Karnataka Election: ಬಿಎಸ್ವೈ, ಸವದಿ, ಶೆಟ್ಟರ್ರನ್ನು ಎತ್ತಿ ಎಸೆದಿದ್ದು ಲಿಂಗಾಯತರು ಬೇಡ ಎಂಬ ಕಾರಣಕ್ಕೆ ಅಲ್ಲವೇ; ಕಾಂಗ್ರೆಸ್
May 05, 2023 04:33 PM IST
ಜಗದೀಶ್ ಶೆಟ್ಟರ್, ಬಿಎಸ್ ಯಡಿಯೂರಪ್ಪ, ಲಕ್ಷ್ಮಣ್ ಸವದಿ
- Karnataka Election: ಲಿಂಗಾಯತ ನಾಯಕರು ಬೇಕಿಲ್ಲ ಎಂಬ ಕಾರಣಕ್ಕಾಗಿಯೇ ಜಗದೀಶ್ ಶೆಟ್ಟರ್, ಬಿಎಸ್ ಯಡಿಯೂರಪ್ಪ, ಲಕ್ಷ್ಮಣ್ ಸವದಿ ಅವರನ್ನು ಬಿಜೆಪಿ ದೂರ ಇಟ್ಟಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) 5 ದಿನಗಳು ಮಾತ್ರ ಬಾಕಿ ಇವೆ. ಮತ ಬೇಟೆಗೆ ಅಂತಿಮ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್, ಮತ್ತೊಮ್ಮೆ ಲಿಂಗಾಯತ ಅಸ್ತ್ರ (Lingayat) ಪ್ರಯೋಗಿಸಿದೆ. ಲಿಂಗಾಯತರ ಬೆಂಬಲದಿಂದಲೇ ಅಧಿಕಾರ ಬಂದಿದ್ದ ಬಿಜೆಪಿ, ಈಗ ಅದೇ ಲಿಂಗಾಯತ ಸಮುದಾಯದ ನಾಯಕರನ್ನೇ ಕಡೆಗಣನೆ ಮಾಡುತ್ತಿದೆ. ಲಿಂಗಾಯತರ ಅಗತ್ಯವಿಲ್ಲ ಎಂಬುದನ್ನು ಬಿಜೆಪಿ (BJP) ಕ್ರಿಯೆಯಲ್ಲೂ ತೋರಿಸಿದೆ ಎಂದು ಕಾಂಗ್ರೆಸ್ (Congress) ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಲಿಂಗಾಯತರ ಅಗತ್ಯವಿಲ್ಲ ಎಂಬುದನ್ನು ಬಿಜೆಪಿ ಕ್ರಿಯೆಯಲ್ಲೂ ತೋರಿಸಿದೆ. ಲಕ್ಷ್ಮಣ್ ಸವದಿ (Laxman Savadi), ಜಗದೀಶ್ ಶೆಟ್ಟರ್ (Jagadish Shettar), ಬಿಎಸ್ ಯಡಿಯೂರಪ್ಪ (BS Yediyurappa) ಸೇರಿದಂತೆ ಹಲವು ಲಿಂಗಾಯತ ನಾಯಕರನ್ನು (Lingayat Leaders) ಎತ್ತಿ ಎಸೆದಿದ್ದು ಲಿಂಗಾಯತರು ಬೇಡ ಎಂಬ ಕಾರಣಕ್ಕಾಗಿಯೇ ಅಲ್ಲವೇ? ಎಂದು ಕಾಂಗ್ರೆಸ್ ಎತ್ತಿಕಟ್ಟಿದೆ.
ಯಡಿಯೂರಪ್ಪ ಕಟ್ಟಿದ ಹುತ್ತದಲ್ಲಿ ಹಾವೊಂದು ಸಂತೋಷದಿಂದ ಸಾಮ್ರಾಜ್ಯ ಸ್ಥಾಪಿಸಲು ಹವಣಿಸುತ್ತಿರುವುದು ಬಿಜೆಪಿಯ ಅವನತಿಗೆ ಮುನ್ನುಡಿ ಬರೆಯಲಿದೆ ಎಂದು ಟ್ವೀಟ್ನಲ್ಲಿ ಬಿಜೆಪಿಯನ್ನು ಕೆರಳಿಸಿದೆ. ಟ್ವೀಟ್ ಮುಖಾಂತರ ಮಾತ್ರವಲ್ಲದೆ, ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಕೂಡ ಲಿಂಗಾಯತ ಸಮುದಾಯದ ವಿಚಾರವಾಗಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು.
