿಲ್ಲದೆ, ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ. ಆತನ ಬಂಧನದ ಬೇಡಿಕೆಯಿಂದ ನಾವು ಹಿಂದೆ ಸರಿಯುವುದಿಲ್ಲ. ಪೊಲೀಸರ ತನಿಖೆಯ ಮೇಲೆ ನಮಗೆ ನಂಬಿಕೆ ಇಲ್ಲ. ಭಾರತೀಯ ಕುಸ್ತಿ ಫೆಡರೇಷನ್​ನಲ್ಲಿ ಬ್ರಿಜ್​ಭೂಷಣ್​ ಸಿಂಗ್​ ಇದ್ದರು. ಆದರೆ ಪೊಲೀಸರು ಇಲ್ಲವೆಂದು ಸುಳ್ಳು ಹೇಳಿದ್ದಾರೆ. ಮಹಿಳಾ ಕುಸ್ತಿಪಟು ಫೆಡರೇಷನ್​​ ಕಚೇರಿಗೆ ಹೋಗಿ ನೋಡಿದ್ದಾರೆ. ಇಡೀ ವ್ಯವಸ್ಥೆಯು ಬ್ರಿಜ್ ಭೂಷಣ್ ಸಿಂಗ್ ಅವರನ್ನು ರಕ್ಷಿಸುತ್ತಿದೆ ಎಂದು ಬಜರಂಗ್​ ಪೂನಿಯಾ ಆರೋಪಿಸಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ನೀಡಿರುವ ತನಿಖೆಯ ಗಡುವು ಜೂನ್ 15ರ ನಂತರ ಭವಿಷ್ಯದ ಕಾರ್ಯತಂತ್ರಗಳನ್ನು ಯೋಜಿಸುತ್ತಿದ್ದೇವೆ. ಎಲ್ಲವನ್ನೂ ಹೇಳಿದ್ದೇವೆ. ಹಾಗಾಗಿ ಬಲವಾದ ಆರೋಪಪಟ್ಟಿ ಸಲ್ಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತೊಂದೆಡೆ ರೆಸ್ಲಿಂಗ್​​​ ರೆಫ್ರಿ ಜಗ್ಬೀರ್ ಸಿಂಗ್ (Jagbir Singh)​ ಅವರು ಕುಸ್ತಿಪಟುಗಳ ಆರೋಪಗಳು ನಿಜವೆಂದು ಹೇಳಿದ್ದಾರೆ.

ಆರೋಪಗಳು ನಿಜ ಎಂದ ಜಗ್ಬೀರ್

2022ರ ಲಕ್ನೊ​ದಲ್ಲಿ ನಡೆ​ದ ಏಷ್ಯನ್‌ ಚಾಂಪಿ​ಯ​ನ್‌​ಶಿಪ್‌ ಟೂರ್ನಿಯ ಮುಗಿದ ಬಳಿಕ ತಂಡದ ಫೋಟೋಶೂಟ್​ ನಡೆದ ಸಂದರ್ಭದಲ್ಲಿ ಕುಸ್ತಿಪಟು ಪಕ್ಕದಲ್ಲೇ ಬ್ರಿಜ್​ಭೂಷಣ್​ ನಿಂತಿದ್ದರು. ಆ ವೇಳೆ ಆಕೆಯ ಅಲ್ಲಿಂದ ಮುಂದಿನ ಸಾಲಿಗೆ ಬಂದು ನಿಂತಳು. ಆಕೆಯ ಪೃಷ್ಠದ ಮೇಲೆ ಕೈ ಹಾಕಿದ್ದನ್ನು ನಾನು ನೋಡಿದೆ. ಆಕೆ ಮುಂದೆ ಹೋಗಲು ಯತ್ನಿಸಿದಾಗ ಭುಜವನ್ನು ಮೇಲೆ ಕೈ ಹಾಕಿ ಎಳೆದರು. ಮುಖ್ಯಸ್ಥರ ವರ್ತನೆಯಿಂದ ಆ ಕುಸ್ತಿಪಟುವಿಗೆ ತುಂಬಾ ಮುಜುಗರಕ್ಕೆ ಒಳಗಾದರು. ಮುಖ್ಯಸ್ಥರೇ ತಮ್ಮ ಪಕ್ಕ ನಿಂತುಕೊಳ್ಳುವಂತೆ ಕುಸ್ತಿಪಟುಗಳಿಗೆ ಹೇಳುತ್ತಿದ್ದರು ಎಂದು ಜಗ್ಬೀರ್‌ ವಿವರಿಸಿದ್ದಾರೆ.

ನೇಣು ಹಾಕಿಕೊಳ್ಳುತ್ತೇನೆ ಎಂದಿದ್ದ ಮುಖ್ಯಸ್ಥ

ನನ್ನ ವಿರುದ್ಧ ಒಂದೇ ಒಂದು ಆರೋಪ ಸಾಬೀತಾದರೂ ನೇಣು ಹಾಕಿಕೊಳ್ಳುತ್ತೇನೆ. ನಿಮ್ಮ ಬಳಿ (ಕುಸ್ತಿಪಟುಗಳು) ಏನಾದರೂ ಸಾಕ್ಷ್ಯಾಧಾರಗಳಿದ್ದರೆ, ಅದನ್ನು ಕೋರ್ಟ್‌ಗೆ ಹಾಜರುಪಡಿಸಿ. ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ ಎಂದು ಬ್ರಿಜ್​ಭೂಷಣ್​ ಸಿಂಗ್​​ ಈ ಹಿಂದೆ ಹೇಳಿದ್ದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