logo
ಕನ್ನಡ ಸುದ್ದಿ  /  ಕ್ರೀಡೆ  /  ಕುಸ್ತಿಯ ತಾತ್ಕಾಲಿಕ ಸಮಿತಿ ವಿಸರ್ಜಿಸಿದ ಒಲಿಂಪಿಕ್ ಅಸೋಸಿಯೇಷನ್; ಮತ್ತೆ ಡಬ್ಲ್ಯುಎಫ್ಐ ಅಸ್ತಿತ್ವಕ್ಕೆ

ಕುಸ್ತಿಯ ತಾತ್ಕಾಲಿಕ ಸಮಿತಿ ವಿಸರ್ಜಿಸಿದ ಒಲಿಂಪಿಕ್ ಅಸೋಸಿಯೇಷನ್; ಮತ್ತೆ ಡಬ್ಲ್ಯುಎಫ್ಐ ಅಸ್ತಿತ್ವಕ್ಕೆ

Jayaraj HT Kannada

Mar 18, 2024 07:17 PM IST

google News

ಕುಸ್ತಿಯ ತಾತ್ಕಾಲಿಕ ಸಮಿತಿ ವಿಸರ್ಜಿಸಿದ ಒಲಿಂಪಿಕ್ ಅಸೋಸಿಯೇಷನ್

    • ಭಾರತೀಯ ಕುಸ್ತಿ ಒಕ್ಕೂಟ ಮತ್ತೆ ಅಸ್ತಿತ್ವಕ್ಕೆ ಬಂದಿದೆ. ಈ ಹಿಂದೆ ಕುಸ್ತಿ ಫೆಡರೇಶನ್ ಚುನಾವಣೆ ನಡೆದ ಕೇವಲ ಮೂರೇ ದಿನಗಳಲ್ಲಿ ಡಬ್ಲ್ಯುಎಫ್ಐ ಅನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿತ್ತು. ಹೀಗಾಗಿ ದೇಶದಲ್ಲಿ ಕುಸ್ತಿ ಚಟುವಟಿಕೆ ಮುಂದುವರೆಸುವ ಸಲುವಾಗಿ ಒಲಿಂಪಿಕ್‌ ಅಸೋಸಿಯೇಷನ್‌ ತಾತ್ಕಾಲಿಕ ಸಮಿತಿಯನ್ನು ರಚಿಸಿತ್ತು.
ಕುಸ್ತಿಯ ತಾತ್ಕಾಲಿಕ ಸಮಿತಿ ವಿಸರ್ಜಿಸಿದ ಒಲಿಂಪಿಕ್ ಅಸೋಸಿಯೇಷನ್
ಕುಸ್ತಿಯ ತಾತ್ಕಾಲಿಕ ಸಮಿತಿ ವಿಸರ್ಜಿಸಿದ ಒಲಿಂಪಿಕ್ ಅಸೋಸಿಯೇಷನ್

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಕುಸ್ತಿಯ ತಾತ್ಕಾಲಿಕ ಸಮಿತಿಯನ್ನು ವಿಸರ್ಜಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇದೇ ಈ ಹಿಂದೆ ಇದ್ದ ಭಾರತೀಯ ಕುಸ್ತಿ ಒಕ್ಕೂಟವನ್ನು (WFI) ಪುನಃಸ್ಥಾಪಿಸಿದೆ. ಮಾರ್ಚ್‌ 18ರ ಸೋಮವಾರ ಈ ನಿರ್ಧಾರಕ್ಕೆ ಬರಲಾಗಿದೆ. ಈ ಹಿಂದೆ ಕುಸ್ತಿ ಫೆಡರೇಶನ್ ಚುನಾವಣೆ ನಡೆದ ಕೇವಲ ಮೂರೇ ದಿನಗಳಲ್ಲಿ ಡಬ್ಲ್ಯುಎಫ್ಐ ಅನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿತ್ತು. ಸರ್ಕಾರದ ಕ್ರೀಡಾ ನೀತಿ ಮತ್ತು ತನ್ನದೇ ಆದ ಸಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿದ ಆರೋಪದಿಂದಾಗಿ, ಹೊಸದಾಗಿ ಆಯ್ಕೆಯಾದ ಬೆನ್ನಲ್ಲೇ ಡಬ್ಲ್ಯುಎಫ್‌ಐ ಅಮಾನತುಗೊಂಡಿತು. ಹೀಗಾಗಿ ದೇಶದಲ್ಲಿ ಕುಸ್ತಿ ಚಟುವಟಿಕೆ ಮುಂದುವರೆಸುವ ಸಲುವಾಗಿ ಒಲಿಂಪಿಕ್‌ ಅಸೋಸಿಯೇಷನ್‌ ತಾತ್ಕಾಲಿಕ ಸಮಿತಿಯನ್ನು ರಚಿಸಿತ್ತು.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ ಕಾರ್ಯಕಾರಿ ಸಮಿತಿ ಸದಸ್ಯ ಭೂಪೇಂದರ್ ಸಿಂಗ್ ಬಜ್ವಾ, ಹಾಕಿ ಒಲಿಂಪಿಯನ್ ಎಂಎಂ ಸೋಮಯಾ ಮತ್ತು ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಮಂಜುಷಾ ಕನ್ವರ್ ಅವರು ಈ ತಾತ್ಕಾಲಿಕ ಸಮಿತಿಯ ನೇತೃತ್ವ ವಹಿಸಿದ್ದರು. ಇವರ ನೇತೃತ್ವದಲ್ಲೇ, ಏಷ್ಯನ್ ಚಾಂಪಿಯನ್‌ಶಿಪ್ ಮತ್ತು ಒಲಿಂಪಿಕ್ ಅರ್ಹತಾ ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಲು ತಾತ್ಕಾಲಿಕ ಸಮಿತಿಯು ಇತ್ತೀಚೆಗೆ ಟ್ರಯಲ್ಸ್ ಆಯೋಜಿಸಿತ್ತು.

