logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪ್ರೀತಿಸಿದ ಹುಡುಗನ ಜೊತೆ ಪೂಜಾ ಗಾಂಧಿ ಮದುವೆ; ಇಲ್ಲಿದೆ ಮಂತ್ರಮಾಂಗಲ್ಯ ಮದುವೆಯ ಝಲಕ್

ಪ್ರೀತಿಸಿದ ಹುಡುಗನ ಜೊತೆ ಪೂಜಾ ಗಾಂಧಿ ಮದುವೆ; ಇಲ್ಲಿದೆ ಮಂತ್ರಮಾಂಗಲ್ಯ ಮದುವೆಯ ಝಲಕ್

Nov 30, 2023 05:21 PM IST

  • ಮುಂಗಾರು ಮಳೆ ನಟಿ ಪೂಜಾ ಗಾಂಧಿ ಮತ್ತು ವಿಜಯ್‌ ಘೋರ್ಪಡೆ ಅವರ ಮಂತ್ರಮಾಂಗಲ್ಯ ಶುಭವಿವಾಹವೂ ಬೆಂಗಳೂರಿನ ಆರಂಭ ಹಾಲ್‌ನಲ್ಲಿ ನಡೆದಿದೆ. ಈ ಮೂಲಕ ನವಜೋಡಿ ಹೊಸ ಜೀವನಕ್ಕೆ ಶುಭಾರಂಭ ಮಾಡಿದ್ದಾರೆ. ಶುಭ ಪೂಂಜಾ ಸೇರಿದಂತೆ ಸಾಕಷ್ಟು ಕಲಾವಿದರು, ಆಪ್ತರು ಈ ಮದುವೆ ಕಾರ್ಯಕ್ರಮದಲ್ಲಿ ಹಾಜರಿದ್ದರು. ಯೋಗರಾಜ್‌ ಭಟ್‌, ಸುಧಾರಾಣಿ, ಸುಮನಾ ಕಿತ್ತೂರು ಸೇರಿದಂತೆ ಸಿನಿ ಕ್ಷೇತ್ರದ ಹಲವು ಜನರು ಈ ವಿವಾಹಕ್ಕೆ ಆಗಮಿಸಿದ್ದಾರೆ. ಪೂಜಾ ಗಾಂಧಿಗೆ ವಿಜಯ್‌ ಅವರೇ ಕನ್ನಡ ಕಲಿಸಿದ್ದಾರೆ. ಅಂದರೆ, ಬಂಗಾಳಿ ಹುಡುಗಿ ಬೆಂಗಳೂರಿಗೆ ಸಿನಿಮಾ ಕ್ಷೇತ್ರಕ್ಕೆ ಬಂದಾಗ ವಿಜಯ್‌ ಅವರೇ ಕನ್ನಡ ಮಾತನಾಡಲು ಕಲಿಸಿದ್ರು ಎಂದು ಹೇಳಲಾಗಿದೆ. ವಿಜಯ್‌ ನೆರವಿನಿಂದ ಪೂಜಾ ಗಾಂಧಿ ಕನ್ನಡ ಕಲಿತಿದ್ದರು. ತಾವೇ ಸ್ವತಃ ಕನ್ನಡ ಕಲಿತು ಕನ್ನಡ ಸಿನಿಮಾದಲ್ಲಿ ನಟನೆ ಮತ್ತು ಡಬ್ಬಿಂಗ್‌ ಮಾಡಿದ್ದಾರೆ.