logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Election: ನವವಿವಾಹಿತರು, ಶತಾಯುಷಿಗಳಿಂದ ವಿಶೇಷ ಚೇತನರವರೆಗೆ; ಮತದಾನದ ಮೌಲ್ಯ ಸಾರುವ ಅಪರೂಪದ ಚಿತ್ರಗಳಿವು

Karnataka Election: ನವವಿವಾಹಿತರು, ಶತಾಯುಷಿಗಳಿಂದ ವಿಶೇಷ ಚೇತನರವರೆಗೆ; ಮತದಾನದ ಮೌಲ್ಯ ಸಾರುವ ಅಪರೂಪದ ಚಿತ್ರಗಳಿವು

May 10, 2023 01:05 PM IST

ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ರಾಜ್ಯಾದ್ಯಂತ ವಯೋವೃದ್ಧರು, ವಿಶೇಷ ಚೇತನರು ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಮತದಾನದ ವೇಳೆ ರಾಜ್ಯಾದ್ಯಂತ ಕಂಡುಬಂದ ಅಪರೂಪದ ಫೋಟೋಗಳು ಇಲ್ಲಿವೆ.

  • ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ರಾಜ್ಯಾದ್ಯಂತ ವಯೋವೃದ್ಧರು, ವಿಶೇಷ ಚೇತನರು ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಮತದಾನದ ವೇಳೆ ರಾಜ್ಯಾದ್ಯಂತ ಕಂಡುಬಂದ ಅಪರೂಪದ ಫೋಟೋಗಳು ಇಲ್ಲಿವೆ.
ರಾಜ್ಯ ಚುನಾವಣೆಯಲ್ಲಿ ಕಂಡುಬಂದ ಅಪರೂಪದ ದೃಶ್ಯಗಳು
(1 / 11)
ರಾಜ್ಯ ಚುನಾವಣೆಯಲ್ಲಿ ಕಂಡುಬಂದ ಅಪರೂಪದ ದೃಶ್ಯಗಳು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿಯಲ್ಲಿ ಮತ ಚಲಾಯಿಸಿದ ಮದುಮಗಳು ಬಳಿಕ ಮದುವೆ ಮಂಟಪಕ್ಕೆ ತೆರಳಿದ್ದಾರೆ. ಮುಹೂರ್ತಕ್ಕೂ ಮುನ್ನ ತಮ್ಮ ಹಕ್ಕು ಚಲಾಯಿಸಿದ್ದಾರೆ.
(2 / 11)

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕು ವಿಧಾನಸಭಾ ಕ್ಷೇತ್ರದ ದುರ್ವಿಗೆರೆಯ ಮತಗಟ್ಟೆಯಲ್ಲಿ 106 ವರ್ಷದ ಶತಾಯುಷಿ ಜಾನಕೀಬಾಯಿ ಮತದಾನ ಮಾಡಿದರು.
(3 / 11)

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಮೋರಿಗೇರಿ ಗ್ರಾಮದ ಮತಗಟ್ಟೆ ಸಂಖ್ಯೆ  124ರಲ್ಲಿ ವೃದ್ಧರು ಹಾಗೂ ವಿಕಲಚೇತನರು ಮತದಾನ ಮಾಡಿದರು. ಅವರಿಗಾಗಿ ವಾಹನ ಸೌಲಭ್ಯವನ್ನು ಒದಗಿಸಲಾಗಿತ್ತು.
(4 / 11)

ಹಾಸನ ಜಿಲ್ಲೆಯಲ್ಲಿ ವೀಲ್‌ಚೇರ್‌ನಲ್ಲಿ ಬಂದು ಮತದಾನ ಮಾಡಿದ ವೃದ್ಧೆ
(5 / 11)
ಹಾಸನ ಜಿಲ್ಲೆಯಲ್ಲಿ ವೀಲ್‌ಚೇರ್‌ನಲ್ಲಿ ಬಂದು ಮತದಾನ ಮಾಡಿದ ವೃದ್ಧೆ
ಕನಕಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಢಣಾಪುರದಲ್ಲಿ ವಿಶೇಷಚೇತನರು ಹಾಗೂ ವಯೋವೃದ್ಧರಿಗೆ ಮತದಾನ ಮಾಡಿದರು. ಅವರಿಗಾಗಿ ವೀಲ್ ಚೇರ್ ವ್ಯವಸ್ಥೆ ಕಲ್ಪಿಸಲಾಗಿತ್ತು.
(6 / 11)

