2025 Lucky Rashi: ಈ 4 ರಾಶಿಯವರಿಗೆ ಹೊಸ ವರ್ಷ ನಿಜಕ್ಕೂ ಶುಭಫಲ ಕೊಡಲಿದೆ, ಅದೃಷ್ಟವಂತರು ಈ ರಾಶಿಯವರು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  2025 Lucky Rashi: ಈ 4 ರಾಶಿಯವರಿಗೆ ಹೊಸ ವರ್ಷ ನಿಜಕ್ಕೂ ಶುಭಫಲ ಕೊಡಲಿದೆ, ಅದೃಷ್ಟವಂತರು ಈ ರಾಶಿಯವರು

2025 Lucky Rashi: ಈ 4 ರಾಶಿಯವರಿಗೆ ಹೊಸ ವರ್ಷ ನಿಜಕ್ಕೂ ಶುಭಫಲ ಕೊಡಲಿದೆ, ಅದೃಷ್ಟವಂತರು ಈ ರಾಶಿಯವರು

2025 Lucky Rashi: ಹೊಸವರ್ಷ ಶುರುವಾಗಿದ್ದು, ರಾಶಿಚಕ್ರಗಳ ಮೇಲೆ ಗ್ರಹಗತಿಗಳ ಪ್ರಭಾವದಲ್ಲೂ ಈ ವರ್ಷ ವ್ಯತ್ಯಾಸವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 4 ರಾಶಿಯವರಿಗೆ ಹೊಸ ವರ್ಷ ನಿಜಕ್ಕೂ ಶುಭಫಲ ಕೊಡಲಿದೆ, ಅದೃಷ್ಟವಂತರು ಈ ರಾಶಿಯವರು. ರಾಶಿಫಲ ವಿವರ ಹೀಗಿದೆ.

2025 Lucky Zodiac Signs: ಈ 4 ರಾಶಿಯವರಿಗೆ ಹೊಸ ವರ್ಷ ನಿಜಕ್ಕೂ ಶುಭಫಲ ಕೊಡಲಿದೆ, ಅದೃಷ್ಟವಂತರು ಈ ರಾಶಿಯವರು.
2025 Lucky Zodiac Signs: ಈ 4 ರಾಶಿಯವರಿಗೆ ಹೊಸ ವರ್ಷ ನಿಜಕ್ಕೂ ಶುಭಫಲ ಕೊಡಲಿದೆ, ಅದೃಷ್ಟವಂತರು ಈ ರಾಶಿಯವರು.

2025 Lucky Rashi: ಕಾಲಚಕ್ರ ಉರುಳಿದಂತೆ 2024ನೇ ಇಸವಿ ಮುಗಿದು, 2025ನೇ ಇಸವಿ ಶುರುವಾಗಿದೆ. ಎಲ್ಲರೂ ಒಳಿತೇ ಆಗಲಿ ಎಂದು ಬಯಸುತ್ತಿದ್ದಾರೆ. ಆದರೆ, ಗ್ರಹಗತಿಗಳು, ಕರ್ಮಫಲಗಳಿಗೆ ಅನುಗುಣವಾಗಿ ಪ್ರತಿಯೊಬ್ಬರಿಗೂ ಶುಭಫಲ ಮತ್ತು ಅಶುಭಫಲಗಳು ಅಥವಾ ಮಿಶ್ರಫಲ ಪ್ರಾಪ್ತಿಯಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2025ರಲ್ಲಿ ಪ್ರಮುಖ ಗ್ರಹಗತಿಗಳು ರಾಶಿಚಕ್ರಗಳ ಮೇಲೆ ಪರಿಣಾಮ, ಪ್ರಭಾವ ಬೀರಲಿದೆ. ಪರಿಣಾಮ, ಪ್ರತಿಯೊಂದು ರಾಶಿಯವರ ಬದುಕಿನ ಮೇಲೂ ಆಗಲಿದ್ದು, ಕೆಲವರಿಗೆ ಶುಭಫಲಗಳು ಉಂಟಾದರೆ, ಇನ್ನು ಕೆಲವರಿಗೆ ಅಶುಭ ಫಲಗಳಾಗಬಹುದು. ಹಲವರಿಗೆ ಮಿಶ್ರಫಲಗಳೂ ಇರಬಹುದು. ಆದಾಗ್ಯೂ, ಹೆಚ್ಚು ಶುಭಫಲಗಳನ್ನು ಹೊಂದುವುದಕ್ಕೆ ಸಾಧ್ಯವಿರುವ ನಾಲ್ಕು ರಾಶಿಚಕ್ರಗಳನ್ನು ಗುರುತಿಸಬಹುದಾಗಿದೆ. 2025ನೇ ಇಸವಿಯು ಈ ನಾಲ್ಕು ರಾಶಿಚಕ್ರ ಚಿಹ್ನೆಯವರ ಬದುಕಿನಲ್ಲಿ ಭಾರಿ ಬದಲಾವಣೆ, ಅದೃಷ್ಟ, ಶುಭಫಲಗಳನ್ನು ಉಂಟುಮಾಡಬಹುದು.

