logo
ಕನ್ನಡ ಸುದ್ದಿ  /  ಕ್ರೀಡೆ  /  ವಿವಾದಾತ್ಮಕ ಗೋಲು, ರೆಫ್ರಿಗಳಿಂದ ಮೋಸದಾಟ; ಕತಾರ್​ ವಿರುದ್ಧ ಭಾರತಕ್ಕೆ ಸೋಲು, ಫಿಫಾ ವಿಶ್ವಕಪ್ ಕನಸು ಭಗ್ನ

ವಿವಾದಾತ್ಮಕ ಗೋಲು, ರೆಫ್ರಿಗಳಿಂದ ಮೋಸದಾಟ; ಕತಾರ್​ ವಿರುದ್ಧ ಭಾರತಕ್ಕೆ ಸೋಲು, ಫಿಫಾ ವಿಶ್ವಕಪ್ ಕನಸು ಭಗ್ನ

Prasanna Kumar P N HT Kannada

Jun 12, 2024 09:32 PM IST

google News

ವಿವಾದಾತ್ಮಕ ಗೋಲು, ರೆಫ್ರಿಗಳಿಂದ ಮೋಸದಾಟ; ಕತಾರ್​ ವಿರುದ್ಧ ಭಾರತಕ್ಕೆ ಸೋಲು, ಫಿಫಾ ವಿಶ್ವಕಪ್ ಕನಸು ಭಗ್ನ

    • FIFA World Cup Qualifiers 2024: ಫಿಫಾ ಫುಟ್ಬಾಲ್ ಅರ್ಹತಾ ಸುತ್ತಿನಲ್ಲಿ ಕತಾರ್​ ವಿರುದ್ಧದ ಭಾರತ ಫುಟ್ಬಾಲ್ ತಂಡ 3-1 ಗೋಲುಗಳ ಅಂತರದಿಂದ ಸೋಲು ಕಂಡಿತು. 
ವಿವಾದಾತ್ಮಕ ಗೋಲು, ರೆಫ್ರಿಗಳಿಂದ ಮೋಸದಾಟ; ಕತಾರ್​ ವಿರುದ್ಧ ಭಾರತಕ್ಕೆ ಸೋಲು, ಫಿಫಾ ವಿಶ್ವಕಪ್ ಕನಸು ಭಗ್ನ
ವಿವಾದಾತ್ಮಕ ಗೋಲು, ರೆಫ್ರಿಗಳಿಂದ ಮೋಸದಾಟ; ಕತಾರ್​ ವಿರುದ್ಧ ಭಾರತಕ್ಕೆ ಸೋಲು, ಫಿಫಾ ವಿಶ್ವಕಪ್ ಕನಸು ಭಗ್ನ

ಭಾರತೀಯ ಫುಟ್ಬಾಲ್ ಅಭಿಮಾನಿಗಳ ಕನಸು ಮತ್ತೊಮ್ಮೆ ಕಮರಿದೆ. ಈ ಬಾರಿಯಾದರೂ ಭಾರತ ಫುಟ್ಬಾಲ್ ತಂಡ, ಫಿಫಾ ವಿಶ್ವಕಪ್​ಗೆ ಅರ್ಹತೆ ಪಡೆಯುತ್ತದೆ ಎಂಬ ಆಸೆಯಲ್ಲಿದ್ದ ಫ್ಯಾನ್ಸ್​​ಗೆ ನಿರಾಸೆಯಾಗಿದೆ. ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕತಾರ್ ವಿರುದ್ಧ ಭಾರತ 2-1 ಗೋಲುಗಳಿಂದ ಸೋತು ಮೂರನೇ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಆದರೆ, ಈ ಸೋಲಿಗೆ ರೆಫ್ರಿ ನೀಡಿದ ವಿವಾದಾತ್ಮಕ (Controversial Goal) ಗೋಲು ಕಾರಣವಾಗಿದೆ.

ರೆಫ್ರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ. ಮತ್ತೊಂದೆಡೆ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (All India Football Federation) ಈ ಕುರಿತು ದೂರು ದಾಖಲಿಸಿದ್ದು, ತನಿಖೆಗೆ ಆಗ್ರಹಿಸಿದೆ. ಮಹತ್ವದ ಪಂದ್ಯ ಆರಂಭಗೊಂಡ 37ನೇ ನಿಮಿಷದಲ್ಲಿ ಲಾಲಿಯನ್ಜುವಾಲಾ ಚಾಂಗ್ಟೆ ಗೋಲು ದಾಖಲಿಸಿದರು. ಇದು ಭಾರತ ತಂಡಕ್ಕೆ ಮುನ್ನಡೆ ತಂದುಕೊಟ್ಟಿತ್ತು. ಆದರೆ, ಕತಾರ್‌ನ ಯೂಸುಫ್ ಐಮೆನ್ ಅವರು 73ನೇ ನಿಮಿಷದಲ್ಲಿ ವಿವಾದಾತ್ಮಕ ಗೋಲು ಗಳಿಸಿ ಫಲಿತಾಂಶದ ಮೇಲೆ ಪರಿಣಾಮ ಬೀರುವಂತೆ ಮಾಡಿತು.

