ಕನ್ನಡ ಸುದ್ದಿ  /  Astrology  /  27th March 2023 Horoscope

Horoscope Today: ಕೊಟ್ಟ ಸಾಲ ವಾಪಸ್‌ ಬರುವ ಸಾಧ್ಯತೆ, ಪ್ರೇಮಿಗಳಿಗೆ ಶುಭಸುದ್ದಿ.. ಇಂದಿನ ರಾಶಿಭವಿಷ್ಯ ನೋಡಿ!

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತದೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ.

27 ಮಾರ್ಚ್‌ 2023 ರಾಶಿಫಲ
27 ಮಾರ್ಚ್‌ 2023 ರಾಶಿಫಲ (PC: Freepik)

ಸೂರ್ಯೋದಯ: ಬೆಳಗ್ಗೆ 06:17

ಸೂರ್ಯಾಸ್ತ: ಸಂಜೆ 06:36

ತಿಥಿ: ಶುಕ್ಲ ಷಷ್ಠಿ (ಸಂಜೆ 05:27 ವರೆಗೆ)

ನಕ್ಷತ್ರ: ರೋಹಿಣಿ ( 03:27 ವರೆಗೆ)

ಮೇಷ (ಮಾರ್ಚ್ 21-ಏಪ್ರಿಲ್ 20)

ನಿಮ್ಮ ಹಣಕಾಸಿನ ನಿರೀಕ್ಷೆಗಳು ಧನಾತ್ಮಕವಾಗಿದೆ. ಕುಟುಂಬದ ಸದಸ್ಯರಿಂದ ಪ್ರಶಾಂತತೆ ಮತ್ತು ಸಂತೋಷ ದೊರೆಯಲಿದೆ. ನಿಮ್ಮ ಕೆಲಸದಲ್ಲಿ ಶ್ರದ್ಧೆ ಇರಲಿ. ಆಸ್ತಿ ಮಾರಾಟಕ್ಕೆ ಇಂದು ಉತ್ತಮ ದಿನವಾಗಿದೆ. ಆರೋಗ್ಯ ಉತ್ತಮವಾಗಿರಲಿದೆ. ರಜೆಯ ಯೋಜನೆಗಳನ್ನು ಮುಂದೂಡಲು ಪ್ರಯತ್ನಿಸಿ.

ಲವ್ ಫೋಕಸ್: ನಿಮ್ಮ ಪ್ರೇಮಿಯಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ.

ಅದೃಷ್ಟ ಸಂಖ್ಯೆ: 5

ಅದೃಷ್ಟ ಬಣ್ಣ: ಹಸಿರು

ವೃಷಭ ರಾಶಿ (ಏಪ್ರಿಲ್ 21-ಮೇ20)

ಆರೋಗ್ಯ ಉತ್ತಮವಾಗಿರಬೇಕಾದರೆ ಉತ್ತಮ ಆಹಾರ ಸೇವಿಸಿ. ಆಸ್ತಿ ಮಾರಾಟ ಮಾಡುವ ನಿರ್ಧಾರವನ್ನು ಮಂದೂಡಿ. ನಿಮ್ಮ ಕುಟುಂಬದ ನಿರೀಕ್ಷೆಗಳು ಸ್ಥಿರವಾಗಿರುತ್ತದೆ. ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಇಂದು ಸಾಮಾನ್ಯ ದಿನವಾಗಿದೆ. ಪ್ರಯಾಣದ ಯೋಜನೆಗಳು ಅಡೆತಡೆಯಿಲ್ಲದೆ ಮುಂದುವರೆಯುತ್ತದೆ. ಇಂದು ಯಾರಿಗೂ ಸಾಲ ನೀಡುವುದು ಒಳ್ಳೆಯದಲ್ಲ. ಶೈಕ್ಷಣಿಕ ರಂಗದಲ್ಲಿರುವವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ.

ಲವ್ ಫೋಕಸ್: ಪ್ರೇಮಿಗಾಗಿ ವಿಶೇಷ ಸಮಯ ನೀಡುವುದು ಸೂಕ್ತ.