2025ರ ಅದೃಷ್ಟಶಾಲಿ ರಾಶಿಚಕ್ರ: ಈ 4 ರಾಶಿಯವರಿಗೆ ಶುಭಫಲ

ಹೊಸ ವರ್ಷದ ಬಗ್ಗೆ ಎಲ್ಲ ರಾಶಿಚಕ್ರದವರಿಗೂ ಕುತೂಹಲ ಇದ್ದೇ ಇರುತ್ತದೆ. ಹೊಸ ವರ್ಷವಾದರೂ ಶುಭಫಲ ಸಿಗಬಹುದೇ ಎಂಬ ನಿರೀಕ್ಷೆಯೂ ಸಹಜ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ನಾಲ್ಕು ರಾಶಿಯವರಿಗೆ ಈ ವರ್ಷ ಹೆಚ್ಚು ಶುಭಫಲ.

1) ಮೇಷ ರಾಶಿಯವರ ನಾಯಕತ್ವಕ್ಕೆ ಶನಿ ದೇವರ ಬಲ

ಹೊಸ ವರ್ಷವು ಶುರುವಾಗುತ್ತಿದ್ದಂತೆ ಭಾರಿ ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಧೈರ್ಯವಾಗಿ ಎದುರಿಸಬಲ್ಲ ಸಾಮರ್ಥ್ಯ ಈ ರಾಶಿಯವರಿಗೆ ಇದೆ. ಆದಾಗ್ಯೂ, ಮಾರ್ಚ್‌ ಬಂದಾಗ, ಧನಾತ್ಮಕ ಶಕ್ತಿ ಸಂಚಯನವಾಗಿ ಪರಿಸ್ಥಿತಿ, ಸನ್ನಿವೇಶಗಳು ಬದಲಾಗುತ್ತವೆ. ವಿಶೇಷವಾಗಿ ಮಾರ್ಚ್‌ 29ರಂದು ಸೂರ್ಯಗ್ರಹಣದ ಬಳಿಕ ಮಾರ್ಚ್‌ 30 ರ ನಂತರ ಮೇಷ ರಾಶಿಯವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಸ್ಪಷ್ಟತೆ ಕಾಣಬಹುದು. ಗೊಂದಲಗಳು ಕಳೆದುಹೋಗಿ, ಹೊಸ ಬದುಕು ಶುರುವಾಗಬಹುದು. ಆಧ್ಯಾತ್ಮಿಕ ಬೆಳವಣಿಗೆ ಮನಸ್ಸಿಗೆ ಖುಷಿ ಕೊಡಬಹುದು. ಮೇ 24 ರಂದು ಮೇಷ ರಾಶಿಗೆ ಶನಿಯ ಪ್ರವೇಶವು ಮೇಷ ರಾಶಿಯನ್ನು ನಾಯಕತ್ವವಹಿಸುವುದಕ್ಕೆ ಸಜ್ಜಾಗಿಸುತ್ತದೆ. ಭವಿಷ್ಯದ ಹಾದಿಗೆ ಭದ್ರ ಬುನಾದಿ ಒದಗಿಸುತ್ತದೆ. ಮಂಗಳವು ವೃತ್ತಿಜೀವನದ ಗುರಿಗಳನ್ನು ಹೆಚ್ಚಿಸುವುದರಿಂದ ವೃತ್ತಿಪರ ಬೆಳವಣಿಗೆಯೊಂದಿಗೆ 2025 ಮುಗಿಯಲಿದೆ.

2) ಮಿಥುನ ರಾಶಿ: ವ್ಯಾಪಾರ, ಕುಟುಂಬ ಸುಖಕ್ಕೆ ಗುರುಬಲ

ಸಮೃದ್ಧಿಯನ್ನು ಕರುಣಿಸುವ ಗುರು ಗ್ರಹವು 2025ರ ಜೂನ್ ತನಕ ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುತ್ತದೆ. ಆಗ, ಮಿಥುನ ರಾಶಿಯವರ ಸೃಜನಶೀಲ ಶಕ್ತಿ ಉತ್ತುಂಗದಲ್ಲಿರುತ್ತದೆ. ಎಲ್ಲ ರೀತಿಯಲ್ಲಿ ಒಳತು ಉಂಟುಮಾಡುತ್ತದೆ. ಗುರು ಸಂಚಾರವು ಈ ರಾಶಿಯವರ ಅದೃಷ್ಟವನ್ನು ಹೆಚ್ಚಿಸಿ ಶುಭಫಲ ಒದಗಿಸುತ್ತದೆ. ಜೀವನವನ್ನು ಉಜ್ವಲವಾಗಿ, ಬಹು ಕಾಲದಿಂದ ಬಾಕಿ ಉಳಿದಿರುವ ಎಲ್ಲಾ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ನಿಮ್ಮ ದಾಂಪತ್ಯ ಜೀವನ ಸುಖವಾಗಿದ್ದು, ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ದೊರೆಯಲಿದೆ. ನಿಮ್ಮ ಮೇಲೆ ಇತರರಿಗೆ ಗೌರವ ಹೆಚ್ಚುತ್ತದೆ. ವೃತ್ತಿಯಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ವ್ಯಾಪಾರ ಅಭಿವೃದ್ಧಿ ಕಾಣಬಹುದು.

