logo
ಕನ್ನಡ ಸುದ್ದಿ  /  ಕ್ರಿಕೆಟ್  /  India Vs Ireland: ಮೊದಲ ಟಿ20 ಪಂದ್ಯದಲ್ಲಿ ಬೌಲಿಂಗ್ ಆಯ್ಕೆ ಮಾಡಿದ ಭಾರತ; ಟೀಮ್ ಇಂಡಿಯಾಗೆ ರಿಂಕು ಸಿಂಗ್, ಪ್ರಸಿದ್ಧ್ ಕೃಷ್ಣ ಪದಾರ್ಪಣೆ

India vs Ireland: ಮೊದಲ ಟಿ20 ಪಂದ್ಯದಲ್ಲಿ ಬೌಲಿಂಗ್ ಆಯ್ಕೆ ಮಾಡಿದ ಭಾರತ; ಟೀಮ್ ಇಂಡಿಯಾಗೆ ರಿಂಕು ಸಿಂಗ್, ಪ್ರಸಿದ್ಧ್ ಕೃಷ್ಣ ಪದಾರ್ಪಣೆ

Jayaraj HT Kannada

Aug 18, 2023 07:19 PM IST

google News

ಭಾರತ ಐರ್ಲೆಂಡ್‌ ಮೊದಲ ಟಿ20 ಪಂದ್ಯ

    • India vs Ireland: ಟೀಮ್‌ ಇಂಡಿಯಾಗೆ ಇಂದು ಇಬ್ಬರು ಯುವ ಕ್ರಿಕೆಟಿಗರು ಪದಾರ್ಪಣೆ ಮಾಡುತ್ತಿದ್ದಾರೆ. ಇಂದಿನ ಪಂದ್ಯದ ಮೂಲಕ ಐಪಿಎಲ್‌ ಸೆನ್ಸೇಷನ್‌ ರಿಂಕು ಸಿಂಗ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಪದಾರ್ಪಣೆ ಮಾಡುತ್ತಿದ್ದಾರೆ. ಇದೇ ವೇಳೆ ಪ್ರಸಿದ್ಧ್‌ ಕೃಷ್ಣ ಕೂಡಾ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.
ಭಾರತ ಐರ್ಲೆಂಡ್‌ ಮೊದಲ ಟಿ20 ಪಂದ್ಯ
ಭಾರತ ಐರ್ಲೆಂಡ್‌ ಮೊದಲ ಟಿ20 ಪಂದ್ಯ (BCCI)

ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು ಸೋತಿರುವ ಟೀಮ್ ಇಂಡಿಯಾ, ಐರ್ಲೆಂಡ್ (Ireland vs India 1st T20I)​ ವಿರುದ್ಧ ಮತ್ತೊಂದು ವಿದೇಶಿ ಸರಣಿಯಲ್ಲಿ ಶುಕ್ರವಾರದಿಂದ (ಆಗಸ್ಟ್ 18) ಕಣಕ್ಕಿಳಿಯುತ್ತಿದೆ. ಮೊದಲ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡವು ನಿರೀಕ್ಷೆಯಂತೆಯೇ ಮೊದಲಿಗೆ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಭಾರತ ತಂಡಕ್ಕೆ ಇಂದು ಇಬ್ಬರು ಯುವ ಕ್ರಿಕೆಟಿಗರು ಪದಾರ್ಪಣೆ ಮಾಡುತ್ತಿದ್ದಾರೆ. ಇಂದಿನ ಪಂದ್ಯದ ಮೂಲಕ ಐಪಿಎಲ್‌ ಸೆನ್ಸೇಷನ್‌ ರಿಂಕು ಸಿಂಗ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಪದಾರ್ಪಣೆ ಮಾಡುತ್ತಿದ್ದಾರೆ. ಇದೇ ವೇಳೆ ಪ್ರಸಿದ್ಧ್‌ ಕೃಷ್ಣ ಕೂಡಾ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಸುದೀರ್ಘ ಅವಧಿಯಿಂದ ಗಾಯದಿಂದ ಹೊರಗುಳಿದಿದ್ದ ಭಾರತದ ಪ್ರಮುಖ ವೇಗಿ ಜಸ್ಪ್ರೀತ್​ ಬೂಮ್ರಾ ‌ಟೀಮ್‌ ಇಂಡಿಯಾಗೆ ಮರಳಿದ್ದಾರೆ. ಅದು ಕೂಡಾ ಯುವ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಬೂಮ್ರಾ ಮೇಲಿದೆ. ಒಟ್ಟು 3 ಪಂದ್ಯಗಳ ಟಿ20 ಸರಣಿಯ ಮೊದಲು ಪಂದ್ಯವು ಡಬ್ಲಿನ್​ನ ದಿ ವಿಲೇಜ್​ನಲ್ಲಿ ನಡೆಯುತ್ತಿದೆ.

ಪಿಚ್​ ಹೇಗಿರಲಿದೆ?

ವಿಲೇಜ್ ಕ್ರಿಕೆಟ್ ಸ್ಟೇಡಿಯಂನ ಇತ್ತೀಚಿನ ಟಿ20 ದಾಖಲೆಗಳು ಬ್ಯಾಟ್ಸ್​​ಮನ್​​ಗೆ ಸಹಕಾರಿ. ಈ ಮೈದಾನದಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 167. ಪಂದ್ಯದ ಓವರ್​ಗಳು ಸಾಗಿದಂತೆ ಸ್ಪಿನ್ನರ್​​ಗಳು ಮೇಲುಗೈ ಸಾಧಿಸಲಿದ್ದಾರೆ. ಈ ಪಿಚ್​​​​ ಚೇಸಿಂಗ್​ಹೆಚ್ಚು ಪ್ರಸಿದ್ಧಿಯಾಗಿದ್ದು, ಟಾಸ್ ಗೆದ್ದ ತಂಡವೇ ಬೌಲಿಂಗ್ ಆಯ್ಕೆ ಮಾಡಿಕೊಳ್ಳಲಿದೆ.

ಮುಖಾಮಖಿ ದಾಖಲೆ

ಉಭಯ ತಂಡಗಳು ಈವರೆಗೆ ಒಟ್ಟು 5 ಬಾರಿನಪರಸ್ಪರ ಮುಖಾಮುಖಿಯಾಗಿವೆ. ಅದರಲ್ಲಿ ಭಾರತವೇ ಎಲ್ಲಾ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಐರ್ಲೆಂಡ್ ತಂಡವು ಎಲ್ಲಾ 5 ಪಂದ್ಯಗಳಲ್ಲಿ ಸೋತಿದೆ.

ವಯಾಕಾಮ್ 18 ಈ ಸರಣಿಯ ನೇರಪ್ರಸಾರದ ಹಕ್ಕನ್ನು ಹೊಂದಿದೆ. ಸ್ಪೋರ್ಟ್ 18, ಡಿಡಿ ಸ್ಪೋರ್ಟ್ಸ್​ ಹಾಗೂ ಜಿಯೋ ಸಿನಿಮಾದಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.

ಭಾರತ ತಂಡ

ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಅ‌ರ್ಷದೀಪ್ ಸಿಂಗ್, ಜಸ್ಪ್ರೀತ್ ಬೂಮ್ರಾ (ನಾಯಕ), ರವಿ ಬಿಷ್ಣೋಯ್.

ಐರ್ಲೆಂಡ್ ತಂಡ

ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಲೋರ್ಕನ್ ಟಕರ್ (ವಿಕೆಟ್‌ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