PKL Season 11: ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ 12 ತಂಡಗಳ ಕ್ಯಾಪ್ಟನ್ಗಳು, ಕೋಚ್ಗಳು ಯಾರು?
Oct 08, 2024 06:00 AM IST
ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ 12 ತಂಡಗಳ ಕ್ಯಾಪ್ಟನ್ಗಳು, ಕೋಚ್ಗಳು ಯಾರು?
- Pro Kabaddi League: 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಪ್ರಶಸ್ತಿ ಗೆಲ್ಲಲು 12 ತಂಡಗಳು ಸಿದ್ದವಾಗಿವೆ. ಈ ಬಾರಿ 12 ತಂಡಗಳ ನಾಯಕರು ಮತ್ತು ಕೋಚ್ಗಳು ಯಾರು ಎಂಬುದನ್ನುಈ ಮುಂದೆ ನೋಡೋಣ.
ಪ್ರೊ ಕಬಡ್ಡಿ ಲೀಗ್ 2024ರ ಆವೃತ್ತಿಯು ಅಕ್ಟೋಬರ್ 18 ರಂದು ಹೈದರಾಬಾದ್‌ನ GMC ಬಾಲಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ನಡುವಿನ ಘರ್ಷಣೆಯೊಂದಿಗೆ ಪ್ರಾರಂಭವಾಗುತ್ತದೆ. 11 ನೇ ಋತುವು ಪ್ರೊ ಕಬಡ್ಡಿ ಲೀಗ್ ಮೂರು-ನಗರಗಳಲ್ಲಿ ಮಾತ್ರ ನಡೆಯುತ್ತದೆ. ಲೀಗ್ ಹಂತದಲ್ಲಿ ಎಲ್ಲಾ ಪಂದ್ಯದ ದಿನಗಳು ಡಬಲ್-ಹೆಡರ್ ಆಗಿದ್ದು ಮೊದಲ ಪಂದ್ಯವು ರಾತ್ರಿ 8 ಗಂಟೆಗೆ ಮತ್ತು ಎರಡನೇ ಪಂದ್ಯವು ರಾತ್ರಿ 9 ಗಂಟೆಗೆ ಪ್ರಾರಂಭವಾಗುತ್ತದೆ. ಈ ಬಾರಿ ತಂಡಗಳಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಪ್ರಶಸ್ತಿ ಗೆಲ್ಲಲು ಸನ್ನದ್ಧವಾಗಿವೆ. ಹಾಗಿದ್ದರೆ, ಈ ಬಾರಿ 12 ತಂಡಗಳ ನಾಯಕರು ಮತ್ತು ಕೋಚ್ಗಳು ಯಾರು?
ಪಿಕೆಎಲ್ 12 ತಂಡಗಳ ನಾಯಕರು
ಬೆಂಗಳೂರು ಬುಲ್ಸ್ - ಪರ್ದೀಪ್ ನರ್ವಾಲ್
ಬೆಂಗಾಲ್ ವಾರಿಯರ್ಸ್ - ನಿತೇಶ್ ಕುಮಾರ್
ದಬಾಂಗ್ ಡೆಲ್ಲಿ - ನವೀನ್ ಕುಮಾರ್
ಗುಜರಾತ್ ಜೈಂಟ್ಸ್ - ನೀರಜ್ ಕುಮಾರ್
ಹರಿಯಾಣ ಸ್ಟೀಲರ್ಸ್ - ಜೈದೀಪ್ ದಹಿಯಾ
ಜೈಪುರ ಪಿಂಕ್ ಪ್ಯಾಂಥರ್ಸ್ - ಸುರ್ಜೀತ್ ಸಿಂಗ್
ಪಾಟ್ನಾ ಪೈರೇಟ್ಸ್ - ಸಂದೀಪ್ ಕುಮಾರ್
ಪುಣೇರಿ ಪಲ್ಟನ್ಸ್ - ಅಸ್ಲಾಂ ಇನಾಮದಾರ್
ತಮಿಳ್ ತಲೈವಾಸ್ - ಸಾಗರ್ ರಾಥೀ
ತೆಲುಗು ಟೈಟಾನ್ಸ್ - ಪವನ್ ಸೆಹ್ರಾವತ್
ಯು ಮುಂಬಾ - ಸುನಿಲ್ ಕುಮಾರ್
ಯುಪಿ ಯೋಧಾಸ್ - ಮಹೇಂದರ್ ಸಿಂಗ್
ಪಿಕೆಎಲ್ 12 ತಂಡಗಳ ಕೋಚ್ಗಳು
ಬೆಂಗಳೂರು ಬುಲ್ಸ್ - ರಣಧೀರ್ ಸಿಂಗ್ ಸೆಹ್ರಾವತ್
ಬೆಂಗಾಲ್ ವಾರಿಯರ್ಸ್ - ಪ್ರಶಾಂತ್ ಸುರ್ವೆ
ದಬಾಂಗ್ ಡೆಲ್ಲಿ - ಜೋಗಿಂದರ್ ನರ್ವಾಲ್
ಗುಜರಾತ್ ಜೈಂಟ್ಸ್ - ರಾಮ್ ಮೆಹರ್ ಸಿಂಗ್
ಹರಿಯಾಣ ಸ್ಟೀಲರ್ಸ್ - ಮನ್ಪ್ರೀತ್ ಸಿಂಗ್
ಜೈಪುರ ಪಿಂಕ್ ಪ್ಯಾಂಥರ್ಸ್ - ಸಂಜೀವ್ ಬಲ್ಯಾನ್
ಪಾಟ್ನಾ ಪೈರೇಟ್ಸ್ - ನರೇಂದ್ರ ರೆಧು
ಪುಣೇರಿ ಪಲ್ಟನ್ಸ್ - ಬಿಸಿ ರಮೇಶ್
ತಮಿಳ್ ತಲೈವಾಸ್ - ಉದಯ್ ಕುಮಾರ್ ಮತ್ತು ಧರ್ಮರಾಜ್ ಚೆರ್ಲತಾನ್
ತೆಲುಗು ಟೈಟಾನ್ಸ್ - ಕೃಷ್ಣ ಕುಮಾರ್ ಹೂಡಾ
ಯು ಮುಂಬಾ - ಘೋಲಮ್ರೇಜಾ ಮಜಂದರಾಣಿ
ಯುಪಿ ಯೋಧಾಸ್ - ಜಸ್ವೀರ್ ಸಿಂಗ್