3) ಕರ್ಕಾಟಕ ರಾಶಿ: ದೊಡ್ಡ ಕನಸು ನನಸು ಮಾಡಲು ಗುರುಬಲ

ಹೊಸವರ್ಷವು ಕೆಲವು ಸವಾಲುಗಳೊಂದಿಗೆ ಪ್ರಾರಂಭವಾಗುತ್ತದೆ. ಆದರೆ ಫೆಬ್ರವರಿ ವೇಳೆಗೆ, ಮಂಗಳ ಗ್ರಹದ ಹಿಮ್ಮುಖ ಚಲನೆ ಮುಗಿದು ಹೊರಬರುವ ಕಾರಣ ಶುಭಫಲ ಹೆಚ್ಚಾಗಲಿದೆ. ಜೂನ್ 9 ರಂದು ಗುರುವು ಕರ್ಕಟಕ ರಾಶಿಗೆ ಪ್ರವೇಶಿಸುತ್ತಿದ್ದಂತೆ, ಪ್ರೀತಿ, ವೃತ್ತಿ ಮತ್ತು ವೈಯಕ್ತಿಕ ಬೆಳವಣಿಗೆಯಲ್ಲಿ ಅದೃಷ್ಟವು ಹೇರಳವಾದ ಅವಕಾಶಗಳನ್ನು ತರುತ್ತದೆ. ಜೂನ್ 25 ಅಮಾವಾಸ್ಯೆ ನಂತರ ವರ್ಷದ ಅಂತ್ಯದ ತನಕ ಗುರುಗ್ರಹದ ಅನುಕೂಲಕರ ಅಂಶಗಳು ದೊಡ್ಡ ಕನಸುಗಳನ್ನು ಹೊಂದಿಸಲು ಮತ್ತು ಅವುಗಳನ್ನು ನನಸಾಗಿಸಲು ಸೂಕ್ತ ಸಮಯವನ್ನು ಒದಗಿಸುತ್ತದೆ.

4) ಮೀನ ರಾಶಿ: ಹೊಸವರ್ಷ ಬದುಕಿನ ಮುನ್ನಡೆಗೆ ಶುಕ್ರನ ಕೃಪೆ

ಸ್ಪಷ್ಟ ಗುರಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮುನ್ನಡೆಯಲು ಶುರುಮಾಡುವ ಈ ರಾಶಿಯವರಿಗೆ ಹೊಸ ವರ್ಷ ಶುಭಫಲದೊಂದಿಗೆ ಶುರುವಾಗುತ್ತದೆ. ವಿಶೇಷವಾಗಿ ಮೀನ ರಾಶಿಯಲ್ಲಿ ಶುಕ್ರ ಸಂಚಾರ 2025ರ ಜನವರಿ 28ರ ಮಂಗಳವಾರ ಬೆಳಗ್ಗೆ 7.12ಕ್ಕೆ ಶುರುವಾಗಲಿದೆ. ಇದು ಮಂಗಳಕರ ಎಂದು ಪರಿಗಣಿಸಲಾಗುತ್ತಿದ್ದು, ಮೀನ ರಾಶಿಯವರು ಶುಕ್ರನ ಕೃಪೆಯಿಂದಾಗಿ ತಮ್ಮ ಕುಟುಂಬ ಸಂಬಂಧಗಳಲ್ಲಿ ಉತ್ತಮ ಮಾಧುರ್ಯವನ್ನು ಹೊಂದಲಿದ್ದಾರೆ. ಅವಿವಾಹಿತರಿದ್ದು, ವಿವಾಹ ಯೋಗ್ಯರಿದ್ದರೆ, ಅವರಿಗೆ ಕಂಕಣ ಬಲವೂ ಕೂಡಿ ಬರಲಿದೆ. ಮೀನ ರಾಶಿಯವರು ತಮ್ಮ ಒಳನೋಟ, ಹೊಸ ಜ್ಞಾನವನ್ನು ತಮ್ಮ ಮುನ್ನಡೆಗೆ ಇಂಧನವಾಗಿ ಬಳಸುತ್ತಾರೆ. ಇದು ಅವರ ಬದುಕಿಗೆ ಹೊಸ ಮೆರುಗನ್ನು ನೀಡುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner