ಲಕ್ಷ್ಮೀದೇವಿಯ ಅರ್ಥ ಬರುವ 50 ಹೆಸರುಗಳಿವು; ನಿಮ್ಮನೆ ಮುದ್ದುಲಕ್ಷ್ಮೀಗೆ ನಾಮಕರಣ ಮಾಡುವ ಮೊದಲು ಈ ಪಟ್ಟಿ ಒಮ್ಮೆ ನೋಡಿ
ಹೆಣ್ಣುಮಗುವಿಗೆ ಮುದ್ದಾದ, ಚೆಂದದ ಹೆಸರಿಡಬೇಕು ಎಂಬುದು ಎಲ್ಲರ ಆಸೆ. ಅದರಲ್ಲೂ ಮನೆಗೆ ಲಕ್ಷ್ಮೀ ಬಂದ ಖುಷಿಯಿಂದ ಲಕ್ಷ್ಮೀದೇವಿಯ ಹೆಸರಿನ ಅರ್ಥವಿರುವ ಹೆಸರು ಇಡುವುದು ಸಾಮಾನ್ಯ. ಸಂಪತ್ತಿನ ದೇವತೆಯ ಹೆಸರಿನ ಅರ್ಥ ಕೊಡುವ ಸೊಗಸಾದ ಹೆಸರುಗಳನ್ನು ನಾವು ಕೊಡುತ್ತೇವೆ.

ಹೆಣ್ಣು ಮಗುವಿನ ಜನನವಾದರೆ ಮನೆಗೆ ಲಕ್ಷ್ಮೀ ಬಂದಳು ಎನ್ನುವುದು ಸಾಮಾನ್ಯ. ಹಳ್ಳಿಗಳಲ್ಲಿ ಮಾತ್ರವಲ್ಲದೆ ನಗರ ಭಾಗದಲ್ಲೂ ತಾಯಿ ಲಕ್ಷ್ಮೀಯನ್ನು ನಿತ್ಯ ಪೂಜಿಸಲಾಗುತ್ತದೆ. ಅದೃಷ್ಟ ಮತ್ತು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀಯನ್ನು ನಿತ್ಯ ಪೂಜಿಸಿದರೆ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಇದೇ ಕಾರಣಕ್ಕೆ ಹೆಣ್ಣು ಮಕ್ಕಳು ಹುಟ್ಟಿದಾಗ ಅವರಿಗೆ ಲಕ್ಷ್ಮೀದೇವಿಯ ಹೆಸರಿನ ಅರ್ಥ ಬರುವ ಹೆಸರುಗಳನ್ನು ಇಡಲಾಗುತ್ತದೆ. ಲಕ್ಷ್ಮೀದೇವಿಯನ್ನು ಪೂಜಿಸುವುದರಿಂದ ಎದುರಾಗುವ ದುರದೃಷ್ಟಗಳು ನಿವಾರಣೆಯಾಗುತ್ತದೆ ಎಂದು ನಂಬಲಾಗುತ್ತದೆ. ನೀವು ಕೂಡಾ ನಿಮ್ಮ ಹೆಣ್ಣುಮಗುವಿಗೆ ಲಕ್ಷ್ಮೀದೇವಿಯ ಹೆಸರಿನ ಅರ್ಥ ಕೊಡುವ ಹೆಸರನ್ನು ಇಡಲು ಹೊಸ ಹೊಸ ಹೆಸರುಗಳ ಹುಡುಕಾಟದಲ್ಲಿದ್ದರೆ, ಈ ಹೆಸರುಗಳು ನಿಮಗೆ ನೆರವಾಗಬಹುದು.
ಸಂಪತ್ತಿನ ದೇವತೆಯ ಹೆಸರಿನ ಅರ್ಥ ಕೊಡುವ ಕೆಲವೊಂದು ಸೊಗಸಾದ ಹೆಸರುಗಳನ್ನು ಇಲ್ಲಿ ಪಟ್ಟಿ ಮಾಡದ್ದೇವೆ. ಆ ಹೆಸರಿನ ಅರ್ಥವನ್ನೂ ನೀಡಲಾಗಿದೆ. ನಿಮಗೆ ಇಷ್ಟವಾಗುವ ಹೆಸರನ್ನು ನಿಮ್ಮ ಮನೆ ಮಕ್ಕಳಿಗೆ ಇಡಬಹುದು.
