ಬೆಂಗಳೂರಿಗೆ ಪರ್ದೀಪ್ ನರ್ವಾಲ್ ನಾಯಕ, ವೇಳಾಪಟ್ಟಿಯಲ್ಲಿ ಬದಲಾವಣೆ: ಪ್ರೊ ಕಬಡ್ಡಿ ಲೀಗ್ನ ಹೊಸ ಅಪ್ಡೇಟ್ಸ್ ಇಲ್ಲಿದೆ
Oct 05, 2024 10:19 AM IST
ಪ್ರೊ ಕಬಡ್ಡಿ ಲೀಗ್
- Pro Kabaddi League 11: ಬೆಂಗಳೂರು ಬುಲ್ಸ್ 11ನೇ ಸೀಸನ್‌ಗೆ ಪ್ರದೀಪ್ ನರ್ವಾಲ್ ಅವರನ್ನು ನಾಯಕರನ್ನಾಗಿ ನೇಮಿಸಿದೆ. ನರ್ವಾಲ್ ನಾಯಕತ್ವದಲ್ಲಿ ತಂಡವು ಐದು ವರ್ಷಗಳ ನಂತರ ಮತ್ತೊಮ್ಮೆ ಪಿಕೆಎಲ್ ಪ್ರಶಸ್ತಿಯನ್ನು ಗೆಲ್ಲುತ್ತಾ ನೋಡಬೇಕು. ಉತ್ತಮ ಆಟಗಳು ಮತ್ತು ಅನುಭವಗಳನ್ನು ಹೊಂದಿರುವ ನರ್ವಾಲ್ ಅವರ ದಾಖಲೆ ನಾಯಕರಾಗಿ ಅದ್ಭುತವಾಗಿದೆ.
PKL season 11: ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಸೀಸನ್ 11 ಅಕ್ಟೋಬರ್ 18 ರಿಂದ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ವೇಳಾಪಟ್ಟಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ. ಪಂದ್ಯಗಳ ವೇಳಾಪಟ್ಟಿ ಅಥವಾ ದಿನಾಂಕಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಮೊದಲ ಮತ್ತು 2ನೇ ಪಂದ್ಯಗಳನ್ನು ಅದಲು-ಬದಲು ಮಾಡಲಾಗಿದೆ.
ಪ್ರೊ ಕಬಡ್ಡಿ ಲೀಗ್ 11 ನೇ ಆವೃತ್ತಿಯು ಅಕ್ಟೋಬರ್ 18 ರಂದು ಹೈದರಾಬಾದ್‌ನಲ್ಲಿ ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ನಡುವಿನ ಮೊದಲ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಈ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ಮತ್ತು ಸ್ಟಾರ್ ರೈಡರ್ ಪವನ್ ಸೆಹ್ರಾವತ್ ಅವರು ಬೆಂಗಳೂರು ಬುಲ್ಸ್‌ನ ಪ್ರದೀಪ್ ನರ್ವಾಲ್ ಅವರನ್ನು ಎದುರಿಸಲಿದ್ದಾರೆ.
ಈ ಬಾರಿ, ಪ್ರೊ ಕಬಡ್ಡಿ ಲೀಗ್ ಮೂರು-ನಗರ ಸ್ವರೂಪದೊಂದಿಗೆ ನಡೆಯಲಿದೆ. 2024 ರ ಆವೃತ್ತಿಯು ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 18 ರಿಂದ ನವೆಂಬರ್ 9 ರವರೆಗೆ ನಡೆದರೆ, ನಂತರ ನವೆಂಬರ್ 10 ರಿಂದ ಡಿಸೆಂಬರ್ 1 ರವರೆಗೆ ಎರಡನೇ ಲೆಗ್ ನೋಯ್ಡಾ ಒಳಾಂಗಣ ಕ್ರೀಡಾಂಗಣಕ್ಕೆ ಸ್ಥಳಾಂತರಗೊಳ್ಳಲಿದೆ. ಮೂರನೇ ಹಂತವು ಡಿಸೆಂಬರ್ 3 ರಿಂದ ಡಿಸೆಂಬರ್ 24 ರವರೆಗೆ ಪುಣೆಯ ಬಾಲೆವಾಡಿ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಬೆಂಗಳೂರಿಗೆ ಪರ್ದೀಪ್ ನರ್ವಾಲ್ ನಾಯಕ
ಬೆಂಗಳೂರು ಬುಲ್ಸ್ 11ನೇ ಸೀಸನ್‌ಗೆ ಪ್ರದೀಪ್ ನರ್ವಾಲ್ ಅವರನ್ನು ನಾಯಕರನ್ನಾಗಿ ನೇಮಿಸಿದೆ. ನರ್ವಾಲ್ ನಾಯಕತ್ವದಲ್ಲಿ ತಂಡವು ಐದು ವರ್ಷಗಳ ನಂತರ ಮತ್ತೊಮ್ಮೆ ಪಿಕೆಎಲ್ ಪ್ರಶಸ್ತಿಯನ್ನು ಗೆಲ್ಲುತ್ತಾ ನೋಡಬೇಕು. ಉತ್ತಮ ಆಟಗಳು ಮತ್ತು ಅನುಭವಗಳನ್ನು ಹೊಂದಿರುವ ನರ್ವಾಲ್ ಅವರ ದಾಖಲೆ ನಾಯಕರಾಗಿ ಅದ್ಭುತವಾಗಿದೆ. ಲೀಗ್ನ ಐದನೇ ಸೀಸನ್ನಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು ಪಿಕೆಎಲ್ ಪ್ರಶಸ್ತಿಗೆ ದೂಡಿದ್ದ ನರ್ವಾಲ್ 26 ಪಂದ್ಯಗಳಲ್ಲಿ ಒಟ್ಟು 369 ರೇಡ್ ಪಾಯಿಂಟ್ ಗಳನ್ನು ಗಳಿಸುವ ಮೂಲಕ ಅಮೋಘ ಪ್ರದರ್ಶನ ತೋರಿದರು.
