logo
ಕನ್ನಡ ಸುದ್ದಿ  /  ಕ್ರೀಡೆ  /  Pkl 11: ಪ್ರೊ ಕಬಡ್ಡಿ ಲೀಗ್‌ನ ಮೊದಲ ಆವೃತ್ತಿಯಲ್ಲಿ ನಾಯಕತ್ವ ವಹಿಸಿದ್ದ ಆಟಗಾರರು ಈಗ ಎಲ್ಲಿದ್ದಾರೆ?

PKL 11: ಪ್ರೊ ಕಬಡ್ಡಿ ಲೀಗ್‌ನ ಮೊದಲ ಆವೃತ್ತಿಯಲ್ಲಿ ನಾಯಕತ್ವ ವಹಿಸಿದ್ದ ಆಟಗಾರರು ಈಗ ಎಲ್ಲಿದ್ದಾರೆ?

Prasanna Kumar P N HT Kannada

Oct 14, 2024 12:17 PM IST

google News

ಪ್ರೊ ಕಬಡ್ಡಿ ಲೀಗ್‌ನ ಮೊದಲ ಆವೃತ್ತಿಯಲ್ಲಿ ನಾಯಕತ್ವ ವಹಿಸಿದ್ದ ಆಟಗಾರರು ಈಗ ಎಲ್ಲಿದ್ದಾರೆ?

    • PKL Season 11: ಪಿಕೆಎಲ್ ಅನ್ನು 2014 ರಲ್ಲಿ ಒಟ್ಟು 8 ತಂಡಗಳೊಂದಿಗೆ ಪ್ರಾರಂಭಿಸಲಾಯಿತು. ಮೊದಲ ಸೀಸನ್‌ನಲ್ಲಿ ಅನೇಕ ದಿಗ್ಗಜ ಆಟಗಾರರು ತಂಡದ ನಾಯಕತ್ವ ವಹಿಸಿದ್ದರು. ಆದರೆ ಈಗ ಆ ನಾಯಕರು ಎಲ್ಲಿ ಮತ್ತು ಏನು ಮಾಡುತ್ತಿದ್ದಾರೆ ಗೊತ್ತೇ?
ಪ್ರೊ ಕಬಡ್ಡಿ ಲೀಗ್‌ನ ಮೊದಲ ಆವೃತ್ತಿಯಲ್ಲಿ ನಾಯಕತ್ವ ವಹಿಸಿದ್ದ ಆಟಗಾರರು ಈಗ ಎಲ್ಲಿದ್ದಾರೆ?
ಪ್ರೊ ಕಬಡ್ಡಿ ಲೀಗ್‌ನ ಮೊದಲ ಆವೃತ್ತಿಯಲ್ಲಿ ನಾಯಕತ್ವ ವಹಿಸಿದ್ದ ಆಟಗಾರರು ಈಗ ಎಲ್ಲಿದ್ದಾರೆ?

ಪ್ರೊ ಕಬಡ್ಡಿ ಲೀಗ್ ಈವೆಂಟ್ ಶುರುವಾಗಿ 10 ವರ್ಷಗಳು ಕಳೆದಿವೆ. ಇದೀಗ ಪಿಕೆಎಲ್ 11 ಪಂದ್ಯಗಳ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ 10 ವರ್ಷಗಳ ಅವಧಿಯಲ್ಲಿ, ಪ್ರೊ ಕಬಡ್ಡಿ ಲೀಗ್ ಅಪಾರ ಯಶಸ್ಸನ್ನು ಸಾಧಿಸಿದೆ. ಪಿಕೆಎಲ್ ಅನ್ನು 2014 ರಲ್ಲಿ ಒಟ್ಟು 8 ತಂಡಗಳೊಂದಿಗೆ (ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್, ದಬಾಂಗ್ ಡೆಲ್ಲಿ ಕೆಸಿ, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್, ಪುಣೇರಿ ಪಲ್ಟನ್, ಯು ಮುಂಬಾ ಮತ್ತು ತೆಲುಗು ಟೈಟಾನ್ಸ್) ಪ್ರಾರಂಭಿಸಲಾಯಿತು. ಮೊದಲ ಸೀಸನ್‌ನಲ್ಲಿ ಅನೇಕ ದಿಗ್ಗಜ ಆಟಗಾರರು ತಂಡದ ನಾಯಕತ್ವ ವಹಿಸಿದ್ದರು. ಆದರೆ ಈಗ ಆ ನಾಯಕರು ಎಲ್ಲಿ ಮತ್ತು ಏನು ಮಾಡುತ್ತಿದ್ದಾರೆ ಗೊತ್ತೇ?.

