logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಿಗ್‌ಬಾಸ್‌ ಕನ್ನಡ 11: ಧೈರ್ಯ ಇದ್ದವರು ಬೊಗಳುವ ನಾಯಿಗೆ ಹೆದರಬಾರದು; ಕ್ಯಾಪ್ಟನ್‌ ಆದವರು ಹೇಗಿರಬೇಕೆಂದು ಟಿಪ್ಸ್‌ ಕೊಟ್ಟ ಹನುಮಂತ

ಬಿಗ್‌ಬಾಸ್‌ ಕನ್ನಡ 11: ಧೈರ್ಯ ಇದ್ದವರು ಬೊಗಳುವ ನಾಯಿಗೆ ಹೆದರಬಾರದು; ಕ್ಯಾಪ್ಟನ್‌ ಆದವರು ಹೇಗಿರಬೇಕೆಂದು ಟಿಪ್ಸ್‌ ಕೊಟ್ಟ ಹನುಮಂತ

Nov 09, 2024 11:23 AM IST

ಬಿಗ್‌ಬಾಸ್‌ ಕನ್ನಡ 11: ಹನುಮಂತನ ಕ್ಯಾಪ್ಟನ್‌ ಶಿಪ್‌ ಅವಧಿ ಮುಗಿದಿದ್ದು ಶುಕ್ರವಾರದ ಎಪಿಸೋಡ್‌ನಲ್ಲಿ ತ್ರಿವಿಕ್ರಮ್‌ ಕ್ಯಾಪ್ಟನ್‌ ಆಗಿದ್ದಾರೆ. ಅದಕ್ಕೂ ಮುನ್ನ ಟಾಸ್ಕ್‌ ನಡೆದು ಭವ್ಯಾ ಗೌಡ ಹಾಗೂ ತ್ರಿವಿಕ್ರಮ್‌ ನಡುವೆ ಕ್ಯಾಪ್ಟನ್‌ ಪಟ್ಟಕ್ಕೆ ಸ್ಪರ್ಧೆ ಇತ್ತು. ಮನೆ ಮಂದಿ ಗಾರ್ಡನ್‌ ಏರಿಯಾದಲ್ಲಿ ವರ್ಕೌಟ್‌ ಮಾಡುವಾಗ ಅವರನ್ನು ಮಾತನಾಡಿಸುವ ಹನುಮಂತ, ಕ್ಯಾಪ್ಟನ್‌ ಆದವರು ಹೇಗಿರಬೇಕು ಎಂದು ಟಿಪ್ಸ್‌ ಕೊಟ್ಟಿದ್ದಾರೆ. ಧೈರ್ಯದಿಂದ ಮುನ್ನುಗ್ಗಿ, ನಗು ನಗುತ್ತಾ ಇರಿ, ನೂರು ಮಂದಿ ನೂರು ಮಾತನಾಡುತ್ತಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ಈ ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಟ್ಟುಬಿಡಬೇಕು. "ಬೊಗಳುವ ನಾಯಿಗೆ ಧೈರ್ಯ ಇದ್ದವ ಹೆದರಬಾರದು, ಬಿಗ್‌ಬಾಸ್‌ ಹೇಳುವ ಮಾತು ದೈವ ಸುಳ್ಳೆಂದು ಆಗಲಾರದು" ಎಂದು ಹಾಡುತ್ತಾರೆ.