PKL Season 11: ಹೈದರಾಬಾದ್ ಹಂತದ ಪಂದ್ಯಗಳಿಗೆ ಟಿಕೆಟ್ ಬುಕ್ಕಿಂಗ್ ಆರಂಭ; ಮನೆಯಿಂದಲೇ ಬುಕ್ ಮಾಡುವುದು ಹೇಗೆ?
Oct 05, 2024 08:43 AM IST
ಪ್ರೊ ಕಬಡ್ಡಿ ಲೀಗ್-11ನೇ ಆವೃತ್ತಿಗೆ ಟಿಕೆಟ್ ಮಾರಾಟ ಪ್ರಾರಂಭ
- Pro Kabaddi League 11: ಕಬಡ್ಡಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಹೈದರಾಬಾದ್ ಹಂತದಲ್ಲಿ. ನಡೆಯುವ ಪಂದ್ಯಗಳಿಗೆ ಟಿಕೆಟ್ ಮಾರಾಟ ಆರಂಭವಾಗಿದೆ.
PKL 11 Ticket Booking: ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್ ಅಕ್ಟೋಬರ್ 18ರಿಂದ ಪ್ರಾರಂಭವಾಗಲಿದೆ. ಈ ಬಾರಿ ಮೂರು ನಗರಗಳಲ್ಲಿ ಮಾತ್ರ ಪಂದ್ಯಗಳು ನಡೆಯಲಿವೆ. ಮೊದಲ ಹಂತವು ಹೈದರಾಬಾದ್‌ನಲ್ಲಿ ನಡೆಯಲಿದ್ದು, ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 18 ರಿಂದ ನವೆಂಬರ್ 9 ರವರೆಗೆ ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಈ ನಡುವೆ ಕಬಡ್ಡಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಹೈದರಾಬಾದ್ ಲೆಗ್ನಲ್ಲಿ ನಡೆಯುವ ಪಂದ್ಯಗಳಿಗೆ ಟಿಕೆಟ್ ಮಾರಾಟ ಆರಂಭವಾಗಿದೆ.
ಹೈದರಾಬಾದ್ ನಂತರ ನವೆಂಬರ್ 10 ರಿಂದ ಡಿಸೆಂಬರ್ 1 ರವರೆಗೆ ಎರಡನೇ ಹಂತವು ನೋಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತವೆ. 3ನೇ ಹಂತವು ಡಿಸೆಂಬರ್ 3 ರಿಂದ ಡಿಸೆಂಬರ್ 24 ರವರೆಗೆ ಪುಣೆಯ ಬಾಲೆವಾಡಿ ಬ್ಯಾಡ್ಮಿಂಟನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪ್ರೊ ಕಬಡ್ಡಿ ಲೀಗ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಅಕ್ಟೋಬರ್ 18 ರಿಂದ ಹೈದರಾಬಾದ್‌ನಲ್ಲಿ (ಮೊದಲ ಲೆಗ್) ನಡೆಯಲಿರುವ ಪಂದ್ಯಗಳ ಟಿಕೆಟ್‌ಗಳ ಮಾರಾಟವನ್ನು ಪ್ರಾರಂಭಿಸಲಾಗಿದೆ. ಫ್ಯಾನ್ಸ್ ಬುಕ್ ಮೈ ಶೋನಲ್ಲಿ (https://in.bookmyshow.com/explore/kabaddi) ಟಿಕೆಟ್ ಖರೀದಿಸಬಹುದು. ಪಿಕೆಎಲ್ ಸೀಸನ್ 11ರ ಟಿಕೆಟ್ ದರ ಸುಮಾರು ರೂ 350 ರಿಂದ 6000 ತನಕ ಇದೆ.
ಬುಲ್ಸ್ vs ಟೈಟಾನ್ಸ್ ಮುಖಾಮುಖಿ ದಾಖಲೆ
ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಆದರೆ ಪಿಕೆಎಲ್ ಇತಿಹಾಸದಲ್ಲೇ ಟೈಟಾನ್ಸ್ ವಿರುದ್ಧ ಬುಲ್ಸ್ ತಂಡವೇ ಅಧಿಕ ಪಂದ್ಯಗಳನ್ನು ಗೆದ್ದಿದೆ. ಉಭಯ ತಂಡಗಳು 23 ಬಾರಿ ಮುಖಾಮುಖಿ ಆಗಿದ್ದು, 16 ಬಾರಿ ಬೆಂಗಳೂರು ತಂಡವೇ ಗೆಲುವು ಸಾಧಿಸಿದೆ. ಇನ್ನು 3 ಪಂದ್ಯಗಳಲ್ಲಿ ತೆಲುಗು ಟೈಟಾನ್ಸ್ ಗೆದ್ದಿದೆ. ಆದರೆ ನಾಲ್ಕು ಪಂದ್ಯಗಳು ಟೈ ಆಗಿವೆ.
ನೇರ ಪ್ರಸಾರ, ಲೈವ್ ಸ್ಟ್ರೀಮಿಂಗ್ ವೀಕ್ಷಣೆ ಹೇಗೆ?
ಪಿಕೆಎಲ್ 11ನೇ ಆವೃತ್ತಿಯ ಮೊದಲ ಪಂದ್ಯ ಸೇರಿದಂತೆ ಸೀಸನ್‌ನ ಎಲ್ಲಾ ಪಂದ್ಯಗಳನ್ನು ಟಿವಿ ಮೂಲಕ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಇದೇ ವೇಳೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಪಿಕೆಎಲ್‌ನ ಸೀಸನ್-ಓಪನರ್ ಹಾಗೂ ಎಲ್ಲಾ ಪಂದ್ಯಗಳನ್ನು ಮೊಬೈಲ್ ಮೂಲಕ ವೀಕ್ಷಿಸಬಹುದು.