PKL-10 2023: ಪ್ರೊ ಕಬಡ್ಡಿ ಲೀಗ್ ನೇರ ಪ್ರಸಾರ ಎಲ್ಲಿ; ಉಚಿತವಾಗಿ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ
Nov 23, 2023 01:58 PM IST
ಪ್ರೊ ಕಬಡ್ಡಿ ಲೀಗ್ 2023.
- Pro Kabaddi League 2023 Live Streaming: ಅಭಿಮಾನಿಗಳು ಪ್ರೊ ಕಬಡ್ಡಿ ಲೀಗ್ನ ಪಂದ್ಯಗಳನ್ನು ಆನ್‌ಲೈನ್‌ನಲ್ಲಿ, ಮೊಬೈಲ್ ಮತ್ತು ಟಿವಿಯಲ್ಲಿ ಹೇಗೆ ವೀಕ್ಷಿಸಬಹುದು ಎಂಬುದರ ಮಾಹಿತಿ ಇಲ್ಲಿದೆ.
Pro Kabaddi League 2023: ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಡಿಸೆಂಬರ್ 2ರಿಂದ ಫೆಬ್ರವರಿ 21ರವರೆಗೂ3 ತಿಂಗಳ ಕಾಲ ನಾನ್ ಸ್ಟಾಫ್ ಮನೆರಂಜನೆ ನೀಡಲು ಸಜ್ಜಾಗುತ್ತಿದೆ. ಈಗಾಗಲೇ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಉದ್ಘಾಟನಾ ಪಂದ್ಯ ಡಿಸೆಂಬರ್ 2ರಂದು ಅಹ್ಮದಾಬಾದ್ನ ಅರೆನಾ ಬೈ ಟ್ರಾನ್ಸ್‌ಸ್ಟಾಡಿಯಾ ಸ್ಟೇಡಿಯಂನಲ್ಲಿ ನಡೆಯಲಿದೆ.
ಆರಂಭಿಕ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳು ಕಾದಾಟ ನಡೆಸಲಿವೆ. ಈಗಾಗಲೇ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಪ್ರಕಟಿಸಲಾಗಿದೆ. ಇನ್ನು ಫ್ಲೇ ಆಫ್ ಮತ್ತು ಫೈನಲ್ ಪಂದ್ಯದ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ. ಹಾಗಾದರೆ ಈ ಕಬಡ್ಡಿ ಲೀಗ್ ಅನ್ನು ಎಲ್ಲಿ, ಹೇಗೆ ವೀಕ್ಷಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.
ಮೊಬೈಲ್ ಅಪ್ಲಿಕೇಶನ್, ಟಿವಿ ಮತ್ತು ಲ್ಯಾಪ್‌ಟಾಪ್‌ನಲ್ಲಿ ಪ್ರೊ ಕಬಡ್ಡಿ ಲೀಗ್ ಉಚಿತವಾಗಿ ವೀಕ್ಷಿಸುವುದು ಹೇಗೆ?
ಪ್ರೊ ಕಬಡ್ಡಿ ಲೀಗ್ 2023 ಪಂದ್ಯಗಳ ನೇರ ಪ್ರಸಾರವು ಎಲ್ಲಾ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ಲಭ್ಯವಿರುತ್ತದೆ. ಸ್ಟಾರ್ ಸ್ಪೋರ್ಟ್ಸ್ 1, (HD+HD), ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ (SD+HD), ಸ್ಟಾರ್ ಸ್ಪೋರ್ಟ್ಸ್ತಮಿಳು, ಸ್ಟಾರ್ ಸ್ಪೋರ್ಟ್ಸ್ ತೆಲುಗು, ಸ್ಟಾರ್ ಸ್ಪೋರ್ಟ್ಸ್ ಕನ್ನಡ (HD+SD) ಚಾನೆಲ್ನಲ್ಲಿ ನೇರಪ್ರಸಾರ ಬರಲಿದೆ. ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತವಾಗಿ ನೋಡಬಹುದು.
ಪಂದ್ಯಗಳು ಎಲ್ಲೆಲ್ಲಿ ನಡೆಯುತ್ತವೆ?
ಪಂದ್ಯಗಳು 12 ನಗರಗಳಲ್ಲಿ ನಡೆಯಲಿವೆ. ಅಹಮದಾಬಾದ್ (ಡಿಸೆಂಬರ್ 2 ರಿಂದ 7ರವರೆಗೆ), ಬೆಂಗಳೂರು (ಡಿಸೆಂಬರ್ 8-13), ಪುಣೆ (ಡಿಸೆಂಬರ್ 15-20), ಚೆನ್ನೈ (ಡಿಸೆಂಬರ್ 22-27), ನೋಯ್ಡಾ (ಡಿಸೆಂಬರ್ 29, 2023 - ಜನವರಿ 3, 2024), ಮುಂಬೈ (ಜನವರಿ 5-10), ಜೈಪುರ (ಜನವರಿ 12-17), ಹೈದರಾಬಾದ್ (ಜನವರಿ 19-24), ಪಾಟ್ನಾ (ಜನವರಿ 26-31), ದೆಹಲಿ (ಫೆಬ್ರವರಿ 2-7), ಕೋಲ್ಕತ್ತಾ (ಫೆಬ್ರವರಿ 9-14) ಮತ್ತು ಪಂಚಕುಲ (ಫೆಬ್ರವರಿ 16-21).
ಲೀಗ್ನಲ್ಲಿ ನಡೆಯುವ ಪಂದ್ಯಗಳೆಷ್ಟು?
ಈ ಆವೃತ್ತಿಯಲ್ಲಿ ಒಟ್ಟು 137 ಪಂದ್ಯಗಳಲ್ಲಿ ಚಾಂಪಿಯನ್‌ಶಿಪ್ ಗೆಲ್ಲಲು 12 ತಂಡಗಳು ಪರಸ್ಪರ ಸ್ಪರ್ಧಿಸಲಿವೆ.
ಪಾಲ್ಗೊಳ್ಳುವ ತಂಡಗಳು
- ಬೆಂಗಾಲ್ ವಾರಿಯರ್ಸ್
- ಬೆಂಗಳೂರು ಬುಲ್ಸ್
- ದಬಾಂಗ್ ಡೆಲ್ಲಿ
- ಗುಜರಾತ್ ಜೈಂಟ್ಸ್
- ಹರಿಯಾಣ ಸ್ಟೀಲರ್ಸ್
- ಜೈಪುರ ಪಿಂಕ್ ಪ್ಯಾಂಥರ್ಸ್
- ಪಾಟ್ನಾ ಪೈರೇಟ್ಸ್
- ಪುಣೇರಿ ಪಲ್ಟನ್
- ತಮಿಳು ತಲೈವಾಸ್
- ತೆಲುಗು ಟೈಟಾನ್ಸ್
- ಯು ಮುಂಬಾ
- ಯುಪಿ ಯೋಧಾ
ಅಂಕ ನಿರ್ಧರಿಸುವುದೇಗೆ?
ಗೆದ್ದ ತಂಡಕ್ಕೆ 5 ಅಂಕ, ಸೋತ ತಂಡಕ್ಕೆ 0 ಅಂಕ ನೀಡಲಾಗುತ್ತದೆ. ಪಂದ್ಯ ಟೈನಲ್ಲಿ ಅಂತ್ಯಗೊಂಡರೆ ಎರಡೂ ತಂಡಗಳಿಗೆ 3 ಅಂಕ ಸಿಗುತ್ತದೆ.