PKL: ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಫೈನಲ್ ಆಡಿದ ತಂಡಗಳು ಯಾವುವು ಗೊತ್ತೇ?
Oct 07, 2024 10:52 AM IST
ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಫೈನಲ್ ಆಡಿದ ತಂಡಗಳು ಯಾವುವು ಗೊತ್ತೇ?
- ಪ್ರೊ ಕಬಡ್ಡಿ ಲೀಗ್‌ನ ಇತಿಹಾಸದಲ್ಲಿ ಈವರೆಗೆ ಪಾಟ್ನಾ ಪೈರೇಟ್ಸ್ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದುಕೊಂಡ ತಂಡವಾಗಿದೆ. ಇದಲ್ಲದೆ, ಲೀಗ್‌ನಲ್ಲಿ ಇತರೆ ತಂಡಗಳು ಹಲವಾರು ಬಾರಿ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದವು. ಅವರು ಯಾವುವು?, ಇಲ್ಲಿದೆ ಮಾಹಿತಿ.
ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್ ಅಕ್ಟೋಬರ್ 18ರಿಂದ ಪ್ರಾರಂಭವಾಗಲಿದೆ. ಈಗಾಗಲೇ ಎಲ್ಲಾ ತಂಡಗಳು ತಮ್ಮ ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಪಂದ್ಯದ ತಯಾರಿಯಲ್ಲಿ ನಿರತವಾಗಿವೆ. ಪಿಕೆಎಲ್ ಇತಿಹಾಸದಲ್ಲಿ ಈವರೆಗೆ ಪಾಟ್ನಾ ಪೈರೇಟ್ಸ್ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದುಕೊಂಡ ತಂಡವಾಗಿದೆ. ಇದಲ್ಲದೆ, ಲೀಗ್‌ನಲ್ಲಿ ಇತರೆ ಕೆಲವು ತಂಡಗಳು ಹಲವಾರು ಬಾರಿ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ. ಆದರೆ, ಪ್ರತಿ ಬಾರಿಯೂ ಗೆಲುವು ಸಾಧಿಸಲಿಲ್ಲ. ಪ್ರೊ ಕಬಡ್ಡಿ ಲೀಗ್‌ನ ಫೈನಲ್‌ನಲ್ಲಿ ಗರಿಷ್ಠ ಬಾರಿ ಆಡಿದ ಅಂತಹ 3 ತಂಡಗಳು ಯಾವುವು ಎಂಬುದನ್ನು ನೋಡೋಣ.
ಪಿಕೆಎಲ್ ಟೂರ್ನಿಯು ಈವರೆಗೆ ಒಂದು ದಶಕವನ್ನು ಪೂರೈಸಿದೆ. 10 ಆವೃತ್ತಿಗಳು ಯಶಸ್ವಿಯಾಗಿ ನಡೆದಿವೆ. ಅದರಲ್ಲಿ ಟಾಪ್ 3 ಯಶಸ್ವಿ ತಂಡಗಳು ಯಾವುವು ನೋಡೋಣ.
1. ಪಾಟ್ನಾ ಪೈರೇಟ್ಸ್ :
ಪಿಕೆಎಲ್‌ನ ಅತ್ಯಂತ ಯಶಸ್ವಿ ತಂಡವಾದ ಪಾಟ್ನಾ ಪೈರೇಟ್ಸ್ ಲೀಗ್ ಇತಿಹಾಸದಲ್ಲಿ ಒಟ್ಟು 4 ಬಾರಿ ಫೈನಲ್‌ನಲ್ಲಿ ಆಡಿದೆ. ಈ ಅವಧಿಯಲ್ಲಿ ಪಾಟ್ನಾ ಒಟ್ಟು 3 ಬಾರಿ ಪ್ರಶಸ್ತಿ ಜಯಿಸಿದೆ. ಅದೇ ಸಮಯದಲ್ಲಿ, ಒಮ್ಮೆ ತಂಡವು ಫೈನಲ್‌ನಲ್ಲಿ ಸೋಲನ್ನು ಎದುರಿಸಬೇಕಾಯಿತು. ಪ್ರೊ ಕಬಡ್ಡಿ ಲೀಗ್‌ನ 3, 4 ಮತ್ತು 5 ನೇ ಋತುವಿನಲ್ಲಿ ಪಾಟ್ನಾ ಪೈರೇಟ್ಸ್ ಸತತವಾಗಿ ಟ್ರೋಫಿಯನ್ನು ಗೆದ್ದುಕೊಂಡಿತ್ತು. PKL 8 ರ ಸಮಯದಲ್ಲಿ, ಪಾಟ್ನಾ ತಂಡವು ಫೈನಲ್‌ನಲ್ಲಿ ದಬಾಂಗ್ ಡೆಲ್ಲಿ ಕೆಸಿ ವಿರುದ್ಧ ಸೋಲನ್ನು ಎದುರಿಸಬೇಕಾಯಿತು.
