logo
ಕನ್ನಡ ಸುದ್ದಿ  /  ಕ್ರೀಡೆ  /  10 ಮೀಟರ್​ ಏರ್​ ಪಿಸ್ತೂಲ್​​ನಲ್ಲಿ ಫೈನಲ್ ಪ್ರವೇಶಿಸಿದ ಮನು ಭಾಕರ್​; ರಿದಮ್ ಕಳೆದಕೊಂಡ ರಿದಮ್ ಸಾಂಗ್ವಾನ್

10 ಮೀಟರ್​ ಏರ್​ ಪಿಸ್ತೂಲ್​​ನಲ್ಲಿ ಫೈನಲ್ ಪ್ರವೇಶಿಸಿದ ಮನು ಭಾಕರ್​; ರಿದಮ್ ಕಳೆದಕೊಂಡ ರಿದಮ್ ಸಾಂಗ್ವಾನ್

Prasanna Kumar P N HT Kannada

Jul 27, 2024 06:11 PM IST

google News

10 ಮೀಟರ್​ ಏರ್​ ಪಿಸ್ತೂಲ್​​ನಲ್ಲಿ ಫೈನಲ್ ಪ್ರವೇಶಿಸಿದ ಮನು ಭಾಕರ್​

    • Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ನ ಮಹಿಳೆಯರ 10 ಮೀಟರ್​ ಏರ್ ಪಿಸ್ತೂಲ್‌ ಅರ್ಹತಾ ಸುತ್ತಿನಲ್ಲಿ ಭಾರತದ ಮನು ಭಾಕರ್​ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಫೈನಲ್​ ಪ್ರವೇಶಿಸಿದ್ದು, ಪದಕದ ಭರವಸೆ ಮೂಡಿಸಿದ್ದಾರೆ.
10 ಮೀಟರ್​ ಏರ್​ ಪಿಸ್ತೂಲ್​​ನಲ್ಲಿ ಫೈನಲ್ ಪ್ರವೇಶಿಸಿದ ಮನು ಭಾಕರ್​
10 ಮೀಟರ್​ ಏರ್​ ಪಿಸ್ತೂಲ್​​ನಲ್ಲಿ ಫೈನಲ್ ಪ್ರವೇಶಿಸಿದ ಮನು ಭಾಕರ್​

2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಮಹಿಳೆಯರ 10 ಮೀಟರ್​ ಏರ್ ಪಿಸ್ತೂಲ್‌ನಲ್ಲಿ ಭಾರತದ ಮನು ಭಾಕರ್​ ಅವರು ಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದು, ಪದಕದ ಭರವಸೆ ಮೂಡಿಸಿದ್ದಾರೆ. ಮನು ಭಾಕರ್ 60 ಶೂಟ್​​ಗಳಲ್ಲಿ 580 ಅಂಕಗಳೊಂದಿಗೆ 3ನೇ ಸ್ಥಾನ ಪಡೆದರು. ಟೊಕಿಯೊ ಒಲಿಂಪಿಕ್ಸ್​​ನಲ್ಲೂ 3 ಶೂಟಿಂಗ್ ಈವೆಂಟ್‌ಗಳಲ್ಲಿ ಭಾಗವಹಿಸಿದ್ದ ಮನು ಭಾಕರ್​, ಒಂದರಲ್ಲೂ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಇದೀಗ ಪದಕ ಗೆಲ್ಲುವ ಅವಕಾಶ ಅವರಿಗೆ ಸಿಕ್ಕಿದೆ.

ಆದರೆ ಮತ್ತೊಬ್ಬ ಆಟಗಾರ್ತಿ ರಿದಮ್ ಸಾಂಗ್ವಾನ್ ಅವರು ಅಗ್ರ-8ರೊಳಗೆ ಅವಕಾಶ ಪಡೆಯಲು ವಿಫಲರಾದರು. ಅವರು 60 ಶೂಟ್​​ಗಳಲ್ಲಿ 573 ಅಂಕಗಳೊಂದಿಗೆ 15ನೇ ಸ್ಥಾನಕ್ಕೆ ತೃಪ್ತಿಯಾದರು. ಅವರು2ನೇ ಸುತ್ತಿನಲ್ಲಿ 92 ಅಂಕ ಪಡೆದು ತೀವ್ರ ಹಿನ್ನಡೆಗೆ ಒಳಗಾದರು. ಮತ್ತೆ ಕಂಬ್ಯಾಕ್ ಮಾಡಲು ಪ್ರಯತ್ನಿಸಿದರೂ ಇನ್ನುಳಿದ ಸ್ಪರ್ಧಿಗಳು ಅವರನ್ನು ಮುಂದೆ ಹೋಗಲು ಬಿಡಲಿಲ್ಲ. ಹಾಗಾಗಿ, ಅವರು ಕ್ರೀಡಾ ಕೂಟದಿಂದ ಹೊರ ಬೀಳುವಂತಾಯಿತು.

ಜುಲೈ 28ರ ಭಾನುವಾರ ಮಧ್ಯಾಹ್ನ 3:30 10 ಮೀ ಏರ್ ಪಿಸ್ತೂಲ್ ಫೈನಲ್ ನಿಗದಿಯಾಗಿದ್ದು, ಮನು ಭಾಕರ್​ ಚಿನ್ನದ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.