ಅದೃಷ್ಟ ಸಂಖ್ಯೆ: 8

ಅದೃಷ್ಟ ಬಣ್ಣ: ನೀಲಿ

ಮಿಥುನ (ಮೇ 21-ಜೂನ್ 21)

ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನಿಮ್ಮ ಮಕ್ಕಳು ನಿಮ್ಮ ಸಂತೋಷದ ಕೇಂದ್ರವಾಗಿರಬಹುದು. ಕೆಲಸದ ಸ್ಥಳದಲ್ಲಿ ಇಂದು ಸಾಮಾನ್ಯ ದಿನವಾಗಿದೆ. ಏನೇ ವಿಚಾರಗಳಿದ್ದರೂ ಎಚ್ಚರಿಕೆಯಿಂದ ಮತ್ತು ತಾಳ್ಮೆಯಿಂದ ವ್ಯವಹರಿಸಬೇಕಾಗುತ್ತದೆ. ಆಸ್ತಿ ಮಾರಾಟವು ಲಾಭದಾಯಕವಾಗಬಹುದು. ನಿಮ್ಮ ಆರೋಗ್ಯ ಕೂಡಾ ಉತ್ತಮವಾಗಿರಲಿದೆ. ಪ್ರಯಾಣದ ಯೋಜನೆಗಳು ಬೇಕಾದ ರೀತಿಯಲ್ಲಿ ಕಾರ್ಯಗತಗೊಳ್ಳಬಹುದು. ನೀವು ಶೈಕ್ಷಣಿಕ ರಂಗದಲ್ಲಿ ಚಿಂತನೆಯ ಹೆಚ್ಚು ಸ್ಪಷ್ಟತೆಯನ್ನು ಸಾಧಿಸುವಿರಿ ಮತ್ತು ಉತ್ತಮವಾಗಿ ಕಾರ್ಯ ನಿರ್ವಹಿಸುವಿರಿ.

ಲವ್ ಫೋಕಸ್: ಇಂದು ನಿಮ್ಮ ಪ್ರಣಯ ಜೀವನ ಸಾಮಾನ್ಯವಾಗಿರಲಿದೆ.

ಅದೃಷ್ಟ ಸಂಖ್ಯೆ: 1

ಅದೃಷ್ಟ ಬಣ್ಣ: ತಿಳಿ ಬಾದಾಮಿ

ಕರ್ಕಾಟಕ ರಾಶಿ (ಜೂನ್ 22-ಜುಲೈ 22)

ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರಲಿದೆ. ನಿಮ್ಮ ಪ್ರಯಾಣದ ಯೋಜನೆಗಳು ನಿಮಗೆ ಲಾಭ ನೀಡುತ್ತದೆ. ಅಲ್ಲದೆ, ನಿಮ್ಮನ್ನು ಉತ್ಸುಕರನ್ನಾಗಿ ಮತ್ತು ಪುನರ್ಯೌವನಗೊಳಿಸುವಂತೆ ಮಾಡುತ್ತದೆ. ಆರೋಗ್ಯ ಸಮಸ್ಯೆ ಕಾಡಬಹುದು, ಎಚ್ಚರವಾಗಿರಿ. ಆಸ್ತಿ ಮಾರಾಟಕ್ಕೆ ಸೂಕ್ತ ದಿನವಾಗಿದೆ. ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ನಿಮಗೆ ನೆರವಾಗಲಿದೆ.

ಲವ್ ಫೋಕಸ್: ಪ್ರೇಮಿಯೊಂದಿಗೆ ಬಗೆಹರಿಯದ ಸಮಸ್ಯೆಗಳನ್ನು ಪರಿಹರಿಸಲು ಇಂದು ನಿಮಗೆ ಅವಕಾಶವಿದೆ.

ಅದೃಷ್ಟ ಸಂಖ್ಯೆ: 9

ಅದೃಷ್ಟ ಬಣ್ಣ: ಕೆಂಪು

ಸಿಂಹ ರಾಶಿ (ಜುಲೈ 23-ಆಗಸ್ಟ್ 23)

ಅನಾವಶ್ಯಕ ವೆಚ್ಚಗಳನ್ನು ಕಡಿಮೆ ಮಾಡಿ ಉಳಿದಾಯದತ್ತ ಗಮನ ಹರಿಸಿ. ಆಸ್ತಿ ಮಾರಾಟ ಮಾಡಬೇಕಿದ್ದರೆ ಇಂದು ಉತ್ತಮ ದಿನವಾಗಿದೆ. ನೀವು ಮಾನಸಿಕವಾಗಿ ಶಾಂತವಾಗಿರಬೇಕೆಂದರೆ ಧ್ಯಾನ ಮಾಡಿ. ನೀವು ಯಾವುದೇ ರಜೆಯ ಯೋಜನೆಗಳನ್ನು ಹೊಂದಿದ್ದರೆ, ಅದನ್ನು ಕಾರ್ಯಗತಗೊಳಿಸಲು ಇಂದು ಸೂಕ್ತ ದಿನವಾಗಿರಬಹುದು.