- ಹರಿಪ್ರಿಯಾ - ವಿಷ್ಣುವಿಗೆ ಪ್ರಿಯವಾದವಳು
- ಅದಿತಿ - ಸೂರ್ಯನಂತೆ ತೇಜಸ್ಸು ಹೊಂದಿರುವವಳು
- ಇಶಾನಿ - ಶ್ರೀ ಹರಿಯ ಸಂಗಾತಿ
- ಧೃತಿ - ದೃಢತೆ ಮತ್ತು ಧೈರ್ಯದ ಮೂರ್ತರೂಪ
- ದ್ಯುತಿ - ವೈಭವ ಮತ್ತು ಹೊಳಪು ಹೊಂದಿರುವವಳು
- ಭವಾನಿ - ಶಕ್ತಿಯ ಮೂರ್ತರೂಪ
- ಭಾಗ್ರಶ್ರೀ - ಅದೃಷ್ಟಶಾಲಿ
- ದೀತ್ಯಾ - ಎಲ್ಲರ ಪ್ರಾರ್ಥನೆಗಳಿಗೆ ಉತ್ತರಿಸುವವಳು
- ದೇವಿಕಾ - ಭವ್ಯ
- ಸಾನ್ವಿ - ಎಲ್ಲರೂ ಅನುಸರಿಸುವವಳು
- ಜಲಧಿಜ - ನೀರಿನಲ್ಲಿ ಕಮಲದ ಹೂವಿನ ಮೇಲೆ ನೆಲೆಸಿರುವವಳು
- ಕರುಣಾ - ಕರುಣಾಮಯಿ
- ಕ್ಷೀರಸಾ - ಕ್ಷೀರ ಸಾಗರದಲ್ಲಿ ನೆಲೆಸಿರುವಾಕೆ
- ಲೋಹಿತಾ - ಮಾಣಿಕ್ಯದಂತೆ ಪ್ರಕಾಶಿಸುವವಳು
- ಮಂಗಳಾ - ಮಂಗಳಕರವಾದ
- ಮಾನುಷಿ - ಕರುಣಾಳು
- ನಂಧಿಕಾ - ಸದಾ ಸಂತೋಷವಾಗಿರುವವಳು
- ನಾರಾಯಣಿ - ವಿಷ್ಣುಪ್ರಿಯೆ
- ಪದ್ಮಪ್ರಿಯಾ - ಕಮಲವನ್ನು ಪ್ರೀತಿಸುವವಳು
- ಪದ್ಮಾಲಯ - ಕಮಲದ ಹೂವಿನ ಮೇಲೆ ನೆಲೆಸಿರುವವಳು
- ಪ್ರಭಾ - ಸೂರ್ಯನಂತೆ ತೇಜಸ್ಸು ಹೊಂದಿರುವಾಕೆ
- ಪದ್ಮಜಾ - ಕಮಲದ ಮೇಲೆ ನೆಲೆಸಿರುವವಳು
- ಪುಷ್ಟಿ - ಸಂಪತ್ತನ್ನು ಹೊಂದಿರುವವಳು
- ಪದ್ಮಾಕ್ಷಿ - ಕಮಲದಂತಿರುವ ಕಣ್ಣುಗಳು ಇರುವವಳು
- ಪ್ರಮಾತ್ಮಿಕಾ - ಎಲ್ಲೆಡೆ ಇರುವವಳು
- ತೇಜಶ್ರೀ - ತೇಜಸ್ಸು ಹೊಂದಿರುವವಳು
- ರುಕ್ಮಿಣಿ - ಚಿನ್ನದಿಂದ ಅಲಂಕರಿಸಲ್ಪಟ್ಟವಳು
- ರಾಜಶ್ರೀ - ಸೌಂದರ್ಯ ಮತ್ತು ಅದೃಷ್ಟವನ್ನು ಕೊಡುವವಳು
- ರಮಾ - ಅದೃಷ್ಟ ಮತ್ತು ಸಂಪತ್ತಿನ ಅಧಿಪತಿ
- ಶ್ರದ್ಧಾ - ಪ್ರಾಮಾಣಿಕ
- ಶ್ರೀ - ಸಮೃದ್ಧಿಯುಳ್ಳವಳು
- ಶುಚಿ - ಅಪರಂಜಿ
- ಶ್ರೀಯಾ - ಉತ್ತಮ ಕಂಪನ ಬೀರುವವಳು
- ಶ್ರೀಜಾ - ಮಹಿಮೆ ಹೊಂದಿರುವವಳು
- ಶಿವಕರಿ - ಶುಭ ವಸ್ತುಗಳ ಮೂಲ
- ಶ್ರಿಣಿಕಾ - ಕಮಲದ ಹೂವಿನೊಂದಿಗೆ ಸಂಬಂಧ ಹೊಂದಿರುವವಳು
- ಶ್ರೀದಾ - ಸೌಂದರ್ಯ, ಶಕ್ತಿ ಮತ್ತು ಅದೃಷ್ಟ ಹೊಂದಿರುವವಳು
- ಸುದೀಕ್ಷಾ - ಉತ್ತಮ ಆರಂಭವನ್ನು ನೀಡುವವಳು
- ಸುಧಾ - ಅಮೃತ ಹೊಂದಿದವಳು
- ಸ್ತಂಭಿನಿ - ಎಲ್ಲಾ ಅಸ್ತಿತ್ವವನ್ನು ಬೆಂಬಲಿಸುವವಳು
- ಸುಪ್ರಸನ್ನ - ಸದಾ ಸಂತೋಷ ಮತ್ತು ತೃಪ್ತಳು
- ತುಷ್ಟಿ - ತೃಪ್ತಿ ನೀಡುವವಳು
- ವಾಚಿ - ಅಮೃತದಂತೆ ಮಾತನಾಡುವವಳು
- ವಸುಧಾ - ಕೊಡುವವಳು
- ವಿಭಾ - ಪ್ರಕಾಶಮಯಳು
- ಜಯ - ವಿಜಯಶಾಲಿ
- ಜಯಲಕ್ಷ್ಮಿ - ಗೆಲುವನ್ನು ಒದಗಿಸುವವಳು
- ಅನನ್ಯ - ಅನುಗ್ರಹ ಇರುವವಳು
- ಅಂಬುಜ - ಕಮಲದಿಂದ ಜನಿಸಿದವಳು
- ಕಾಮಾಕ್ಷಿ - ಸುಂದರ ಕಣ್ಣುಗಳನ್ನು ಹೊಂದಿರುವವಳು
ಇದನ್ನೂ ಓದಿ | Ahoi Ashtami: ಕಾರ್ತಿಕ ಮಾಸದಲ್ಲಿ ಅಹೋಯಿ ಅಷ್ಟಮಿ ಯಾವಾಗ?; ವ್ರತ, ಪೂಜಾ ವಿಧಾನ, ಮಹತ್ವ ತಿಳಿಯಿರಿ
