Aditya Hrudayam: ಶತ್ರು ನಿಗ್ರಹ, ಜ್ಞಾನಾರ್ಜನೆ, ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಪಠಿಸಿ ಆದಿತ್ಯ ಹೃದಯ ಮಂತ್ರ
Aditya Hrudayam: ಅಗಸ್ತ್ಯ ಮಹಾಮುನಿಗಳು ರಚಿಸಿದ ಆದಿತ್ಯ ಹೃದಯ ಮಹಾಮಂತ್ರವು ಶತ್ರುವನ್ನು ನಿಗ್ರಹಿಸಲು, ಉತ್ತಮ ಜ್ಞಾನ ಪಡೆಯಲು, ಹಾಗೂ ಒಳ್ಳೆ ಆರೋಗ್ಯವನ್ನು ಪಡೆಯಲು ಜಪಿಸಬಹುದಾಗಿದೆ. ಇದರಿಂದ ಇನ್ನೂ ಅನೇಕ ಫಲಾಫಲಗಳಿವೆ.
Aditya Hrudayam: ಸೂರ್ಯ ದೇವನಿಗೂ ಮಹಾಭಾರತ ಮತ್ತು ರಾಮಾಯಣಕ್ಕೂ ಅವಿನಾಭಾವ ಸಂಬಂಧವಿದೆ. ಕೆಲವು ಧಾರ್ಮಿಕ ಗ್ರಂಥಗಳ ಪ್ರಕಾರ ಅರುಣ ಪ್ರಶ್ನೆಯನ್ನು ಜಪಿಸಿದ ಕಾರಣ ದ್ರೌಪದಿಗೆ ಅಕ್ಷಯ ಪಾತ್ರೆ ಲಭಿಸಿತು ಎಂದು ಹೇಳಲಾಗುತ್ತದೆ. ಇಂದಿಗೂ ಅರುಣ ಪೂರ್ವಕ ಸೂರ್ಯ ನಮಸ್ಕಾರವನ್ನು ಮಾಡಿದಲ್ಲಿ ಉತ್ತಮ ಆರೋಗ್ಯವಲ್ಲದೆ, ಕುಟುಂಬದಲ್ಲಿನ ದಾರಿದ್ರ ಸಮೇತ ಎಲ್ಲಾ ಕಷ್ಟ ನಷ್ಟಗಳು ಪರಿಹಾರವಾಗುತ್ತದೆ.
ಬ್ರಹ್ಮ ರಚಿಸಿದ ಸೂರ್ಯನ ಅಷ್ಟೋತ್ತರ
ಮಹಾ ಭಾರತದಲ್ಲಿ ಬರುವ ಸೂರ್ಯನ ಅಷ್ಟೋತ್ತರವನ್ನು ಸ್ವತ: ಬ್ರಹ್ಮನೇ ರಚಿಸಿದನು ಎಂದು ಹೇಳಲಾಗಿದೆ. ಈ ಅಷ್ಟೋತ್ತರವನ್ನು ಸೂರ್ಯೋದಯದ ವೇಳೆಯಲ್ಲಿ ಪಠಿಸಿದಲ್ಲಿ ಒಳ್ಳೆಯ ಸಂತಾನ ಲಭಿಸುತ್ತದೆ. ಅವಿವಾಹಿತರಿಗೆ ವಿವಾಹವಾಗುತ್ತದೆ. ಪೂರ್ವ ಜನ್ಮದ ಪಾಪಕರ್ಮವು ನಶಿಸಿ ಹಿಂದಿನ ಜನ್ಮದಲ್ಲಿ ಕಲಿತ ವಿದ್ಯೆಯೊಂದು ಇಂದಿನ ಜನ್ಮಕ್ಕೆ ಆಸರೆಯಾಗುತ್ತದೆ. ಬುದ್ಧಿಶಕ್ತಿ ಇಲ್ಲದವರು ಸಹ ಉತ್ತಮ ಜ್ಞಾನವನ್ನು ಸಂಪಾದಿಸುತ್ತಾರೆ. ಕೆಲವು ಗ್ರಂಥಗಳಲ್ಲಿ ಇರುವಂತೆ ಈ ಶ್ಲೋಕವನ್ನು ಪಠಿಸಿದ ಕಾರಣ ಧರ್ಮರಾಯನು ಅಕ್ಷಯ ಪಾತ್ರೆಯನ್ನು ಪಡೆದನೆಂದು ಹೇಳಲಾಗುತ್ತದೆ.
ರಾಮಾಯಣದಲ್ಲಿ ಬರುವ ಆದಿತ್ಯ ಹೃದಯ ಸ್ತೋತ್ರವನ್ನು ರಾವಣನ ವಿರುದ್ದ ಯುದ್ದ ಮಾಡಲು ನಿಂತ ಶ್ರೀರಾಮನಿಗೆ ಅಗಸ್ತ್ಯ ಮಹಾಮುನಿಗಳು ಕೇವಲ 3 ಬಾರಿ ಆದಿತ್ಯ ಹೃದಯವನ್ನು ಭೋದಿಸುತ್ತಾರೆ. ಈ ಆದಿತ್ಯ ಹೃದಯವನ್ನು ಜಪಿಸಿದ ಕಾರಣ ರಾವಣನ ವಿರುದ್ಧ ರಾಮನು ಜಯ ಗಳಿಸಿದನೆಂದು ಹೇಳಲಾಗುತ್ತದೆ. ಇಂದಿನ ದಿನಗಳಲ್ಲೂ ಇದರ ಪಠಣೆಯಿಂದ ಶತ್ರುಗಳ ಉಪಟಳದಿಂದ ದೂರ ಉಳಿಯಬಹುದು. ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯೆ ಲಭ್ಯವಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಾಣುತ್ತದೆ. ಅತಿ ಮುಖ್ಯವಾದ ಉತ್ತಮ ಆತ್ಮಶಕ್ತಿ ಮೈಗೂಡುತ್ತದೆ.