ಫೈನಲ್​ಗೆ ಅರ್ಹತೆ ಪಡೆದವರು

ವೆರೋನಿಕಾ ಮೇಜರ್-582 ಅಂಕ (ಹಂಗೇರಿ), ಓ ಯೆ ಜಿನ್-582 (ಸೌತ್ ಕೊರಿಯಾ), ಮನು ಭಾಕರ್-580 (ಭಾರತ), ಟ್ರಿನ್ ಥು ವಿನ್ಹ್-578 (ವಿಯೆಟ್ನಾಂ), ಕಿಮ್ ಯೆ-ಜಿ-578 (ಸೌತ್ ಕೊರಿಯಾ), ಲಿ ಕ್ಸುಯೆ-577 (ಚೀನಾ), ಸೆವ್ವಲ್ ಇಳಯ್ದ ತರಹನ್-577 (ಟರ್ಕಿ), ಜಿಯಾಂಗ್ ರಾಂಕ್ಸಿನ್-577 (ಚೀನಾ).

ಶೂಟಿಂಗ್ - ಮೊದಲ ಸುತ್ತು

ಮನು ಭಾಕರ್​​: 97 ಅಂಕ (9, 10, 10, 10, 10, 10, 9, 9, 10, 10) - 3ನೇ ಸ್ಥಾನ (ಒಟ್ಟು ಸ್ಕೋರ್​: 97)

ರಿದಮ್ ಸಾಂಗ್ವಾನ್: 97 points (9, 10, 10, 10, 10, 10, 9, 9, 10, 10) - 7ನೇ ಸ್ಥಾನ (ಒಟ್ಟು ಸ್ಕೋರ್: 97)

ಶೂಟಿಂಗ್ - ಎರಡನೇ ಸುತ್ತು

ಮನು ಭಾಕರ್​​: 97 ಅಂಕ (10, 10, 10, 9, 10, 10, 10, 9, 10, 9) - 4ನೇ ಸ್ಥಾನ (ಒಟ್ಟು ಸ್ಕೋರ್ 194)

ರಿದಮ್ ಸಾಂಗ್ವಾನ್: 92 ಅಂಕ (10, 9, 9, 9, 9, 10, 10, 9, 8, 9) - 26ನೇ ಸ್ಥಾನ (ಒಟ್ಟು ಸ್ಕೋರ್ 187)

ಶೂಟಿಂಗ್ - ಮೂರನೇ ಸುತ್ತು

ಮನು ಭಾಕರ್​: 98 ಅಂಕ (9, 10, 9, 10, 10, 10, 10, 10, 10, 10) - 2ನೇ ಸ್ಥಾನ (ಒಟ್ಟು ಸ್ಕೋರ್ 292)

ರಿದಮ್ ಸಾಂಗ್ವಾನ್: 97 ಅಂಕ (10, 10, 9, 9, 10, 10, 10, 9, 10, 10) - 18ನೇ ಸ್ಥಾನ (ಒಟ್ಟು ಸ್ಕೋರ್ 286)

ಶೂಟಿಂಗ್ - ನಾಲ್ಕನೇ ಸುತ್ತು

ಮನು ಭಾಕರ್​: 96 ಅಂಕ (10, 9, 10, 10, 10, 9, 9, 9, 10, 10) - 3ನೇ ಸ್ಥಾನ (ಒಟ್ಟು ಸ್ಕೋರ್ 388)

ರಿದಮ್ ಸಾಂಗ್ವಾನ್: 96 ಅಂಕ (10, 10, 9, 9, 9, 10, 9, 10, 10, 10) - 17ನೇ ಸ್ಥಾನ (ಒಟ್ಟು ಸ್ಕೋರ್ 382)

ಶೂಟಿಂಗ್ - ಐದನೇ ಸುತ್ತು

ಮನು ಭಾಕರ್​: 96 ಅಂಕ (10, 10, 8, 10, 9, 9, 10, 10, 10, 10) - 5ನೇ ಸ್ಥಾನ (ಒಟ್ಟು ಸ್ಕೋರ್ 484)

ರಿದಮ್ ಸಾಂಗ್ವಾನ್: 95 ಅಂಕ (10, 10, 10, 9, 9, 9, 9, 10, 10, 9) - 18ನೇ ಸ್ಥಾನ (ಒಟ್ಟು ಸ್ಕೋರ್ 477)

ಶೂಟಿಂಗ್ - ಆರನೇ ಸುತ್ತು

ಮನು ಭಾಕರ್​: 96 ಅಂಕ (9, 10, 10, 10, 9, 10, 9, 10, 10, 9) - 3ನೇ ಸ್ಥಾನ (ಒಟ್ಟು ಸ್ಕೋರ್ 580)

ರಿದಮ್ ಸಾಂಗ್ವಾನ್: 96 ಅಂಕ (10, 9, 9, 10, 10, 10, 9, 10, 10, 9) - 15ನೇ ಸ್ಥಾನ (ಒಟ್ಟು ಸ್ಕೋರ್​ 573)

ಫೈನಲ್​ಗೆ ಅರ್ಹತೆ ಪಡೆದವರ ಪಟ್ಟಿ ಮತ್ತು ಅವರು ಪಡೆದ ಅಂಕ

ಇನ್ನಷ್ಟು ಕ್ರಿಕೆಟ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ಯಾರಿಸ್ ಒಲಿಂಪಿಕ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