2025 ಮಕರ ಸಂಕ್ರಾಂತಿ, ಶಿವರಾತ್ರಿ, ಯುಗಾದಿ ಸೇರಿದಂತೆ ಮುಂದಿನ ವರ್ಷದ ಪ್ರಮುಖ ಹಬ್ಬಗಳು, ಆಚರಣೆಗಳ ಪಟ್ಟಿ, ದಿನಾಂಕ
ಹೊಸ ವರ್ಷಕ್ಕೆ ಇನ್ನು 2 ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ಬಹಳಷ್ಟು ಜನರ ಮನೆಯಲ್ಲಿ ಹೊಸ ಕ್ಯಾಲೆಂಡರ್ ತಂದಿದ್ದಾರೆ. ಮುಂದಿನ ವರ್ಷ ಹಬ್ಬಗಳು ಯಾವಾಗ ಎಂಬುದನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಜನವರಿಯಿಂದ ಡಿಸೆಂಬರ್‌ವರೆಗೆ ಮುಂದಿನ ವರ್ಷದ ಪ್ರಮುಖ ಹಬ್ಬಗಳ ಲಿಸ್ಟ್ ಇಲ್ಲಿದೆ.
ಭಾರತವು ಸಾಂಸ್ಕೃತಿಕ ಮತ್ತು ನೈಸರ್ಗಿಕ ವೈವಿಧ್ಯತೆಯ ದೇಶವಾಗಿದೆ. ಹಿಂದೂ ಧರ್ಮದಲ್ಲಿ ವರ್ಷವಿಡೀ ವಿವಿಧ ಹಬ್ಬಗಳು, ವ್ರತಗಳನ್ನು ಆಚರಿಸಲಾಗುತ್ತದೆ. ಎಲ್ಲಾ ಹಬ್ಬಗಳಿಗೂ ವಿಶೇಷ ಮಹತ್ವವಿದೆ. ಪ್ರತಿ ಹಬ್ಬವನ್ನೂ ದೇಶಾದ್ಯಂತ ಬಹಳ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ. 2025 ರಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಹಾಗೂ ದಿನಾಂಕ ಹೀಗಿದೆ.
ಜನವರಿ 2025
ಭೋಗಿ - ಜನವರಿ 13, ಸೋಮವಾರ
ಮಕರ ಸಂಕ್ರಾಂತಿ 14 ಜನವರಿ, ಮಂಗಳವಾರ
ಫೆಬ್ರವರಿ 2025
ಬಸಂತ್ ಪಂಚಮಿ - 2 ಫೆಬ್ರವರಿ, ಭಾನುವಾರ
ಸರಸ್ವತಿ ಪೂಜೆ- 2 ಫೆಬ್ರವರಿ, ಭಾನುವಾರ
ಮಹಾ ಶಿವರಾತ್ರಿ - 26 ಫೆಬ್ರವರಿ, ಬುಧವಾರ
ರಂಜಾನ್ ಆರಂಭ - 28 ಫೆಬ್ರವರಿ, ಶುಕ್ರವಾರ
ಈದ್ ಉಲ್ ಫಿತರ್ - 30 ಮಾರ್ಚ್, ಭಾನುವಾರ
ಮಾರ್ಚ್ 2025
ಹೋಳಿ - ಮಾರ್ಚ್ 14, ಶುಕ್ರವಾರ
ಯುಗಾದಿ - ಮಾರ್ಚ್ 30, ಭಾನುವಾರ
ಏಪ್ರಿಲ್ 2025
ರಾಮನವಮಿ - ಏಪ್ರಿಲ್ 6, ಭಾನುವಾರ
ಚೈತ್ರ ನವರಾತ್ರಿ-ಏಪ್ರಿಲ್ 7, ಸೋಮವಾರ
ಹನುಮ ಜಯಂತಿ- ಏಪ್ರಿಲ್ 12, ಶನಿವಾರ
ಬೈಸಾಕಿ - ಏಪ್ರಿಲ್ 14, ಸೋಮವಾರ
ಅಕ್ಷಯ ತೃತೀಯ - ಏಪ್ರಿಲ್ 30, ಬುಧವಾರ