ಲವ್ ಫೋಕಸ್: ನಿಮ್ಮ ಸಂಗಾತಿಯೊಂದಿಗೆ ಪ್ರೀತಿ ಮತ್ತು ಸೌಜನ್ಯದಿಂದ ಮಾತನಾಡಲು ಪ್ರಯತ್ನಿಸುವ ಮೂಲಕ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು.

ಅದೃಷ್ಟ ಸಂಖ್ಯೆ: 18

ಅದೃಷ್ಟ ಬಣ್ಣ: ಕಿತ್ತಳೆ

ಕನ್ಯಾರಾಶಿ (ಆಗಸ್ಟ್ 24-ಸೆಪ್ಟೆಂಬರ್ 23)

ಆರ್ಥಿಕ ವಿಚಾರದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿದೆ. ಇಂದು ನಿಮ್ಮ ಸಂತೋಷಕ್ಕೆ ಕುಟುಂಬದ ಸದಸ್ಯರು ಕಾರಣರಾಗಿರುತ್ತಾರೆ. ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲಿದ್ದೀರಿ. ಉತ್ತಮ ಆಹಾರ ಕ್ರಮ ಅನುಸರಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಆಸ್ತಿ ಖರೀದಿಸುವುದು ಲಾಭದಾಯಕವಾಗಿದೆ. ಆದ್ದರಿಂದ ಇಂದು ಒಪ್ಪಂದವನ್ನು ಅಂತಿಮಗೊಳಿಸಲು ಪ್ರಯತ್ನಿಸಿ. ಸಾಧ್ಯವಾದರೆ, ಯಾವುದೇ ರಜೆಯ ಯೋಜನೆಗಳನ್ನು ಬೇರೆ ದಿನಕ್ಕೆ ಮುಂದೂಡಲು ಪ್ರಯತ್ನಿಸಿ.

ಲವ್ ಫೋಕಸ್: ಪ್ರೇಮಿಗಳು ಇಂದು ನಿಮ್ಮ ಸಂಗಾತಿಯೊಂದಿಗೆ ಒಳ್ಳೆ ಸಮಯ ಕಳೆಯಲಿದ್ದೀರಿ.

ಅದೃಷ್ಟ ಸಂಖ್ಯೆ: 22

ಅದೃಷ್ಟ ಬಣ್ಣ: ಗ್ರೇ

ತುಲಾ ರಾಶಿ (ಸೆಪ್ಟೆಂಬರ್ 24-ಅಕ್ಟೋಬರ್ 23)

ಹಣಕಾಸಿನ ವಿಚಾರದಲ್ಲಿ ಈ ದಿನ ನಿಮಗೆ ಅನುಕೂಲಕರವಾಗಿದೆ. ಕುಟುಂಬದ ವಿಚಾರದಲ್ಲಿ ಸ್ವಲ್ಪ ಕಿರಿಕಿರಿ ಅನುಭವಿಸಲಿದ್ದೀರಿ. ನಿಮ್ಮ ಪ್ರಯಾಣದ ಯೋಜನೆಗಳು ಅಡೆತಡೆಯಿಲ್ಲದೆ ಸಾಗಲಿದೆ. ನಿಮ್ಮ ವೃತ್ತಿಪರ ಭವಿಷ್ಯ ಇಂದು ಬಹಳ ಲಾಭದಾಯಕವಾಗಿದೆ. ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ. ಆಸ್ತಿ ಖರೀದಿ ಮಾಡಬೇಕೆನ್ನುವವರು ನಿಮ್ಮ ನಿರ್ಧಾರವನ್ನು ಮುಂದೂಡಲು ಪ್ರಯತ್ನಿಸಿ.

