logo
ಕನ್ನಡ ಸುದ್ದಿ  /  ಕ್ರೀಡೆ  /  Wwe In India: ರಸ್ಲಿಂಗ್ ನೋಡೋಕೆ ಅಮೆರಿಕ ಹೋಗ್ಬೇಕಾಗಿಲ್ಲ; ಭಾರತದಲ್ಲೇ ಅದ್ಧೂರಿ ಈವೆಂಟ್ ನಡೆಸಲು ಪ್ಲಾನ್

WWE in India: ರಸ್ಲಿಂಗ್ ನೋಡೋಕೆ ಅಮೆರಿಕ ಹೋಗ್ಬೇಕಾಗಿಲ್ಲ; ಭಾರತದಲ್ಲೇ ಅದ್ಧೂರಿ ಈವೆಂಟ್ ನಡೆಸಲು ಪ್ಲಾನ್

Jayaraj HT Kannada

May 19, 2023 03:46 PM IST

google News

ಸಾಂದರ್ಭಿಕ ಚಿತ್ರ

    • ಡಬ್ಲ್ಯೂಡಬ್ಲ್ಯೂಇ ಸಿಇಒ ಆಗಿರುವ ನಿಕ್ ಖಾನ್ , ಈ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ. ಇದೇ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಭಾರತದಲ್ಲಿ ರಸ್ಲಿಂಗ್‌ನ ಲೈವ್ ಈವೆಂಟ್ ಅನ್ನು ಆಯೋಜಿಸುವ ತಮ್ಮ ಯೋಜನೆಯ ಕುರಿತು ಅವರು ಬಹಿರಂಗಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (Twitter)

ಡಬ್ಲ್ಯೂಡಬ್ಲ್ಯೂಇ (WWE) ನಡೆಸುವ ಮನರಂಜಾನಾ ಕಾರ್ಯಕ್ರಮ ರಸ್ಲಿಂಗ್‌ಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಅಭಿಮಾನಿಗಳಿದ್ದಾರೆ. ಭಾರತದಲ್ಲಿಯೂ ಇದನ್ನು ನಿರಂತರವಾಗಿ ವೀಕ್ಷಿಸುವ ಬಳಗವಿದೆ. ಆದರೆ, ಇದನ್ನು ಭಾರತದಲ್ಲಿ ನೇರವಾಗಿ ನೋಡುವ ಅವಕಾಶ ಇಲ್ಲ. ಏಕೆಂದರೆ WWE ಭಾರತದಲ್ಲಿ ನಡೆಯುವುದಿಲ್ಲ. ಅಮೆರಿಕ ಮೂಲದ ಮನರಂಜನಾ ಸಂಸ್ಥೆಯು, ಭಾರತದಲ್ಲಿ ರಸ್ಲಿಂಗ್‌ ಶೋ ನಡೆಸಿಲ್ಲ. ಆದರೆ, ಸದ್ಯ ಭಾರತೀಯ ಅಭಿಮಾನಿಗಳಿಗೂ ಈ ಮನರಂಜನಾ ವೇದಿಕೆ ಕಾರ್ಯಕ್ರಮವನ್ನು ಭಾರತದಲ್ಲೇ ನೇರವಾಗಿ ನೋಡುವ ಅವಕಾಶ ಸಿಗುತ್ತಿದೆ.

ಡಬ್ಲ್ಯೂಡಬ್ಲ್ಯೂಇ (World Wrestling Entertainment) ಸಿಇಒ ಆಗಿರುವ ನಿಕ್ ಖಾನ್ (Nick Khan) ಅವರು, ಈ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ. ಇದೇ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಭಾರತದಲ್ಲಿ ರಸ್ಲಿಂಗ್‌ನ ಲೈವ್ ಈವೆಂಟ್ ಅನ್ನು ಆಯೋಜಿಸುವ ತಮ್ಮ ಯೋಜನೆಯ ಕುರಿತು ಅವರು ಬಹಿರಂಗಪಡಿಸಿದ್ದಾರೆ.

ಮೊಫೆಟ್ ನಾಥನ್ಸನ್ (MoffettNathanson) ಸಮ್ಮೇಳನದಲ್ಲಿ WWE ಸಿಇಒ ನಿಕ್ ಖಾನ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಪ್ರಸಿದ್ಧ ಕುಸ್ತಿ ಫ್ರಾಂಚೈಸಿಯು 2023ರ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಲೈವ್ ಕಾರ್ಯಕ್ರಮವನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ವಿದೇಶದಲ್ಲಿ ರಸ್ಲಿಂಗ್‌ನ ಲೈವ್ ಕಾರ್ಯಕ್ರಮವನ್ನು ಸಾವಿರಾರು ಮಂದಿ ವೀಕ್ಷಿಸುತ್ತಾರೆ. ಮನರಂಜನೆಯ ಒಂದು ದೊಡ್ಡ ಬ್ರಾಂಡ್‌ ಆಗಿ ಇದು ಖ್ಯಾತಿ ಪಡೆದಿದೆ. ಸದ್ಯ ಭಾರತದಲ್ಲಿ ಈವೆಂಟ್‌ ನಡೆಯುವ ಬಗ್ಗೆ ಸುಳಿವು ಸಿಕ್ಕಿದೆ. ಆದರೆ ಲೈವ್ ವೇದಿಕೆ ಕಾರ್ಯಕ್ರಮವನ್ನು ನಡೆಸಲಾಗುತ್ತದೆಯೇ ಅಥವಾ, ಅದನ್ನು ಪ್ರಸಾರ (broadcast) ಮಾಡಲು ಯೋಜಿಸಲಾಗಿದೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ ನೇರವಾಗಿ ರಸ್ಲಿಂಗ್‌ ಕಾರ್ಯಕ್ರಮ ನಡೆದರೆ, ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ವೀಕ್ಷಣೆಗೆ ಸಿದ್ಧರಾಗಬಹುದು.