ಆದಿತ್ಯ ಹೃದಯ ಮಂತ್ರ
ಮುಖ್ಯವಾಗಿ ಸೂರ್ಯನಿಗೆ ಸಂಬಂಧಿಸಿದ ಯಾವುದೇ ಶ್ಲೋಕಗಳನ್ನು ಸೂರ್ಯೋದಯದ ವೇಳೆ ಜಪಿಸಿದರೆ ಮಹತ್ತರ ಫಲಗಳು ದೊರೆಯಲಿವೆ. ಅದರಲ್ಲಿ ಮುಖ್ಯವಾದದ್ದು ಅಗಸ್ತ್ಯ ಮಹಾಮುನಿಗಳು ರಚಿಸಿದ ಆದಿತ್ಯ ಹೃದಯ ಮಹಾಮಂತ್ರ. ಅದನ್ನು ಈ ಕೆಳಗೆ ನೀಡಲಾಗಿದೆ.
ತತೋ ಯುದ್ಧಪರಿಶ್ರಾಂತಂ ಸಮರೇ ಚಿಂತಯಾಸ್ಥಿತಮ್
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್
ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್
ಉಪಾಗಮ್ಯಾ ಬ್ರವೀದ್ರಾಮಂ ಅಗಸ್ತ್ಯೋ ಭಗಮಾನ್ ಋಷಿಃ
ರಾಮ ರಾಮ ಮಹಾಬಾಹೋ ಶೃಣುಗುಹ್ಯಂ ಸನಾತನಮ್
ಯೇನಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ
ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಮ್
ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಮಂ ಶಿವಮ್
ಸರ್ವಮಂಗಲ ಮಾಂಗಲ್ಯಂ ಸರ್ವಪಾಪ ಪ್ರಣಾಶನಮ್
ಚಿಂತಾಶೋಕ ಪ್ರಶಮನಂ ಆಯುರ್ವರ್ಧನ ಮುತ್ತಮಮ್
ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್
ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ
ಏಷ ದೇವಾಸುರ ಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ
ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂಧಃ ಪ್ರಜಾಪತಿಃ
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂಪತಿಃ
ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ
ವಾಯುರ್ವಹ್ನಿಃ ಪ್ರಜಾಪ್ರಾಣ ಋತುಕರ್ತಾ ಪ್ರಭಾಕರಃ
ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್
ಸುವರ್ಣಸದೃಶೋ ಭಾನುಃ ಹಿರಣ್ಯರೇತಾ ದಿವಾಕರಃ
ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿರ್ಮರೀಚಿಮಾನ್
ತಿಮಿರೋನ್ಮಥನಃ ಶಂಭುಃ ತ್ವಷ್ಟಾ ಮಾರ್ತಂಡ ಅಂಶುಮಾನ್
ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ
ಅಗ್ನಿಗರ್ಭೋಽದಿತೇಃ ಪುತ್ರಃ ಶಂಖಃ ಶಿಶಿರನಾಶನಃ
ವ್ಯೋಮನಾಥ ಸ್ತಮೋಭೇದೀ ಋಗ್ಯಜು:ಸಾಮಪಾರಗಃ
ಘನಾವೃಷ್ಟಿರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ
ಆತಪೀ ಮಂಡಲೀ ಮೃತ್ಯುಃ ಪಿಂಗಲಃ ಸರ್ವತಾಪನಃ
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ
ನಕ್ಷತ್ರಗ್ರಹ ತಾರಾಣಾಂ ಅಧಿಪೋ ವಿಶ್ವಭಾವನಃ
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್ ನಮೋಸ್ತುತೇ
ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ
ಜ್ಯೋತಿರ್ಗಣಾನಾಂ ಪತಯೇ ದೀನಾಧಿಪತಯೇ ನಮಃ
ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ
ನಮಃ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ
ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ ವರ್ಚಸೇ
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ
ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ
ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ
ನಮಸ್ತಮೋಽಭಿ ನಿಘ್ನಾಯ ರುಚಯೇ ಲೋಕಸಾಕ್ಷಿಣೇ
ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ
ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್
ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ
ಏನಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ
ಕೀರ್ತಯನ್ ಪುರುಷಃ ಕಶ್ಚಿನ್ನಾವಶೀ ದತಿ ರಾಘವ
ಪೂಜಯಸ್ವೈನ ಮೇಕಾಗ್ರೋ ದೇವದೇವಂ ಜಗತ್ಪತಿಮ್
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ
ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್
ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋಽಭವತ್ತದಾ
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್
ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾತು ಪರಂ ಹರ್ಷಮವಾಪ್ತವಾನ್
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್
ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋಭವತ್
ಅಥ ರವಿರವದನ್ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ
ನಿಶಿಚರಪತಿಸಂಕ್ಷಯಂ ವಿದಿತ್ವಾ ಸುರಗಣ ಮಧ್ಯಗತೋ ವಚಸ್ತ್ವರೇತಿ
ಇತಿ ಶ್ರೀ ಅಗಸ್ತ್ಯ ಮಹಾಮುನಿ ವಿರಚಿತ ಶ್ರೀಮದ್ ಆದಿತ್ಯ ಹೃದಯ ಸ್ತೋತ್ರಮ್ ಸಂಪೂರ್ಣಮ್
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).