ಮಂಗಳೂರು ಬೆಂಗಳೂರು ಹೆದ್ದಾರಿಯ ಶಿರಾಡಿಯಲ್ಲಿ ಭಾರಿ ಭೂಕುಸಿತ, ಮಣ್ಣಿನಲ್ಲಿ ಸಿಲುಕಿದ ವಾಹನಗಳು- ವೈರಲ್ ವಿಡಿಯೋ
Aug 01, 2024 05:03 PM IST
ಸಕಲೇಶಪುರ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಕಲೇಶಪುರದ ದೊಡ್ಡತಪ್ಲೆ ಭಾಗದಲ್ಲಿ ಬುಧವಾರ ತಡರಾತ್ರಿ ಕೂಡ ಗುಡ್ಡು ಕುಸಿತ ಉಂಟಾಗಿದೆ. ಮಣ್ಣು ರಸ್ತೆಗೆ ಬಿದ್ದ ಕಾರಣ ಹಲವಾರು ವಾಹನಗಳು ಮಣ್ಣಿನ ನಡುವೆ ಸಿಲುಕಿದ್ದವು. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಸದ್ಯ ಇಲ್ಲಿ ತಾತ್ಕಾಲಿಕವಾಗಿ ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಒಂದು ವಾರದ ಹಿಂದೆ ದೊಡ್ಡತಪ್ಲು ಸಮೀಪ ರಸ್ತೆಗೆ ಗುಡ್ಡಕುಸಿದಿದ್ದು, ಕೂಡಲೇ ಅಧಿಕಾರಿಗಳನ್ನು ಸ್ಥಳೀಯರು ಎಚ್ಚರಿಸಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳದಲ್ಲಿದ್ದು ರಸ್ತೆ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಎರಡು ದಿನ ಹಿಂದೆ ಇಲ್ಲಿ ರಸ್ತೆಗೆ ಗುಡ್ಡ ದೊಡ್ಡ ಪ್ರಮಾಣದಲ್ಲಿ ಕುಸಿದಿತ್ತು. ಎರಡು ಕಾರುಗಳು, ಲಾರಿ ಹಾಗೂ ಟ್ಯಾಂಕರ್ ಸಿಲುಕಿಕೊಂಡಿದ್ದವು. ಪ್ರಯಾಣಿಕರನ್ನು ರಕ್ಷಣೆ ಮಾಡಿ ವಾಹನಗಳನ್ನು ಅಲ್ಲಿಂದ ತೆರವುಗೊಳಿಸಲಾಗಿತ್ತು.