ಶೇರು ಮಾರ್ಕೆಟ್ ಟ್ರೇಡಿಂಗ್ ಬಿಸಿನೆಸ್ ದೋಖಾ; ಕೋಟ್ಯಾಂತರ ಹಣ ಕಳೆದುಕೊಂಡ ಬೀದರ್ ಮೂಲದ ಎಂಜಿನಿಯರ್
Published May 15, 2025 04:57 PM IST
ಶೇರು ಮಾರ್ಕೆಟಿಂಗ್ ಟ್ರೇಡಿಂಗ್ ಬಿಸಿನೆಸ್ ನಲ್ಲಿ ಹಣವನ್ನ ಡಬಲ್ ಮಾಡುವ ಆಸೆ ತೋರಿಸಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಕೋಟ್ಯಂತರ ರೂ. ವಂಚನೆ ಮಾಡಿರುವ ಘಟನೆ ಬೀದರ್‌ನಲ್ಲಿ ನಡೆದಿದೆ. ಎಂಜಿನಿಯರ್ ರಘುವೀರ ಜೋಶಿ ಎಂಬುವವರು ಟ್ರೇಡಿಂಗ್ ನಂಬಿ 2.98 ಕೋಟಿ ಕಳೆದುಕೊಂಡಿದ್ದಾರೆ. ಆಫ್ರಿಕಾದ ಕಾಂಗೋದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ರಘುವೀರ್, BLINKXPro ಆ್ಯಪ್‌ನಲ್ಲಿ ಟ್ರೇಡಿಂಗ್ ಬಿಸಿನೆಸ್‌ಗಾಗಿ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿದ್ದರು. 2, 5, 10 ಲಕ್ಷ ರೂ.ನಂತೆ ಹಲವು ಬಾರಿ RTGS ಮೂಲಕ ಹಣ ವರ್ಗಾಯಿಸಿರುವ ರಘುವೀರ, ರಿದ್ದಿ, ನೀನಾದ, ಕೇಶವ ಎಂಬ ಹೆಸರಿನ ಮೂವರು ವ್ಯಕ್ತಿಗಳಿಂದ ಮಹಾಮೋಸ ನಡೆದಿದೆ.