ಬಿಜೆಪಿ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಕೂಡ ಲಿಂಗಾಯತ ಅಸ್ತ್ರ ಪ್ರಯೋಗಿಸಿದ್ದರು. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಲಿಂಗಾಯತ, ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್, ಬಿಜೆಪಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಬಿಜೆಪಿ ಬಲದಿಂದ. ಆದರೆ ಇವತ್ತು ಅವರನ್ನೇ ಕಡೆಗಣಿಸಿದೆ. ಸಮುದಾಯವನ್ನೂ ಮತ್ತು ನಾಯಕತ್ವ ತೆಗೆದು ಹಾಕುವ ಹಿಡನ್ ಅಜೆಂಡಾವನ್ನು ಹೊಂದಿದೆ. ನಿಜವಾಗಿಯೂ ಈ ಸಮುದಾಯದ ನಾಯಕರು ಅರ್ಥೈಸಿಕೊಳ್ಳಬೇಕು. ಇದು ನನ್ನೊಬ್ಬನ ವೈಯಕ್ತಿಕ ಪ್ರಶ್ನೆ ಅಲ್ಲ, ಸಮುದಾಯದ ಪ್ರಶ್ನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈವರೆಗೂ ನಾನು 6 ಸಲ ಗೆದ್ದು ವಿಧಾನಸಭೆ ಪ್ರವೇಶಿಸಿದ್ದೇನೆ. ಮುಖ್ಯಮಂತ್ರಿಯೂ ಆಗಿದ್ದೇನೆ. ಆದರೆ ಮುಂದಿನ ಭವಿಷ್ಯದ ಬಗ್ಗೆ ನನಗೇನು ಇಲ್ಲ. ಆದರೆ ಸಮುದಾಯದ ಹಿತದೃಷ್ಟಿಯೇ ಮುಖ್ಯ. ಅದಕ್ಕಾಗಿ ನಾನು ಹೇಳುತ್ತಿದ್ದೇನೆ. ನೀವು ಎಚ್ಚರವಾಗಿರಬೇಕು. ಬಿಜೆಪಿಯಿಂದ ಮುಂದೆ ಗಂಡಾಂತರ ಇದೆ ಎಂಬುದನ್ನು ಅರಿಯಿರಿ. ಆ ಗಂಡಾಂತರದಿಂದ ಪಾರಾಗಲು ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಸಂಪೂರ್ಣ ಬೆಂಬಲ ಬೇಕು. ಒಟ್ಟಾಗಿ ಪಾಠ ಕಲಿಸೋಣ. ಇಲ್ಲವಾದಲ್ಲಿ ಸರ್ವಾಧಿಕಾರ ಪ್ರವೃತ್ತಿ ಮುಂದುವರೆಯುತ್ತದೆ ಎಂದಿದ್ದಾರೆ.
ಇಂದಿನ ಪ್ರಮುಖ ರಾಜಕೀಯ ಸುದ್ದಿ
Corruption Rate Card: ಇದು ಬಿಜೆಪಿಯ ಭ್ರಷ್ಟಾಚಾರದ ದರ ಪಟ್ಟಿ; ಸಿಎಂ ಪೋಸ್ಟ್ಗೆ 2500 ಕೋಟಿ, ಸಚಿವ ಸ್ಥಾನ 500 ಕೋಟಿಗೆ ಡೀಲ್; ಆರೋಪ
ಬಿಜೆಪಿಯನ್ನು 40% ಕಮೀಷನ್ ಸರ್ಕಾರ ಎಂದಿರುವ ಕಾಂಗ್ರೆಸ್, ಎಷ್ಟೆಷ್ಟು ಪರ್ಸೆಂಟ್ ಲೂಟಿ ಮಾಡಿದೆ ಎಂದು ಆರೋಪಿಸಿದೆ. ಅಂಕಿ-ಅಂಶದ ಸಮೇತ ‘ಭ್ರಷ್ಟಾಚಾರ ದರ ಪಟ್ಟಿ‘ಯನ್ನು (Corruption Rate Card) ಕಾಂಗ್ರೆಸ್ ಬಿಡುಗಡೆ ಮಾಡಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ನ ಪ್ರಮುಖ ನಾಯಕರು, ಈ ಆರೋಪಗಳಿಗೆ ಮೊದಲು ಉತ್ತರ ಕೊಡಿ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ. ಈ ಕುರಿತ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.