- ಪಿಕೆಎಲ್ 3 - ಯು ಮುಂಬಾ ವಿರುದ್ಧ ಜಯ
- ಪಿಕೆಎಲ್ 3 - ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಜಯ
- ಪಿಕೆಎಲ್ 3 - ಗುಜರಾತ್ ಜೈಂಟ್ಸ್ ವಿರುದ್ಧ ಜಯ
- ಪಿಕೆಎಲ್ 8 - ದಬಾಂಗ್ ದೆಹಲಿ KC ವಿರುದ್ಧ ಸೋಲು
2. ಯು ಮುಂಬಾ
ಯು ಮುಂಬಾ ಪ್ರೊ ಕಬಡ್ಡಿ ಲೀಗ್‌ನ ಮೊದಲ ಮೂರು ಋತುಗಳಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ, ತಂಡವು ಮೂರರಲ್ಲಿ ಒಮ್ಮೆ ಪ್ರಶಸ್ತಿಯನ್ನು ಗೆದ್ದಿತು. ಅದೇ ಸಮಯದಲ್ಲಿ, ಪಿಕೆಎಲ್‌ನ ಮೊದಲ ಋತುವಿನಲ್ಲಿ ಯು ಮುಂಬಾ ಫೈನಲ್‌ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಮತ್ತು ಮೂರನೇ ಋತುವಿನಲ್ಲಿ ಪಾಟ್ನಾ ಪೈರೇಟ್ಸ್ ಕೈಯಲ್ಲಿ ಸೋಲು ಕಂಡಿತು. ಸೀಸನ್ 3 ರ ನಂತರ, ತಂಡವು ಒಮ್ಮೆಯೂ ಫೈನಲ್ ತಲುಪಿಲ್ಲ.
3. ಜೈಪುರ ಪಿಂಕ್ ಪ್ಯಾಂಥರ್ಸ್
ಪಿಕೆಎಲ್ ಇತಿಹಾಸದಲ್ಲಿ ಮೂರನೇ ಅತ್ಯಂತ ಯಶಸ್ವಿ ತಂಡವಾಗಿರುವ ಜೈಪುರ ಪಿಂಕ್ ಪ್ಯಾಂಥರ್ಸ್ ಒಟ್ಟು 2 ಬಾರಿ ಟ್ರೋಫಿ ಗೆದ್ದುಕೊಂಡಿದೆ. ಜೈಪುರ ಪಿಂಕ್ ಪ್ಯಾಂಥರ್ಸ್ ಒಟ್ಟು 3 ಬಾರಿ ಫೈನಲ್‌ನಲ್ಲಿ ಆಡಿದೆ. ಈ ಅವಧಿಯಲ್ಲಿ, ತಂಡವು ಪಿಕೆಎಲ್‌ನ ಮೊದಲ ಮತ್ತು ಒಂಬತ್ತನೇ ಋತುವಿನಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರೆ, ಪ್ರೊ ಕಬಡ್ಡಿ ಲೀಗ್‌ನ ನಾಲ್ಕನೇ ಋತುವಿನಲ್ಲಿ, ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಫೈನಲ್‌ನಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಸೋತಿತು.
ವರದಿ: ವಿನಯ್ ಭಟ್.
ಇದನ್ನೂ ಓದಿ | ಪ್ರೊ ಕಬಡ್ಡಿ ಲೀಗ್ 11ರ ಬೆಸ್ಟ್ ರೈಡರ್ ಆಗ್ತಾರೆ ಪರ್ದೀಪ್ ನರ್ವಾಲ್; ಈ ಅಂಕಿ-ಅಂಶಗಳೇ ಹೇಳುತ್ತೆ ಇದು ಸಾಧ್ಯವೆಂದು