logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮದುವೆ ಆಸೆ ತೋರಿಸಿ 25 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದ ಯುವತಿಯ ಫ್ಯಾಮಿಲಿ; ಹುಣಸೂರು ಯುವಕನಿಂದ ದೂರು

ಮದುವೆ ಆಸೆ ತೋರಿಸಿ 25 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದ ಯುವತಿಯ ಫ್ಯಾಮಿಲಿ; ಹುಣಸೂರು ಯುವಕನಿಂದ ದೂರು

Feb 02, 2024 08:20 PM IST

ಮೈಸೂರು: ಮದುವೆ ಆಸೆ ತೋರಿಸಿ 25 ಲಕ್ಷ ರೂಪಾಯಿ ಸಾಲ ಪಡೆದು ಯುವತಿಯ ಫ್ಯಾಮಿಲಿ ವಂಚಿಸಿದೆ ಎಂದು ಹುಣಸೂರು ಯುವಕ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗಳನ್ನ ಮದುವೆ ಮಾಡಿಕೊಡ್ತೀವಿ ಅಂತ 2022ರ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿದ ಬಳಿಕ, ಆ ಯುವಕನಿಂದ 25 ಲಕ್ಷ ರೂಪಾಯ ಸಾಲ ಪಡೆದಿತ್ತು ಯುವತಿಯ ಕುಟುಂಬ. ಬಳಿಕ 2023ರ ಆಗಸ್ಟ್ ತಿಂಗಳಲ್ಲಿ ಅಡಕೆ ಗಿಡಗಳನ್ನು ಕಡಿದು ಹಾಕಿದ ಕೇಸ್‌ನಲ್ಲಿ ಯುವಕ ಅಶೋಕ್ ಎಂಬುವನನ್ನು ಜೈಲಿಗೆ ಕಳುಹಿಸಿತ್ತು.ಈಗ ಆತ ಯುವತಿ ಮತ್ತು ಆಕೆಯ ಕುಟುಂಬದ ವಿರುದ್ಧ ವಂಚನೆ ಕೇಸ್ ದಾಖಲಿಸಿದ್ದಾರೆ.