ಲವ್ ಫೋಕಸ್: ನಿಮ್ಮ ಪ್ರೀತಿಯ ಜೀವನ ಇಂದು ನಿಮ್ಮ ಸಂತೋಷದಿಂದ ಕೂಡಿರಲಿದೆ.

ಅದೃಷ್ಟ ಸಂಖ್ಯೆ: 15

ಅದೃಷ್ಟ ಬಣ್ಣ: ಕಂದು

ವೃಶ್ಚಿಕ ರಾಶಿ (ಅಕ್ಟೋಬರ್ 24-ನವೆಂಬರ್ 22)

ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಕುಟುಂಬದ ಸದಸ್ಯರೊಂದಿಗೆ ಎಚ್ಚರಿಕೆಯಿಂದ ಮತ್ತು ತಾಳ್ಮೆಯಿಂದ ವ್ಯವಹರಿಸಿ. ಕೆಲಸದಲ್ಲಿ ನಿಮ್ಮತನವನ್ನು ಸಾಬೀತುಮಾಡಲು ಇಂದು ಉತ್ತಮ ದಿನವಾಗಿದೆ. ನಿಮ್ಮ ಪ್ರಯಾಣದ ಯೋಜನೆಗಳು ಇಂದು ಸೂಕ್ತವಾಗಿರಬಹುದು. ಆರೋಗ್ಯ ಉತ್ತಮವಾಗಿರಲಿದೆ. ಯಾವುದೇ ಆಸ್ತಿ-ಸಂಬಂಧಿತ ವಿಚಾರದಲ್ಲಿ ಮುಂದುವರೆಯುವುದನ್ನು ತಪ್ಪಿಸಿ.

ಲವ್ ಫೋಕಸ್: ನಿಮ್ಮ ಪ್ರೇಮಿಯಿಂದ ಸಂತೋಷದ ಸುದ್ದಿ ಕೇಳಲಿದ್ದೀರಿ.

ಅದೃಷ್ಟ ಸಂಖ್ಯೆ: 3

ಅದೃಷ್ಟ ಬಣ್ಣ: ಕೇಸರಿ

ಧನಸ್ಸು ರಾಶಿ (ನವೆಂಬರ್ 23-ಡಿಸೆಂಬರ್ 21)

ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಲಿದೆ. ಇಂದು ಆಸ್ತಿಯ ಮಾರಾಟಕ್ಕೆ ಉತ್ತಮವಾದ ದಿನವಾಗಿದೆ. ವೃತ್ತಿಯಲ್ಲಿ ಕೆಲವು ಸಮಸ್ಯೆಗಳನ್ನು ಅನುಭವಿಸಲಿದ್ದೀರಿ, ಅದನ್ನು ತಾಳ್ಮೆಯಿಂದ ನಿಭಾಯಿಸಿ. ನಿಮ್ಮ ಪ್ರಯಾಣದ ಯೋಜನೆಗೆ ಇಂದು ಉತ್ತಮ ದಿನವಾಗಿದೆ. ಉತ್ತಮ ಆಹಾರ ಸೇವನೆ ಮಾಡುವ ಮೂಲಕ ನಿಮ್ಮ ಆರೋಗ್ಯದತ್ತ ಗಮನ ಹರಿಸಿ.

ಲವ್ ಫೋಕಸ್: ನಿಮ್ಮ ಪ್ರೀತಿಯ ಜೀವನವು ಇಂದು ತುಂಬಾ ಭರವಸೆ ಮತ್ತು ಧನಾತ್ಮಕವಾಗಿರಬಹುದು.

ಅದೃಷ್ಟ ಸಂಖ್ಯೆ: 17

ಅದೃಷ್ಟ ಬಣ್ಣ: ಹಳದಿ

ಮಕರ ರಾಶಿ (ಡಿಸೆಂಬರ್ 22-ಜನವರಿ 21)

ಆಸ್ತಿಯ ಮಾರಾಟವು ಇಂದು ಬಹಳ ಭರವಸೆಯ ಆದಾಯವನ್ನು ನೀಡಬಹುದು, ಆದ್ದರಿಂದ ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿ. ನಿಮ್ಮ ವೃತ್ತಿಪರ ಭವಿಷ್ಯವು ಧನಾತ್ಮಕವಾಗಿ ಕಂಡುಬರುತ್ತಿದೆ. ಕುಟುಂಬದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಲಿದ್ದೀರಿ. ಆರೋಗ್ಯದ ಕಡೆಗೆ ಗಮನ ಹರಿಸಿ. ನಿಮ್ಮ ರಜೆಯ ಯೋಜನೆಗಳು ನಿಮಗೆ ಏನಾದರೂ ಲಾಭ ನೀಡಬಹುದು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯು ನಿಮಗೆ ಹೆಮ್ಮೆ ತರುತ್ತದೆ.

