logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕೊಪ್ಪಳದ ಗವಿಮಠದ ಜಾತ್ರೆಯ ಭೋಜನ ಶಾಲೆಯ ವೈಭವ ವಿವರಿಸಿದ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ Video

ಕೊಪ್ಪಳದ ಗವಿಮಠದ ಜಾತ್ರೆಯ ಭೋಜನ ಶಾಲೆಯ ವೈಭವ ವಿವರಿಸಿದ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ VIDEO

Jan 20, 2025 02:56 PM IST

  • ಕೊಪ್ಪಳದ ಇತಿಹಾಸ ಪ್ರಸಿದ್ಧ ಗವಿಮಠದ ಜಾತ್ರೆ ಅಂದ್ರೆ ಅದು ರೊಟ್ಟಿ ಜಾತ್ರೆ ಎಂದೇ ಪ್ರಸಿದ್ಧಿ. ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಜಾತ್ರೆಗೆ ಆಗಮಿಸುವ ಅಷ್ಟು ಮಂದಿಗೆ ರೊಟ್ಟಿ ಊಟವನ್ನ ಬಡಿಸಲಾಗುತ್ತದೆ. ಇಲ್ಲಿ ರೊಟ್ಟಿಯನ್ನ ಬೆಟ್ಟದಂತೆ ಜೋಡಿಸುವುದನ್ನು ನೋಡುವುದೇ ಸಂಭ್ರಮ. ಇಲ್ಲಿ ತಯಾರಾಗುವ ಸಾಂಬಾರ್, ಪಲ್ಯಗಳು ದಿನಗಳು ಕಳೆದರೂ ಹಾಳಾಗುವುದಿಲ್ಲ. ಅಂತಹ ವಿಶೇಷ ಪಾಕ ಶಾಲೆಯೊಳಗೆ ರೌಂಡ್ಸ್ ಹಾಕಿರುವ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಗವಿಮಠ ಜಾತ್ರೆಯ ಭೋಜನ ಶಾಲೆಯ ಪರಿಚಯವನ್ನು ಮಾಡಿಕೊಟ್ಟಿದ್ದಾರೆ.