logo
ಕನ್ನಡ ಸುದ್ದಿ  /  ಕ್ರೀಡೆ  /  ವಿನೇಶ್ ಫೋಗಾಟ್ ಅನರ್ಹತೆಗೂ ಮುನ್ನ ಗೇಲಿ ಮಾಡಿದ್ದ ಕಂಗನಾ ರಣಾವತ್; ಇನ್​ಸ್ಟಾಗ್ರಾಂ ಸ್ಟೋರಿ ವೈರಲ್

ವಿನೇಶ್ ಫೋಗಾಟ್ ಅನರ್ಹತೆಗೂ ಮುನ್ನ ಗೇಲಿ ಮಾಡಿದ್ದ ಕಂಗನಾ ರಣಾವತ್; ಇನ್​ಸ್ಟಾಗ್ರಾಂ ಸ್ಟೋರಿ ವೈರಲ್

HT Kannada Desk HT Kannada

Aug 07, 2024 01:56 PM IST

google News

ವಿನೇಶ್ ಫೋಗಾಟ್ ಅವರನ್ನು ಗೇಲಿ ಮಾಡಿದ ಕಂಗನಾ ರಣಾವತ್; ಇದೆಲ್ಲಾ ಮೋದಿ ಕೊಡುಗೆ ಎಂದ ಸಂಸದೆ

    • Kangana Ranaut: ಪ್ಯಾರಿಸ್ ಒಲಿಂಪಿಕ್ಸ್​​ 2024 ಕ್ರೀಡಾಕೂಟದಲ್ಲಿ 50 ಕೆಜಿ ವಿಭಾಗದ ಫೈನಲ್ ಸ್ಪರ್ಧೆಗೂ ಮುನ್ನ ಅತಿಯಾದ ತೂಕದ ಕಾರಣ ವಿನೇಶ್ ಫೋಗಾಟ್ ಅವರನ್ನು ಅನರ್ಹ ಮಾಡಲಾಗಿದೆ. ಆದರೆ ಅದಕ್ಕೂ ಮುನ್ನ ಕಂಗನಾ ರಣಾವತ್ ಗೇಲಿ ಮಾಡಿದ್ದರು.
ವಿನೇಶ್ ಫೋಗಾಟ್ ಅವರನ್ನು ಗೇಲಿ ಮಾಡಿದ ಕಂಗನಾ ರಣಾವತ್; ಇದೆಲ್ಲಾ ಮೋದಿ ಕೊಡುಗೆ ಎಂದ ಸಂಸದೆ
ವಿನೇಶ್ ಫೋಗಾಟ್ ಅವರನ್ನು ಗೇಲಿ ಮಾಡಿದ ಕಂಗನಾ ರಣಾವತ್; ಇದೆಲ್ಲಾ ಮೋದಿ ಕೊಡುಗೆ ಎಂದ ಸಂಸದೆ

ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದ ಕುಸ್ತಿಯಲ್ಲಿ ಭಾರತದ ಸ್ಟಾರ್​ ರೆಸ್ಲರ್​ ವಿನೇಶ್ ಫೋಗಟ್ ಅವರು ಚಿನ್ನದ ಪದಕದ ಸ್ಪರ್ಧೆಗೂ ಮುನ್ನ ಅನರ್ಹಗೊಂಡಿದ್ದಾರೆ. ಮಹಿಳೆಯರ ಕುಸ್ತಿಯಲ್ಲಿ ಫೈನಲ್​ಗೇರಿ ಇತಿಹಾಸ ಸೃಷ್ಟಿಸಿದ್ದ ವಿನೇಶ್​ ಈಗ ಚಿನ್ನದ ಪದಕದ ಪಂದ್ಯಕ್ಕೂ ಮುನ್ನ ಡಿಸ್​ಕ್ವಾಲಿಫೈ ಆಗಿದ್ದಾರೆ. ಆದರೆ ಇದಕ್ಕೂ ಮುನ್ನ ಕಂಗನಾ ರಣಾವತ್ ಅವರು ವಿನೇಶ್ ಅವರನ್ನು ಗೇಲಿ ಮಾಡಿದ್ದ ಇನ್​ಸ್ಟಾಗ್ರಾಂ ಸ್ಟೋರಿಯೊಂದನ್ನು ಹಾಕಿದ್ದರು. ಇದು ವೈರಲ್ ಆಗಿದೆ.