1. ನೀಲೇಶ್ ಶಿಂಧೆ (ಬೆಂಗಾಲ್ ವಾರಿಯರ್ಸ್)

ಪ್ರೊ ಕಬಡ್ಡಿ ಲೀಗ್‌ನ ಮೊದಲ ಸೀಸನ್‌ನಲ್ಲಿ ನೀಲೇಶ್ ಶಿಂಧೆ ಅವರನ್ನು ಬೆಂಗಾಲ್ ವಾರಿಯರ್ಸ್ ತಂಡದ ನಾಯಕರನ್ನಾಗಿ ಮಾಡಲಾಗಿತ್ತು. ಈ ಅವಧಿಯಲ್ಲಿ, ತಂಡವು 7 ನೇ ಸ್ಥಾನವನ್ನು ತಲುಸಿತ್ತು ಮತ್ತು ಅವರು ಕೊನೆಯ ಬಾರಿಗೆ ಸೀಸನ್ 5 ರಲ್ಲಿ ಆಡಿದ್ದರು. PKL ನ ಆರನೇ ಸೀಸನ್‌ಗಾಗಿ ಶಿಂಧೆ ಹರಾಜಿನ ಭಾಗವಾಗಬೇಕಿತ್ತು, ಆದರೆ ಕೊನೆಯ ಕ್ಷಣದಲ್ಲಿ ಅವರ ಹೆಸರನ್ನು ಹಿಂತೆಗೆದುಕೊಳ್ಳಲಾಯಿತು. ಬಳಿಕ ಅವರು ಸಂಪೂರ್ಣವಾಗಿ ಲೀಗ್‌ನಿಂದ ಹೊರಗುಳಿದಿದ್ದಾರೆ.

2. ಮಂಜೀತ್ ಚಿಲ್ಲರ್ (ಬೆಂಗಳೂರು ಬುಲ್ಸ್)

ಪಿಕೆಎಲ್‌ನ ಮೊದಲ ಸೀಸನ್‌ನಲ್ಲಿ ಮಂಜೀತ್ ಚಿಲ್ಲರ್ ನಾಯಕತ್ವದಲ್ಲಿ ಬೆಂಗಳೂರು ಬುಲ್ಸ್ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿತ್ತು. ಮಂಜೀತ್ ಚಿಲ್ಲರ್ ಕೊನೆಯ ಬಾರಿಗೆ PKL 9 ನಲ್ಲಿ ತೆಲುಗು ಟೈಟಾನ್ಸ್‌ನ ಸಹಾಯಕ ಕೋಚ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದಾಗ್ಯೂ, ತಂಡದ ಕಳಪೆ ಪ್ರದರ್ಶನದ ನಂತರ, ಅವರನ್ನು ಹುದ್ದೆಯಿಂದ ತೆಗೆದುಹಾಕಲಾಯಿತು. ಈಗ ಅವರನ್ನು IPKL 2024 (ಇಂಡಿಯನ್ ಪ್ರೀಮಿಯರ್ ಕಬಡ್ಡಿ ಲೀಗ್) ಬ್ರಾಂಡ್ ಅಂಬಾಸಿಡರ್ ಮಾಡಲಾಗಿದೆ.