ಘಟಾನುಘಟಿ ರಸ್ಲರ್‌ಗಳು ಇರುವ ಈ ಮನರಂಜನಾ ಕಾರ್ಯಕ್ರಮಕ್ಕೆ ಭಾರತದಲ್ಲಿ ದೊಡ್ಡ ಅಭಿಮಾನಿಗಳೇ ಇರುವುದು WWE ರಸ್ಲಿಂಗ್‌ ಕಂಪನಿಗೆ ಗೊತ್ತಿದೆ. ಅಮೆರಿಕ ಮೂಲದ ಕಂಪನಿಯು ಭಾರತದಲ್ಲಿ ಉತ್ತಮ ಮಾರುಕಟ್ಟೆ ಹೊಂದಿದೆ. ಅಂದರೆ ಮನರಂಜನೆಯ ಮೂಲಕ ಹೆಚ್ಚಿನ ಅಭಿಮಾನಿಗಳನ್ನು ಕಂಪನಿ ಸಂಪಾದಿಸಿದೆ. ಅದನ್ನು ಮತ್ತಷ್ಟು ಅಭಿಮಾನಿಗಳತ್ತ ವಿಸ್ತರಿಸಲು ಸಿಇಒ ಮುಂದಾಗಿದ್ದಾರೆ.‌ ಯಾವುದೇ ಉತ್ಪನ್ನ ಅಥವಾ ಮನರಂಜನೆಯ ಸಂಸ್ಥೆಗಳಿಗೂ ಭಾರತ ಅತಿದೊಡ್ಡ ಮಾರುಕಟ್ಟೆಯಾಗಿದೆ. ಭಾರತದ ಅಭಿಮಾನಿಗಳ ಮನಸಲ್ಲಿ ಬೇರೂರಿ ಬ್ರಾಂಡ್‌ ಆಗಿ ಬೆಳೆಯಲು ಹೆಚ್ಚಿನ ಎಲ್ಲಾ ಕಂಪನಿಗಳು ಇಲ್ಲದ ಕಸರತ್ತು ನಡೆಸುತ್ತವೆ.

ಯಶಸ್ವಿ ಕುಸ್ತಿ ಫ್ರಾಂಚೈಸಿಯು ಈಗಾಗಲೇ ಯುನೈಟೆಡ್ ಕಿಂಗ್‌ಡಮ್, ವೇಲ್ಸ್ ಮತ್ತು ಸೌದಿ ಅರೇಬಿಯಾದಂತಹ ಸಾಗರೋತ್ತರ ರಾಷ್ಟ್ರಗಳಲ್ಲಿ ಪ್ರೀಮಿಯಂ ಕಾರ್ಯಕ್ರಮಗಳನ್ನು ನಡೆಸಿದೆ. ಸದ್ಯ ಸಪ್ತಸಾಗರದೀಚೆ ನಡೆಯುವ ಸುಳಿವು ಸಿಕ್ಕಿದ್ದು, ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಈ ವರ್ಷದ ಜನವರಿ 18ರಂದು ಭಾರತದಲ್ಲಿ ಲೈವ್ ಈವೆಂಟ್ ಅನ್ನು ನಡೆಸಲು WWE ನಿರ್ಧರಿಸಿತ್ತು. ಆದರೆ ಕಾರ್ಯಕ್ರಮದ ಭಾರತೀಯ ದೂರದರ್ಶನ ಪ್ರಸಾರ ಪಾಲುದಾರ ಸಂಸ್ಥೆಯಾದ ಸೋನಿ ಸ್ಪೋರ್ಟ್ಸ್ ಮತ್ತೊಂದು ಸಂಸ್ಥೆಯಾದ Zeeಯೊಂದಿಗೆ ವಿಲೀನಗೊಳ್ಳುವುದನ್ನು ಉಲ್ಲೇಖಿಸಿ ನಿಗದಿತ ಯೋಜನೆಯನ್ನು ಮುಂದೂಡಲಾಯಿತು.

(ಸುದ್ದಿ ಮೂಲ : News 18)

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