ಡಬ್ಲ್ಯುಎಫ್ಐ ಮೇಲಿನ ನಿಷೇಧವನ್ನು ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ತೆಗೆದುಹಾಕಿದ ಹಿನ್ನೆಲೆಯಲ್ಲಿ, ತಾತ್ಕಾಲಿಕ ಸಮಿತಿಯನ್ನು ವಿಸರ್ಜಿಸುವ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೆ ಐಒಎ ನೇಮಿಸಿದ ತಾತ್ಕಾಲಿಕ ಸಮಿತಿಯು ಆಯ್ಕೆ ಟ್ರಯಲ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ನಿರ್ದೇಶನಗಳ ಮೇರೆಗೆ ಮತ್ತೆ ಡಬ್ಲ್ಯುಎಫ್‌ಐ ಅಸ್ತಿತ್ವಕ್ಕೆ ತರಲಾಗಿದೆ. ಮುಂದಕ್ಕೆ ತಾತ್ಕಾಲಿಕ ಸಮಿತಿಯು ಡಬ್ಲ್ಯುಎಫ್ಐ ಚಟುವಟಿಕೆಗಳನ್ನು ನಡೆಸುವ ಅಗತ್ಯ ಇಲ್ಲ ಎಂದು ಐಒಎ ನಿರ್ದೇಶಕ ಜಾರ್ಜ್ ಮ್ಯಾಥ್ಯೂ ತಿಳಿಸಿದ್ದಾರೆ.

ಇದನ್ನೂ ಓದಿ | Photos: ಕೊನೆಗೂ ನಮ್ಮ ಬೆಂಗಳೂರಿಗೆ ಬಂದೇ ಬಿಟ್ರು ವಿರಾಟ್‌; ಚಿನ್ನಸ್ವಾಮಿಯಲ್ಲಿ ತಂಡದೊಂದಿಗೆ ಅಭ್ಯಾಸ ಆರಂಭಿಸಿದ ಕೊಹ್ಲಿ

ಕುಸ್ತಿ ಫೆಡರೇಶನ್ ಅನ್ನು ಕ್ರೀಡಾ ಸಚಿವಾಲಯವು ಡಿಸೆಂಬರ್ 24ರಂದು ಅಮಾನತುಗೊಳಿಸಿತ್ತು. ಆದಾರೆ, ಚುನಾವಣೆಗಳನ್ನು ನಡೆಸಲು ವಿಫಲವಾದ ನಂತರ ಕಳೆದ ವರ್ಷದ ಆಗಸ್ಟ್ 23ರಂದು ಡಬ್ಲ್ಯುಎಫ್ಐ ಅನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ ಯುಡಬ್ಲ್ಯೂಡಬ್ಲ್ಯೂ, ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಕೆಲವು ಷರತ್ತುಗಳೊಂದಿಗೆ ಅಮಾನತು ತೆಗೆದುಹಾಕಿತು.

ಇದನ್ನೂ ಓದಿ | ಆರ್‌ಸಿಬಿ vs ಸಿಎಸ್‌ಕೆ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್‌ ಬುಕಿಂಗ್ ಆರಂಭ; ಆನ್‌ಲೈನ್‌ ಕ್ಯೂ ಕಂಡು ಫ್ಯಾನ್ಸ್ ನಿರಾಶೆ

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more Sports stories like this please logon to kannada.hindustantimes.com)

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