3. ಜಸ್ಮರ್ ಸಿಂಗ್ ಗುಲಿಯಾ (ದಬಾಂಗ್ ದೆಹಲಿ)

ಪ್ರೊ ಕಬಡ್ಡಿ ಲೀಗ್‌ನ ಮೊದಲ ಸೀಸನ್‌ನಲ್ಲಿ ದಬಾಂಗ್ ಡೆಲ್ಲಿ ನಾಯಕತ್ವದ ಜವಾಬ್ದಾರಿಯನ್ನು ಜಸ್ಮರ್ ಸಿಂಗ್ ಗುಲಿಯಾಗೆ ನೀಡಲಾಯಿತು. ಈ ಅವಧಿಯಲ್ಲಿ, ದಬಾಂಗ್ ಡೆಲ್ಲಿ 14 ಪಂದ್ಯಗಳಲ್ಲಿ ಒಟ್ಟು 5 ರಲ್ಲಿ ಗೆದ್ದು 6 ನೇ ಸ್ಥಾನದಲ್ಲಿತ್ತು. ಅವರು ಪಿಕೆಎಲ್‌ನಿಂದ ನಿವೃತ್ತರಾಗಿದ್ದಾರೆ ಮತ್ತು ಪ್ರಸ್ತುತ ಹರಿಯಾಣದಲ್ಲಿ ಪೊಲೀಸ್‌ ಕೆಲಸ ಮಾಡುತ್ತಿದ್ದಾರೆ.

4. ನವನೀತ್ ಗೌತಮ್ (ಜೈಪುರ ಪಿಂಕ್ ಪ್ಯಾಂಥರ್ಸ್)

ಪಿಕೆಎಲ್​ನ ಮೊದಲ ಋತುವಿನಲ್ಲಿ ನವನೀತ್ ಗೌತಮ್ ನಾಯಕರಾಗಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದರು. ಪ್ರೊ ಕಬಡ್ಡಿ ಲೀಗ್ ಸೀಸನ್ 5 ರಲ್ಲಿ ಕೊನೆಯದಾಗಿ ಮ್ಯಾಟ್ ಮೇಲೆ ಕಾಣಿಸಿಕೊಂಡಿದ್ದ ನವನೀತ್ ಗೌತಮ್, 2019 ರಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅಂದಿನಿಂದ ಅವರು ಪಿಕೆಎಲ್‌ನಲ್ಲಿ ಕಾಣಿಸಿಕೊಂಡಿಲ್ಲ.

5. ರಾಕೇಶ್ ಕುಮಾರ್ (ಪಾಟ್ನಾ ಪೈರೇಟ್ಸ್)

ಪ್ರೊ ಕಬಡ್ಡಿ ಲೀಗ್‌ನ ಮೊದಲ ಸೀಸನ್‌ನಲ್ಲಿ ರಾಕೇಶ್ ಕುಮಾರ್ ನಾಯಕತ್ವದಲ್ಲಿ ಪಾಟ್ನಾ ಪೈರೇಟ್ಸ್ ಸೆಮಿಫೈನಲ್ ತಲುಪಿತ್ತು. ಈ ಅವಧಿಯಲ್ಲಿ ಪಾಟ್ನಾ 14 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿತ್ತು. ರಾಕೇಶ್ ಕುಮಾರ್ ಅವರನ್ನು ನಂತರ ಹರಿಯಾಣ ಸ್ಟೀಲರ್ಸ್‌ನ ಮುಖ್ಯ ಕೋಚ್ ಆಗಿ ನೇಮಿಸಿತು. ಆದರೆ ಮ್ಯಾನೇಜ್‌ಮೆಂಟ್ PKL 9 ಕ್ಕಿಂತ ಮೊದಲು ಅವರನ್ನು ಆ ಸ್ಥಾನದಿಂದ ತೆಗೆದುಹಾಕಿತು. ಪ್ರಸ್ತುತ, ಅವರ ಸಾಮಾಜಿಕ ಮಾಧ್ಯಮದ ಪ್ರಕಾರ, ಸ್ಥಳೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