ಮಹಿಳೆಯರ 50 ಕೆಜಿ ಕುಸ್ತಿ ಫ್ರೀಸ್ಟೈಲ್​​ನಲ್ಲಿ ಫೈನಲ್‌ಗೆ ತಲುಪಿದ ಮೊದಲ ಮಹಿಳಾ ಕುಸ್ತಿ ಪಟು ಎಂಬ ದಾಖಲೆಗೆ ಪಾತ್ರರಾಗಿದ್ದ ವಿನೇಶ್, ಸೆಮಿ-ಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಅವರನ್ನು 5-0 ಅಂತರದಿಂದ ಸೋಲಿಸಿ ಸಾಧನೆ ಮಾಡಿದ್ದರು. ವಿನೇಶ್ ಇಂದು (ಆಗಸ್ಟ್ 7ರಂದು) ತಡರಾತ್ರಿ ಫೈನಲ್‌ನಲ್ಲಿ ಯುಎಸ್‌ಎಯ ಸಾರಾ ಹಿಲ್ಡೆಬ್ರಾಂಡ್ ವಿರುದ್ಧ ಚಿನ್ನದ ಪದಕಕ್ಕಾಗಿ ಹೋರಾಡಬೇಕಿತ್ತು. ಇದೀಗ ವಿನೇಶ್ ಅನರ್ಹರಾಗಿದ್ದು ಸಾರಾರನ್ನು ಚಿನ್ನದ ಪದಕದ ವಿಜೇತರೆಂದು ನಿರ್ಧರಿಸಲಾಗುತ್ತದೆ.

ಕಳೆದ ವರ್ಷ ಭಾರತದ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ 29 ವರ್ಷದ ಕುಸ್ತಿಪಟು ವಿನೇಶ್ ನೇತತ್ವ ವಹಿಸಿದ್ದ ಪ್ರಮುಖರಲ್ಲಿ ಅವರು ಒಬ್ಬರಾಗಿದ್ದರು. ಆದರೆ ಅನರ್ಹಕ್ಕೂ ಮುನ್ನ ಪದಕ ಖಚಿತಪಡಿಸಿದ ವಿನೇಶ್​ ಅವರ ಐತಿಹಾಸಿಕ ಗೆಲುವನ್ನು ಸಂಸದೆ ಮತ್ತು ನಟಿ ಕಂಗನಾ ರಣಾವತ್ ಗೇಲಿ ಮಾಡಿದ್ದರು. ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ವಿನೇಶ್ ಅವರ ಫೋಟೋವನ್ನು ಹಂಚಿಕೊಂಡಿದ್ದು, ಈ ವಿಜಯ 'ಮಹಾನ್ ನಾಯಕ' ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದಿದ್ದರು.

ಭಾರತದ ಮೊದಲ ಚಿನ್ನದ ಪದಕಕ್ಕೆ ಒಂದೇ ಹೆಜ್ಜೆ ಬಾಕಿ ಇದೆ. ವಿನೇಶ್ ಫೋಗಟ್ ಒಂದು ಹಂತದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅಂದು ಮೋದಿ ತೇರಿ ಕಬ್ರ್ ಖುದೇಗಿ (ನಿಮ್ಮ ಸಮಯ ಸಮೀಪಿಸಿದೆ) ಎಂಬ ಘೋಷಣೆಗಳನ್ನು ಕೂಗಿದ್ದರು. ಹೀಗಿದ್ದರೂ ವಿನೇಶ್​ ಅವರಿಗೆ ಒಲಿಂಪಿಕ್ಸ್​​ನಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ನೀಡಲಾಯಿತು. ಅತ್ಯುತ್ತಮ ತರಬೇತಿ, ತರಬೇತುದಾರರು ಮತ್ತು ಸೌಲಭ್ಯಗಳನ್ನು ಒದಗಿಸಲಾಯಿತು. ಇದಕ್ಕೆಲ್ಲಾ ಕಾರಣ ನರೇಂದ್ರ ಮೋದಿ ಅವರು. ಅವರು ಶ್ರೇಷ್ಠ ನಾಯಕ ಎಂದು ಬರೆದಿದ್ದರು. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಮಂಡಿ ಲೋಕಸಭಾ ಕ್ಷೇತ್ರವನ್ನು ಗೆದ್ದ ನಂತರ ಕಂಗನಾ ಈಗ ಬಿಜೆಪಿ ಸಂಸದರಾಗಿದ್ದಾರೆ.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮೂವರು ಅಗ್ರ ಕುಸ್ತಿಪಟುಗಳಲ್ಲಿ ವಿನೇಶ್ ಫೋಗಟ್ ಒಬ್ಬರಾಗಿದ್ದರು. 2020ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬಜರಂಗ್ ಪುನಿಯಾ ಮತ್ತು 2016ರ ಆವೃತ್ತಿಯಲ್ಲಿ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡು ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಾಕ್ಷಿ ಮಲಿಕ್ ಕೂಡ ಒಬ್ಬರು.

ವಿನೇಶ್ ಫೋಗಾಟ್ ಅವರನ್ನು ಗೇಲಿ ಮಾಡಿದ ಕಂಗನಾ ರಣಾವತ್

ವಿನೇಶ್ ಸೆಮಿಫೈನಲ್ ತಲುಪಲು ಸತತ ಎರಡು ಅಸಾಧ್ಯವಾದ ಗೆಲುವುಗಳನ್ನು ದಾಖಲಿಸಿದರು. 16ನೇ ಸುತ್ತಿನಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಜಪಾನ್‌ನ ಯುಯಿ ಸುಸಾಕಿಯನ್ನು ಸೋಲಿಸಿದರು ಮತ್ತು ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಉಕ್ರೇನ್‌ನ 8ನೇ ಶ್ರೇಯಾಂಕದ ಒಕ್ಸಾನಾ ಲಿವಾಚ್ ಅವರನ್ನು ಸೋಲಿಸಿದರು. ಬಳಿಕ ಸೆಮಿಫೈನಲ್​ನಲ್ಲಿ ಕ್ಯೂಬಾದ ಯುಸ್ನಿಲಿಸ್ ಗುಜ್ಮಾನ್ ಅವರನ್ನು 5-0 ಅಂತರದಿಂದ ಸೋಲಿಸಿದ್ದರು. ಇನ್ನೇನು ಚಿನ್ನದ ಪದಕ ಗೆಲ್ಲಲು ಇನ್ನೊಂದು ಹೆಜ್ಜೆ ಬಾಕಿ ಎನ್ನುವಷ್ಟರಲ್ಲಿ ಅವರನ್ನು ಅನರ್ಹಗೊಳಿಸಲಾಗಿದೆ.

ವಿನೇಶ್ ಅವರು ರಿಯೊ-2016 ಒಲಿಂಪಿಕ್ಸ್​ ಮತ್ತು ಟೊಕಿಯೊ-2020 ಒಲಿಂಪಿಕ್ಸ್​​ಗಳಲ್ಲಿ ಕ್ವಾರ್ಟರ್-ಫೈನಲ್​ನಲ್ಲಿ ನಿರ್ಗಮಿಸಿದ್ದರು. ವಿನೇಶ್ ಕಾಮನ್​ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಎರಡರಲ್ಲೂ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