ಇಷ್ಟಕ್ಕೂ ಆಗಿದ್ದೇನು?

ಕತಾರ್ ತಂಡದ ಆಟಗಾರ ಅಬ್ದುಲ್ಲಾ ಅಲರಾಕ್ ಅವರ ಫ್ರಿ ಕಿಕ್ ಅನ್ನು ಯೂಸೆಫ್ ಅವರು ಗೋಲು ಗಳಿಸಲು ಯತ್ನಿಸಿದರು. ಈ ವೇಳೆ ಭಾರತದ ಗೋಲು ಕೀಪರ್​ ಚೆಂಡನ್ನು ತಡೆಯಲು ಯತ್ನಿಸಿದ್ದಾರೆ. ಆಗ ಗೋಲು ಕೀಪರ್ ಗೋಲು ಪೋಸ್ಟ್​​ ಬಳಿ​ ಕೈಯಿಂದ ಚೆಲ್ಲಿದ ಚೆಂಡು, ಗೆರೆ ದಾಟಿ ಹೊರಗೆ ಹೋಗಿತ್ತು. ಇದನ್ನು ಮರುಪರಿಶೀಲಿಸಿದಾಗ ಸ್ಪಷ್ಟವಾಗಿ ಚೆಂಡು ಹೊರಗಿರುವುದು ಕಂಡು ಬಂತು. ಆದರೆ ಈ ವೇಳೆ ಕತಾರ್​ ಆಟಗಾರರು ಮೋಸದಾಟ ಆಡಿ ಗೋಲು ಸಂಪಾದಿಸಿದರು.

ಚೆಂಡು ಗೆರೆಯ ಹೊರಗಿದ್ದರೂ ಕತಾರ್​​ ಆಟಗಾರ ಹಶ್ಮಿ ಹುಸೇನ್ ಅದನ್ನು ಕಾಲಿನಿಂದ ಒಳಕ್ಕೆ ತೆಗೆದುಕೊಂಡರು. ಬಳಿಕ ಆ ಚೆಂಡನ್ನು ಮತ್ತೆ ಯೂಸೆಫ್ ಮತ್ತೆ ಗೋಲಿಗೆ ಒದ್ದರು. ಆದರೆ, ಇದನ್ನು ರೆಫ್ರಿ, ಗೋಲು ಪರಿಗಣಿಸಿದರು. ಆದರೆ ಚೆಂಡು ಗೆರೆಯ ಹೊರಹೋದ ನಂತರ ಅದನ್ನು ಮತ್ತೆ ಗೋಲು ಸಿಡಿಸಲು ಅವಕಾಶ ಇಲ್ಲ. ಆದರೂ ಅಂತಹ ಚೆಂಡನ್ನು ಗೋಲಿಗೆ ಸಿಡಿಸಿ ವಿವಾದಾತ್ಮಕವಾಗಿ ಅಂಕ ಪಡೆದಿದ್ದಾರೆ. ಇದರ ತನಿಖೆಗೆ ಭಾರತ ತಂಡ ಆಗ್ರಹಿಸಿದೆ.

ರೆಫ್ರಿ ಗೋಲು ಕೊಟ್ಟ ನಿರ್ಧಾರಕ್ಕೆ ಭಾರತ ತಂಡದ ಆಟಗಾರರು ಮೈದಾನದಲ್ಲೇ ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ ರೆಫ್ರಿಗಳು ವಿರೋಧಕ್ಕೆ ಕ್ಯಾರೆ ಎನ್ನಲಿಲ್ಲ. ಹೀಗಾಗ ಪಂದ್ಯದಲ್ಲಿ ಹಿನ್ನಡೆ ಅನುಭವಿಸಲು ಕಾರಣವಾಯಿತು. ಬಳಿಕ 85ನೇ ನಿಮಿಷದಲ್ಲಿ ಅಹ್ಮದ್ ಅಲ್-ರಾವಿ ಗೋಲು ಗಳಿಸಿದ ಕಾರಣ ಕತಾರ್ ಭರ್ಜರಿ ಗೆಲುವು ಸಾಧಿಸಿತು. ಚೆಂಡು ಬೌಂಡರಿ ಗೆರೆ ಹೊರ ಬಿದ್ದಿದ್ದರೂ ಕತಾರ್​ಗೆ ಗೋಲು ಕೊಟ್ಟಿದ್ದು ಯಾವ ಮಾನದಂಡದಲ್ಲಿ ಎಂಬ ಪ್ರಶ್ನೆ ಎದ್ದಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