ನರ್ವಾಲ್ ಅವರನ್ನು ನಾಯಕನಾಗಿ ಆಯ್ಕೆ ಮಾಡುವಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಲೀಗ್‌ನಲ್ಲಿ ಅವರಿಗೆ ಇರುವ ಅನುಭವ. ಎರಡನೇ ಋತುವಿನಲ್ಲಿ ಚೊಚ್ಚಲ ಪ್ರವೇಶ ಮಾಡಿದ ನಂತರ, ನರ್ವಾಲ್ ಒಟ್ಟು 170 ಪಂದ್ಯಗಳನ್ನು ಆಡಿದ್ದಾರೆ. ಇದು ಯಾವುದೇ ತಂಡದ ಆಟಗಾರರಿಗಿಂತ ಹೆಚ್ಚು ಪಂದ್ಯವಾಗಿದೆ.
ಪಿಕೆಎಲ್ 10 ರಲ್ಲಿ ಸೌರಭ್ ನಂದಲ್ ನಾಯಕತ್ವದಲ್ಲಿ ತಂಡವು ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ ನಾಯಕತ್ವದಲ್ಲಿ ಬದಲಾವಣೆಯಾಯಿತು. ನಂದಲ್ ನೇತೃತ್ವದಲ್ಲಿ ಬೆಂಗಳೂರು ಬುಲ್ಸ್ 22 ಪಂದ್ಯಗಳಲ್ಲಿ ಕೇವಲ 8ರಲ್ಲಿ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ 8ನೇ ಸ್ಥಾನ ಗಳಿಸಿತು. ಈ ಅವಧಿಯಲ್ಲಿ ನಂದಲ್ ಅವರ ಪ್ರದರ್ಶನವೂ ಕಳಪೆಯಾಗಿತ್ತು. ಡಿಫೆಂಡರ್ 21 ಪಂದ್ಯಗಳಲ್ಲಿ ಕೇವಲ 49 ಅಂಕಗಳನ್ನು ಗಳಿಸಿದರು.
ಬೆಂಗಳೂರು ಬುಲ್ಸ್ ತಂಡವು ಆರಂಭದಲ್ಲಿ ಹೈದರಾಬಾದ್‌ನಲ್ಲಿ ಒಟ್ಟು 8 ಪಂದ್ಯಗಳನ್ನಾಡಲಿದೆ. ಅಕ್ಟೋಬರ್ 18 ರಂದು ತೆಲುಗು ಟೈಟಾನ್ಸ್ ವಿರುದ್ಧ, ಅಕ್ಟೋಬರ್ 20 ರಂದು ಗುಜರಾತ್ ಜೈಂಟ್ಸ್ ವಿರುದ್ಧ, ಇನ್ನು ಅಕ್ಟೋಬರ್ 22 ರಂದು ಯುಪಿ ಯೋಧಾ, ಅಕ್ಟೋಬರ್ 25 ರಂದು ಪುಣೇರಿ ಪಲ್ಟನ್ ತಂಡಗಳನ್ನು ಎದುರಿಸಲಿದೆ. ಹಾಗೆಯೇ ಅಕ್ಟೋಬರ್ 29 ರಂದು ದಬಾಂಗ್ ಡೆಲ್ಲಿ ತಂಡದ ವಿರುದ್ಧ ಸೆಣಸಲಿದೆ. ಇದಾದ ಬಳಿಕ ನವೆಂಬರ್ 2 ರಂದು ತೆಲುಗು ಟೈಟಾನ್ಸ್, ನವೆಂಬರ್ 4 ರಂದು ತಮಿಳ್ ತಲೈವಾಸ್ ಹಾಗೂ ನವೆಂಬರ್ 9 ರಂದು ಬೆಂಗಾಳ್ ವಾರಿಯರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಕಣಕ್ಕಿಳಿಯಲಿದೆ.