ಲವ್ ಫೋಕಸ್: ನೀವು ಇಂದು ನಿಮ್ಮ ಪ್ರೀತಿಯ ಜೀವನದಲ್ಲಿ ಸ್ಥಿರತೆಯನ್ನು ಅನುಭವಿಸಬಹುದು.

ಅದೃಷ್ಟ ಸಂಖ್ಯೆ: 8

ಅದೃಷ್ಟ ಬಣ್ಣ: ಮೆಜೆಂತಾ

ಕುಂಭ ರಾಶಿ (ಜನವರಿ 22-ಫೆಬ್ರವರಿ 19)

ಯಾರಿಗಾದರೂ ಸಾಲ ಕೊಟ್ಟ ಹಣ ಈಗ ವಾಪಸ್ ಬರುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರ ನಡುವೆ ಗೊಂದಲಕ್ಕೊಳಗಾಗುವ ವಿಷಯಗಳು ಈಗ ಸ್ಥಿರಗೊಳ್ಳುವ ಸಾಧ್ಯತೆಯಿದೆ. ನಿಮ್ಮ ಪ್ರಯಾಣದ ಯೋಜನೆಗಳು ಸೂಕ್ತವಾಗಿರಬಹುದು. ಕೆಲಸದ ಸ್ಥಳದಲ್ಲಿ ಧನಾತ್ಮಕವಾಗಿ ಗುರುತಿಸಲ್ಪಡಬಹುದು. ಇಂದು ಆಸ್ತಿ ಮಾರಾಟ ಅಥವಾ ಖರೀದಿಗೆ ಉತ್ತಮ ದಿನವಲ್ಲ. ಆರೋಗ್ಯ ಉತ್ತಮವಾಗಿರಲಿದೆ. ಈ ರಾಶಿಯ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲಿದ್ದೀರಿ.

ಲವ್ ಫೋಕಸ್: ನಿಮ್ಮ ಪ್ರೀತಿಯ ಜೀವನವು ಸಂತೋಷವಾಗಿರಲಿದೆ.

ಅದೃಷ್ಟ ಸಂಖ್ಯೆ: 22

ಅದೃಷ್ಟ ಬಣ್ಣ: ಬಿಳಿ

ಮೀನ ರಾಶಿ (ಫೆಬ್ರವರಿ 20-ಮಾರ್ಚ್ 20)

ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಕುಟುಂಬದ ಸದಸ್ಯರು ನಿಮ್ಮ ಸಂತೋಷಕ್ಕೆ ಕಾರಣರಾಗಿರುತ್ತಾರೆ. ಶ್ರದ್ಧೆಯಿಂದ ಕೆಲಸ ಮಾಡುವುದು ನಿಮಗೆ ಒಳ್ಳೆಯದಾಗುತ್ತದೆ. ಆಸ್ತಿ ಮಾರಾಟಕ್ಕೆ ಉತ್ತಮ ದಿನವಾಗಿದೆ. ಕೆಲಸದಿಂದ ರಜೆ ಪಡೆಯಬೇಕೆಂಬ ಪ್ಲಾನ್‌ ಇದ್ದರೆ ಅದನ್ನು ಕಾರ್ಯಗತಗೊಳಿಸಲು ಇಂದು ಸೂಕ್ತ ದಿನವಾಗಿರಬಹುದು. ವಿದ್ಯಾರ್ಥಿಗಳಿಗೆ ಇಂದು ಉತ್ತಮ ದಿನವಾಗಿದೆ.

ಲವ್ ಫೋಕಸ್: ನಿಮ್ಮ ಪ್ರೀತಿಯ ಜೀವನ ಸಾಮಾನ್ಯವಾಗಿರಲಿದೆ.

ಅದೃಷ್ಟ ಸಂಖ್ಯೆ: 9

ಅದೃಷ್ಟ ಬಣ್ಣ: ಗೋಲ್ಡನ್

ವಿಭಾಗ