ಮೈಸೂರಿನ ಮತಗಟ್ಟೆಯೊಂದರಲ್ಲಿ ನವ ವಧು-ವರರು ತಮ್ಮ ಕುಟುಂಬದೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡಿದರು.
(7 / 11)
ಮೈಸೂರಿನ ಮತಗಟ್ಟೆಯೊಂದರಲ್ಲಿ ನವ ವಧು-ವರರು ತಮ್ಮ ಕುಟುಂಬದೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡಿದರು.(ANI)
ಹಾಸನದ ಮತಗಟ್ಟೆ ಬಳಿ ಕಂಡುಬಂದ ದೃಶ್ಯ
(8 / 11)
ಹಾಸನದ ಮತಗಟ್ಟೆ ಬಳಿ ಕಂಡುಬಂದ ದೃಶ್ಯ
ದಕ್ಷಿಣ ಕನ್ನಡದ ಬಂಟ್ವಾಳ ಕ್ಷೇತ್ರದ ಬೆಂಜನಪದವು, ಮೂಡಾಯಿಕೋಡಿ, ಧಾರೆಕಟ್ಟೆ ಭಾಗದಲ್ಲಿ ಮನೆ ಮನೆ ಮತ ಹಾಕುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮನೆ ಮನೆಗೆ 12ಡಿ ಪತ್ರವನ್ನೇ ತಲುಪಿಸಿಲ್ಲ ಎಂಬ ಆರೋಪ ಕೇಳಿ ಬಂತು. ಹೀಗಾಗಿ ಈ ಭಾಗದ ಮತದಾರರಾದ ವಿಕ್ಟರ್ ಬರೆಟ್ಟೋ ಅವರನ್ನು ವೀಲ್ ಚೇರ್ ಹಾಗೂ ನಡೆಯಲು ಸಾಧ್ಯವಾಗದ ಐತಪ್ಪ ಬೆಳ್ಚಡ ಅವರನ್ನು ಕೈಯಲ್ಲಿ ಹಿಡಿದುಕೊಂಡು ಮತಗಟ್ಟೆಗೆ ಕರೆತರಲಾಯ್ತು.
(9 / 11)

ಸ್ಯಾಂಡಲ್ ವುಡ್ ನ ಖ್ಯಾತ ನಟ ಡಾಲಿ ಧನಂಜಯ್ ತಮ್ಮ ಹುಟ್ಟುವರಾದ ಅರಸೀಕೆರೆಯ ಕಾಳೇನ ಹಳ್ಳಿ ಹಟ್ಟಿ ಮತಗಟ್ಟೆ ಸಂಖ್ಯೆ 217ರಲ್ಲಿ  ತಮ್ಮ ಅಜ್ಜಿ ಮಲ್ಲಮ್ಮ, ಸಹೋದರ ಗಿರೀಶ ಹಾಗೂ ಸಹೋದರಿ ರಾಣಿಯೊಂದಿಗೆ ಆಗಮಿಸಿ ತಮ್ಮ ಮತ ಚಲಾಯಿಸಿದರು.
(10 / 11)

ಮದುವೆಗೂ ಮುನ್ನ ಮತದಾನ ಕೇಂದ್ರಕ್ಕೆ ಬಂದು ನವ ವಧುವೊಬ್ಬರು ಮತ ಚಲಾಯಿಸಿದ್ದಾರೆ. ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯಿತಿಯ ಅವರಾಲು ಮಟ್ಟು ಮತಗಟ್ಟೆಯಲ್ಲಿ, ನವ ವಧು ಮೆಲಿಟಾ ಸುವಾರಿಸ್ ಮತ ಚಲಾಯಿಸಿ ಮಾದರಿಯಾಗಿದ್ದಾರೆ. ಮತ ಚಲಾಯಿಸಿ ಚರ್ಚ್‌ಗೆ ತೆರಳಿ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
(11 / 11)

    ಹಂಚಿಕೊಳ್ಳಲು ಲೇಖನಗಳು