ಮೇ 2025
ನರಸಿಂಹ ಜಯಂತಿ - ಮೇ 11, ಭಾನುವಾರ
ಬುದ್ದ ಪೂರ್ಣಿಮಾ - ಮೇ 12, ಸೋಮವಾರ
ನಾರದ ಜಯಂತಿ - ಮೇ 13, ಮಂಗಳವಾರ
ವಟ ಸಾವಿತ್ರಿ ವ್ರತ - ಮೇ 26, ಸೋಮವಾರ
ಶನಿ ಜಯಂತಿ - ಮೇ 27, ಮಂಗಳವಾರ
ಜೂನ್ 2025
ಬಕ್ರೀದ್ - 7 ಜೂನ್, ಶನಿವಾರ
ಯೋಗಿನಿ ಏಕಾದಶಿ - ಜೂನ್ 21, ಶನಿವಾರ
ಜಗನ್ನಾಥ ರಥಯಾತ್ರೆ - ಜೂನ್ 27, ಶುಕ್ರವಾರ
ಜುಲೈ 2025
ಗುರು ಪೂರ್ಣಿಮಾ - ಜುಲೈ 10, ಗುರುವಾರ
ಹರಿಯಲಿ ತೀಜ್ - ಜುಲೈ 27, ಭಾನುವಾರ
ನಾಗ ಪಂಚಮಿ - ಜುಲೈ 29, ಮಂಗಳವಾರ
ಆಗಸ್ಟ್ 2025
ವರಮಹಾಲಕ್ಷ್ಮೀ ವ್ರತ - ಆಗಸ್ಟ್ 8, ಶುಕ್ರವಾರ
ರಕ್ಷಾ ಬಂಧನ - ಆಗಸ್ಟ್ 9, ಶನಿವಾರ
ಕೃಷ್ಣ ಜನ್ಮಾಷ್ಠಮಿ - ಆಗಸ್ಟ್ 16, ಶನಿವಾರ
ಗಣೇಶ ಚತುರ್ಥಿ - ಆಗಸ್ಟ್ 27, ಬುಧವಾರ
ಸೆಪ್ಟೆಂಬರ್ 2025
ಓಣಂ - ಸೆಪ್ಟೆಂಬರ್ 5, ಶುಕ್ರವಾರ
ಪಿತೃಪಕ್ಷ ಆರಂಭ - ಸೆಪ್ಟೆಂಬರ್ 8, ಸೋಮವಾರ
ನವರಾತ್ರಿ ಆರಂಭ - ಸೆಪ್ಟೆಂಬರ್ 22, ಸೋಮವಾರ
ಅಕ್ಟೋಬರ್ 2025
ಆಯುಧ ಪೂಜೆ - ಅಕ್ಟೋಬರ್ 1, ಬುಧವಾರ
ದಸರಾ - 2 ಅಕ್ಟೋಬರ್, ಗುರುವಾರ
ನರಕ ಚತುರ್ದಶಿ- ಅಕ್ಟೋಬರ್ 20, ಸೋಮವಾರ
ದೀಪಾವಳಿ - ಅಕ್ಟೋಬರ್ 21, ಮಂಗಳವಾರ
ಗೋವರ್ಧನ ಪೂಜೆ - 22 ಅಕ್ಟೋಬರ್, ಬುಧವಾರ
ಭಾಯಿ ದೂಜ್: 23 ಅಕ್ಟೋಬರ್, ಗುರುವಾರ
ಚಾತ್ ಪೂಜೆ: 27 ಅಕ್ಟೋಬರ್, ಸೋಮವಾರ
ನವೆಂಬರ್ 2025
ತುಳಸಿ ಪೂಜೆ - ನವೆಂಬರ್ 2, ಭಾನುವಾರ
ಗಂಗಾ ಸ್ನಾನ - ನವೆಂಬರ್ 5, ಬುಧವಾರ
ಡಿಸೆಂಬರ್ 2025
ದತ್ತಾತ್ರೇಯ ಜಯಂತಿ - ಡಿಸೆಂಬರ್ 4, ಗುರುವಾರ
ಕ್ರಿಸ್‌ಮಸ್ - 25 ಡಿಸೆಂಬರ್ ಗುರುವಾರ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
-----
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope
ವಿಭಾಗ