6. ವಜೀರ್ ಸಿಂಗ್ (ಪುನೇರಿ ಪಲ್ಟನ್)

ವಜೀರ್ ಸಿಂಗ್ ನಾಯಕತ್ವದಲ್ಲಿ, ಪುಣೇರಿ ಪಲ್ಟನ್ ಪ್ರೊ ಕಬಡ್ಡಿ ಲೀಗ್‌ನ ಮೊದಲ ಋತುವಿನಲ್ಲಿ 8 ನೇ ಸ್ಥಾನವನ್ನು ಗಳಿಸಿತು. ಈ ಅವಧಿಯಲ್ಲಿ ತಂಡ ಕೇವಲ 2 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತಷ್ಟೆ. PKL 6 ರಲ್ಲಿ ಹರಿಯಾಣ ಸ್ಟೀಲರ್ಸ್‌ನ ಕೊನೆಯ ಭಾಗವಾಗಿದ್ದ ವಜೀರ್ ಸಿಂಗ್ ಅವರು ಪ್ರಸ್ತುತ ಎಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

7. ಅನುಪ್ ಕುಮಾರ್ (ಯು ಮುಂಬಾ)

ಪಿಕೆಎಲ್‌ನ ಮೊದಲ ಸೀಸನ್‌ನಲ್ಲಿ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾದ ಯು ಮುಂಬಾ ತಂಡದ ನಾಯ ಅನೂಪ್ ಕುಮಾರ್‌. ಆದಾಗ್ಯೂ, ಈ ಅವಧಿಯಲ್ಲಿ ತಂಡವು ಅಂತಿಮ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು. PKL 7 ಮತ್ತು 8 ರಲ್ಲಿ ಪುಣೇರಿ ಪಲ್ಟಾನ್ ತಂಡದ ಮುಖ್ಯ ಕೋಚ್ ಪಾತ್ರವನ್ನು ನಿರ್ವಹಿಸಿದ ನಂತರ, ಇದೀಗ ಅನುಪ್ ಕುಮಾರ್ ಅವರು ಇತ್ತೀಚೆಗೆ ಫ್ಯೂಚರ್ ಫೈಟರ್ ಕಬಡ್ಡಿ ಅಕಾಡೆಮಿಯಲ್ಲಿ ಯುವ ಆಟಗಾರರಿಗೆ ತರಬೇತಿ ನೀಡುತ್ತಿದ್ದಾರೆ.

8. ರಾಜಗುರು ಸುಬ್ರಮಣ್ಯಂ (ತೆಲುಗು ಟೈಟಾನ್ಸ್)

ರಾಜಗುರು ಸುಬ್ರಮಣ್ಯಂ ಅವರು ಪಿಕೆಎಲ್​​ನ ಮೊದಲ ಋತುವಿನಲ್ಲಿ ತೆಲುಗು ಟೈಟಾನ್ಸ್‌ನ ನಾಯಕರಾಗಿ ನೇಮಕಗೊಂಡರು. ಈ ಅವಧಿಯಲ್ಲಿ ತೆಲುಗು ಟೈಟಾನ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿತ್ತು. ರಾಜ್‌ಗುರು ಕೊನೆಯ ಬಾರಿಗೆ ಪಿಕೆಎಲ್ 8 ರಲ್ಲಿ ಯು ಮುಂಬಾ ತಂಡದ ಮುಖ್ಯ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಇದರ ನಂತರ, ಅವರು ಅನೇಕ ಕ್ರೀಡಾಕೂಟಗಳು ಮತ್ತು ಸಂದರ್ಶನಗಳಲ್ಲಿಯೂ ಭಾಗವಹಿಸುತ್ತಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